ಗೆಜ್ಜೆಗಿರಿಯಲ್ಲಿ ದೃಢಕಲಶಾಭಿಷೇಕ ಸಂಪನ್ನ
ಕಳೆದ ಫೆ. 26ರಿಂದ ಮಾಚ್೯ 2ರವರೆಗೆ ಅಭೂತಪೂರ್ವ ಬ್ರಹ್ಮಕಲಶೋತ್ಸವ ನಡೆದ ಪರಮ ಪಾವನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲಿನಲ್ಲಿ ದೃಢಕಲಶಾಭಿಷೇಕ ಕಾರ್ಯಕ್ರಮ ಅತ್ಯಂತ ಸರಳ ರೀತಿಯಲ್ಲಿ ನಡೆಯಿತು.ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಅದ್ದೂರಿತನ ಇಲ್ಲದೆ ಸರಳವಾಗಿ ವಿಧಿ ವಿಧಾನ ನಡೆಸಲಾಯಿತು.ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಸಾರ್ವಜನಿಕ ಭಕ್ತರ ಭಾಗವಹಿಸುವಿಕೆ ಇಲ್ಲದೆ ಕೇವಲ ಯಜಮಾನ ಕುಟುಂಬಸ್ಥರು, ಕ್ಷೇತ್ರಾಡಳಿತ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಕರಸೇವಾ ಸಮಿತಿಯ ಆಯ್ದ ಪ್ರಮುಖರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕ್ಷೇತ್ರದ ಆದಿ ದೈವ […]
ಆರೋಗ್ಯ ಪರಿಕರಗಳ ಕೊಡುಗೆ
ಕೋರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳ ಅನುಷ್ಠಾನಕ್ಕೆ ಅಹರ್ನಿಶಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಗುತ್ತಿಗೆ ಆಧಾರಿತ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರ ಬಳಕೆಗಾಗಿ ಬೆಳ್ತಂಗಡಿಯ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆರೋಗ್ಯ ಪರಿಕರಗಳನ್ನು ನೀಡಲಾಯಿತು.ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ಈ ಆರೋಗ್ಯ ಪರಿಕರಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧುರವರಿಗೆ ಹಸ್ತಾಂತರಿಸಿದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹರಿಣಿ, ತಾಲೂಕು ಆರೋಗ್ಯ ಕಾರ್ಯ ವ್ಯವಸ್ಥಾಪಕ ಅಜಯ್ ಕುಮಾರ್, ರಾಜಕೇಸರಿ ಸಂಸ್ಥೆಯ […]
ಇಲಾಖೆಯಿಂದ ನಿರ್ಲ್ಯಕ್ಷಕ್ಕೊಳಗಾದ ಸೇತುವೆ ಕುಸಿತ-ಗ್ರಾಮೀಣ ಜನತೆಗೆ ಸಂಕಷ್ಟ
ಸೇತುವೆ ದುರಸ್ಥಿ ಕಾಮಗಾರಿಯಲ್ಲೂ ನಿರ್ಲ್ಯಕ್ಷ ತೋರಿದ ಇಲಾಖಾಧಿಕಾರಿಗಳು ಬೆಳ್ತಂಗಡಿ: ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್‌ನಿಂದ ರಾಷ್ಟ್ರೀಯ ಉದ್ಯಾನವನ ಅಲಂಬಕ್ಕೆ ಹೋಗುವ ರಸ್ತೆಯಲ್ಲಿರುವ ಕುಕ್ಕುಜೆ ಸೇತುವೆಯು ಸಂಪೂರ್ಣ ಶಿಥಿಲಗೊಂಡು ಮೇ.27ರಂದು ಸಂಜೆ ಕುಸಿದು ಬಿದ್ದಿದೆ. ಸುಮಾರು 45 ವರ್ಷಕ್ಕೂ ಹಳೆಯದಾದ ಈ ಸೇತುವೆಯ ಫಿಲ್ಲರ್ ಕುಸಿದು ಒಂದು ವರ್ಷ ಆಗುತ್ತಾ ಬಂದಿದ್ದು, ವಾಹನ ಚಾಲಕರಿಗೆ ಅಪಾಯವನ್ನು ತಂದಿತ್ತು. ಇದರ ದುರಸ್ತಿಗೆ ಈ ಭಾಗದ ನಾಗರಿಕರು ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಸೇತುವೆ ಶಿಥಿಲಗೊಂಡಿದ್ದರಿಂದ ಈ […]
