ಗೃಹ ಸಚಿವ ಬೊಮ್ಮಾಯಿ ಧರ್ಮಸ್ಥಳಕ್ಕೆ
ಧರ್ಮಸ್ಥಳ: ಜೂನ್ 9ರಂದು ಬೆಳಿಗ್ಗೆ 11-30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸರಕಾರದ ಗೃಹಸಚಿವ ಬಸವರಾಜ್ ಬೊಮ್ಮಾಯಿ, ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಧರ್ಮಸ್ಥಳದ ಬೀಡಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಈ ಸಂದರ್ಭದಲ್ಲಿ ಸಚಿವರ ಜೊತೆಗಿದ್ದರು. ಬಳಿಕ ಸಚಿವ ಬೊಮ್ಮಾಯಿ ದೇಗುಲಕ್ಕೆ ತೆರಳಿ ಶ್ರೀ […]
ಕಕ್ಕಿಂಜೆ ಸೈಂಟ್ ಜೋಸೆಫ್ ಆಶ್ರಮದ ಧರ್ಮಗುರು ವಂ. ಫ್ರಾನ್ಸಿಸ್ ಚಿರಕ್ಕಲ್ ರಿಗೆ ಡಾಕ್ಟರೇಟ್
ಬೆಳ್ತಂಗಡಿ; ಕಕ್ಕಿಂಜೆ ಸೈಂಟ್ ಜೋಸೆಫ್ ಆಶ್ರಮದ ಧರ್ಮಗುರು ವಂ. ಫ್ರಾನ್ಸಿಸ್ ಚಿರಕ್ಕಲ್ ಅವರು ಮಂಡಿಸಿದ ವಿಶೇಷ ಪ್ರಬಂಧಕ್ಕೆ ಕ್ರೈಸ್ಟ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ಬೆಂಗಳೂರು ಡಾಕ್ಟರೇಟ್ ಪದವಿ ನೀಡಿದೆ. “ಕೊಲೆಬರೇಶನ್ ಬಿಟ್ವೀನ್ ಗ್ರಾಮ ಪಂಚಾಯತ್ ಏಂಡ್ ವಿಮೆನ್ ಸೆಲ್ಪ್ ಹೆಲ್ಪ್ ಗ್ರೂಪ್ ಆಫ್ ರೂರಲ್ ಡೆವಲಪ್ಮೆಂಟ್ ಇನ್ ಕರ್ನಾಟಕ” ಮಹಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ.ವಂ..ಫ್ರಾನ್ಸಿಸ್ ಅವರು ಕ್ರೈಸ್ಟ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ಯ ಸೋಷಿಯಲ್ ವರ್ಕ್ ಏಂಡ್ ಸೋಷಿಯಾಲಜಿ ವಿಭಾಗ ಮುಖ್ಯಸ್ಥ ಡಾ. […]
ನನ್ನೆರಡು ಗಿಡಗಳು ನಾಳೆಗಾಗಿ
ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ವಿಶ್ವ ಪರಿಸರ ದಿನವನ್ನು ಗಿಡ ನೆಡುವುದರ ಮೂಲಕ ಆಚರಿಸಲಾಯಿತು.‘ನನ್ನೆರಡು ಗಿಡಗಳು ನಾಳೆಗಾಗಿ’ ಎಂಬ ಯೋಜನೆಯ ಮೂಲಕ ಪ್ರತೀ ಸ್ವಯಂಸೇವಕರು ಕನಿಷ್ಟ 2 ಗಿಡಗಳನ್ನು ತಮ್ಮ ಮನೆಯಲ್ಲೇ ನೆಟ್ಟು ಅದರ ದಾಖಲೀಕರಣ ಮಾಡಿದರು.ಹತ್ತಕ್ಕೂ ಹೆಚ್ಚು ಸ್ವಯಂಸೇವಕರು ಮಾವು, ಹಲಸು, ನಿಂಬೆ, ತೆಂಗು, ಹುಣಸೆ, ತುಂಬೆ, ಕನಕಾಂಬರ ಮುಂತಾದ 30 ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದರು.ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಪ್ರೊ. ಆಶಾಕಿರಣ್ ಹಾಗೂ ಡಾ. […]
ಇಂದಿನಿಂದ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಮುಕ್ತ ಅವಕಾಶ:
ಸರಕಾರದ ಮಾರ್ಗ ಸೂಚಿಯಂತೆ ಹಾಗೂ ಕೊರೊನಾ ವೈರಸ್ ನಿಯಂತ್ರಿಸಲು ಮುಂಜಾಗರೂಕತೆಯನ್ನು ಅನುಸರಿಸಿ ಇಂದಿನಿಂದ ನಾಡಿನ ಪವಿತ್ರ ಕ್ಷೇತ್ರವಾದ ಶ್ರೀ ಕ್ಷೇತ್ರ ದರ್ಮಸ್ಥಳದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ. ದೇವರ ದರ್ಶನ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ದೇವಸ್ಥಾನ ಅರ್ಚಕರು, ರಕ್ಷಣಾ ಸಿಬ್ಬಂದಿಗಳು ಹಾಗೂ ನೌಕರರು ನೀಡುವ ಸಲಹೆ ಸೂಚನೆಗಳನ್ನು ಗಮನಿಸಿ ಭಕ್ತರು ಸಹಕರಿಸಬೇಕು ಎಂದು ಕೋರಲಾಗಿದೆ. ಡಾ ಹೆಗ್ಗಡೆಯವರ ಬೇಟಿ ಸಮಯ. ಭಕ್ತರು ದರ್ಮಾಧಿಕಾರಿಗಳನ್ನು ಬೆಳಿಗ್ಗೆ […]
ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಹೋಂ ಕ್ವಾರಂಟೈನಿಗೆ
ಕಳೆದ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಇಟಲಿ ಹಾಗೂ ಜರ್ಮನಿ ಪ್ರವಾಸ ಕೈಗೊಂಡಿದ್ದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಲಾರೆನ್ಸ್ ಮುಕ್ಕುಯಿ, ನಂತರ ಕೊರೋನಾ ಸೋಂಕು ತಡೆಗೆ ಮುಂಜಾಗ್ರತೆಗಾಗಿ ಭಾರತ ಸರಕಾರ ದೇಶದಲ್ಲಿ ಲಾಕ್ ಡೌನಿಗೆ ಕರೆ ನೀಡುವುದರ ಜೊತೆಗೆ ಅಂತರಾಷ್ಟ್ರೀಯ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಜರ್ಮನಿಯಲ್ಲಿಯೇ ವಾಸ್ತವ್ಯ ಮುಂದುವರಿಸಬೇಕಾದ ಅನಿವಾರ್ಯತೆಗೆ ಸಿಲುಕಿದರು. ಇದೀಗ ದೇಶದಲ್ಲಿ ಲಾಕ್ ಡೌನ್ ನಿಯಮ ಸಡಿಲಗೊಂಡು, ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೂ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದ್ದರಿಂದ; ಇದುವರೆಗೆ ಜರ್ಮನಿಯಲ್ಲಿದ್ದ ಬಿಷಪ್ […]
ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ
ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತೆಯ ಸಂದೇಶ ಸಾರಿದ ಕಾರ್ಯಕ್ರಮ ಬೆಳ್ತಂಗಡಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ವಲಯ ಅರಣ್ಯಾಧಿಕಾರಿಗಳ ಕಛೇರಿ ಬೆಳ್ತಂಗಡಿ ಇವರ ಸಹಕಾರದಲ್ಲಿ ಜೂನ್ 5ರಂದು ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಬೆಳ್ತಂಗಡಿ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ್ ಮೂರ್ತಿ ನ್ಯಾಯಾಲಯದ ಆವರಣದಲ್ಲಿ ಗಿಡ ನೆಡುವ ಮೂಲಕ […]
ನಾರಾವಿ ಜನಸೇವಾ ಟ್ರಸ್ಟ್ ಸದಸ್ಯರಿಂದ ರಕ್ತದಾನ
ಕೊರೊನಾ ಮಹಾಮಾರಿಯಿಂದಾಗಿ ಕೆಎಂಸಿ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರದಲ್ಲಿ ರಕ್ತ ಸಂಗ್ರಹಣೆಯಲ್ಲಿ ಕೊರತೆ ಕಂಡು ಬಂದ ಕಾರಣ ಮೇ 31ರಂದು ಭಾನುವಾರದಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತಕೇಂದ್ರದಲ್ಲಿ ಜನಸೇವಾ ಟ್ರಸ್ಟಿನ ಮಾರ್ಗದರ್ಶಕರಾದ ಡಾ.ಪ್ರಸಾದ್ ಬಿ ಶೆಟ್ಟಿ ನಾರಾವಿ ಇವರ ಸಹಕಾರದಲ್ಲಿ ಟ್ರಸ್ಟ್ ನ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ 25 ಮಂದಿ ರಕ್ತದಾನಿಗಳು ರಕ್ತದಾನ ಮಹಾದಾನ ಎನ್ನುವ ಧ್ಯೇಯದೊಂದಿಗೆ ಸ್ವ ಇಚ್ಛೆಯಿಂದ ಆಗಮಿಸಿ ನಮ್ಮೊಂದಿಗೆ ರಕ್ತದಾನವನ್ನು ಮಾಡಿ ಮತ್ತೊಂದು ಜೀವಕ್ಕೆ ಉಸಿರಾಗಲು ಕಾರಣೀಕರ್ತ ರಾದರು. ಈ ಸಂದರ್ಭದಲ್ಲಿ […]
