ಮಾಸ್ಕ್ ಧರಿಸಿ ಸ್ವಯಂ ರಕ್ಷಣೆ ಮಾಡಿಕೊಳ್ಳಿ…. ಡಾ. ವಿದ್ಯಾವತಿ

ಇಂದಿನ ಕೋವಿಡ್ 19 ಸಂಕಷ್ಟ ಕಾಲದಲ್ಲಿ ಸ್ವಯಂ ಆರೋಗ್ಯ ರಕ್ಷಣೆಗಾಗಿ ಮಾಸ್ಕ್, ಸ್ಯಾನಿಟೈಸರ್, ವೈಯಕ್ತಿಕ ಅಂತರ ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಸಾಂಕ್ರಾಮಿಕ ಕೋರೋನಾ ರೋಗವನ್ನು ತಡೆಗಟ್ಟಲು ಹಾಗೂ ಸೋಂಕು ಹರಡದಂತೆ ನಿಯಂತ್ರಿಸಲು ಸಾಧ್ಯವಿದೆ. ಕೋರೋನಾ ಸೋಂಕಿನ ಬಗ್ಗೆ ಭಯ ಬೇಡ, ಎಚ್ಚರವಿರಲಿ ಎಂದು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿಯ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ವಿದ್ಯಾವತಿ ಅವರು ಕರೆ ನೀಡಿದರು.ದೇಶಾದ್ಯಂತ ಜೂನ್ 18ರಂದು ಮಾಸ್ಕ್ ದಿನಾಚರಣೆಯನ್ನು ಆಚರಿಸುತ್ತಿದ್ದು ಬೆಳ್ತಂಗಡಿ ಪಟ್ಟಣ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾದ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರು […]

ಮಡಂತ್ಯಾರಿನಲ್ಲಿ‌ ಮಾಸ್ಕ್ ದಿನಾಚರಣೆ

ಮಡಂತ್ಯಾರು: ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧಾರಣೆಯ ಅನಿವಾರ್ಯತೆಯನ್ನು ಜನಸಾಮಾನ್ಯರಿಗೆ ತಿಳಿಸಲು ರಾಜ್ಯ ಸರಕಾರ ಸೂಚಿಸಿದಂತೆ ಜೂನ್ 18ರಂದು ಮಡಂತ್ಯಾರಿನಲ್ಲಿ ಮಾಸ್ಕ್ ದಿನಾಚರಣೆ ಆಚರಿಸಲಾಯಿತು.ಮಡಂತ್ಯಾರು ಗ್ರಾಮ ಪಂಚಾಯತಿನ ಆಶ್ರಯದಲ್ಲಿ ನಡೆದ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ‌. ನಾಗೇಶ್ ಮಾತನಾಡಿ, ಕೊರೋನಾ ಸೋಂಕು ಹರಡದಂತೆ ತಡೆಯಲು ಮಾಸ್ಕ್ ಧಾರಣೆಯ ಅಗತ್ಯತೆಯನ್ನು ವಿವರಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ, ಕಾಂತಪ್ಪ ಗೌಡ, ಅಬ್ದುಲ್ ರೆಹಮಾನ್ ಪಡ್ಪು, ಮಡಂತ್ಯಾರು ರೋಟರಿ ಕ್ಲಬ್ಬಿನ‌ ನಿಯೋಜಿತ […]

ಮದ್ದಡ್ಕ ಪೇಟೆಯಲ್ಲೊಂದು ಸೊಳ್ಳೆ ಉತ್ಪಾದನಾ ಕೇಂದ್ರ

ಬೆಳ್ತಂಗಡಿ: ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು ರಸ್ತೆಯಲ್ಲಿಯೇ ಬಸ್ ತಂಗುದಾಣದ ಸುತ್ತ ನಿಂತು ನಾಗರಿಕರಿಗೆ ಹೊಸ ಸಮಸ್ಯೆ ಸೃಷ್ಟಿಸಿದೆ. ಕುವೆಟ್ಟು ಗ್ರಾಮದ ಬೆಳ್ತಂಗಡಿ-ಮಂಗಳೂರು ಹೆದ್ದಾರಿಯಲ್ಲಿ ಮದ್ದಡ್ಕ ಪೇಟೆಯಲ್ಲಿ ನಾಗರಿಕರು ಈ ಸಮಸ್ಯೆ ಎದುರಿಸುತ್ತಿದ್ದು; ಹೀಗೆ ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗಿ, ಡೆಂಗ್ಯೂನಂತಹ ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗುವ ಮುನ್ನ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ಚರಂಡಿ ದುರಸ್ಥಿಗೊಳಿಸಿ, ರಸ್ತೆಯ ಬದಿಯಲ್ಲಿ-ರಸ್ತೆಯಲ್ಲಿ ನಿಂತ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವಂತೆ ಮಾಡಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೊರೋನಾ ವಾರಿಯರ್ಸ್‌ಗೆ ಅಭಿನಂದನೆ

ಬೆಳ್ತಂಗಡಿ: ವಿಶ್ವದಾದ್ಯಂತ ಪಸರಿಸಿ ಲಕ್ಷಾಂತರ ಮಂದಿಯ ಸಾವು-ನೋವುಗಳಿಗೆ ಕಾರಣವಾದ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಅವಿರತವಾಗಿ ಹೋರಾಡಿ ಕೊರೋನಾ ಮಹಾಮಾರಿಯನ್ನು ಬೆಳ್ತಂಗಡಿ ತಾಲೂಕಿನಲ್ಲಿ ನಿಯಂತ್ರಿಸುವಲ್ಲಿ ಶ್ರಮಿಸಿದ ಕೊರೋನಾ ವಾರಿಯರ್ಸ್‌ಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯು ವಿಶೇಷವಾಗಿ ಅಭಿನಂದನೆಯನ್ನು ಸಲ್ಲಿಸುತ್ತದೆ ಎಂದು ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.ಬೆಳ್ತಂಗಡಿಯ ತಹಶೀಲ್ದಾರ್ ನೇತೃತ್ವದ ತಂಡ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪೊಲೀಸ್ ವೃತ್ತ ನಿರೀಕ್ಷಕರು, ಉಪನಿರೀಕ್ಷಕರುಗಳು ಹಾಗೂ ಪೊಲೀಸ್ ಸಿಬ್ಬಂದಿವರ್ಗ, ತಾಲೂಕು ಪಂಚಾಯತ್ […]

ಮರಳು ಸಾಗಾಟ ವಾಹನ ತಡೆಹಿಡಿದು ಮತ್ತೆ ಪ್ರತಿಭಟನೆ

ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಫರ್ಲಾಣಿಯಲ್ಲಿ ಜೂನ್ 12ರಂದು ರಾತ್ರಿ ಮರಳು ಸಾಗಾಟದ ಲಾರಿಗಳನ್ನು ಹಾಗೂ ಮರಳು ಸಾಗಾಟಗಾರರ ವಾಹನಗಳನ್ನು ತಡೆಹಿಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಜೂ.9ರಂದು ಇದೇ ರೀತಿ ಪ್ರತಿಭಟನೆ ನಡೆದಾಗ ತಾಲೂಕು ಭೇಟಿಗೆ ಬಂದಿದ್ದ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ತೆರಳಿ, ರಸ್ತೆ ಸರಿಪಡಿಸಿದ ಬಳಿಕ ಮರಳು ಸಾಗಾಟ ನಡೆಸುವಂತೆ ಗಣಿದಣಿಗಳಿಗೆ ಸೂಚಿಸಿದ್ದರು.ಜಿಲ್ಲಾಧಿಕಾರಿಗಳಲ್ಲಿ ರಸ್ತೆ ದುರಸ್ತಿಗೆ ಒಪ್ಪಿ ಕಾಮಗಾರಿ ಆರಂಭಿಸಿದ್ದ ಮರಳು ಗಣಿದಣಿಗಳು, ದುರಸ್ತಿ ಕಾಮಗಾರಿ ಯನ್ನು ಅರ್ಧದಲ್ಲೇ ನಿಲ್ಲಿಸಿ, ಮತ್ತೆ ಮರಳು […]

ಥರ್ಮಲ್ ಸ್ಯಾನರ್ ಕೊಡುಗೆ

ಬೆಳ್ತಂಗಡಿ: ಲಾಯ್ಲದ ಕಪುಚಿನ್ ಕೃಷಿಕ ಸೇವಾ ಕೇಂದ್ರ ಹಾಗೂ ವಿಮುಕ್ತಿ ಸಂಸ್ಥೆಯ ವತಿಯಿಂದ ಚೈಲ್ಡ್ ಫಂಡ್ ಇಂಡಿಯಾದ ಸಹಕಾರದಲ್ಲಿ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ 10ಥರ್ಮಲ್ ಸ್ಯಾನರನ್ನು‌ ಕೊಡುಗೆಯಾಗಿ ನೀಡಿ, ಕೊರೋನಾ ವಾರಿಯರ್ಸ್‌ಗಳ ಸೇವೆಗೆ ಸಹಕರಿಸಲಾಯಿತು. ವಿಮುಕ್ತಿ ಸಂಸ್ಥೆಯ ನಿರ್ದೇಶಕ ವಂದನೀಯ ವಿನೋದ್ ಮಸ್ಕರೇನ್ಹಸ್, ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು ಮತ್ತಿತರರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯವರೇ ಸರಿಯಾಗಿ ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರ‌ ಮರೆತು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾಜಕ್ಕೆ ಕೊರೋನಾ ಸೋಂಕು ಹರಡದಂತೆ ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ […]

ಬೈಕ್ ಢಿಕ್ಕಿ – ಕಾರ್ಮಿಕ ಅಪಮೃತ್ಯು

ಬೆಳ್ತಂಗಡಿ: ಉಜಿರೆ ಪೇಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಅಮಾಯಕ ಕೂಲಿ ಕಾರ್ಮಿಕ ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಎನ್ನಲಾದ ನಿಡಿಗಲ್ ನಿವಾಸಿ ಬೀರೇಶ್ ಆಲಿಯಾಸ್ ಫಕೀರಪ್ಪ(48) ಎಂಬಾತನಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು, ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ಮಧ್ಯೆ ದಾರಿಯಲ್ಲೇ ಅಪಮೃತ್ಯುವಿಗೀಡಾದ ಘಟನೆ ಜೂನ್ 11ರಂದು ರಾತ್ರಿ ವರದಿಯಾಗಿದೆ.ಇಂದಬೆಟ್ಟು ನಿವಾಸಿ ಕಾರ್ತಿಕ್ (22) ಎಂಬಾತ ತನ್ನ ಬೈಕಿನಲ್ಲಿ ಬೆಳ್ತಂಗಡಿಯಿಂದ ಚಾರ್ಮಾಡಿ ಮಾರ್ಗದಲ್ಲಿ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಕಾರ್ತಿಕ್‌‌ಗೂ […]

ಸುಳಿಗಾಳಿ ಮಳೆಗೆ ಧರೆಗುರುಳಿದ ಅಡಿಕೆ ಮರಗಳು

ಬೆಳ್ತಂಗಡಿ: ಜೂನ್ 11ರಂದು ವಿಪರೀತ ಸುಳಿಗಾಳಿ ಬೀಸಿ‌ ಸುರಿದ ಭಾರೀ ಮಳೆಗೆ ಕುಪ್ಪೆಟ್ಟಿ ಪರಿಸರದ ನರ್ಸಪಾಲು, ಮಾಲ್ದಡ್ಕ, ಬರೆಮೇಲು ಪ್ರದೇಶದಲ್ಲಿ 800 ಅಡಿಕೆ ಮರಗಳು, ಗೇರು ಮರಗಳು ಧರಾಶಾಹಿಯಾಗಿದೆ. ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಕುಪ್ಪೆಟ್ಟಿ ಸಮೀಪ ಬೃಹದಾಕಾರದ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಬಳಿಕ ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗಾಳಿಯ ರಭಸಕ್ಕೆ ಬಾರ್ಯ ಸಮೀಪ ಸುಂದರಿ ಎಂಬುವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಪುತ್ತಿಲ ಸಮೀಪ ಆದಮ್ ಎಂಬುವವರ ಮನೆಯ ಮಾಡಿನ ಹೆಂಚುಗಳು […]

ನಾವೂರು ಗ್ರಾ. ಪಂ. ಕಟ್ಟಡಕ್ಕೆ ಶಿಲಾನ್ಯಾಸ

ಮಾಸ್ಕ್ ಧಾರಣೆ ಇಲ್ಲ-ವೈಯಕ್ತಿಕ ಅಂತರವೂ ಇಲ್ಲದ ಕಾರ್ಯಕ್ರಮ ಬೆಳ್ತಂಗಡಿ: ಕೊರೋನಾ ಸೋಂಕು ಹರಡದಂತೆ ಮುನ್ನಚ್ಛರಿಕಾ ಕ್ರಮವಾಗಿ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರ ಕಾಪಾಡುವಿಕೆ..ಎರಡನ್ನೂ ಮರೆತು ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯಲು ಸರಕಾರ ಹೇಳಿದ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ, ಸರಕಾರಿ ಕಾರ್ಯಕ್ರಮವೊಂದು ಬೆಳ್ತಂಗಡಿ ತಾಲೂಕಿನ ನಾವೂರಿನಲ್ಲಿ ನಡೆಯಿತು.ಜೂನ್ 10ರಂದು ನಡೆದ ನಾವೂರು ಗ್ರಾಮ‌ ಪಂಚಾಯತ್‌ನ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ […]

ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ಖೆಡ್ಡಾಗೆ ಬಿದ್ದ ವೇಣೂರು ಗ್ರಾ. ಪಂ‌. ಅಧ್ಯಕ್ಷೆ

ವೇಣೂರು: ವೇಣೂರು ಗ್ರಾಮ ಪಂಚಾಯತಿನ ಅಧ್ಯಕ್ಷೆ ಬಿಜೆಪಿ ಬೆಂಬಲಿತ ಮೋಹಿನಿ ಶೆಟ್ಟಿಯವರ ವಿರುದ್ಧ ಬಿಜೆಪಿ ಬೆಂಬಲಿತ ಹಾಗೂ ಕಾಂಗ್ರೇಸ್ ಬೆಂಬಲಿತ ಒಂದು ಬಣದ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯವು ಜೂನ್ 9ರಂದು ವೇಣೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಿರ್ಣಾಯಕ ಹಂತ ತಲುಪಿತ್ತು. ಪುತ್ತೂರಿನ ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ಯತೀಶ್ ಉಲ್ಲಾಳರ ಉಪಸ್ಥಿತಿಯಲ್ಲಿ ಇಂದು ನಡೆದ ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ 14ಸದಸ್ಯರ ಪೈಕಿ 13ಮಂದಿ ಹಾಗೂ ಕಾಂಗ್ರೇಸ್ ಬೆಂಬಲಿತ 10ಸದಸ್ಯರ ಪೈಕಿ […]