ಶಿರ್ಲಾಲು ಅಶಕ್ತ ಕುಟುಂಬಗಳಿಗೆ ದಿನಬಳಕೆಯ ಆಹಾರ ಕಿಟ್ ವಿತರಣೆ ಮಾಸ್ಕ್ ಧರಿಸಿ ವೈಯಕ್ತಿಕ‌ ಅಂತರ ಕಾಪಾಡಿದ ಯುವಕರು

ಶಿರ್ಲಾಲು ಗ್ರಾಮದ ಮಹಿಳೆಯೊಬ್ಬರಿಗೆ ಕೊವಿಡ್-19 ಪಾಸಿಟಿವ್ ಕಂಡು ಬಂದಂತಹ ಹಿನ್ನೆಲೆಯಲ್ಲಿ ಶಿರ್ಲಾಲು ಸುತ್ತಮುತ್ತಲಿನ ಕೆಲವು ಮನೆಗಳನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿ ಯನ್ನಾಗಿ ಜಿಲ್ಲಾಡಳಿತ ಘೋಷಿಸಿದೆ.ಈ ಸಂದರ್ಭದಲ್ಲಿ ಗ್ರಾಮದಲ್ಲಿನ ತೀರ ಅಶಕ್ತ ಕುಟುಂಬಗಳನ್ನು ಗುರುತಿಸಿ ದಾನಿಗಳಾದ ಸೌದಿ ಅರೇಬಿಯಾದ ಉದ್ಯೋಗಿ ಸುರೇಶ್ ಕರ್ದೊಟ್ಟು ಹಾಗೂ ಕೆನರಾ ಬ್ಯಾಂಕ್ ಅಧಿಕಾರಿ ಕಿಶೋರ್ ಕುಮಾರ್’ರವರ ಸಹಕಾರ ದೊಂದಿಗೆ ದಿನ ಬಳಕೆಯ ಆಹಾರದ ಕಿಟ್’ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದಿನೇಶ್ ಕುಮಾರ್ ಕರ್ದೊಟ್ಟು,ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಎಂ.ಕೆ ಪ್ರಸಾದ್,ರಕ್ಷಿತ್ ಕುಮಾರ್ , […]

ಸಂಕಷ್ಟದಲ್ಲಿರುವ ಅಕ್ಷರ ದಾಸೋಹ ನೌಕರರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹ

ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿ ನಡೆದ ಒತ್ತಾಯ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ಬಿಸಿಯೂಟ ನೌಕರರ ಹಿತ ಕಾಪಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಮೇ 26ರಂದು ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಬೆಳ್ತಂಗಡಿ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.2001-02 ರಲ್ಲಿ ಪ್ರಾರಂಭವಾದ ಅಕ್ಷರ ದಾಸೋಹ ಯೋಜನೆಯಡಿ ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರು ದುಡಿಯುತ್ತಿದ್ದಾರೆ. ಕೊರೋನಾ ವೈರಸ್ ಲಾಕ್ ಡೌನ್ […]

ಲಾಕ್ ಡೌನ್ ನಡುವೆಯೇ ವಿಶ್ವದಾಖಲೆ

ಹೌದು ಬೆಳ್ತಂಗಡಿ‌ ತಾಲೂಕಿನ‌ ಯುವಕರ ತಂಡ ವಿಶ್ವದಾಖಲೆಯ ಕನಸು ಕಂಡು ನನಸಾಗಿಸಿದ್ದಾರೆ.ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಸಂಸ್ಥೆಯು‌ಸಮೂಹ‌ ಪ್ರತಿಭಾ ಪ್ರದರ್ಶನ ಎಂಬ ಕಾರ್ಯಕ್ರಮಕ್ಕೆ ವಿಶ್ವದಾಖಲೆಯ ಮಾನ್ಯತೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದೆ.ಇದು 2000 ಮಕ್ಕಳು ಏಕ ಕಾಲದಲ್ಲಿಅವರವರ ಮನೆಯಲ್ಲಿಯೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಕಾರ್ಯಕ್ರಮವಾಗಿದೆ.ಬೋಧಿ‌ ಮೀಡಿಯಾ ಎಂಬ ಯೂಟ್ಯೂಬ್ ಚಾನೆಲ್‌ ಮೂಲಕಈ‌ ಕಾರ್ಯಕ್ರಮವನ್ನು‌ ಆಯೋಜಿಸ‌ಲಾಗಿತ್ತು.ತಂಡದಲ್ಲಿ‌‌ ಸ್ಮಿತೇಶ್ ಎಸ್,ಅನೀಶ್, ಅನನ್ಯ,ತೇಜಸ್ವಿನಿ,ದೀಕ್ಚಿತ್ ಕೆ, ಅಕ್ಷಯ್,ದೀಕ್ಷಿತ್‌ ಭಂಡಾರಿ,ಹೇಮಂತ್,ಕಿಶೋರ್ಚಂದ್ರಹಾಸ್,ತುಷಾರ್ ಗೌಡಸಂಯೋಜಕರಾಗಿದ್ದರು.

