ಆಯ್ದ ರೈತರಿಗೆ ಗೇರು ಗಿಡ ವಿತರಣೆ ಕಾರ್ಯಕ್ರಮ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ವಲಯದ ಆಶ್ರಯದಲ್ಲಿ ವಲಯ ಮಟ್ಟದ ಗೇರುಗಿಡ ವಿತರಣಾ ಕಾರ್ಯಕ್ರಮವು ಸರಕಾರಿ ಉನ್ನತೀಕರಿಸಿದ ಪ್ರೌಢ ಶಾಲೆ ಪೆರೋಡಿತ್ತಾಯಕಟ್ಟೆಯಲ್ಲಿ ಜರಗಿತು.ವಲಯದ ಆಯ್ದ ಗೇರುಕೃಷಿ ರೈತ ಫಲಾನುಭವಿಗಳಿಗೆ ಲಾಭದಾಯಕ ಗೇರುಕೃಷಿಯ ನಾಟಿ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವ್ಯಾಪ್ತಿಯ ನಿರ್ದೇಶಕರಾದ ವಸಂತ್ ಸಾಲ್ಯಾನ್ ನೆರವೇರಿಸಿದರು. ಗ್ರಾಮಾಭಿವೃದ್ಧಿ ಯೋಜನೆ ನಡೆದು ಬಂದ ದಾರಿ ಮತ್ತು ಕೃಷಿ ಕುಟುಂಬಕ್ಕೆ ಯೋಜನೆಯ ಮೂಲಕ ನೀಡುತ್ತಿರುವ […]
ರೋಟರಿ ವತಿಯಿಂದ ‘ರೋಸ್ ಡೇ’ .

ಬೆಳ್ತಂಗಡಿ: ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಹಸ್ತವನ್ನು ನೀಡುವ ದಿನವಾಗಿ ಆಚರಿಸಲ್ಪಡುವ ಸೆಪ್ಟೆಂಬರ್ 22 “ರೋಸ್ ಡೇ” ಯನ್ನು ಬೆಳ್ತಂಗಡಿ ರೋಟರಿ ಕ್ಲಬ್‌ನ ಸದಸ್ಯರ ಸಹಕಾರದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಿಡ್ಲೆ ಗ್ರಾಮದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ನಾಲ್ಕೂವರೆ ವರ್ಷದ ಮಗುವಿನ ಚಿಕಿತ್ಸೆಗಾಗಿ ರೂಪಾಯಿ 25000/- ವನ್ನು ನೀಡುವುದರ ಮೂಲಕ ಅರ್ಹರಿಗೆ ಸಹಾಯಹಸ್ತ ಚಾಚಲಾಯಿತು. ಈ ಕಾರ್ಯಕ್ರಮದಲ್ಲಿ ಮಗುವಿನ ತಂದೆ ಜಯಂತ್, ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ್ […]
ನೆರೆಯಿಂದ ಕಂಗಾಲಾದ ಬೊಳಿಯಾರು ನಿವಾಸಿಗರು

