ರೋಟರಿ ಕ್ಲಬ್ಬಿನಿಂದ ಜೈ‌ಕನ್ನಡಮ್ಮ ಕಛೇರಿಗೆ ಸ್ಯಾನಿಟೈಸರ್ ಸ್ಟ್ಯಾಂಡ್ ಕೊಡುಗೆ

ಮೇ 21ರಂದು ಬೆಳ್ತಂಗಡಿ ರೋಟರಿ‌ ಕ್ಲಬ್ಬಿನವರು ಬೆಳ್ತಂಗಡಿ ಪೇಟೆಯಲ್ಲಿರುವ ಜೈ ಕನ್ನಡಮ್ಮ ಕಛೇರಿಗೆ ಸ್ಯಾನಿಟೈಸರ್ ಸ್ಟ್ಯಾಂಡನ್ನು‌ ಕೊಡುಗೆಯಾಗಿ ನೀಡಿದರು.ಸುವರ್ಣ ಮಹೋತ್ಸವದ ಸಂಭ್ರಮ ದಲ್ಲಿರುವ ಬೆಳ್ತಂಗಡಿ ರೋಟರಿ ಸಂಸ್ಥೆ ಈ ಬಾರಿ ಹತ್ತುಹಲವು ಸಮಾಜಮಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ. ಈ ನಡುವೆ ವಿಶ್ವಕ್ಕೇ ವಕ್ಕರಿಸಿದ ಕೊರೋನಾ ಸೋಂಕು ಹರಡುವಿಕೆ ತಡೆಯುವಲ್ಲಿ ಜನತೆಯಲ್ಲಿ ಜಾಗೃತಿ ಮೂಡಿಸಲು ಸಂಕಲ್ಪಿಸಿರುವ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಪದಾಧಿಕಾರಿಗಳು ಹಾಗೂ ಸದಸ್ಯರು ಸುಮಾರು 50 ಸಾರ್ವಜನಿಕ ಹಾಗೂ ಸರಕಾರಿ ಸಂಸ್ಥೆಗಳಿಗೆ ಸ್ಯಾನಿಟೈಸರ್ ಸ್ಟ್ಯಾಂಡ್ ನೀಡುವ […]

ಬಿಗ್ ಬ್ರೇಕಿಂಗ್ ನ್ಯೂಸ್ ಕಡಂದಲೆಯಲ್ಲಿ ಕ್ವಾರಂಟೈನ್ ಗೆ ಒಳಪಟ್ಟ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ : ಮುಂಬೈಯಿಂದ ಮೇ 20ರ ತಡರಾತ್ರಿ ಕಡಂದಲೆಗೆ ಆಗಮಿಸಿ ಕಡಂದಲೆ ಮೈನ್ ಶಾಲೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದ ವ್ಯಕ್ತಿಯೋರ್ವರ ಶವ ಮೇ 21ರ ಮುಂಜಾನೆ ವರಾಂಡದ ತೊಲೆಗೆ ನೇಣುಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕಡಂದಲೆ ಕಾಂಗ್ಲಾಯಿಯ ದಯಾನಂದ (52ವ.) ಅವರು ಹಲವು ವರ್ಷಗಳಿಂದ ಮುಂಬಯಿಯಲ್ಲಿ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದು ಕೊರೋನಾ ಸಂಕಷ್ಟದ ಸಮಯದಲ್ಲಿ ಲಾಕ್ ಡೌನ್ ಕೂಡಾ ಇದ್ದುದರಿಂದ ಊರಿಗೆ ಹಿಂತಿರುಗಲು ಹಾತೊರೆಯುತ್ತಿದ್ದರು. ಕೊನೆಗೂ ಊರಿಗೆ ಮರಳಲು ಅವಕಾಶ ಸಿಕ್ಕಿದ್ದು ತನ್ನ ಇತರ 6 ಮಂದಿ ಸಂಬಂಧಿಕರ ಜೊತೆಗೆ […]

