ಕೊರೋನಾ ಸೋಂಕಿನ ಬಗ್ಗೆ ಎಚ್ಚರ ಮರೆತ ಮಂದಿ
ವೈಯಕ್ತಿಕ ಅಂತರ ಮರೆತು ಮೆರೆದರಿವರು ಧರ್ಮಸ್ಥಳದ ಕೆಲ ಮಂದಿ ಅದಾಗಲೇ ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮರೆತಂತಿದೆ. ಈಗಲೇ ಹೀಗಾದರೆ ಮುಂದೆ ಕ್ಷೇತ್ರದ ದೇಗುಲದ ಬಾಗಿಲು ತೆರೆದ ಮೇಲೆ ಭಕ್ತಸಾಗರ ಬಂದಾಗ ನಮ್ಮೂರ ಕಥೆ ಏನಾಗಬಹುದು ಎಂಬ ಆತಂಕ ಕೊರೋನಾ ಸೋಂಕು ಹರಡದಂತೆ ಸುರಕ್ಷತಾ ಕ್ರಮ ಪಾಲಿಸುತ್ತಿರುವ ಕ್ಷೇತ್ರದ ನಿವಾಸಿಗರಲ್ಲಿ ಆವರಿಸತೊಡಗಿದೆ.ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೊರೋನಾ ಸೋಂಕು ಹರಡದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿರುವ ನಾಗರಿಕರಲ್ಲಿ ಈ ಆತಂಕ ಸೃಷ್ಟಿಯಾಗಲು ಕಾರಣ ಜೂನ್ 1ರಂದು ಧರ್ಮಸ್ಥಳದ […]
ವಾರ ಭವಿಷ್ಯ- 1-06-2020 ರಿಂದ 7-06-2020 ರವರೆಗೆ

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.
ಬೆಳ್ತಂಗಡಿ ತಾಲೂಕಿನಲ್ಲಿ ಮಿಡತೆಗಳ ಹಿಂಡು ಪ್ರತ್ಯಕ್ಷ
ಬೆಳ್ತಂಗಡಿ:ತಾಲೂಕಿನ ಕರಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೆ ಅನೀಶ್ ಎಂಬವರ ತೋಟದಲ್ಲಿ ಮೇ 30ರ ಮಧ್ಯಾಹ್ನ ಮಿಡತೆಗಳ ಗುಂಪು ಕಂಡುಬಂದಿದೆ.ಅನೀಶ್ ಅವರು ತನ್ನ ರಬ್ಬರ್ ತೊಟದಲ್ಲಿ ಹೋಗಿ ನೋಡಿದಾಗ ಮಿಡತೆಗಳು ರಬ್ಬರ್ ಗಿಡಗಳ ಕೆಳಗೆ ಇರುವ ಗಿಡ ಬಳ್ಳಿಗಳ ಸೊಪ್ಪುಗಳನ್ನು ತಿನ್ನುವುದು ಕಂಡುಬಂದಿದೆ. ಈಗಾಗಲೇ ಎಲ್ಲಾ ಕಡೆಯಲ್ಲೂ ಮಿಡತೆಗಳ ಹಾವಳಿಯಿಂದ ತತ್ತರಿಸುತ್ತಿರುವಾಗ ತಾಲೂಕಿನಲ್ಲಿಯೂ ಮಿಡತೆಗಳು ಕಂಡು ಬಂದದ್ದು ಕೃಷಿಕರು ಚಿಂತೆಗೀಡಾಗುವಂತೆ ಮಾಡಿದೆ.