ಧರ್ಮಸ್ಥಳ: ನಾಡಿನ ಪ್ರಸಿದ್ದ ಯಾತ್ರಾ ಸ್ಥಳವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮದಲ್ಲಿರುವ ಬೊಳಿಯಾರು ಪ್ರದೇಶದ ನಿವಾಸಿಗರು ಪ್ರತೀವರ್ಷ ಮಳೆಗಾಲ ಬಂತೆಂದರೆ ನದಿಯಲ್ಲಿ ನೀರು ಉಕ್ಕಿ ಬರುವ ನೆರೆಗೆ ಭಯದಿಂದಲೇ ಬದುಕುತ್ತಾ, ಪೇಟೆಯ ಸಂಪರ್ಕ ಕಳೆದುಕೊಂಡು ದ್ವೀಪ ವಾಸದ ಅನುಭವ ಪಡೆಯುತ್ತಿದ್ದಾರೆ.ಈ ಬಾರಿಯೂ ಸೆಪ್ಟೆಂಬರ್ 19, 20ನೇ ತಾರೀಕಿನಂದು ಸುರಿದ ಭಾರೀ ಮಳೆಗೆ ನದಿಯಲ್ಲಿ ಉಕ್ಕಿ ಹರಿದ ನೀರಿನ ಪರಿಣಾಮ ಬೊಳಿಯಾರು ಪ್ರದೇಶದ ನಿವಾಸಿಗರು ಪೇಟೆ ಸಂಪರ್ಕ ಕಡಿದುಕೊಂಡು ಕಂಗಾಲಾಗಿದ್ದಾರೆ. ಇಲ್ಲಿ ಧರ್ಮಸ್ಥಳ ಪೇಟೆಗೆ ಸಂಪರ್ಕ ಕಲ್ಪಿಸುವ ಕಚ್ಛಾ […]
ಅಕ್ಟೋಬರ್ ಕೊನೆಯ ವಾರ ಗ್ರಾಮ ಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್?
ಬೆಳ್ತಂಗಡಿ: ರಾಜ್ಯದ ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ ಅವಧಿ ಕಳೆದ ಜೂನ್ ತಿಂಗಳಲ್ಲೇ ಅಂತ್ಯವಾಗಿದ್ದು, ನಿಯಮದ ಪ್ರಕಾರ ಅಧಿಕಾರಾವದಿ ಕೊನೆಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕು. ಆದರೆ ಕೊರೋನಾ ಭೀತಿಯಿಂದ ಸಧ್ಯಕ್ಕೆ ಅನಿವಾರ್ಯವಾಗಿ ಚುನಾವಣೆ ಮುಂದೂಡಲಾಗಿದ್ದು, ಇದೀಗ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕೊರೋನಾ ಸೋಂಕು ರಾಜ್ಯದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವಾಗಲೇ, ಚುನಾವಣಾ ಆಯೋಗ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಲು ಮುಂದಾಗಿರುವುದು ಅಚ್ಛರಿಗೆ […]
ಅಪ್ರಾಪ್ತ ದಲಿತ ಬಾಲೆಯ ಮೇಲೆ ಲೈಂಗಿಕ ದೌರ್ಜನ್ಯ
ಧರ್ಮಸ್ಥಳ: ಅಪ್ರಾಪ್ತ ವಯಸ್ಸಿನ ದಲಿತ ಬಾಲೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಗೆ ಕೊಲೆ ಬೆದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು; ಇದೀಗ ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು ಆರೋಪಿಗಳಿಬ್ಬರಿಗೂ ಕಾನೂನಿನ ಬೇಡಿ ತೊಡಿಸಿದ್ದಾರೆ.ಚಾರ್ಮಾಡಿ ನಿವಾಸಿ ಅಪ್ರಾಪ್ತ ವಯಸ್ಸಿನ ದಲಿತ ಬಾಲೆಯ ತಾಯಿ ಕಳಂಜ ಗ್ರಾಮದ ಬಳ್ಕಾಜೆ ರೆಜಿಮೋನು ಎಂಬವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಕೆಲವೊಮ್ಮೆ ತಾಯಿಯೊಂದಿಗೆ ಈ ದಲಿತ ಬಾಲೆಯೂ ಕಳಂಜದ ರೆಜಿಮೋನುರ ತೋಟಕ್ಕೆ ಹೋಗುತ್ತಿದ್ದಳು ಎನ್ನಲಾಗಿದೆ. ಅಂತೆಯೇ ಕಳೆದ ಮೇ ತಿಂಗಳಲ್ಲಿ ಕಳಂಜದ […]
ಲಾರಿ-ಪಿಕ್‌ಅಪ್ ಢಿಕ್ಕಿ .

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಬೊಳಿಯಾರು ಸಮೀಪ ಸೆಪ್ಟೆಂಬರ್ 11ರಂದು ಲಾರಿ- ಪಿಕಪ್ ನಡುವೆ ಢಿಕ್ಕಿ ಸಂಭವಿಸಿ ಆದ ಭೀಕರ ರಸ್ತೆ ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿದೆ. ಎರಡು ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸುದೈವವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ, ಮಹಜರು ನಡೆಸಿ, ಪ್ರಕರಣ ದಾಖಲಿಸಿದ್ದಾರೆ.
ದಲಿತ ಯುವತಿಗೆ ಲೈಂಗಿಕ ಕಿರುಕುಳ ಆರೋಪ, ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು.

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಸುರುಳಿ ಎಂಬಲ್ಲಿ ಸಲೀಂ ಎಂಬ ವಿವಾಹಿತ ಯುವಕ ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಆರೋಪಿ ತನ್ನ ಬೀಡಿ ಬ್ರ್ಯಾಂಚ್‌ನಲ್ಲಿ ಬೀಡಿ ತೆಗೆಯುವ ಸಂದರ್ಭದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಯುವತಿಯ ಬೊಬ್ಬೆ ಕೇಳಿ ಸ್ಥಳಕ್ಕೆ ಸ್ಥಳೀಯ ಬಂದ ಬಜರಂಗದಳದ ಯುವಕರು ಆರೋಪಿ ಸಲೀಂನನ್ನು ಹಿಡಿದು ಧರ್ಮಸ್ಥಳ ಪೋಲೀಸರಿಗೆ ಒಪ್ಪಿಸಿದ್ದಾರೆ.
ನೆಲ್ಯಾಡಿ ಜೆಸಿಐನಿಂದ ಶಿಕ್ಷಕ ದಿನಾಚರಣೆ; ನಿವೃತ್ತ ಶಿಕ್ಷಕ ಹಾಗೂ ಮಕ್ಕಳ ಸಾಹಿತ್ಯ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ರಿಗೆ ಗೌರವಾರ್ಪಣೆ.