ಜೈ ಕನ್ನಡಮ್ಮ ವರದಿಗೆ ಜೈ ಎಂದ ಪಟ್ಟಣ ಪಂಚಾಯತು ಆಡಳಿತ

ಬೆಳ್ತಂಗಡಿ ಮಾರಿಗುಡಿ ಬಳಿಯ ಚರಂಡಿ ದುರ್ನಾತ ಮುಕ್ತ ನಿನ್ನೆಯಷ್ಟೇ (ಮೇ 20) ರಂದು ಬೆಳ್ತಂಗಡಿ ಮಾರಿಗುಡಿಯ ಬಳಿಯ ಚರಂಡಿಯ ದುರವಸ್ಥೆಯ ಬಗ್ಗೆ, ಹರಡುತ್ತಿರುವ ಗಬ್ಬು ವಾಸನೆಯ ಬಗ್ಗೆ, ಸೊಳ್ಳೆ ಉತ್ಪಾದನೆಯಾಗುತ್ತಿರುವ ಆತಂಕದ ಬಗ್ಗೆ ಹಾಗೂ ಇವೆಲ್ಲದರ ಪರಿಣಾಮ ಸಾಂಕ್ರಾಮಿಕ ರೋಗ ಹರಡುವ ಭೀತಿಯ ಬಗ್ಗೆ ಜೈ ಕನ್ನಡಮ್ಮದಲ್ಲಿ ಸಚಿತ್ರ ವರದಿ ಪ್ರಕಟಿಸಿದ್ದೆವು. ಬೆಳ್ತಂಗಡಿ ಪಟ್ಟಣ ಪಂಚಾಯತಿನ ದಕ್ಷ ಆಡಳಿತಾಧಿಕಾರಿ-ಬೆಳ್ತಂಗಡಿ ತಾಲೂಕು ತಹಶೀಲ್ದಾರ್-ನಿವೃತ್ತ ಸೇನಾನಿ ಗಣಪತಿ ಶಾಸ್ತ್ರಿ ತಕ್ಷಣ ಕಾರ್ಯೋನ್ಮುಖರಾಗಿ; ಮೇ 21ರಂದೇ ಪಟ್ಟಣ ಪಂಚಾಯತಿನ ಮೂಲಕ ಚರಂಡಿಯನ್ನು […]

ಅಕ್ರಮ ಕಸಾಯಿಖಾನೆಗೆ ದಾಳಿ-1ಕ್ವಿಂಟಾಲ್ ಗೋಮಾಂಸ ವಶ

ಆರೋಪಿಗಳಿಬ್ಬರ ಬಂಧನ-ಪ್ರಕರಣ ದಾಖಲು ಖಚಿತ ಮಾಹಿತಿಯ ಮೇರೆಗೆ ಮೇ 20ರ ಬುಧವಾರ ಇಳಂತಿಲ ಗ್ರಾಮದ ಅಗರ್ತ ನಿವಾಸಿ ಮಹಮ್ಮದ್ ಅಶ್ರಫರ ಮನೆಗೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಡಿ. ಎಸ್. ವೀರಯ್ಯ ನೇತೃತ್ವದ ಪೊಲೀಸರ ತಂಡ ಮನೆಯಲ್ಲೇ ಕಸಾಯಿಖಾನೆ ನಿರ್ಮಿಸಿ, ಅಕ್ರಮವಾಗಿ ಕದ್ದ ಹಸುಗಳನ್ನು ಕೊಂದು ಮಾಂಸ ಮಾಡಿ ಮಾರಾಟ ಮಾಡುವ ಅಕ್ರಮ ದಂದೆಯನ್ನು ಭೇದಿಸಿ, ಆರೋಪಿಗಳಿಬ್ಬರನ್ನೂ ಬಂಧಿಸಿ‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸುಮಾರು 1ಕ್ವಿಂಟಾಲಿನಷ್ಟು ಗೋಮಾಂಸ, ಮಾಂಸ ತೂಕ ಮಾಡಲು ಇರಿಸಲಾದ ತೂಕದ […]

ಅಕ್ರಮ ಗೋಮಾಂಸ ಅಡ್ಡೆಗೆ ದಾಳಿ-ಆರೋಪಿ ಪರಾರಿ

ಖಚಿತ ಮಾಹಿತಿ ಪಡೆದು ಮೇ 19ರಂದು ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ಪವನ್ ಕುಮಾರ್, ಪಂಚರು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ನೆರಿಯ ಗ್ರಾಮದ ಇಟ್ವಾಡಿ ಎಂಬಲ್ಲಿರುವ ದಾವೂದ್ ಎಂಬಾತನ ಮನೆಯ ಸಮೀಪವಿದ್ದ ಆಕ್ರಮ ಗೋಮಾಂಸ ಅಡ್ಡೆಗೆ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ದಾವೂದ್ ಪೊಲೀಸರು ಬರುವುದನ್ನು ನೋಡಿ ಮನೆಯ ಹಿಂಬದಿಯ ಬಾಗಿಲಿನಿಂದ ಪರಾರಿಯಾಗಿದ್ದಾನೆ. ಪೊಲೀಸರು ಮನೆಯ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಮನೆಯ ಹಿಂಬಾಗದಲ್ಲಿಯೇ ಜಾನುವಾರಿನ ದೇಹದ ಅವಯವಗಳು ಪತ್ತೆಯಾಗಿದ್ದು, ದಾವೂದ್ ಎಲ್ಲಿಂದಲೋ ಯಾವುದೋ […]