ಗುರುಗಳೇ ಎಚ್ಚರ ತಪ್ಪಿದರೆ ಎಡವುವವರಿಗಾರು ದಿಕ್ಕು
ಬದ್ಯಾರಿನಲ್ಲಿ ಹೈಮಾಸ್ಕ್ ಲೈಟ್ ವೈಯಕ್ತಿಕ ಅಂತರ ಮರೆತು ಉದ್ಘಾಟನೆ ಮೇ 27ರಂದು ಬದ್ಯಾರಿನ ಡಾl ಎಲ್. ಎಂ. ಪಿಂಟೊ ಆಸ್ಪತ್ರೆಯ ವಠಾರದಲ್ಲಿರುವ ಬಸ್ ನಿಲ್ದಾಣದ ಬಳಿ ಬೆಳ್ತಂಗಡಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅಳವಡಿಸಲಾದ ಹೈಮಾಸ್ಕ್ ದಾರಿದೀಪದ ಉದ್ಘಾಟನಾ ಕಾರ್ಯಕ್ರಮ. ದೀಪವನ್ನು ಸಾಂಪ್ರದಾಯಿಕವಾಗಿ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ಆದರೆ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಬದ್ಯಾರು ಚರ್ಚಿನ ಧರ್ಮಗುರು ವಂ. ಮೆಲ್ವಿನ್ ಡಿ’ಸೋಜಾ ಉಪಸ್ಥಿತರಿದ್ದೂ, ಕಾರ್ಯಕ್ರಮದಲ್ಲಿ ವೈಯಕ್ತಿಕ ಅಂತರ ಮರೆತು ಕೊರೋನಾ ಸೋಂಕಿನ ಬಗ್ಗೆ ಮುಂಜಾಗ್ರತೆ ವಹಿಸದಿದ್ದುದು ‘ಗುರುಗಳೇ […]
ಕಡಂದಲೆ ಆತ್ಮಹತ್ಯೆ ಪ್ರಕರಣದ ನಂತರ ಮೂಡುಬಿದಿರೆಯಲ್ಲಿ ಆವರಿಸಿದೆ ಕೊರೋನಾ ಭೀತಿ
ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳೀಯರನೇಕರ ಭೇಟಿ ಹೆಚ್ಚಿಸಿದ ಆತಂಕ ಮೂಡುಬಿದಿರೆ : ಮುಂಬಯಿಯಿಂದ ಕಡಂದಲೆಗೆ ಆಗಮಿಸಿದ್ದ ಹೋಟೆಲ್ ಉದ್ಯೋಗಿ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಗೆ ಒಳಗಾದ ಕೆಲವೇ ಗಂಟೆಗಳ ಬಳಿಕ ಶಾಲೆಯ ವರಾಂಡದಲ್ಲಿ ನೇಣಿಗೆ ಶರಣಾದ ಪ್ರಕರಣ ಇದೀಗ ಮೂಡುಬಿದಿರೆ ಪರಿಸರದಲ್ಲಿ ತೀವ್ರ ಭೀತಿಯ ಅಲೆಯೆಬ್ಬಿಸಿದೆ.ಮೇ. ,20ರಂದು ತಡರಾತ್ರಿ ಮುಂಬಯಿಯಿಂದ ತನ್ನ ಇತರ 6 ಮಂದಿ ಸಂಬಂಧಿಕರ ಜೊತೆಗೆ ಕಡಂದಲೆಗೆ ಆಗಮಿಸಿದ್ದ ಸ್ಥಳೀಯ ನಿವಾಸಿ ಮುಂಬಯಿಯ ಹೋಟೆಲ್ ಕಾರ್ಮಿಕ ಕ್ವಾರಂಟೈನ್ ಗೆ ಒಳಪಟ್ಟ ಕೆಲವೇ ಗಂಟೆಗಳ ನಂತರ ನೇಣಿಗೆ […]
ಶಿರ್ಲಾಲು ಅಶಕ್ತ ಕುಟುಂಬಗಳಿಗೆ ದಿನಬಳಕೆಯ ಆಹಾರ ಕಿಟ್ ವಿತರಣೆ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಯುವಕರು
ಶಿರ್ಲಾಲು ಗ್ರಾಮದ ಮಹಿಳೆಯೊಬ್ಬರಿಗೆ ಕೊವಿಡ್-19 ಪಾಸಿಟಿವ್ ಕಂಡು ಬಂದಂತಹ ಹಿನ್ನೆಲೆಯಲ್ಲಿ ಶಿರ್ಲಾಲು ಸುತ್ತಮುತ್ತಲಿನ ಕೆಲವು ಮನೆಗಳನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿ ಯನ್ನಾಗಿ ಜಿಲ್ಲಾಡಳಿತ ಘೋಷಿಸಿದೆ.ಈ ಸಂದರ್ಭದಲ್ಲಿ ಗ್ರಾಮದಲ್ಲಿನ ತೀರ ಅಶಕ್ತ ಕುಟುಂಬಗಳನ್ನು ಗುರುತಿಸಿ ದಾನಿಗಳಾದ ಸೌದಿ ಅರೇಬಿಯಾದ ಉದ್ಯೋಗಿ ಸುರೇಶ್ ಕರ್ದೊಟ್ಟು ಹಾಗೂ ಕೆನರಾ ಬ್ಯಾಂಕ್ ಅಧಿಕಾರಿ ಕಿಶೋರ್ ಕುಮಾರ್’ರವರ ಸಹಕಾರ ದೊಂದಿಗೆ ದಿನ ಬಳಕೆಯ ಆಹಾರದ ಕಿಟ್’ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದಿನೇಶ್ ಕುಮಾರ್ ಕರ್ದೊಟ್ಟು,ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಎಂ.ಕೆ ಪ್ರಸಾದ್,ರಕ್ಷಿತ್ ಕುಮಾರ್ , […]
ಸಂಕಷ್ಟದಲ್ಲಿರುವ ಅಕ್ಷರ ದಾಸೋಹ ನೌಕರರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹ
ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿ ನಡೆದ ಒತ್ತಾಯ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ಬಿಸಿಯೂಟ ನೌಕರರ ಹಿತ ಕಾಪಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಮೇ 26ರಂದು ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಬೆಳ್ತಂಗಡಿ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.2001-02 ರಲ್ಲಿ ಪ್ರಾರಂಭವಾದ ಅಕ್ಷರ ದಾಸೋಹ ಯೋಜನೆಯಡಿ ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರು ದುಡಿಯುತ್ತಿದ್ದಾರೆ. ಕೊರೋನಾ ವೈರಸ್ ಲಾಕ್ ಡೌನ್ […]
ಲಾಕ್ ಡೌನ್ ನಡುವೆಯೇ ವಿಶ್ವದಾಖಲೆ
ಹೌದು ಬೆಳ್ತಂಗಡಿ ತಾಲೂಕಿನ ಯುವಕರ ತಂಡ ವಿಶ್ವದಾಖಲೆಯ ಕನಸು ಕಂಡು ನನಸಾಗಿಸಿದ್ದಾರೆ.ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಸಂಸ್ಥೆಯುಸಮೂಹ ಪ್ರತಿಭಾ ಪ್ರದರ್ಶನ ಎಂಬ ಕಾರ್ಯಕ್ರಮಕ್ಕೆ ವಿಶ್ವದಾಖಲೆಯ ಮಾನ್ಯತೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದೆ.ಇದು 2000 ಮಕ್ಕಳು ಏಕ ಕಾಲದಲ್ಲಿಅವರವರ ಮನೆಯಲ್ಲಿಯೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಕಾರ್ಯಕ್ರಮವಾಗಿದೆ.ಬೋಧಿ ಮೀಡಿಯಾ ಎಂಬ ಯೂಟ್ಯೂಬ್ ಚಾನೆಲ್ ಮೂಲಕಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ತಂಡದಲ್ಲಿ ಸ್ಮಿತೇಶ್ ಎಸ್,ಅನೀಶ್, ಅನನ್ಯ,ತೇಜಸ್ವಿನಿ,ದೀಕ್ಚಿತ್ ಕೆ, ಅಕ್ಷಯ್,ದೀಕ್ಷಿತ್ ಭಂಡಾರಿ,ಹೇಮಂತ್,ಕಿಶೋರ್ಚಂದ್ರಹಾಸ್,ತುಷಾರ್ ಗೌಡಸಂಯೋಜಕರಾಗಿದ್ದರು.
ಹ್ಯುಮಾನಿಟಿ ಟ್ರಸ್ಟ್ ಬೆಳ್ಮಣ್ಣು ವತಿಯಿಂದ ಪಟ್ರಮೆಯ ಆಸಿಯಾ ರವರಿಗೆ ಮನೆನಿರ್ಮಾಣ.