ಬಿಗ್ ಬ್ರೇಕಿಂಗ್ & ಶಾಕಿಂಗ್ ನ್ಯೂಸ್

ಮೂಡುಬಿದಿರೆಯಲ್ಲಿ 7 ಕೊರೋನಾ ಪಾಸಿಟಿವ್ ಮೂಡುಬಿದಿರೆ: ಮೇ 29, ಮೂಡುಬಿದಿರೆಯ ಪಾಲಿಗೆ ಕರಾಳ ದಿನ ಎಂದರೂ ತಪ್ಪಾಗಲಾರದು. ಮೂಡುಬಿದಿರೆಯಲ್ಲೂ ಕೊರೋನಾ ಪಾಸಿಟಿವ್ ಅಭಿಯಾನಕ್ಕೆ ಚಾಲನೆ ಸಿಕ್ಕಂತಾಗಿದೆ. ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಗೆ ಒಳಗಾದ ದಿನವೇ ಆತ್ಮಹತ್ಯೆಗೆ ಶರಣಾಗಿದ್ದ ಕೊರೋನಾ ಪಾಸಿಟಿವ್ ವ್ಯಕ್ತಿಯ ಜೊತೆಗೆ ಮುಂಬೈಯಿಂದ ಆಗಮಿಸಿದ್ದ ಇತರ ಎಲ್ಲಾ 6 ಮಂದಿಯ ಸ್ಲ್ಯಾಬ್ ರಿಪೋರ್ಟಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ ಎಂದು ಗೊತ್ತಾಗಿದೆ. ಇದೀಗ ಕಡಂದಲೆ ಕ್ವಾರಂಟೈನ್ ಸೆಂಟರಿನಲ್ಲಿ ಕೊರೋನಾ ಸೋಂಕಿತ ಸಾವಿಗೆ ಶರಣಾದ ವೇಳೆ ಪೊಲೀಸರು ಬರುವ […]
ತಾ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ಕಾಮಗಾರಿ ಪರಿಶೀಲನೆ
ಕಲ್ಲೇರಿ: ತಣ್ಣೀರುಪಂಥ ಗ್ರಾಮ ಪಂಚಾಯತಿನ ಕಲ್ಲೇರಿಯಲ್ಲಿ ನಿರ್ಮಾಣ ಹಂತದಲ್ಲಿರುವವಾಣಿಜ್ಯ ಸಂಕೀರ್ಣದ ಕಾಮಗಾರಿಯನ್ನು ಬೆಳ್ತಂಗಡಿ ತಾಲೂಕು ಪಂಚಾಯತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ಮೇ 20ರಂದುಪರಿಶೀಲನೆ ಮಾಡಿ ಸಲಹೆ,ಸೂಚನೆ ನೀಡಿದರು.ಆ ಸಂದರ್ಭದಲ್ಲಿ ಕಾಮಗಾರಿಯ ಮೇಲ್ವಿಚಾರಕರು, ಇಂಜಿನಿಯರ್ ಸಾಮ್ರಾಟ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾಮಗಾರಿಯ ಗುತ್ತಿಗೆದಾರರು ಹಾಜರಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಕಾಮಗಾರಿಯ ವಿವರ ನೀಡಿದರು.
ಗೆಜ್ಜೆಗಿರಿಯಲ್ಲಿ ದೃಢಕಲಶಾಭಿಷೇಕ ಸಂಪನ್ನ
ಕಳೆದ ಫೆ. 26ರಿಂದ ಮಾಚ್೯ 2ರವರೆಗೆ ಅಭೂತಪೂರ್ವ ಬ್ರಹ್ಮಕಲಶೋತ್ಸವ ನಡೆದ ಪರಮ ಪಾವನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲಿನಲ್ಲಿ ದೃಢಕಲಶಾಭಿಷೇಕ ಕಾರ್ಯಕ್ರಮ ಅತ್ಯಂತ ಸರಳ ರೀತಿಯಲ್ಲಿ ನಡೆಯಿತು.ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಅದ್ದೂರಿತನ ಇಲ್ಲದೆ ಸರಳವಾಗಿ ವಿಧಿ ವಿಧಾನ ನಡೆಸಲಾಯಿತು.ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಸಾರ್ವಜನಿಕ ಭಕ್ತರ ಭಾಗವಹಿಸುವಿಕೆ ಇಲ್ಲದೆ ಕೇವಲ ಯಜಮಾನ ಕುಟುಂಬಸ್ಥರು, ಕ್ಷೇತ್ರಾಡಳಿತ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಕರಸೇವಾ ಸಮಿತಿಯ ಆಯ್ದ ಪ್ರಮುಖರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕ್ಷೇತ್ರದ ಆದಿ ದೈವ […]
ಆರೋಗ್ಯ ಪರಿಕರಗಳ ಕೊಡುಗೆ
ಕೋರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳ ಅನುಷ್ಠಾನಕ್ಕೆ ಅಹರ್ನಿಶಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಗುತ್ತಿಗೆ ಆಧಾರಿತ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರ ಬಳಕೆಗಾಗಿ ಬೆಳ್ತಂಗಡಿಯ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆರೋಗ್ಯ ಪರಿಕರಗಳನ್ನು ನೀಡಲಾಯಿತು.ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ಈ ಆರೋಗ್ಯ ಪರಿಕರಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧುರವರಿಗೆ ಹಸ್ತಾಂತರಿಸಿದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹರಿಣಿ, ತಾಲೂಕು ಆರೋಗ್ಯ ಕಾರ್ಯ ವ್ಯವಸ್ಥಾಪಕ ಅಜಯ್ ಕುಮಾರ್, ರಾಜಕೇಸರಿ ಸಂಸ್ಥೆಯ […]