ಚಾರ್ಮಾಡಿ ಗೇಟ್: ಮುಕ್ತ ಸಂಚಾರ
ಜಿಲ್ಲೆಗೆ ಮುಕ್ತ ಕೊರೋನಾ ಸೋಂಕಿನ ಭೀತಿ ಬಂಟ್ವಾಳ-ಮೂಡಿಗೆರೆ ರಾಜ್ಯ ಹೆದ್ದಾರಿಯ ಚಾರ್ಮಾಡಿಯಲ್ಲಿ ಕೋವಿಡ್19 ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ತಪಾಸಣೆಗೆ ಹಾಗೂ ಪ್ರಯಾಣಿಕರ ಆರೋಗ್ಯವನ್ನು ಪರೀಕ್ಷಿಸಲು ಈ ಹಿಂದೆ ತೆರೆಯಲಾಗಿದ್ದ ತಾತ್ಕಾಲಿಕ ಗೇಟನ್ನು ತೆರವುಗೊಳಿಸಿದ್ದು, ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೊರ ಜಿಲ್ಲೆಗಳಿಂದ ಬರುವವರ ಆರೋಗ್ಯ ತಪಾಸಣೆ ಇಲ್ಲದಿರುವುದರಿಂದ ಜಿಲ್ಲೆಗೆ ನಮ್ಮ ಬೆಳ್ತಂಗಡಿ ತಾಲೂಕಿನ ಮೂಲಕ ಕೊರೋನಾ ಸೋಂಕು ಮುಕ್ತವಾಗಿ ಪ್ರವೇಶ ಪಡೆಯುವ ಅಪಾಯವಿದೆ. ಈಗ ಹೊರ ರಾಜ್ಯದ ವಾಹನಗಳ ಹಾಗೂ ಪ್ರಯಾಣಿಕರ ದಾಖಲೆಗಳನ್ನು ಮಾತ್ರ ತಪಾಸಣೆ ಮಾಡಲಾಗುತ್ತಿದೆ. […]
ಇನ್ನು ಬೆಳ್ತಂಗಡಿ ವಾರದ ಸಂತೆ ಖಾಯಂ ಆಗಿ ಎ.ಪಿ.ಎಂ.ಸಿ. ವಾರ್ಡಿನಲ್ಲೇ
ಶಾಸಕ ಹರೀಶ್ ಪೂಂಜಾ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವೈಯಕ್ತಿಕ ಅಂತರ ಕಾಪಾಡುವ ಉದ್ಧೇಶದಿಂದ ಪ್ರತೀ ಸೋಮವಾರ ನಡೆಯುವ ಬೆಳ್ತಂಗಡಿಯ ವಾರದ ಸಂತೆಯನ್ನು ಶಾಸಕ ಹರೀಶ್ ಪೂಂಜಾರ ಸೂಚನೆಯಂತೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಳೆಕೋಟೆಯ ಎ.ಪಿ.ಎಂ.ಸಿ. ಯಾರ್ಡಿಗೆ ತಾತ್ಕಾಲಿಕವಾಗಿ ಈ ಹಿಂದೆ ಸ್ಥಳಾಂತರಿಸಲಾಗಿತ್ತು. ಇದೀಗ ಜೂನ್ 1ರಂದು ಬೆಳ್ತಂಗಡಿಯ ಎ.ಪಿ.ಎಂ.ಸಿ.ಯ ಸಭಾಂಗಣದಲ್ಲಿ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳ್ತಂಗಡಿಯ ವಾರದ ಸಂತೆಯನ್ನು ಖಾಯಂ ಆಗಿ ಎ.ಪಿ.ಎಂ.ಸಿ. […]
ಬೆಳ್ತಂಗಡಿ ತಾಲೂಕು ಕಲ್ಲೇರಿ ಗ್ರಾಮದ ಮಹಿಳೆಗೆ ಕೊರೋನಾ ದೃಢ

ಆಡಳಿತಕ್ಕೆ ಸವಾಲಾದ ಸೋಂಕಿನ ಮೂಲ ಪತ್ತೆಕಾರ್ಯ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೊನಿಯ 45ರ ವಯೋಮಾನದ ಅಸ್ತಮಾದಿಂದ ಸುದೀರ್ಘ ಕಾಲದಿಂದ ಬಳಲುತ್ತಿದ್ದ ಮಹಿಳೆಯೋರ್ವಳಿಗೆ ಗಂಟಲುದ್ರವ ಪರೀಕ್ಷೆಯಲ್ಲಿ ಕೊರೋನಾ ಸೋಂಕು ‘ಪಾಸಿಟೀವ್’ ವರದಿ ಜೂನ್ 1ರಂದು ಬಂದಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಈ ಮಹಿಳೆಗೆ ಕೊರೋನಾ ವೈರಸ್ ಎಲ್ಲಿಂದ ಬಂತು ಎಂಬ ಸವಾಲನ್ನು ಭೇದಿಸಲೇ ಬೇಕಾದ ಸವಾಲು ತಾಲೂಕು ಆಡಳಿತದ ಮುಂದಿದೆ.ಕಳೆದ ಎರಡು ತಿಂಗಳ ಹಿಂದೆ ಇದೇ ಪರಿಸರದ ಯುವಕನೋರ್ವನಿಗೆ ಕೊರೋನಾ ಪೊಸಿಟಿವ್ ಗೋಚರಿಸಿದ್ದು, […]