ಮಾನವೀಯತೆಯೇ ಅತ್ಯಂತ ಶ್ರೇಷ್ಠ ಧರ್ಮ ಎಂಬ ದ್ಯೇಯವಾಕ್ಯದೊಂದಿಗೆ ಉಡುಪಿಯ ಬೆಳ್ಮಣ್ಣುವಿನಲ್ಲಿ ಕೇಂದ್ರಕಚೇರಿ ಹೊಂದಿ ಕಾರ್ಯಾಚರಿಸುತ್ತಿರುವ ಹ್ಯುಮ್ಯಾನಿಟಿ ಟ್ರಸ್ಟ್, ಪಟ್ರಮೆ ಗ್ರಾಮದ ಅನಾರು ಕಾಟ್ರಸ್ ನ ಅತ್ಯಂತ ಅಸಹಾಯಕ ಪರಿಸ್ಥಿತಿಯಲ್ಲಿ, ಗುಡಿಸಲಿನಲ್ಲಿ ವಾಸಿಸುತ್ತಿದ್ದ ಆಸಿಯಾ ಎಂಬವರಿಗೆ ನಿರ್ಮಿಸಿಕೊಟ್ಟ ಸುಮಾರು 3 ಲಕ್ಷ ಮೌಲ್ಯದ ಆರ್ ಸಿ ಸಿ ಮನೆಯನ್ನು ಇಂದು ಬೆಳ್ತಂಗಡಿ ವೃತ್ತನಿರೀಕ್ಷಕರಾದ ಶ್ರೀ ಸಂದೇಶ್ ರವರ ಹಸ್ತದಿಂದ ಉದ್ಘಾಟಿಸಲಾಗಿ ಫಲಾನುಭವಿಗೆ ಹಸ್ತಾಂತರಿಸಲಾಯಿತು.ನಂತರ ಮಾತನಾಡಿದ ಶ್ರೀ ಸಂದೇಶ್ ರವರು ಇದೊಂದು ಮಾದರಿ ಮಾನವೀಯ ಸೇವೆಯಾಗಿದ್ದು, ಇನ್ನಷ್ಟು ಬಡಕುಟುಂಬಗಳಿಗೆ ಹ್ಯುಮ್ಯಾನಿಟಿ […]
ಬಿಗ್ ಬ್ರೇಕಿಂಗ್ ನ್ಯೂಸ್

ಹೆಮ್ಮಾರಿ ಕೊರೋನಾಗೆ ವೇಣೂರಿನ ವ್ಯಕ್ತಿ ಬಲಿ – ವೇಣೂರು ಸೀಲ್ ಡೌನ್ ಸಾಧ್ಯತೆ ಹೆಮ್ಮಾರಿ ಕೊರೋನಾಗೆ ವೇಣೂರಿನ ವ್ಯಕ್ತಿಯೋರ್ವ ಬಲಿಯಾದ ಘಟನೆ ಮೇ 25ರಂದು ವರದಿಯಾಗಿದೆ.ಕೊರೋನಾ ಚೀನಾದ ವುಹಾನಿನಲ್ಲಿ ಹುಟ್ಟಿದೆ. ಅಮೇರಿಕಾದಲ್ಲಿದೆ, ಇಟಲಿಯಲ್ಲಿದೆ, ಬ್ರಿಟನಿನಲ್ಲಿದೆ, ಜರ್ಮನಿಯಲ್ಲಿದೆ…..ದೇಶದ ಇತರ ರಾಜ್ಯಗಳಲ್ಲಿದೆ….ಬೆಂಗಳೂರಿನಲ್ಲಿದೆ…ಮಂಗಳೂರಿನಲ್ಲಿದೆ….ನಮ್ಮೂರಿಗೆ ಬಂದಿಲ್ಲ, ನಮಗಾವ ಮುಂಜಾಗ್ರತೆಯೂ ಅಗತ್ಯವಿಲ್ಲ….ಎಂದು ಮಾಸ್ಕ್ ಧರಿಸದೇ-ವೈಯಕ್ತಿಕ ಅಂತರ ಕಾಪಾಡದೇ ಬೇಕಾಬಿಟ್ಟಿ ತಿರುಗಾಡುತ್ತಿದ್ದ ಬೆಳ್ತಂಗಡಿಯ ಜನತೆಯನ್ನು ಕಳೆದ ಶುಕ್ರವಾರ ಮೇ 22ರಂದು ಶಿರ್ಲಾಲಿನ ಕೊರೋನಾ ಪಾಸಿಟಿವ್ ಪ್ರಕರಣ ಎಚ್ಚರಿಸಿತ್ತು. ಇದೀಗ ಮೇ 25ರಂದು ವೇಣೂರಿನ ವ್ಯಕ್ತಿಯೋರ್ವ ಕೊರೋನಾ […]