ಬೆಳ್ತಂಗಡಿ ಮಾರಿಗುಡಿ ಬಳಿ ಸೊಳ್ಳೆ ಉತ್ಪಾದನಾ ಕೇಂದ್ರ

ಸಾಂಕ್ರಾಮಿಕ‌ ರೋಗದ ಕಾರ್ಖಾನೆಗೆ ಕಡಿವಾಣ ಬಿದ್ದೀತೇ ಜನತೆಯ ಚಿತ್ತ ಕರ್ತವ್ಯನಿಷ್ಠ ತಹಶೀಲ್ದಾರರತ್ತ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖ್ಯರಸ್ತೆ ಬಳಿ ಭಕ್ತರು ಅನೇಕ ವರ್ಷಗಳಿಂದ ಆರಾಧಿಸಿಕೊಂಡು ಬರುವ ಮಾರಿಯಮ್ಮನ ದೇಗುಲವಿದೆ. ಈ ದೇಗುಲದ ಪಕ್ಕದಲ್ಲಿರುವ ಮುಖ್ಯರಸ್ತೆ ಬದಿಯ ಚರಂಡಿಯಲ್ಲಿ ಹರಿಯುವ ಪರಿಸರದ ಹೊಟೇಲುಗಳ ಹಾಗೂ ವಾಣಿಜ್ಯ ಸಂಕೀರ್ಣ-ವಸತಿ ಸಮುಚ್ಛಯಗಳ ತ್ಯಾಜ್ಯ ನೀರಿನಿಂದ ಮಾರಿಯಮ್ಮ ದೇವರೇ ಮೂಗು ಮುಚ್ಚಿ ಕೋರಬೇಕಾದ ದುರ್ಗತಿ ಬಂದೊದಗಿದೆ.ಇಲ್ಲಿ ಹರಿಯುತ್ತಿರುವ ಕೊಳಚೆ ತ್ಯಾಜ್ಯ ನೀರು ದುರ್ನಾತ ಬೀರುವುದರ ಜೊತೆಗೆ ಸಾಂಕ್ರಾಮಿಕ ರೋಗಗಳ ಕಾರ್ಖಾನೆಯಂತಿದೆ. ಈಗಾಗಲೇ […]

ರೋಗ ನಿರೋಧಕ ಶಕ್ತಿ ಹೆಚ್ಚಳದಿಂದ ಕೊರೊನಾಗೆ ತಡೆ

ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡುವುದೇ ಕೊರೊನಾ ಸೋಂಕು ತಡೆಗೆ ಪರಿಹಾರ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಶೀಲರಾದಾಗ ಖಂಡಿತಾ ಕೊರೊನಾ ನಿಯಂತ್ರಣ ಸಾಧ್ಯವಿದೆ ಎಂದು ಇಂಡಿಯಾನ್ ಹೋಮಿಯೋಪಥಿ ಮೆಡಿಕಲ್ ಅಸೋಸಿಯೇಷನ್ ಅವಿಭಜಿತ ದ.ಕ. ಜಿಲ್ಲಾ ಅಧ್ಯಕ್ಷ ಡಾ. ಪ್ರವೀಣ್ ಕುಮಾರ್ ರೈ ಹೇಳಿದರು.ಮಂಗಳೂರಿನ ಪತ್ರಿಕಾಭವನದಲ್ಲಿ ಕೊರೊನಾ ಜಾಗೃತಿ ಅಂಗವಾಗಿ ನಡೆದ ಸಂವಾದ ಹಾಗೂ ಉಚಿತ ರೋಗ ನಿರೋಧಕ ಔಷಧಿ ವಿತರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರೀಯ […]

ಮಾಸ್ಕ್ ಇಲ್ಲ-ವೈಯಕ್ತಿಕ ಅಂತರ ಗೊತ್ತೇ ಇಲ್ಲ

ಇದನ್ನು ಕಂಡಾಗ ನಮ್ಮ ನಿಮ್ಮಲ್ಲಿ ಮೂಡುವ ಪ್ರಶ್ನೆ ‘ಹೀಗೂ ಉಂಟೇ’ ಇವರಲ್ಲಿ‌ ಮಾಸ್ಕ್ ಇಲ್ಲ; ಒಂದಿಬ್ಬರಲ್ಲಿ ಇದ್ದರೂ ಅದು ಮುಖದ ಮೇಲಿರದೇ, ಕತ್ತಿಗೆ ನೆಕ್ಲೆಸ್ ಆಗಿದೆ. ಇವರೆಲ್ಲರಿಗೂ ವೈಯಕ್ತಿಕ ಅಂತರ ಏನೆಂದೇ ಗೊತ್ತಿಲ್ಲದವರಂತಿದ್ದಾರೆ. ಅಥವಾ ಮಾಸ್ಕ್ ಧರಿಸದಿದ್ದರೆ, ವೈಯಕ್ತಿಕ ಅಂತರ ಕಾಪಾಡದಿದ್ದರೆ ಏನಾಗ್ತದೆ ಎಂದು ವ್ಯವಸ್ಥೆಗೇ ಸವಾಲು ಹಾಕ ಹೊರಟಿದ್ದಾರೆ‌. ಇವರು ನಮ್ಮ ರಾಜಕೀಯ ನಾಯಕರು; ಶಾಸಕರ ಸಹಿತ ಜನಪ್ರತಿನಿಧಿಗಳು. ಒಂದರ್ಥದಲ್ಲಿ‌ ಬೇಲಿಯೇ ಎದ್ದು ಹೊಲ ಮೆದ್ದಂತಿದೆ. ಮೇ 19ರಂದು ಬೆಳ್ತಂಗಡಿಯ ಬಿಜೆಪಿ ಮಂಡಲ ಕಛೇರಿಯಲ್ಲಿ ನಡೆದ […]

ಕಾರ್ಮಿಕ ವಿರೋಧಿ ನೀತಿ ಕೈಬಿಡಲು ಒತ್ತಾಯಿಸಿ ಮನವಿ

ಕೊರೋನಾ ವೈರಸ್ ಲಾಕ್ ಡೌನ್ ನ ಸಂದಿಗ್ಧತೆಯ ನಡುವೆ ನಮ್ಮನಾಳುವ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ರೂಪಿಸಲು ಹೊರಟಿರುವುದನ್ನು ಕೈಬಿಡಲು ಒತ್ತಾಯಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ನೀಡಿದ ಕರೆಯಂತೆ ಇಂದು ಬೆಳ್ತಂಗಡಿ ತಹಶಿಲ್ದಾರರ ಮೂಲಕ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ರಾಜ್ಯ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಕೆಲಸದ ಅವಧಿ ಹೆಚ್ಚಳ ,ಕಾರ್ಖಾನೆ ಪರಿಭಾಷೆಗೆ ತಿದ್ದುಪಡಿ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಸೂದೆ ಯನ್ನು ವಿರೋಧಿಸಿ ಜೆಸಿಟಿಯು ಇಡೀ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಈ […]

ಕೂಕ್ರಬೆಟ್ಟು ಶಾಲೆಯಲ್ಲಿ‌ ಕ್ವಾರಂಟೈನ್ ನಿಯಮ ಉಲ್ಲಂಘನೆ

ಮುಂಬೈಯಿಂದ ಬಂದು ಮರೋಡಿ ಕೂಕ್ರಬೆಟ್ಟು ಶಾಲೆಯಲ್ಲಿ ಕ್ವಾರಂಟೈನಿನಲ್ಲಿರುವ ಒಂದಷ್ಟು ಮಂದಿ ಶಾಲಾ ಕೊಠಡಿಯಲ್ಲಿ ಕುಳಿತು ಕ್ವಾರಂಟೈನ್ ನಿಯಮ ಪಾಲಿಸುವ ಬದಲಾಗಿ, ಶ್ರಮದಾನದ ಹೆಸರಲ್ಲಿ ಶಾಲಾ ಆವರಣದಲ್ಲಿ ಸುತ್ತಾಡುತ್ತಾ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿ, ಸ್ಥಳೀಯರಲ್ಲಿ ಭೀತಿಯನ್ನು ಹುಟ್ಟಿಸುತ್ತಿದ್ದಾರೆ. ಮುಂಬೈಯವರ ಈ ವರ್ತನೆಯಿಂದ ಕೂಕ್ರಬೆಟ್ಟು ಶಾಲೆ ಕ್ವಾರಂಟೈನ್ ಕೇಂದ್ರದ ಮಾಹಿತಿ ಬಹಿರಂಗವಾಗಿದೆ.ಹೇಳಿಕೇಳಿ ಮುಂಬೈ ಹಾಗೂ ಹೊರ ರಾಜ್ಯಗಳಿಂದ ಬಂದವರಿಂದ ರಾಜ್ಯದಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ […]