ನಾಳ ದೇಗುಲದಲ್ಲಿ ಭಕ್ತಾದಿಗಳ ಸಭೆ

ಬಹುತೇಕ ಭಕ್ತರು ಮಾಸ್ಕ್ ಮರೆತು ಬಂದರೂ, ವೈಯಕ್ತಿಕ ಅಂತರ ಕಾಪಾಡಲು ಮರೆಯಲಿಲ್ಲ ಬೆಳ್ತಂಗಡಿ ತಾಲೂಕಿನ ಪ್ರಖ್ಯಾತ ದೇಗುಲಗಳಲ್ಲೊಂದಾದ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಯ ಬಗ್ಗೆ ಭಕ್ತರ ಸಮಾಲೋಚನಾ ಸಭೆ ಜೂ.28 ರಂದು ದೇವಸ್ಥಾನದ ಆನ್ನ ಛತ್ರ ಸಭಾಂಗಣದಲ್ಲಿ ನಡೆಯಿತು.ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಹಾಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಸಂತ ಮಜಲು ವಹಿಸಿದ್ದರು. ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಗೆ ಸರಕಾರದಿಂದ ಬಂದಿರುವ ಸುತ್ತೋಲೆಯನ್ನು ದೇವಸ್ಥಾನದ ವ್ಯವಸ್ಥಾಪಕ ಗಿರೀಶ್ ಶೆಟ್ಟಿ ಸಭೆಯಲ್ಲಿ ವಾಚಿಸಿದರು. […]
ಹುತಾತ್ಮ ಯೋಧರಿಗೆ ವಿನೂತನ ರೀತಿಯಲ್ಲಿ ಶ್ರದ್ದಾಂಜಲಿ

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತೆ ಮಾಸ್ಕ್ ಧಾರಣೆಯಲ್ಲಿ ರಾಜಕೀಯ ನಾಯಕರನ್ನು ಅನುಸರಿಸುತ್ತಿರುವ ಸಮಾಜ ಸೇವಕರಲ್ಲೂ ಇಲ್ಲದ ಮಾಸ್ಕ್ ಮುಂಗಾರಿನ ಆಷಾಢ ಮಾಸದ ಮಳೆರಾಯ ಆರ್ಭಟಿಸುವ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಕಾಡಂಚಿನ ಗ್ರಾಮವಾದ ಶಿಶಿಲದ ಸಮಾನ ಮನಸ್ಕ ಗ್ರಾಮಸ್ಥರು ವಿನೂತನ ರೀತಿಯಲ್ಲಿ ಇತ್ತೀಚೆಗೆ ಚೀನಾ ಗಡಿಯಲ್ಲಿ ಹುತಾತ್ಮರಾದ ನಮ್ಮ ಯೋಧರಿಗೆ ಶ್ರಧ್ಧಾಂಜಲಿಯನ್ನು ಅರ್ಪಿಸುವುದರೊಂದಿಗೆ ನಮ್ಮ ದೇಶದ ಗಡಿಗಳನ್ನು ಕಾಯುವ ಯೋಧರಿಗೆ ಗೌರವ ನೀಡಿದ್ದಾರೆ. ಗ್ರಾಮಗಳು ಸ್ವಾವಲಂಬಿಗಳಾಗಿ ಶಕ್ತಿಯುತವಾದಾಗ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ ಎಂಬ ಮಾತನ್ನು ಗಮನದಲ್ಲಿರಿಸಿ, ತಮ್ಮ […]
ಬೆಳ್ತಂಗಡಿಗೂ ಬಡಿದಪ್ಪಳಿಸಿದ ಕೊರೋನಾ

ಬೆಳ್ತಂಗಡಿ: ಕೊರೋನಾ ನಮ್ಮೂರಲ್ಲಿ ಇಲ್ಲ, ನಮಗೆ ಮಾಸ್ಕ್ ಬೇಡ, ವೈಯಕ್ತಿಕ ಅಂತರ ಯಾಕೆ ಎನ್ನುತ್ತಾ ಮಾಸ್ಕ್ ಧರಿಸದೇ ವೈಯಕ್ತಿಕ ಅಂತರ ಕಾಪಾಡದೇ ಅತಿ ಬುದ್ಧಿವಂತಿಕೆ ತೋರುತ್ತಿದ್ದ ವಿದ್ಯಾವಂತ ಅನಾಗರಿಕರ ದರ್ಪಕ್ಕೆ ಉತ್ತರ ನೀಡಿದ ಕೊರೋನಾ ಇದೀಗ ಸುರಕ್ಷತಾ ಕ್ರಮಗಳನ್ನು ಪಾಲಿಸುವವರ ನಿದ್ದೆಯನ್ನೂ ಕೆಡಿಸಿದೆ. ಕೊರೋನಾ ಬೆಳ್ತಂಗಡಿ ತಾಲೂಕಿಗೂ ಬಡಿದಪ್ಪಳಿಸಿದೆ.ಉಜಿರೆಯ ಆಸ್ಪತ್ರೆಗಳು, ಹೊಟೇಲ್‌ಗಳು ಹಾಗೂ ಪೆಟ್ರೋಲ್ ಪಂಪ್‌ಗಳಲ್ಲಿ ಕೆಲಸ ಮಾಡುವ ಸುಮಾರು 52 ಮಂದಿಯ ಗಂಟಲು ದ್ರವವನ್ನು ಕಳೆದ ಕೆಲ ದಿನಗಳ ಹಿಂದೆ ಕೊರೋನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರ […]
ಪುಂಜಾಲಕಟ್ಟೆ: ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು: ೬೦ ಗ್ರಾಂ ಚಿನ್ನದೊಂದಿಗೆ ಪರಾರಿ!
ಬೆಳ್ತಂಗಡಿ, ಜೂ.೨೫: ಮಳೆಗಾಲ ಪ್ರಾರಂಭವಾಗುತ್ತಿದ್ದOತೆ ಕಳ್ಳರ ಕೈ ಚಳಕ ಪ್ರಾರಂಭವಾಗಿದ್ದು ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಳ ಗ್ರಾಮದ ಪುರುಷೋತ್ತಮ ಗೌಡ ಎಂಬವರ ಮನೆ ಗೆ ಹಾಡುಹಗಲೇ ನುಗ್ಗಿದ ಕಳ್ಳರು ೬೦ ಗ್ರಾಂ ಚಿನ್ನ ದೋಚಿ ಪರಾರಿ ಯಾದ ಘಟನೆ ಬುಧವಾರದಂದು ನಡೆದಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುಳ ಗ್ರಾಮದ ಪುಳಿಮಜಲು ನಿವಾಸಿ ಪುರುಷೋತ್ತಮ ಗೌಡರು ಮನೆಯಲ್ಲಿಲ್ಲದ ವೇಳೆಯನ್ನು ಗಮನಿಸಿ ಬೆಳಗ್ಗಿನ ೯ ಗಂಟೆಯಿAದ ೧.೩೦ ರ ಒಳಗೆ ಈ ಘಟನೆ ನಡೆದಿದ್ದು ಇವರ ಚಲನವಲನ […]
ಚಾರ್ಮಾಡಿ: ಅಕ್ರಮ ಗೋಸಾಗಾಟ ಪತ್ತೆ: ಧರ್ಮಸ್ಥಳ ಪೊಲೀಸರಿಂದ ಕಾರ್ಯಾಚರಣೆ: ೧೧ ಜಾನುವಾರುಗಳು ವಶಕ್ಕೆ:
ಬೆಳ್ತಂಗಡಿ, ಜೂ. ೨೫: ಚಿಕ್ಕಮಗಳೂರಿನಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ತಂಡವೊAದು ಧರ್ಮಸ್ಥಳ ಠಾಣೆಯ ಉಪನಿರೀಕ್ಷಕ ಪವನ್ ಕುಮಾರ್ ಹಾಗೂ ಠಾಣಾ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಕಂಬಿ ಎಣಿಸುವಂತಾಗಿದೆ.ಧರ್ಮಸ್ಥಳ ಠಾಣೆಯ ಪೊಲೀಸ್ ಉಪನಿರೀಕ್ಷಕ ಪವನ್ ಕುಮಾರ್ ಹಾಗೂ ತಂಡವು ಜೂ ೨೫ ರ ಬೆಳಗ್ಗಿನ ವೇಳೆಯಲ್ಲಿ ಚಾರ್ಮಾಡಿ ಗೇಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಬದಲ್ಲಿ ಚಿಕ್ಕಮಗಳೂರಿನಿಂದ ಅನುಮಾನಾಸ್ಪದವಾಗಿ ಬರುತ್ತಿದ್ದ ಲಾರಿಯನ್ನು ತಡೆದು ಪರಿಶೀಲಿಸಿದಾಗ ಅಮಾನುಷವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು. ಕೆಎ ೧೬.ಸಿ. ೨೪೨೬ […]
ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಪೆಟ್ರೋಲ್-ಡೀಸಿಲ್ ಬೆಲೆಯನ್ನು ಅವೈಜ್ಞಾನಿಕವಾಗಿ ಮನಬಂದಂತೆ ಏರಿಕೆ ಮಾಡುವ ಕೇಂದ್ರ ಸರಕಾರದ ಜನವರೋಧಿ ನೀತಿಯನ್ನು ವಿರೋದಿಸಿ ಜೂನ್ 23ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಾಂಕೇತಕ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು.ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘ, ದ.ಕ. ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಬೆಳ್ತಂಗಡಿ ತಾಲೂಕು ಋಣಮುಕ್ತ ಹೋರಾಟ ಸಮಿತಿ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಂಘಟನೆಗಳ ಪ್ರಮುಖರಾದ ಬಿ. ಎಂ. ಭಟ್, ಜಯರಾಮ ಮಯ್ಯ , ಲೋಕೇಶ್ ಕುದ್ಯಾಡಿ, […]
ಶಿಶಿಲ ದೇಗುಲದ ದೇವರ ಮೀನಿಗೆ ದುಶ್ಕರ್ಮಿಗಳಿಂದ ಗಾಳ

