ಬಳಂಜ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ ನಾಲ್ಕೂರು ತೆಂಕಕಾರಂದೂರು ಇದರ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ಬಳಂಜದ ಸಂಘದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್. ಎಸ್.ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘದ ಗೌರವಧ್ಯಕ್ಷ ಹೆಚ್. ಧರ್ಣಪ್ಪ ಪೂಜಾರಿ, ಕಾರ್ಯದರ್ಶಿ ಯೋಗೀಶ್ ಆರ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಜಗದೀಶ್ ಬಳ್ಳಿದಡ್ಡ, ಕೋಶಾಧಿಕಾರಿ ದಿನೇಶ್ ಪೂಜಾರಿ ಅಂತರ, ಮಹಿಳಾ ಬಿಲ್ಲವ ವೇದಿಕೆ […]
ಬಂಟರ ಸಂಘದಿಂದ ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ನೆರವು

ಬೆಳ್ತಂಗಡಿ: ಉತ್ತಮ ವಿದ್ಯಾಭ್ಯಾಸ ಹಾಗೂ ಸಾಧನೆಗಳನ್ನು ಮಾಡುವ ಮೂಲಕ ವಿಧ್ಯಾರ್ಥಿಗಳು ಸಮಾಜ ಗುರುತಿಸುವಂತಹ ಕೆಲಸವನ್ನು ಮಾಡಬೇಕು. ಅದಲ್ಲದೆ ಬಡ ವಿದ್ಯಾರ್ಥಿಗಳಿಗೆ ದಾನಿಗಳು ನೀಡುವ ಇಂತಹ ಪ್ರೋತ್ಸಾಹ ಧನದ ಪ್ರೇರಣೆಯಿಂದ ತಾವೂ ಕೂಡ ಬಡ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವಂತಹ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಬೇಕು ಎಂದು ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದ ಉಪಪ್ರಾದೇಶಿಕ ಮುಖ್ಯಸ್ಥ ಹಾಗೂ ಒಲಿಂಪಿಯನ್ ಅರ್ಜುನ ಪ್ರಶಸ್ತಿ ಪುರಸ್ಕೃತ ಸತೀಶ್ ರೈ ಹೇಳಿದರು. ಅವರು ನವೆಂಬರ್ 8ರಂದು ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ […]
ಶಿಕ್ಷಕ ಯಾಕೂಬ್‌ರಿಗೆ ಹುಟ್ಟೂರ ಗೌರವ

ಬೆಳ್ತಂಗಡಿ: ಪ್ರಸಕ್ತ ವರ್ಷದ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯಿಂದ ಪುರಸ್ಕೃತರಾದ ಬೆಳ್ತಂಗಡಿ ತಾಲೂಕು ನಡ ಸರಕಾರಿ ಪ್ರೌಢ ಶಾಲಾ ಗಣಿತ ಶಿಕ್ಷಕ ಯಾಕೂಬ್ ಕೊಯ್ಯೂರುರವರನ್ನು ನವೆಂಬರ್ 8ರಂದು ಅವರ ಹುಟ್ಟೂರಾದ ಕೊಯ್ಯೂರಿನ ಆದೂರ್‌ಪೆರಾಲ್ ಪಂಚದುರ್ಗಾ ಸಭಾಭವನದಲ್ಲಿ ಊರ ವಿದ್ಯಾಭಿಮಾನಿಗಳ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಗೌರವಿಸಿ, ಸಮ್ಮಾನಿಸಿದರು.ಇದೇ ಸಂದರ್ಭದಲ್ಲಿ 2019-20 ಶೈಕ್ಷಣಿಕ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳಿಗೆ 620 ಅಂಕ ಗಳಿಸಿ, ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಗಳಿಸಿ, […]
ಶ್ರಮಿಕ ಕಛೇರಿಗೆ ಬಿಜೆಪಿ ಪ್ರಮುಖರ ಭೇಟಿ

ಬೆಳ್ತಂಗಡಿ: ಮಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಬಂದಿದ್ದ ರಾಜ್ಯ ಬಿಜೆಪಿ ಕಾರ್ಯದರ್ಶಿ ಜಿ. ರವಿ ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿನಯ್ ಬಿದಿರೆ ಹಾಗೂ ಮೈಸೂರಿನ ರಾಜೇಂದ್ರ ನವೆಂಬರ್ 6ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲು ಆಗಮಿಸಿದ್ದು, ಈ ಸಂದರ್ಭದಲ್ಲಿ ದಾರಿ ಮಧ್ಯೆ ಬೆಳ್ತಂಗಡಿಯಲ್ಲಿರುವ ಶಾಸಕ ಹರೀಶ್ ಪೂಂಜಾರ ಕಛೇರಿ ‘ಶ್ರಮಿಕ’ ಕ್ಕೆ ಭೇಟಿ ನೀಡಿದರು.ಪಕ್ಷದ ಪ್ರಮುಖರನ್ನು ತನ್ನ ಕಛೇರಿಗೆ ಆತ್ಮೀಯವಾಗಿ ಬರಮಾಡಿಕೊಂಡ ಶಾಸಕ ಹರೀಶ್ ಪೂಂಜಾ; ಆದರದಿಂದ ಗೌರವಿಸಿ, ಪ್ರೀತಿಯಿಂದ ಬೀಳ್ಕೊಟ್ಟರು. […]
ನಿವೃತ್ತ ಸಿ.ಇ.ಓ. ದ್ವಯರಿಗೆ ಅಭಿನಂದನೆ

ಬೆಳ್ತಂಗಡಿ: ಸಹಕಾರಿ ಸಂಸ್ಥೆಗಳು ಇಂದಿಗೂ ಜನರ ವಿಶ್ವಾಸವನ್ನು ಉಳಿಸಿಕೊಂಡು ಪ್ರಾಮಾಣಿಕ ಸೇವೆಯನ್ನು ನೀಡುತ್ತಿದೆ ಎಂದಾದರೆ ಅದಕ್ಕೆ ಪ್ರಮುಖ ಕಾರಣ ಸಹಕಾರಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು. ಇಂದು ಭ್ರಷ್ಟಾಚಾರವಿಲ್ಲದ ಆರ್ಥಿಕ ವ್ಯವಹಾರ ಸಹಕಾರಿ ಸಂಸ್ಥೆಗಳಲ್ಲಿ ನಡೆಯುತ್ತಿದೆ. ಪ್ರಾಮಾಣಿಕತೆಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ, ನೆಮ್ಮದಿಯ ಬದುಕು ಕಟ್ಟಿಕೊಂಡವರು ಸಹಕಾರಿ ಸಂಸ್ಥೆಗಳ ಸಿಬ್ಬಂದಿಗಳು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ನಿರಂಜನ ಬಾವಂತಬೆಟ್ಟು ಹೇಳಿದರು.ಅವರು ನವೆಂಬರ್ 5ರಂದು ಬೆಳ್ತಂಗಡಿಯ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ […]
ದೇಗುಲದ ಜೀರ್ಣೋದ್ಧಾರಕ್ಕೆ ದೇಣಿಗೆ

ವೇಣೂರು: ಐತಿಹಾಸಿಕ ಕ್ಷೇತ್ರವಾದ ವೇಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಊರ ಪರವೂರ ಭಕ್ತರ-ದಾನಿಗಳ ಸಹಕಾರದಿಂದ ದೇಗುಲದ ಜೀರ್ಣೋದ್ಧಾರ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು; ನವೆಂವರ್ 4ರಂದು ತನ್ನ ತಾಯಿ ಚಂದ್ರಾವತಿಯವರೊಂದಿಗೆ ದೇಗುಲಕ್ಕೆ ಭೇಟಿ ನೀಡಿದ ಆರಂಬೋಡಿ ಗ್ರಾಮದ ಪ್ರಗತಿಪರ ಕೃಷಿಕರಾದ ಕಾಮದೇನು ನಿಲಯ ಮಂಜಿಲ ವಸಂತ ಪೂಜಾರಿಯವರು ದೇಗುಲದ ಜೀರ್ಣೋದ್ಧಾರ ಕಾಮಗಾರಿಗೆ ತಾನು ಕೊಡಲು ನಿಶ್ಚಯಿಸಿದ 1ಲಕ್ಷ ರೂಪಾಯಿ ದೇಣಿಗೆಯಲ್ಲಿ ಕೊನೆಯ ಕಂತಿನ ಮೊತ್ತ ರೂಪಾಯಿ 25,000/-ವನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್‌ರಿಗೆ […]
ಮಗುವಿಗೆ ವಿಷವಿಕ್ಕಿ ದಂಪತಿ ಸಾವಿಗೆ ಯತ್ನ
ಬೆಳ್ತಂಗಡಿ: ತಮ್ಮ ಕರುಳಕುಡಿಗೆ ವಿಷವಿಕ್ಕಿದ ದಂಪತಿಗಳು ತಾವೂ ವಿಷ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ ದುರ್ಘಟನೆ ನವೆಂಬರ್ 3ರಂದು ಕೊಕ್ರಾಡಿಯಿಂದ ವರದಿಯಾಗಿದ್ದು; ದುರ್ಘಟನೆಯಲ್ಲಿ ಅಮಾಯಕ ಮಗು ಕಿಶಾ(5)ಹಾಗೂ ಮಗುವಿನ ತಂದೆ ಚೇತನ್ ಕುಮಾರ್ (32) ಸಾವಿಗೀಡಾಗಿದ್ದು; ಮಗುವಿನ ತಾಯಿ ಆಶಾಲತಾ (27) ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಸಧ್ಯಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಹೆಡ್ಲಬೆಟ್ಟು ನಿವಾಸಿ ಚೇತನ್ ಕುಮಾರ್ ನವೆಂಬರ್ 2ರ ಸಂಜೆ ತಂಪು ಪಾನೀಯಕ್ಕೆ ವಿಷಯುಕ್ತ […]
ಕೃಷಿ ಇಲಾಖೆಯಿಂದ ಟ್ರಾಕ್ಟರ್ ವಿತರಣೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬೆಳ್ತಂಗಡಿಯ ವತಿಯಿಂದ ನವೆಂಬರ್ 4ರಂದು ಕಛೇರಿಯ ವಠಾರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾರವರು ಆಯ್ಕೆಯಾದ ಅರ್ಹ ಕೃಷಿಕ ಫಲಾನುಭವಿಗಳಿಗೆ ಟ್ರಾಕ್ಟರ್ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ, ಸದಸ್ಯರಾದ ಕೊರಗಪ್ಪ ನಾಯ್ಕ ಹಾಗೂ […]
ಕಾಂಗ್ರೇಸ್ ಐಕ್ಯತಾ ಸಮಾವೇಶ

ಬೆಳ್ತಂಗಡಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಗ್ರಾಮೀಣ ಬ್ಲಾಕ್ ಸಮಿತಿ ಬೆಳ್ತಂಗಡಿ ಹಾಗೂ ಗ್ರಾಮ ಸಮಿತಿ ನೆರಿಯ ಇದರ ಜಂಟಿ ಆಶ್ರಯದಲ್ಲಿ ನೆರಿಯ ಗ್ರಾಮ ಪಂಚಾಯತ್ ಮಟ್ಟದ ಗ್ರಾಮ ಸಮಿತಿ ಮತ್ತು ಬೂತ್ ಸಮಿತಿಯ ಪದಾಧಿಕಾರಿಗಳ ಐಕ್ಯತಾ ಸಮಾವೇಶವು ನೆರಿಯ ಗ್ರಾಮದ ಬಯಲು ಅಂಕೋತ್ಯಾರು ಇಸುಬು ರವರ ಮನೆ ವಠಾರದಲ್ಲಿ ನಡೆಯಿತು.ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸರಕಾರದ ಮಾಜಿ ಸಚಿವ ಕೆ. ಗಂಗಾಧರ ಗೌಡ […]
ತೋಟಗಾರಿಕಾ ಕಛೇರಿ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ: ಬೆಳ್ತಂಗಡಿ ತೋಟಗಾರಿಕಾ ಇಲಾಖಾ ಕಛೇರಿಯ ನೂತನ ಕಟ್ಟಡವನ್ನು ನವೆಂಬರ್ 4ರಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ, ಸದಸ್ಯರಾದ ಕೊರಗಪ್ಪ ನಾಯ್ಕ ಹಾಗೂ ಸೌಮ್ಯಲತಾ ಜಯಂತ್ ಗೌಡ, ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಶಶಿಧರ ಕಲ್ಮಂಜ, ಸದಸ್ಯರಾದ […]