ಇಲಾಖೆಯಿಂದ ನಿರ್ಲ್ಯಕ್ಷಕ್ಕೊಳಗಾದ ಸೇತುವೆ ಕುಸಿತ-ಗ್ರಾಮೀಣ ಜನತೆಗೆ ಸಂಕಷ್ಟ
ಸೇತುವೆ ದುರಸ್ಥಿ ಕಾಮಗಾರಿಯಲ್ಲೂ ನಿರ್ಲ್ಯಕ್ಷ ತೋರಿದ ಇಲಾಖಾಧಿಕಾರಿಗಳು ಬೆಳ್ತಂಗಡಿ: ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್‌ನಿಂದ ರಾಷ್ಟ್ರೀಯ ಉದ್ಯಾನವನ ಅಲಂಬಕ್ಕೆ ಹೋಗುವ ರಸ್ತೆಯಲ್ಲಿರುವ ಕುಕ್ಕುಜೆ ಸೇತುವೆಯು ಸಂಪೂರ್ಣ ಶಿಥಿಲಗೊಂಡು ಮೇ.27ರಂದು ಸಂಜೆ ಕುಸಿದು ಬಿದ್ದಿದೆ. ಸುಮಾರು 45 ವರ್ಷಕ್ಕೂ ಹಳೆಯದಾದ ಈ ಸೇತುವೆಯ ಫಿಲ್ಲರ್ ಕುಸಿದು ಒಂದು ವರ್ಷ ಆಗುತ್ತಾ ಬಂದಿದ್ದು, ವಾಹನ ಚಾಲಕರಿಗೆ ಅಪಾಯವನ್ನು ತಂದಿತ್ತು. ಇದರ ದುರಸ್ತಿಗೆ ಈ ಭಾಗದ ನಾಗರಿಕರು ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಸೇತುವೆ ಶಿಥಿಲಗೊಂಡಿದ್ದರಿಂದ ಈ […]
ಗುರುಗಳೇ ಎಚ್ಚರ ತಪ್ಪಿದರೆ ಎಡವುವವರಿಗಾರು ದಿಕ್ಕು
ಬದ್ಯಾರಿನಲ್ಲಿ ಹೈಮಾಸ್ಕ್ ಲೈಟ್ ವೈಯಕ್ತಿಕ ಅಂತರ ಮರೆತು ಉದ್ಘಾಟನೆ ಮೇ 27ರಂದು ಬದ್ಯಾರಿನ ಡಾl ಎಲ್. ಎಂ. ಪಿಂಟೊ ಆಸ್ಪತ್ರೆಯ ವಠಾರದಲ್ಲಿರುವ ಬಸ್ ನಿಲ್ದಾಣದ ಬಳಿ ಬೆಳ್ತಂಗಡಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅಳವಡಿಸಲಾದ ಹೈಮಾಸ್ಕ್ ದಾರಿದೀಪದ ಉದ್ಘಾಟನಾ ಕಾರ್ಯಕ್ರಮ. ದೀಪವನ್ನು ಸಾಂಪ್ರದಾಯಿಕವಾಗಿ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ಆದರೆ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಬದ್ಯಾರು ಚರ್ಚಿನ ಧರ್ಮಗುರು ವಂ. ಮೆಲ್ವಿನ್ ಡಿ’ಸೋಜಾ ಉಪಸ್ಥಿತರಿದ್ದೂ, ಕಾರ್ಯಕ್ರಮದಲ್ಲಿ ವೈಯಕ್ತಿಕ ಅಂತರ ಮರೆತು ಕೊರೋನಾ ಸೋಂಕಿನ ಬಗ್ಗೆ ಮುಂಜಾಗ್ರತೆ ವಹಿಸದಿದ್ದುದು ‘ಗುರುಗಳೇ […]
ಕಡಂದಲೆ ಆತ್ಮಹತ್ಯೆ ಪ್ರಕರಣದ ನಂತರ ಮೂಡುಬಿದಿರೆಯಲ್ಲಿ ಆವರಿಸಿದೆ ಕೊರೋನಾ ಭೀತಿ
ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳೀಯರನೇಕರ ಭೇಟಿ ಹೆಚ್ಚಿಸಿದ ಆತಂಕ ಮೂಡುಬಿದಿರೆ : ಮುಂಬಯಿಯಿಂದ ಕಡಂದಲೆಗೆ ಆಗಮಿಸಿದ್ದ ಹೋಟೆಲ್ ಉದ್ಯೋಗಿ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಗೆ ಒಳಗಾದ ಕೆಲವೇ ಗಂಟೆಗಳ ಬಳಿಕ ಶಾಲೆಯ ವರಾಂಡದಲ್ಲಿ ನೇಣಿಗೆ ಶರಣಾದ ಪ್ರಕರಣ ಇದೀಗ ಮೂಡುಬಿದಿರೆ ಪರಿಸರದಲ್ಲಿ ತೀವ್ರ ಭೀತಿಯ ಅಲೆಯೆಬ್ಬಿಸಿದೆ.ಮೇ. ,20ರಂದು ತಡರಾತ್ರಿ ಮುಂಬಯಿಯಿಂದ ತನ್ನ ಇತರ 6 ಮಂದಿ ಸಂಬಂಧಿಕರ ಜೊತೆಗೆ ಕಡಂದಲೆಗೆ ಆಗಮಿಸಿದ್ದ ಸ್ಥಳೀಯ ನಿವಾಸಿ ಮುಂಬಯಿಯ ಹೋಟೆಲ್ ಕಾರ್ಮಿಕ ಕ್ವಾರಂಟೈನ್ ಗೆ ಒಳಪಟ್ಟ ಕೆಲವೇ ಗಂಟೆಗಳ ನಂತರ ನೇಣಿಗೆ […]