ಶಿಶಿಲ: ಇಲ್ಲಿನ ಐತಿಹಾಸಿಕ ಶ್ರೀ ಶಿಶಿಲೇಶ್ವರ ದೇಗುಲದ ಕಪಿಲಾ ನದಿಯಲ್ಲಿರುವ ಪೆರುವೋಳು ಜಾತಿಗೆ ಸೇರಿದ ಮೀನುಗಳು ದೇವರ ಮೀನುಗಳೆಂದೇ ಇಲ್ಲಿನ ಭಕ್ತರ ನಂಬಿಕೆ. ಈ ದೇಗುಲಕ್ಕೆ ಬರುವ ಭಕ್ತರು ಗರ್ಭಗುಡಿಯಲ್ಲಿರುವ ದೇವರಲ್ಲಿ ತೋರುವ ಭಕ್ತಿಯನ್ನು ಈ ಮೀನುಗಳಲ್ಲೂ ತೋರುತ್ತಾರೆ. ಇಂತಹ ದೇವರ ಮೀನುಗಳ ಮೇಲೆ ದುಷ್ಕರ್ಮಿಗಳ ಕಣ್ಣು ಬಿದ್ದರೆ ದೇಗುಲದ ಸ್ಥಳೀಯ ಭಕ್ತರು ಸುಮ್ಮನಿದ್ದಾರೇ… ದುಷ್ಕರ್ಮಿಗಳಿಗೆ ಧರ್ಮದೇಟು ಬೀಳದಿರಲು ಸಾಧ್ಯವೇ… ಜೂನ್ 21ರ ಆದಿತ್ಯವಾರ ಸೂರ್ಯಗ್ರಹಣದಂದು ಇಲ್ಲಿನ ದೇಗುಲದ ಮೀನಿಗೆ ಗಾಳ ಹಾಕಲು ಬಂದ ಸ್ಥಳೀಯ ಮಸೀದಿಯ […]
ಜಂಟಿ ಸಮಾಲೋಚನಾ ಸಭೆ ಕರೆಯಲು ಮನವಿ
ಬೆಳ್ತಂಗಡಿ: ರಾಜ್ಯ ಸರಕಾರಿ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಹಾಗೂ ಸೇವಾ ಸೌಲಭ್ಯಗಳಿಗೆ ಸ್ಪಂದಿಸಲು ರಾಜ್ಯ ಸರಕಾರದ ಸೂಚನೆಯಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾದ ಜಂಟಿ ಸಮಾಲೋಚನಾ ಸಮಿತಿಯ ಸಭೆಯನ್ನು ಕರೆಯುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಜಯಕೀರ್ತಿ ಜೈನ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ನೀಡಿ ವಿನಂತಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ […]
6ನೇ ವಿಶ್ವ ಯೋಗ ದಿನಾಚರಣೆ

ಯೋಗದಿಂದ ನೆಮ್ಮದಿಯ ಬದುಕು-ಡಾl ಪ್ರಶಾಂತ್ ಶೆಟ್ಟಿ ಬೆಳ್ತಂಗಡಿ: ಕಳೆದ 5 ವರ್ಷಗಳಿಂದ ವಿಶ್ವ ಯೋಗ ದಿನವನ್ನು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಭಾರತ ಸರಕಾರದ ಆಯುಷ್ ಮಂತ್ರಾಲಯದ ನಿರ್ದೇಶನದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಸಂಘಸಂಸ್ಥೆಗಳ ಸದಸ್ಯರನ್ನು ತರಬೇತುಗೊಳಿಸಿ, ಒಂದೇ ವೇದಿಕೆಯಲ್ಲಿ ಯೋಗ ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ಆಚರಿಸುತ್ತಿದ್ದೆವು. ಕೊರೋನಾ ಸೋಂಕಿನ ಭೀತಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕಾದ್ದರಿಂದ ಬದಲಾದ […]
ವಿಧಾನ ಪರಿಷತ್ ಚುನಾವಣೆಗೆ ಪ್ರತಾಪ್ ಸಿಂಹ ನಾಯಕ್ ನಾಮಪತ್ರ

ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್‌ನ 7ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ದಿಸಲು ಬಿಜೆಪಿಯ ಅಭ್ಯರ್ಥಿಯಾಗಿ ಬೆಳ್ತಂಗಡಿಯ ನ್ಯಾಯವಾದಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಜೂನ್ 18ರಂದು ವಿಧಾನಸೌಧದಲ್ಲಿ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಚುನಾವಣಾಧಿಕಾರಿ ವಿಶಾಲಾಕ್ಷಿಯವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಅರವಿಂದ ಲಿಂಬಾವಳಿ ಮತ್ತಿತರರು ಹಾಜರಿದ್ದರು.ವಿಧಾನಸಭೆಯ ಸಂಖ್ಯಾಬಲದಂತೆ ವಿಧಾನ ಪರಿಷತ್ತಿನ […]