ಬೆಳ್ತಂಗಡಿಯಲ್ಲಿ ಇಂದು 8ಮಂದಿಗೆ ಕೊರೋನಾ ದೃಢ

ವೈದ್ಯಾಧಿಕಾರಿ ಹಾಗೂ ಮಗುವಿಗೂ ತಟ್ಟಿದ ಸೋಂಕು ಬೆಳ್ತಂಗಡಿ ತಾಲೂಕಿನಲ್ಲಿ ಇಂದು 8ಮಂದಿಗೆ ಕೊರೋನಾ ಸೋಂಕು ಪಾಸಿಟಿವ್ ಬಂದಿದ್ದು; ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರಕಾಪಾಡದೇ, ಅನಗತ್ಯ ಓಡಾಟ ನಡೆಸಿ ಕೊರೋನಾ ಸೋಂಕಿಗೇ ಸವಾಲು ಹಾಕುವ ದುಸ್ಸಾಹಸವನ್ನು ತಾಲೂಕಿನ ವೀರರು ಇನ್ನಾದರೂ ಕೈಬಿಡದಿದ್ದರೆ ; ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕೊರೋನಾ ಇನ್ನಷ್ಟು ಅಬ್ಬರಿಸಿ ಬೊಬ್ಬರಿಯಬಹುದು ಎಂಬ ಆತಂಕ ಜನಸಾಮಾನ್ಯರನ್ನು ಕಾಡತೊಡಗಿದೆ.ಈ ನಡುವೆ ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದ, ವೈದ್ಯರಿಗಿರಬೇಕಾದ ಸಹನೆ-ತಾಳ್ಮೆ-ಸೇವೆ ಸಹಿತ […]
ಅಕ್ರಮ ಕಸಾಯಿಖಾನೆಗೆ ದಾಳಿ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಂಟಾಲ್‌ಕಟ್ಟೆ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಮೂಡುಬಿದಿರೆ ಪೊಲೀಸರು ಜುಲೈ 20ರಂದು ದಾಳಿ ನಡೆಸಿದ್ದಾರೆ.ಗಂಟಾಲ್‌ಕಟ್ಟೆ ನೀರಲ್ಕೆ ಎಂಬಲ್ಲಿ ಆರೋಪಿ ಮನ್ಸೂರು ಎಂಬಾತ ತನ್ನ ಮನೆಯ ಹಿಂದೆ ಅಕ್ರಮ ಕಸಾಯಿಖಾನೆ ನಿರ್ಮಿಸಿ, ಮಾಂಸ ಸಿದ್ಧ ಮಾಡುತ್ತಿದ್ದ. ಈತನೊಂದಿಗೆ ಶೌಕತ್, ಮುಸ್ತಾಕ್ ಉಲಾಯಿಬೆಟ್ಟು ಮತ್ತು ಆಸಿಫ್ ಎಂಬವರು ಜೊತೆ ಸೇರಿದ್ದರು. ಆರೋಪಿಗಳು ಜಾನುವಾರುಗಳನ್ನು ಕದ್ದು ತಂದು ಮಾಂಸ ಮಾಡಿ ದಂಧೆ ನಡೆಸುತ್ತಿದ್ದರು. ಪೊಲೀಸ್ ದಾಳಿ ವೇಳೆ ಸ್ಥಳದಲ್ಲಿ ಮೂರು ಕೋಣಗಳು, ದನದ ಮಾಂಸ ಮತ್ತು ಕೃತ್ಯಕ್ಕೆ […]
ಸುರಕ್ಷತಾ ಕ್ರಮ ಮರೆತ ಶಾಸಕರಿಗೆ ಹಿಂಬಾಲಕರ ಸಾಥ್

ಕಿರುಸೇತುವೆ ಉದ್ಘಾಟನೆ : ಮಾಸ್ಕ್-ವೈಯಕ್ತಿಕ ಅಂತರ ಮಾಯ ಬೆಳ್ತಂಗಡಿ: ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಟ್ಟಡೆ ಗ್ರಾಮದ ಫಂಡಿಜೆಯ ದಂಬೆದಡಿ ಎಂಬಲ್ಲಿ ಶಾಸಕರ ವಿವೇಚನಾ ಅನುದಾನದಲ್ಲಿ ನಿರ್ಮಾಣವಾದ ಕಿರು ಸೇತುವೆಯನ್ನು ಜುಲೈ 21ರಂದು ಬೆಳ್ತಂಗಡಿಯ ಶಾಸಕ ಹರೀಶ ಪೂಂಜ ಉದ್ಘಾಟಿಸಿದರು. ಕೊರೋನಾ ಸೋಂಕು ತಡೆಗೆ ಸರಕಾರ ಸೂಚಿಸಿದ ಅಗತ್ಯ ಸುರಕ್ಷತಾ ಕ್ರಮಗಳ ಪಾಲನೆಯಲ್ಲಿ ಶಾಸಕ ಹರೀಶ್ ಪೂಂಜರಿಗೆ ಸಾಥ್ ನೀಡಿದ ಅವರ ಹಿಂಬಾಲಕರು ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ವೈಯಕ್ತಿಕ ಅಂತರ ಕಾಪಾಡದೇ ಭಾಗವಹಿಸುವ ಮೂಲಕ ಕೊರೋನಾ ಸೋಂಕಿಗೆ […]
ಪಡಿತರದೊಂದಿಗೆ ಕೊರೋನಾ ಹರಡುವ ಹುನ್ನಾರ!

ಪಡಿತರ ಅಂಗಡಿಗಳಲ್ಲಿ ಜನಜಂಗುಳಿ ಬೆಳ್ತಂಗಡಿ: ಒಂದೆಡೆ ಸರಕಾರ ಕೊರೋನಾ ಸೋಂಕು ತಡೆಗೆ ಲಾಕ್‌ಡೌನ್‌ನ ಮೊರೆ ಹೋಗಿ, ಜನರ ಅನಗತ್ಯ ಓಡಾಟ ಹಾಗೂ ಒಂದೇ ಸ್ಥಳದಲ್ಲಿ ಗುಂಪು ಸೇರುವಿಕೆಗೆ ತಡೆ ಹಾಕಲು ಯೋಜಿಸಿದರೆ; ಇನ್ನೊಂದು ಕಡೆ ಇದೇ ಸರಕಾರ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡ ಜನತೆಗೆ ಅವರವರ ಊರುಗಳಲ್ಲಿ ಪಡಿತರ ಅಂಗಡಿಗಳಲ್ಲಿ ತಿಂಗಳ ಪಡಿತರವನ್ನು ಉಚಿತವಾಗಿ ವಿತರಿಸುವ ಹೆಸರಲ್ಲಿ ಕೊರೋನಾ ಸೋಂಕನ್ನೂ ಪುಕ್ಕಟೆಯಾಗಿ ಹರಡಲು ವೇದಿಕೆ ಸಿದ್ಧಪಡಿಸುತ್ತಿದೆಯಾ ಎಂಬ ಭಯ ನಾಡಿನ ಕಾನೂನು-ಕಟ್ಟಳೆಗಳನ್ನು ಗೌರವಿಸಿ-ಪಾಲಿಸುವ ನಾಗರಿಕರನ್ನು ಕಾಡಲಾರಂಭಿಸಿದೆ.ಬೆಳ್ತಂಗಡಿ […]
ಹಳ್ಳಿಯ ಕೊರೋನಾ ಸೋಂಕಿತ ಗರ್ಭಿಣಿ ನರಳಾಟ

ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಕಂಗಾಲು ಬೆಳ್ತಂಗಡಿ: ಸರಕಾರವೇನೋ ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ಸೋಂಕಿತರಿಗೆ ಚಿಕಿತ್ಸೆಗೆ ಬೆಡ್ ವ್ಯವಸ್ಥೆ ಮಾಡಲಾಗಿದೆ; ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಭರವಸೆಯ ಹೇಳಿಕೆ ನೀಡುತ್ತಿದೆ. ಆದರೆ ನಾವು ಇದುವರೆಗೆ ಬೆಂಗಳೂರು ಮಹಾನಗರದಲ್ಲಿ ಕೊರೋನಾ ಸೋಂಕಿತರು ಹಾಗೂ ಇತರ ರೋಗಿಗಳಿಗೆ ಚಿಕಿತ್ಸೆಗೆ ಬೆಡ್ ಇಲ್ಲದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ದೃಶ್ಯಗಳನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೇವೆ. ಇದೀಗ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲೂ ಗರ್ಭಿಣಿ ಮಹಿಳೆಯರು ಕೊರೋನಾ ಸೋಂಕಿನಿಂದ ನರಳಾಡಿದರೂ, ಅವರಿಗೆ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್ […]
ಚುನಾಯಿತ ಸದಸ್ಯನಿಂದ ವಿನೂತನ ಪ್ರತಿಭಟನೆ

