ಖಾಸಗಿ ಬಸ್ ಗಳು ರಸ್ತೆಗಿಳಿಯಲ್ಲ-ನಷ್ಟಕ್ಕೆ ಯಾರು ಹೊಣೆ?
6ತಿಂಗಳ ರಸ್ತೆ ತೆರಿಗೆ ಮನ್ನಾ ಮಾಡಿ; ಅಥವಾ ಪ್ರತೀ ಬಸ್ಸಿಗೆ 1ಲಕ್ಷ ರೂಪಾಯಿ ಪರಿಹಾರ ನೀಡಲು ಒತ್ತಾಯ ಮೇ 19ರಿಂದ ಸರಕಾರಿ ಮತ್ತು ಖಾಸಗಿ ಬಸ್ಸುಗಳ ಓಡಾಟಕ್ಕೆ ರಾಜ್ಯ ಸರಕಾರ ಅವಕಾಶ ಕಲ್ಪಿಸಿದ್ದರೂ ಖಾಸಗಿ ಬಸ್ಸುಗಳು ಮೇ ತಿಂಗಳ ಅಂತ್ಯ ದವರೆಗೂ ರಸ್ತೆಗಿಳಿಯುವುದಿಲ್ಲಎಂದು ಖಾಸಗಿ ಬಸ್ಸು ಮಾಲಕರು ಖಚಿತ ಪಡಿಸಿದ್ದಾರೆ.ದ.ಕ. ಜಿಲ್ಲೆಯ ಮೂಡುಬಿದಿರೆ ಮತ್ತು ಮಂಗಳೂರು, ಅಂತೆಯೇ ಉಡುಪಿ ಜಿಲ್ಲೆಯ ಬಹುತೇಕ ಎಲ್ಲಾ ಭಾಗ ಮತ್ತು ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆ ಸಂಪೂರ್ಣ ಖಾಸಗಿ […]
ಸಂಪಾದಕೀಯ
ರಾಜ್ಯದ 6000ಕ್ಕೂ ಅಧಿಕ ಗ್ರಾಮ ಪಂಚಾಯತುಗಳ ಪ್ರಸಕ್ತ ಚುನಾಯಿತ ಆಡಳಿತ ಮಂಡಳಿಯ ಅಧಿಕಾರಾವಧಿ ಜೂನ್ ಅಂತ್ಯದ ವೇಳೆಗೆ ಮುಗಿಯಲಿದೆ. ಪಂಚಾಯತ್ ರಾಜ್ ಕಾಯಿದೆಯಂತೆ ಪಂಚಾಯತುಗಳ ಅಧಿಕಾರಾವಧಿಯ 6ತಿಂಗಳ ಮೊದಲು ಚುನಾವಣೆ ಘೋಷಣೆಯಾಗಿ, ನಿಗದಿತ ಅವಧಿಗೆ ಚುನಾವಣೆ ನಡೆಸಿ, ಹೊಸ ಆಡಳಿತ ಮಂಡಳಿ ರಚನೆಗೆ ಅವಕಾಶ ಕಲ್ಪಿಸಬೇಕು. ಆದರೆ ಇದೀಗ ಕೊರೋನಾ ಮಹಾಮಾರಿ ನಮ್ಮ ದೇಶಕ್ಕೆ ವಕ್ಕರಿಸಿರುವುದರಿಂದ, ಈ ಹೆಮ್ಮಾರಿಯಿಂದ ಬಚಾವಾಗಲು ಬದುಕು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲು ಕೇಂದ್ರ ಸರಕಾರ ಸುಮಾರು 60ದಿನಗಳಷ್ಟು ಕಾಲ 4ಹಂತಗಳಲ್ಲಿ ಲಾಕ್ ಡೌನ್ […]
ಮಾಸ್ಕ್ ಧರಿಸಿದರೂ ಹಸಿವು ವೈಯಕ್ತಿಕ ಅಂತರ ಮರೆಸಿತು.
ಮೇ 17ರಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕರಾವಳಿ ಡ್ಯಾನ್ಸ್ ಯೂನಿಯನ್ನಿನ ಸದಸ್ಯರಿಗೆ ಲಾಕ್ ಡೌನ್ ಸಂದರ್ಭದ ‘ಶ್ರಮಿಕ ನೆರವು’ ಆಹಾರದ ಕಿಟ್ ವಿತರಿಸಿದರು.ಕೊರೋನಾ ಸೋಂಕು ಹರಡದಂತೆ ದೇಶದ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಸೂಚಿಸಿದ ಮಾರ್ಗಸೂಚಿಗಳಲ್ಲಿ ಮಾಸ್ಕ್ ಧಾರಣೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಶಿಸ್ತಿನಿಂದ ಪಾಲಿಸಿದರೂ, ವೈಯಕ್ತಿಕ ಅಂತರ ಪಾಲಿಸಲು ಮರೆತಂತಿತ್ತು. ಪ್ರಾಯಶಃ ಲಾಕ್ ಡೌನ್ ಸಂದರ್ಭದ ಹಸಿವು ಆಹಾರದ ಕಿಟ್ ಸ್ವೀಕರಿಸುವಾಗ ಆತುರದಲ್ಲಿ ವೈಯಕ್ತಿಕ ಅಂತರವನ್ನು ಮರೆಸಿದಂತಿತ್ತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಿ.ಡಿ ವಿತರಣೆ
ಕಲ್ಮಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಕಲ್ಮಂಜದ ಶ್ರೀ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ ಇದರ ಅಭಿವೃದ್ಧಿ ಕಾಮಗಾರಿಗೆ ಮಂಜೂರಾದ ₹50000/(ಐವತ್ತು ಸಾವಿರದ) ಡಿ.ಡಿಯನ್ನು ಇಂದು ಹಸ್ತಾಂತರಿಸಲಾಯಿತು..ಈ ಸಂದರ್ಭದಲ್ಲಿ ಯೋಜನೆಯ ಪ್ರತಿನಿಧಿಗಳಾದ ಪ್ರಶಾಂತ್, ಸುಧಾ ಹಾಳೆದಡಿ, ಸುಂದರ ಗೌಡ ಬಜಿಲ, ಸ್ವಸ್ತಿಕ್ ಕನ್ಯಾಡಿ ಉಪಸ್ಥಿತರಿದ್ದರು. ದೇವಸ್ಥಾನದ ಪರವಾಗಿ ಆಡಳಿತ ಮಂಡಳಿಯ ಅಧ್ಯಕ್ಷ ತುಕಾರಾಮ್ ಸಾಲ್ಯಾನ್ ಆರ್ಲ, ದೇವಸ್ಥಾನದ ಅರ್ಚಕರು ಡಿ.ಡಿ ಸ್ವೀಕರಿಸಿದರು.
ಕಾರ್ಮಿಕ ವಿರೋಧಿಯಾಗಿ ಕಾರ್ಮಿಕ ಕಾಯಿದೆ ತಿದ್ದುಪಡಿಗೆ ವಿರೋಧ-ಪ್ರತಿಭಟನೆ
ಪ್ರತಿಭಟನೆಯಲ್ಲೂ ಮಾಸ್ಕ್ ಧರಿಸಿ-ವೈಯಕ್ತಿಕ ಅಂತರದ ಜಾಗೃತಿ ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತರುವ ನೆಪದಲ್ಲಿ ಕಾರ್ಮಿಕರ ವಿರೋದವಾಗಿ ತಿದ್ದುಪಡಿ ಮಾಡಲು ಸುಗ್ರಿವಾಜ್ಞೆ ಮಾಡ ಹೊರಟ ರಾಜ್ಯದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ದ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ನಾಯಕತ್ವದಲ್ಲಿ ಮೇ 16ರಂದು ಪ್ರತಿಭಟನೆ ನಡೆಯಿತು. ಕೆಲಸದ ಅವಧಿ ಹೆಚ್ಚಳ, ಸವಲತ್ತುಗಳ ಕಡಿತ ಇತ್ಯಾದಿ ತಿದ್ದುಪಡಿಯನ್ನ ವಿರೋದಿಸಿದ್ದಲ್ಲದೇ; ಎಲ್ಲಾ ವಿಭಾಗದ ದುಡಿಯುವ ಜನರಿಗೆ ಪ್ಯಾಕೇಜು ನೀಡಲು ಹಾಗೂ ಬಡ ಮಹಿಳೆಯರ ಸಾಲ ಮನ್ನಾ […]
ಜವುಳಿ ವರ್ತಕರ ಸಂಘದಿಂದ ರಕ್ತದಾನ ಶಿಬಿರ