ಹ್ಯುಮಾನಿಟಿ ಟ್ರಸ್ಟ್ ಬೆಳ್ಮಣ್ಣು ವತಿಯಿಂದ ಪಟ್ರಮೆಯ ಆಸಿಯಾ ರವರಿಗೆ ಮನೆನಿರ್ಮಾಣ.

ಮಾನವೀಯತೆಯೇ ಅತ್ಯಂತ ಶ್ರೇಷ್ಠ ಧರ್ಮ ಎಂಬ ದ್ಯೇಯವಾಕ್ಯದೊಂದಿಗೆ ಉಡುಪಿಯ ಬೆಳ್ಮಣ್ಣುವಿನಲ್ಲಿ ಕೇಂದ್ರಕಚೇರಿ ಹೊಂದಿ ಕಾರ್ಯಾಚರಿಸುತ್ತಿರುವ ಹ್ಯುಮ್ಯಾನಿಟಿ ಟ್ರಸ್ಟ್, ಪಟ್ರಮೆ ಗ್ರಾಮದ ಅನಾರು ಕಾಟ್ರಸ್ ನ ಅತ್ಯಂತ ಅಸಹಾಯಕ ಪರಿಸ್ಥಿತಿಯಲ್ಲಿ, ಗುಡಿಸಲಿನಲ್ಲಿ ವಾಸಿಸುತ್ತಿದ್ದ ಆಸಿಯಾ ಎಂಬವರಿಗೆ ನಿರ್ಮಿಸಿಕೊಟ್ಟ ಸುಮಾರು 3 ಲಕ್ಷ ಮೌಲ್ಯದ ಆರ್ ಸಿ ಸಿ ಮನೆಯನ್ನು ಇಂದು ಬೆಳ್ತಂಗಡಿ ವೃತ್ತನಿರೀಕ್ಷಕರಾದ ಶ್ರೀ ಸಂದೇಶ್ ರವರ ಹಸ್ತದಿಂದ ಉದ್ಘಾಟಿಸಲಾಗಿ ಫಲಾನುಭವಿಗೆ ಹಸ್ತಾಂತರಿಸಲಾಯಿತು.ನಂತರ ಮಾತನಾಡಿದ ಶ್ರೀ ಸಂದೇಶ್ ರವರು ಇದೊಂದು ಮಾದರಿ ಮಾನವೀಯ ಸೇವೆಯಾಗಿದ್ದು, ಇನ್ನಷ್ಟು ಬಡಕುಟುಂಬಗಳಿಗೆ ಹ್ಯುಮ್ಯಾನಿಟಿ […]

ಬಿಗ್ ಬ್ರೇಕಿಂಗ್ ನ್ಯೂಸ್

ಹೆಮ್ಮಾರಿ ಕೊರೋನಾಗೆ ವೇಣೂರಿನ ವ್ಯಕ್ತಿ ಬಲಿ – ವೇಣೂರು ಸೀಲ್ ಡೌನ್ ಸಾಧ್ಯತೆ ಹೆಮ್ಮಾರಿ ಕೊರೋನಾಗೆ ವೇಣೂರಿನ ವ್ಯಕ್ತಿಯೋರ್ವ ಬಲಿಯಾದ ಘಟನೆ ಮೇ 25ರಂದು ವರದಿಯಾಗಿದೆ.ಕೊರೋನಾ ಚೀನಾದ ವುಹಾನಿನಲ್ಲಿ ಹುಟ್ಟಿದೆ. ಅಮೇರಿಕಾದಲ್ಲಿದೆ, ಇಟಲಿಯಲ್ಲಿದೆ, ಬ್ರಿಟನಿನಲ್ಲಿದೆ, ಜರ್ಮನಿಯಲ್ಲಿದೆ…..ದೇಶದ ಇತರ ರಾಜ್ಯಗಳಲ್ಲಿದೆ….ಬೆಂಗಳೂರಿನಲ್ಲಿದೆ…ಮಂಗಳೂರಿನಲ್ಲಿದೆ….ನಮ್ಮೂರಿಗೆ ಬಂದಿಲ್ಲ, ನಮಗಾವ ಮುಂಜಾಗ್ರತೆಯೂ ಅಗತ್ಯವಿಲ್ಲ….ಎಂದು ಮಾಸ್ಕ್ ಧರಿಸದೇ-ವೈಯಕ್ತಿಕ ಅಂತರ ಕಾಪಾಡದೇ ಬೇಕಾಬಿಟ್ಟಿ ತಿರುಗಾಡುತ್ತಿದ್ದ ಬೆಳ್ತಂಗಡಿಯ ಜನತೆಯನ್ನು‌ ಕಳೆದ ಶುಕ್ರವಾರ ಮೇ 22ರಂದು ಶಿರ್ಲಾಲಿನ ಕೊರೋನಾ ಪಾಸಿಟಿವ್ ಪ್ರಕರಣ ಎಚ್ಚರಿಸಿತ್ತು. ಇದೀಗ ಮೇ 25ರಂದು ವೇಣೂರಿನ ವ್ಯಕ್ತಿಯೋರ್ವ ಕೊರೋನಾ […]

ಶಿಬಾಜೆ – ರಕ್ಷಿತಾರಣ್ಯದ ಪ್ಲಾಂಟೇಶನ್ ಗಿಡಗಳ ಮಾರಣ ಹೋಮ

ಘಟನೆ ನಡೆದು ಮೂರು ದಿನಗಳಾದರೂ ಪ್ರಕರಣ ದಾಖಲಿಸದ ಇಲಾಖೆ ನಡೆಯಲ್ಲಿ ಸಂಶಯ. ಕೊಕ್ಕಡ:ಉಪ್ಪಿನಂಗಡಿ ವಲಯಾರಣ್ಯದ ವ್ಯಾಪ್ತಿಯ ಶಿಬಾಜೆ ಸೆಕ್ಷನ್ ನ ಕುರುಂಬು ಎಂಬಲ್ಲಿಂದ ಬೈಕರ ವರೆಗಿನ ಭಾಗದ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅರಣ್ಯ ಇಲಾಖೆಯು ಬೆಲೆ ಬಾಳುವ ವಿವಿಧ ಜಾತಿಯ ನೆಡುತೋಪುಗಳ ರೀಪ್ಲಾಂಟೇಶನ್ ನಡೆಸಿ ಬೆಳೆಸಲಾಗಿದ್ದ ಸುಮಾರು 2500 ಮಿಕ್ಕಿ ದಷ್ಟ ಪುಷ್ಟ ಗಿಡಗಳನ್ನ ದುರುದ್ದೇಶಪೂರಿತವಾಗಿ ಕಳೆದ ಮೂರು ದಿನಗಳ ಹಿಂದೆ ದುಷ್ಕರ್ಮಿಗಳು ಕಡಿದು ತುಂಡರಿಸಿದ ವಿಲಕ್ಷಣ ಘಟನೆ ವರದಿಯಾಗಿದೆ.ಕಳೆದ ಮೂರು ದಿನಗಳ […]

ಮೂಡುಬಿದಿರೆಗೆ ಶಾಸಕರ ಭರವಸೆ ನಂಬಿ ಕೆಟ್ಟರಿವರು

ಉತ್ತರಕ್ರಿಯೆಯಲ್ಲಿ ಭಾಗವಹಿಸಲು ಬರುತ್ತಿದ್ದವರ ಮೇಲೆ ನಿಪ್ಪಾಣಿ ಪೊಲೀಸರ ದೌರ್ಜನ್ಯ ಮೂಡುಬಿದಿರೆಯ ಶಾಸಕ ಉಮಾನಾಥ ಕೋಟ್ಯಾನರ ಭರವಸೆಯ ಮೇಲೆ ನಂಬಿಕೆಯಿಟ್ಟು ಮೃತ ತಮ್ಮನ ಉತ್ತರಕ್ರಿಯೆ ನಡೆಸಲು ಮಹಾರಾಷ್ಟ್ರದ ಪುಣೆಯಿಂದ ಮೂಡುಬಿದಿರೆಗೆ ಹೊರಟಿದ್ದ ವ್ಯಕ್ತಿಯೊಬ್ಬರ ಮೇಲೆ ನಿಪ್ಪಾಣಿ ಚೆಕ್ ಪೋಸ್ಟ್ ಬಳಿ ಕರ್ನಾಟಕದ ಪೊಲೀಸರು ದೌರ್ಜನ್ಯ ಎಸಗಿದ್ದು ಪೊಲೀಸರ ಈ ಅನಿರೀಕ್ಷಿತ ಧಾಳಿಯಿಂದ ತೀವ್ರವಾಗಿ ಗಾಯಗೊಂಡು, ಮಾನಸಿಕವಾಗಿ ನೊಂದಿರುವ ವ್ಯಕ್ತಿ ಮತ್ತೆ ಪುಣೆಗೆ ಮರಳಿರುವ ಘಟನೆ ಮೇ 21ರ ಮಧ್ಯಾಹ್ನ ನಡೆದಿದೆ.ಮೂಲತಃ ಮೂಡುಬಿದಿರೆಯವರಾದ ಶರತ್ ದೇವಾಡಿಗರ ಕಿರಿಯ ಸಹೋದರ ಮುಂಬಯಿಯಲ್ಲಿ […]

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

ಮೂಡುಬಿದಿರೆಯಲ್ಲಿ ಹೊಂಚು ಹಾಕಿ ಕುಳಿತಿದೆ ಕೊರೋನಾ ಮೂಡುಬಿದಿರೆ : ಮುಂಬಯಿ ವಲಸಿಗರಿಂದಲೇ ಕರ್ನಾಟಕದಲ್ಲಿ ಕೊರೋನಾ ಮೃತ್ಯುಕೂಪವಾಗಿ ಕಾಡತೊಡಗಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.ಅದಕ್ಕಾಗಿ ಮುಂಬಯಿಯಿಂದ ಕರ್ನಾಟಕ ರಾಜ್ಯವನ್ನು ಯಾರೂ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಗಡಿ ಬಾಗದಲ್ಲಿ ಅಂತೂ ಹೆದರಿಸಿ, ಬೆದರಿಸಿ, ಲಾಠಿಚಾರ್ಜ್ ನಡೆಸಿ ಜನರು ಗಡಿಯೊಳಗೆ ಪ್ರವೇಶಿಸದಂತೆ ಪೊಲೀಸರು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ.ಆದರೆ ಈಗಾಗಲೇ ಗಡಿಯೊಳಗೆ ಬಂದು ಕ್ವಾರಂಟೈನ್ ಸ್ವೀಕರಿಸಿದವರನ್ನು, ಅವರು ಕರ್ನಾಟಕಕ್ಕೆ ಬರುವಾಗ ಉಪಯೋಗಿಸಿರುವ ವಾಹನಗಳನ್ನು ಆ ವಾಹನಗಳ ಚಾಲಕರನ್ನು ಸೂಕ್ತ ಕ್ರಮಕ್ಕೆ ಒಳಪಡಿಸುವ ಜವಾಬ್ದಾರಿ […]

ಬಿಗ್ಗೆಸ್ಟ್ ಬ್ರೇಕಿಂಗ್ ಹಾಗೂ ಶಾಕಿಂಗ್ ನ್ಯೂಸ್

ಬೆಳ್ತಂಗಡಿ ತಾಲೂಕಿಗೆ ವಕ್ಕರಿಸಿದ ಕೊರೋನಾ ಹೆಮ್ಮಾರಿ ಇದುವರೆಗೆ ಕೊರೋನಾ ಸೋಂಕು ಅಲ್ಲಿದೆ, ಇಲ್ಲಿದೆ…ಆದರೆ ನಮ್ಮೂರಲ್ಲಿ ಇಲ್ಲ ಎಂದು ನಿರಾಳವಾಗಿ ಭಂಡ ಧೈರ್ಯದಲ್ಲಿದ್ದ ಬೆಳ್ತಂಗಡಿ ತಾಲೂಕಿನ ಜನತೆಗೆ ‘ನಾನು ನಿಮ್ಮಲ್ಲಿಯೇ ಇದ್ದೇನೆ’ ಎಂದು ಹೇಳುತ್ತಿದೆ ಕೊರೋನಾ ಹೆಮ್ಮಾರಿ.ಬೆಳ್ತಂಗಡಿ ತಾಲೂಕಿನ ಆರಂಬೋಡಿಗೆ ಐದು ದಿನಗಳ ಹಿಂದೆ ಮುಂಬಯಿಯಿಂದ ಆಗಮಿಸಿ, ಸ್ಥಳೀಯ ಶಾಲೆಯಲ್ಲಿ ಕ್ವಾರಂಟೈನಿಗೆ ಒಳಗಾಗಿದ್ದ 28ವರ್ಷದ ಮಹಿಳೆಗೆ ಇದೀಗ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಹಾಸ್ಯಾಸ್ಪದವಾಗಿ ಮಾತನಾಡುವ ಬೆಳ್ತಂಗಡಿ ತಾಲೂಕಿನ ಜನತೆ ಇನ್ನಾದರೂ […]