ಗಾಂಧಿ ಮಾರ್ಗಕ್ಕೆ ಜೈ ಎಂದ ಜಗದೀಶ್ ಬೆಳ್ತಂಗಡಿ: ಕೊರೋನಾ, ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳು ಹರಡುತ್ತಿದೆ, ಮುಂಜಾಗ್ರತೆ ಕೈಗೊಳ್ಳಿ ಎಂದು ಜನಸಾಮಾನ್ಯರಿಗೆ ಕರೆ ನೀಡಿ ಪೋಸ್ ಕೊಡುವ ಸಾಕಷ್ಟು ಜನಪ್ರತಿನಿಧಿಗಳ ಎದುರು ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಚುನಾಯಿತ ಸದಸ್ಯ ಜಗದೀಶ್ ತನ್ನ ಕಾರ್ಯಶೈಲಿಯ ಮೂಲಕ ಭಿನ್ನವಾಗಿ ಕಾಣುತ್ತಾರೆ. ಡೆಂಗ್ಯೂ, ಕೊರೋನಾದಂತಹ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪರಿಸರ ಸ್ವಚ್ಛವಾಗಿರಿಸುವುದರ ಜೊತೆಗೆ ರೋಗ ಹರಡುವ ಸೊಳ್ಳೆ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆದರೆ ನಮ್ಮ ರಾಜ್ಯ ಸರಕಾರದಲ್ಲಿ ಜನತೆಯ ಸುರಕ್ಷತೆಗೆ ಮುಂಜಾಗ್ರತೆ […]
ಟಾಸ್ಕ್‌ಫೋರ್ಸ್ ಸದಸ್ಯರಿಗೆ ಆನ್‌ಲೈನ್ ತರಬೇತಿ

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಪ್ರತೀ ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಕೋರೋನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸುವಂತೆ ನೋಡಿ ಕೊಳ್ಳಲು ಚುನಾಯಿತ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ಸ್ವಯಂಸೇವಕರು ಹಾಗೂ ನೋಡಲ್ ಅಧಿಕಾರಿಗಳು ಒಳಗೊಂಡಂತೆ ಟಾಸ್ಕ್‌ಪೋರ್ಸ್ ಸಮಿತಿ ಗಳನ್ನು ರಚಿಸಲಾಗಿದ್ದು, ಸದರಿ ಸಮಿತಿಗಳ ಮುಖಾಂತರ ವಾರ್ಡ್‌ಗಳಲ್ಲಿ ಅಗತ್ಯ ಆರೋಗ್ಯ ಸೇವೆ ಹಾಗೂ ಇತರ ತುರ್ತು ಮಾಹಿತಿಗಳನ್ನು ನೀಡುವ ವಿಚಾರದಲ್ಲಿ ಎಲ್ಲಾ ಸ್ವಯಂಸೇವಕರಿಗೆ ಸರಕಾರದ ವತಿಯಿಂದ ಯೂಟ್ಯೂಬ್ ಮುಖಾಂತರ ಆನ್‌ಲೈನ್‌ನಲ್ಲಿ ಮಾಹಿತಿ ಹಾಗೂ ತರಬೇತಿಯನ್ನು […]
ಕಳಚಿ ಬಿತ್ತು ಗೋಮುಖ ವ್ಯಾಘ್ರನ ಮುಖವಾಡ