ಕೊಕ್ಕಡ: ನೆಲ್ಯಾಡಿಯ ಜೆಸಿಐ ಸಂಸ್ಥೆಯ ವತಿಯಿಂದ ನೆಲ್ಯಾಡಿ ಪಡುಬೆಟ್ಟಿನ ನಿವೃತ್ತ ಶಿಕ್ಷಕ, ಸಾಹಿತ್ಯ ರತ್ನ ಗೋಪಾಲಕೃಷ್ಣ ಶಗ್ರಿತ್ತಾಯರನ್ನು ಶಾಂತಿಗೋಡುನ ಪುಂಡಿಕಾಯಿ ಸ್ವಗೃಹದಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಶುಭಸಂದರ್ಭದಲ್ಲಿ ಗೌರವಪೂರ್ವಕವಾಗಿ ಸಮ್ಮಾನಿಸಲಾಯಿತು.ನೆಲ್ಯಾಡಿ ಸಂತಜಾರ್ಜ್ ಪ್ರೌಢಶಾಲಾ ಕನ್ನಡ ಶಿಕ್ಷಕರಾದ ಕನ್ನಡ ಪಂಡಿತರೂ ಆಗಿರುವ ವಿ.ಆರ್ .ಹೆಗಡೆಯವರು ತಮ್ನ ಅಭಿನಂದನಾ ಭಾಷಣದಲ್ಲಿ ಶಗ್ರಿತ್ತಾಯರು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅನನ್ಯ ಸಾಧನೆ ಮತ್ತು ಶಿಕ್ಷಕರಾಗಿ ಸಮಾಜಕ್ಕೆ ನೀಡಿದ ವಿಶಿಷ್ಟ ಸೇವೆ ಇಂದಿಗೂ ಎಲ್ಲರಿಗೂ ಮಾದರಿ. ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ,ಮುಮ್ಮೇಳಗಳೆರಡರಲ್ಲೂ […]
ಸಿಡಿಲು ಬಡಿದು ಅಕೇಶಿಯಾ ಮರ ಛಿದ್ರ

ಬೆಳಾಲು: ಬೆಳಾಲು ಗ್ರಾಮದ ಮಾಯಾ ಕ್ರಾಸ್ ಬಳಿ ಅಪ್ಪಳಿಸಿದ ಸಿಡಿಲಿಗೆ ಅಕೇಶಿಯಾ ಮರವೇ ಛಿದ್ರಗೊಂಡಿದೆ. ಸುದೈವವಶಾತ್ ಈ ರಣಭೀಕರ ಸಿಡಿಲು ಜನಸಂಚಾರವಿರುವಲ್ಲಿ ಅಥವಾ ತೋಟ, ಗದ್ದೆಗಳಿಗೆ ಅಥವಾ ಯಾರದ್ಧೇ ಮನೆಗೆ ಅಪ್ಪಳಿಸದಿರುವುದು, ಇಂತಹ ಅಪಾಯಗಳಿಂದ ಪಾರಾಗಲು ಪರಿಸರದಲ್ಲಿ ಮರಗಳನ್ನು ಬೆಳೆಸಿ ಉಳಿಸಬೇಕೆಂಬ ವಾದಕ್ಕೆ ಪುಷ್ಠಿ ನೀಡಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ; ಬೆಳ್ತಂಗಡಿ ತಾಲೂಕಿನ ಇನ್ನೊಂದು ಶಾಲೆಯಿಂದ 100% ಫಲಿತಾಂಶದ ಸಾಧನೆ.

ಬೆಳ್ತಂಗಡಿ: ಕೊರೋನಾ ಸೋಂಕಿನ ಭೀತಿಯ ನಡುವೆ ನಡೆದ 2019-20ರ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮೊದಲು ಫಲಿತಾಂಶ ಬಂದಾಗ ಸರಕಾರಿ ಶಾಲೆಗಳ ಪೈಕಿ ಬೆಳ್ತಂಗಡಿ ತಾಲೂಕಿನ ಪೆರ್ಲಬೈಪಾಡಿ ಮತ್ತು ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ 100% ಫಲಿತಾಂಶ ದಾಖಲಿಸಿದ ಶಾಲೆಗಳು ಎಂದು ಗುರುತಿಸಲ್ಪಟ್ಟಿತ್ತು. ಇದೀಗ ಮರು ಮೌಲ್ಯಮಾಪನದ ಬಳಿಕ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ 100% ಫಲಿತಾಂಶ ಪಡೆದ ಸಾಧನೆಯ ಶಾಲೆಯೆಂಬ ಹೆಮ್ಮೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ.ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ […]