ದೇರಾಜೆ ಕೃತಿ ’ಕುರುಕ್ಷೇತ್ರಕ್ಕೊಂದು ಆಯೋಗ’ ಲೋಕಾರ್ಪಣೆ

ಬೆಳ್ತಂಗಡಿ: ದೇರಾಜೆ ಸೀತಾರಾಮಯ್ಯ ಕೃತಿ ’ಕುರುಕ್ಷೇತ್ರಕ್ಕೊಂದು ಆಯೋಗ’ ಇದರ ತೃತೀಯ ಮುದ್ರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ ಬೀಡಿನಲ್ಲಿ ಬಿಡುಗಡೆಗೊಳಿಸಿದರು.ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಹೆಗ್ಗಡೆಯವರು ಮಹಾಭಾರತದಲ್ಲಿ ಬರುವ ಮಹಾನ್ ವ್ಯಕ್ತಿಗಳ ಹಾಗೂ ಘಟನೆಗಳ ಮೇಲೆ ವಿಮರ್ಶಾತ್ಮಕವಾದ ಹೊಸ ಬೆಳಕನ್ನು ಈ ಕೃತಿಯಲ್ಲಿ ಲೇಖಕರು ಹಾಯಿಸಿದ್ದಾರೆ. ಚಮತ್ಕಾರಿಯಾದ ಕಲ್ಪನಾವಿಲಾಸದಿಂದ ಈ ಗ್ರಂಥವನ್ನು ರಚಿಸಿದ್ದಾರೆ. ಮಹಾಭಾರತದ ಘಟನಾವಳಿಗಳ ಮೇಲೆ ನೂತನ ಪ್ರಕಾಶವನ್ನು ಬೀರುವ ಈ ಗ್ರಂಥದಿಂದ ಧಾರ್ಮಿಕ ಜಿಜ್ಞಾಸೆಯು ಜಾಗೃತಗೊಂಡೀತು […]
ರಾಘವೇಂದ್ರ ಹೊಳ್ಳರಿಗೆ ಪಿಎಚ್‌ಡಿ ಗೌರವ

ಬೆಳ್ತಂಗಡಿ: ಉಜಿರೆಯ ಡಾ. ರಾಘವೇಂದ್ರ ಹೊಳ್ಳ ಅವರು ಭೌತಶಾಸ್ತ್ರ ವಿಭಾಗದಲ್ಲಿ “ಇನ್ವೆಸ್ಟಿಗೇಷನ್ ಆಫ್ ಟೆಕ್ನಿಕಲ್ ಅಂಡ್ ಡೋಸಿಮೆಟ್ರಿಕ್ ಆಸ್ಪೆಕ್ಟ್ಸ್ ಆಫ್ ರೆಸ್ಪಿರೇಟರಿ ಮೋಷನ್ ಅಂಡ್ ಎ ನ್ಯೂ ಫಿಲ್ಮ್ ಸ್ಲೋಪ್ ಮೆಥಡ್ ಫಾರ್ ಸ್ಮಾಲ್ ಫೀಲ್ಡ್ ಡೋಸಿಮೆಟ್ರಿ” ಎಂಬ ವಿಷಯದ ಕುರಿತು ಸಂಶೋಧನೆ ಕೈಗೊಂಡು ಸಲ್ಲಿಸಿದ ಸಂಪ್ರಬಂಧವನ್ನು ಮನ್ನಿಸಿ ಕೊಯಂಬತ್ತೂರಿನ ಕಾರುಣ್ಯ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ. ಇವರು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ ಪದವಿ ಹಾಗೂ ಮುಂಬಯಿಯ ಹೋಮಿ […]
ನೊಚ್ಚ ಶೆಟ್ಟರಿಗೆ ಕಲಾ ತಂಡದ ಗೌರವ

ಬೆಳ್ತಂಗಡಿ: ಅಳದಂಗಡಿಯ ಶ್ರೀ ಗುರು ಸಭಾಭವನದಲ್ಲಿ ಅಕ್ಟೋಬರ್ 26ರಂದು ನಡೆದ ಸತತ 37 ವರುಷ ಸೇವೆ ಸಲ್ಲಿಸಿ ಅಕ್ಟೋಬರ್ 31ರಂದು ನಿವೃತ್ತ ರಲ್ಲಿರುವ ಶಿರ್ಲಾಲಿನ ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಎಚ್. ನಿತ್ಯಾನಂದ ಶೆಟ್ಟಿ ನೊಚ್ಚರ ಅಭಿನಂದನಾ ಸಮಾರಂಭದಲ್ಲಿ ಅಳದಂಗಡಿಯ ‘ನಮ ಮಾತೆರ್ಲ ಒಂಜೇ ಕಲಾತಂಡ’ದವರಿಂದ ನೊಚ್ಚ ಶೆಟ್ಟರಿಗೆ ಕಲಾತಂಡದ ಪ್ರತಿ ಕಾರ್ಯಕ್ರಮಕ್ಕೆ ನಿರಂತರ ಸಹಕಾರ ನೀಡಿದಕ್ಕಾಗಿ ನೆನಪಿನ ಕಾಣಿಕೆ ನೀಡಿ ತಂಡದ ವತಿಯಿಂದ ಗೌರವಿಸಲಾಯಿತು.ಈ ಸಮಯದಲ್ಲಿ ತಂಡದ ಅಧ್ಯಕ್ಷರಾದ […]
ಧರ್ಮಾಧಿಕಾರಿ ಡಾ. ಹೆಗ್ಗಡೆಯವರಿಗೆ ಗೌರವಪೂರ್ವಕ ಅಭಿನಂದನೆ.

ಬೆಳ್ತಂಗಡಿ: ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ದ. ಕ. ಹಾಗೂ ಉಡುಪಿ ಜಿಲ್ಲೆ ಇದರ ಬೆಳ್ತಂಗಡಿ ವಲಯದ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 53ನೇ ವರ್ಷದ ವರ್ಧಂತ್ಯತ್ಸವದ ಶುಭ ಸಂದರ್ಭ ಧರ್ಮಸ್ಥಳಕ್ಕೆ ಬೇಟಿ ನೀಡಿ ಧರ್ಮಾಧಿಕಾರಿ ಡಾ. ಹೆಗ್ಗಡೆಯವರನ್ನು ಗೌರವಪೂರ್ವಕವಾಗಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಸುರೇಶ್ ಬಿ. ಕೌಡಂಗೆ, ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ. ಸುವರ್ಣ, ಗೌರವಾಧ್ಯಕ್ಷ ಎನ್. ಎ. ಗೋಪಾಲ್ ಅಳದಂಗಡಿ, ಪ್ರಧಾನ ಕಾರ್ಯದರ್ಶಿ […]
ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಾದುಕಾನ್ಯಾಸ.

ಬೆಳ್ತಂಗಡಿ: ರೆಖ್ಯ ಗ್ರಾಮದ ಕೋಲಾರು ಶ್ರೀ ದುರ್ಗಾರಮೇಶ್ವರೀ ದೇವಸ್ಥಾನದಲ್ಲಿ ಅಕ್ಟೋಬರ್ 19ರಂದು ಪಾದುಕಾನ್ಯಾಸ ಕಾರ್ಯಕ್ರಮವು ಶಾಸಕ ಹರೀಶ್ಮ ಪೂಂಜರ ನೇತೃತ್ವದಲ್ಲಿ ನಡೆಯಿತುಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರಾಮಯ್ಯ ಗೌಡ ಕೋಲಾರು, ದೇಗುಲದ ಅನುವಂಶಿಕ ಮೊಕ್ತೆಸ್ಥರರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ರಾಘವೇಂದ್ರ ನಾಯಕ್, ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಸಿನಮಕ್ಕಿ; ಕುಶಾಲಪ್ಪಗೌಡ ಪಾಪುದಮಂಡೆ, ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ರಿ) ಕೋಲಾರು; ಮಂಜುನಾಥ ಗೌಡ ಕೈಕುರೆ, ಅಧ್ಯಕ್ಷರು, ಜೀರ್ಣೋಧ್ಧಾರ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೋಲಾರು; ಶೀನಪ್ಪ […]
ರೆಡ್ ಮಾರ್ಕ್ಯೂರಿ ದಂಧೆ: ಧರ್ಮಸ್ಥಳದ ಯುವಕ ಸಹಿತ ಇಬ್ಬರ ಬಂಧನ-ಉಳಿದವರು ಪರಾರಿ.

ಬೆಳ್ತಂಗಡಿ : ರೆಡ್ ಮಾರ್ಕ್ಯೂರಿ ದಂಧೆ ಎಲ್ಲಾ ರಾಜ್ಯಗಳಲ್ಲಿಯೂ ಹೆಚ್ಚಾಗಿದ್ದು ಈಗ ಈ ದಂಧೆ ನಮ್ಮ ಜಿಲ್ಲೆಯಲ್ಲೂ ಕಾರ್ಯಾಚರಿಸುತ್ತಿದೆ.ಚಿಕ್ಕಮಗಳೂರು ಜಿಲ್ಲೆಯ ಹಾಂದಿ ಗ್ರಾಮದ ಸರ್ಕಲ್ ಬಳಿ ಅಲ್ದೂರು ಪೊಲೀಸರು ಖಚಿತ ಮಾಹಿತಿ ಮೇರೆಗೆ ಪುತ್ತೂರು ನೊಂದವಣೆಯ ಅಲ್ಟೋ ಕಾರಿನಲ್ಲಿ ಖೋಟಾ ನೋಟು ಹಣ ಸಾಗಿಸುತ್ತಿದ್ದಾಗ ಅಡ್ಡಗಟ್ಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 500 ಮುಖಬೆಲೆಯ 5 ಲಕ್ಷ ರೂಪಾಯಿ ಖೋಟಾ ನೋಟುಗಳು ಅಲ್ಟೋ ಕಾರಿನಲ್ಲಿದ್ದ ಬ್ಯಾಗಿನಲ್ಲಿ ಪತ್ತೆಯಾಗಿದೆ. ಈ ಹಣ ರೆಡ್ ಮಾರ್ಕ್ಯೂರಿ ಖರೀದಿಸುವ ಉದ್ಧೇಶದಿಂದ ಬೆಳ್ತಂಗಡಿಯಿಂದ […]
ಹೊಲಿಗೆ ಯಂತ್ರ ವಿತರಣೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ ಹಾಗೂ ಗ್ರಾಮ ಪಂಚಾಯತ್ ಉಜಿರೆ ಇದರ ಸಂಯುಕ್ತ ಆಶ್ರಯದಲ್ಲಿ ಉಜಿರೆ ಗ್ರಾಮ ಪಂಚಾಯತ್‌ನ 2020 – 2021ನೇ ಸಾಲಿನ 25% ಮೀಸಲು ಅನುದಾನದಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವು ಅಕ್ಟೋಬರ್ 9ರಂದು ಉಜಿರೆ ಗ್ರಾಮ ಪಂಚಾಯತ್‌ನ ಸುವರ್ಣ ಸೌಧ ಸಭಾಂಗಣ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಕೆ ಪ್ರತಾಪ್‌ಸಿಂಹ […]
ಪ್ರಬಂಧ ಸ್ಪರ್ಧೆ ವಿಜೇತರ ಘೋಷಣೆ

ಉಜಿರೆ : ‘ದರ್ಪಣ ಇದು ಅರಿವಿನ ದೀವಿಗೆ’ ತಂಡ, ‘ಮಡಿಲು ಸಾಂಸ್ಕೃತಿಕ ಟ್ರಸ್ಟ್’ ಮತ್ತು ವಿಸ್ತಾರ ನ್ಯೂಸ್ ಇದರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಫೇಸ್‌ಬುಕ್ ಲೈವ್ ಮುಖಾಂತರ ಯುವ ಲೇಖಕ ಪೃಥ್ವೀಶ್ ಧರ್ಮಸ್ಥಳ ಘೋಷಿಸಿದರು.ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ರಕ್ಷಾ ಕೋಟ್ಯಾನ್ ಪ್ರಥಮ, ಮಂಗಳೂರು ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿನಿ ಗುಣವತಿ ದಾನದಗುಡ್ಡೆ ದ್ವಿತೀಯ ಹಾಗೂ ಪುತ್ತೂರಿನ ಫಿಲೋಮಿನ ಕಾಲೇಜು ವಿದ್ಯಾರ್ಥಿನಿ ಶ್ರೀದೇವಿ ಕೆ. ತೃತೀಯ ಸ್ಥಾನ […]
ದಾನಿ ವೀರಮ್ಮ ಅಚ್ಚಿನಡ್ಕರಿಗೆ ಅಭಿನಂದನೆ.

ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಪ್ರಯೋಗ ಶಾಲೆಗೆ ಅಗತ್ಯವಿರುವ ಪರಿಕರಗಳನ್ನು ನೀಡುವ ಸಲುವಾಗಿ ರೋಟರಿ ಕ್ಲಬ್ ಬೆಳ್ತಂಗಡಿಗೆ ರೂಪಾಯಿ 30000 ಧನ ಸಹಾಯವನ್ನು ನೀಡಿದ ನರ್ಸಿಂಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ವೀರಮ್ಮ ಅಚ್ಚಿನಡ್ಕ ಇವರಿಗೆ ರೋಟರಿ ಕ್ಲಬ್ ಬೆಳ್ತಂಗಡಿ ಪರವಾಗಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ್ ಕೆ. ವಿ., ನಿರ್ದೇಶಕರಾದ ಡಿ.ಎಮ್ ಗೌಡ, ಶ್ರೀಕಾಂತ್ ಕಾಮತ್, ಆ್ಯನ್ಸ್ ಕ್ಲಬ್‌ನ ಅಧ್ಯಕ್ಷೆ ಡಾl […]
ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಪ್ರಧಾನ ಕಛೇರಿಯ ಉದ್ಘಾಟನೆ.

ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಪ್ರಧಾನ ಕಛೇರಿಯ ಉದ್ಘಾಟನೆಬೆಳ್ತಂಗಡಿ: ಆರ್ಥಿಕ ವ್ಯವಹಾರದೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಗ್ರಾಹಕರ ಮತ್ತು ನಾಗರಿಕರ ಮೆಚ್ಚುಗೆ-ಪ್ರಶಂಸೆಗೆ ಪಾತ್ರವಾದ ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಛೇರಿಯ ನವೀಕೃತಗೊಂಡ ಕಛೇರಿಯ ಉದ್ಘಾಟನಾ ಸಮಾರಂಭವು ಅಕ್ಟೋಬರ್ 1ರಂದು ಬೆಳ್ತಂಗಡಿಯ ಸಿಎಸ್ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು.ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ನವೀಕೃತ ಕಛೇರಿಯನ್ನು ಉದ್ಘಾಟಿಸಿ, ಸಂಸ್ಥೆಗೆ […]