ಕೋಳಿ ಹೆಸರಲ್ಲಿ ಗೋ ಸಾಗಾಟದ ಸಂಚು ಬಯಲು ಬೆಳ್ತಂಗಡಿ: ಹಣೆಯಲ್ಲಿ ಭಜರಂಗಿಗಳನ್ನೂ ನಾಚಿಸುವ ರೀತಿಯಲ್ಲಿ ಉದ್ದದ ನಾಮ; ವಾಹನದಲ್ಲಿ ಮಂಗಳೂರು ಕಂಕನಾಡಿಯ ಅಬ್ದುಲ್ ಕರೀಮ್ ಮಾಲಕತ್ವದ ಪಿ. ಕೆ. ಚಿಕನ್ ಸೆಂಟರ್ ಹೆಸರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡಿದ ಅಗತ್ಯ ವಸ್ತು ಸಾಗಾಟದ ಅವಧಿ ಮೀರಿದ ಪರವಾನಿಗೆ; ವಾಹನದಲ್ಲಿ ಸಾಗಿಸುತ್ತಿದ್ದುದು ಮಾತ್ರ ಅಕ್ರಮವಾಗಿ ಅದೂ ಕದ್ದ ಗೋವುಗಳನ್ನು. ಸಾಗಾಟ ಮಾಡುತ್ತಿದ್ದುದು ಅಷ್ಟೇ ಅಮಾನುಷವಾಗಿ.ಜುಲೈ 20ರ ಬೆಳಗ್ಗಿನ ಜಾವ ಮೂರು ಗಂಟೆಯ ಸುಮಾರಿಗೆ ಬೆಳ್ತಂಗಡಿ ತಾಲೂಕು ನಡ ಗ್ರಾಮದ […]
ಕಡ್ಲೆಕಾಯಿ ತಿನ್ನುತ್ತಿರುವ ಕೊಟ್ಟಿಗೆಹಾರ ಪೊಲೀಸರು ; ಚಾರ್ಮಾಡಿ ಘಾಟಿಯಲ್ಲಿ ಸ್ವಿಫ್ಟ್ ಕಾರ್ ಪಲ್ಟಿ

ಬೆಳ್ತಂಗಡಿ: ಜುಲೈ 18ರ ರಾತ್ರಿ ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ಸ್ವಿಫ್ಟ್ ಕಾರೊಂದು ಮಳೆ ಹಾಗೂ ಮಂಜಿನಕಾರಣಕ್ಕೆ ದಾರಿಕಾಣದಾಗಿ; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರಿನ ಚಾಲಕ ಮೂಡಿಗೆರೆ ನಿವಾಸಿ ಸುಹೇಲ್(38) ಯಾನೆ ಬಬ್ಲು ಗಂಭೀರವಾಗಿ ಗಾಯಗೊಂಡ ಅವಘಡ ಸಂಭವಿಸಿದೆ.ಅಪಘಾತ ಸಂಭವಿಸಿದ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಗಾಯಾಳು ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾರಲ್ಲೇ ಬಿದ್ದಿದ್ದ ಎನ್ನಲಾಗಿದೆ. ಕಾನೂನು ಮೀರಿ ಸಂಜೆಯಾದ ಬಳಿಕ ಚಾರ್ಮಾಡಿ ಘಾಟಿರಸ್ತೆಯ ಮೂಲಕ ಬಂದ ಈ ಕಾರಿನ ಚಾಲಕ ತಾನೇ […]
ಬಿಗ್ ಬ್ರೇಕಿಂಗ್ ನ್ಯೂಸ್ : ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗೆ ಕೊರೊನಾ ಪಾಸಿಟಿವ್

ಕೊರೋನಾ ಸೋಂಕು ಬೆಳ್ತಂಗಡಿ ತಾಲೂಕಿನಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ಸೋಂಕಿತರ ಸೇವೆ ಮಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳನ್ನೇ ಬೆಂಬಿಡದೇ ಕಾಡಲಾರಂಭಿಸಿದೆ. ಇದೀಗ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರಿಗೇ ಕೊರೋನಾ ಸೋಂಕು ಪಾಸಿಟಿವ್ ಬಂದಿದ್ದು, ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ತೆರೆದು ಚಿಕಿತ್ಸೆ ಆರಂಭವಾದ ಬಳಿಕ ಇಲ್ಲಿ 10ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಎಲ್ಲ ಸೋಂಕಿತರನ್ನು ಚಿಕಿತ್ಸೆಗಾಗಿ ಕೊರೋನಾ ಸೋಂಕಿತರಿಗಾಗಿ ವಿಶೇಷ ಆಸ್ಪತ್ರೆಯಾಗಿ ಮಾರ್ಪಟ್ಟ ಉಜಿರೆ ಟಿ. […]