ಮಾಸ್ಕ್ ಧರಿಸಿ- ವೈಯಕ್ತಿಕ ಅಂತರ ಕಾಪಾಡಿದ ಮಾದರಿ ಕಾರ್ಯಕ್ರಮ ಮೂಡುಬಿದಿರೆಯ ಜವುಳಿ ವರ್ತಕರ ಸಂಘದ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಮತ್ತು ಸಮಾಜಮಂದಿರ ಸಭಾ ಮೂಡುಬಿದಿರೆ ಇವರ ಸಹಯೋಗದೊಂದಿಗೆ ರೆಡ್ ಕ್ರಾಸ್ ಸೊಸೈಟಿಯವರ ಬೇಡಿಕೆಯ ಮೇರೆಗೆ ಇಲ್ಲಿನ ಸಮಾಜ ಮಂದಿರ ಸಭಾದ ಸ್ವರ್ಣಮಂದಿರದಲ್ಲಿ ತುರ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಬಳಸಿ ಅತ್ಯಂತ ವ್ಯವಸ್ಥಿತವಾಗಿ ಈ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಕೊರೋನಾ ಜಾಗೃತಿಯನ್ನು ಮೂಡಿಸಿದ್ದು ಮಾದರಿಯಾಗಿತ್ತು.ಇಲ್ಲಿನ ಜವುಳಿ […]
ಮೂಡುಬಿದಿರೆಯ ಹೃದಯ ಭಾಗದಲ್ಲಿ ಕ್ವಾರಂಟೈನ್

ಸುರಕ್ಷತೆಯ ಬಗ್ಗೆ ಸ್ಥಳೀಯರಲ್ಲಿ ಅನುಮಾನ; ಸಹಜ ಆತಂಕ ಮೂಡುಬಿದಿರೆ: ಈ ವಾರ ಮುಂಬೈಯಿಂದ ಮತ್ತು ಮಹಾರಾಷ್ಟ್ರದ ಇತರ ಭಾಗಗಳಿಂದ ಹುಟ್ಟೂರಿಗೆ ಮರಳಿರುವ ಮೂಲತಃ ಮೂಡುಬಿದಿರೆ ಪರಿಸರದವರಾಗಿರುವ ಕೆಲವರಿಗೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಕ್ವಾರಂಟೈನ್ ವ್ಯವಸ್ಥೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿಲ್ಲ; ಜೊತೆಗೆ ಸರಯಾದ ಭದ್ರತೆಯನ್ನೂ ನೀಡಲಾಗಿಲ್ಲ ಎಂಬ ಅಸಮಾದಾನ ಸ್ಥಳೀಯರಿಂದ ವ್ಯಕ್ತವಾಗುತ್ತಿದ್ದು, ಪರಿಸರದ ನಿವಾಸಿಗಳು ಆತಂಕಗೊಳ್ಳುವಂತೆ ಮಾಡಿದೆ.ಮೂಡುಬಿದಿರೆಯ ತೀರಾ ಹೃದಯ ಭಾಗದಲ್ಲಿರುವ ಹೋಟೆಲ್ ಕಟ್ಟಡ ಒಂದರಲ್ಲಿ ಸ್ವಯಂ ವೆಚ್ವ ಭರಿಸಬಲ್ಲ ಕುಟುಂಬಗಳಿಗೆ 15ದಿನಗಳ ಕ್ವಾರಂಟೈನ್ ಗೆ […]
ಧರ್ಮಸ್ಥಳ ಕಾರ್ ಮ್ಯೂಸಿಯಂನ ಛಾವಣಿ ರಿಪೇರಿ ಸಂದರ್ಭ ಅವಘಡ
ಆಯ ತಪ್ಪಿ ಬಿದ್ದ ಓರ್ವ ಕಾರ್ಮಿಕ ಸಾವು-ಇಬ್ಬರಿಗೆ ಗಾಯ ಮೂವರು ಕಾರ್ಮಿಕರು ಛಾವಣಿಯಿಂದ ಬಿದ್ದ ಪರಿಣಾಮ ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನಿಬ್ಬರು ಕಾರ್ಮಿಕರು ಗಾಯಾಳುಗಳಾಗಿ ಉಜಿರೆಯ ಎಸ್.ಡ್.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದ ಘಟನೆ ಮೇ 15ರಂದು ವರದಿಯಾಗಿದೆ.ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ಕಾರವಾರದ ಸಂಜೀವ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪವನ್ ಕುಮಾರ್ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ಧಾವಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು, ಮಹಜರು ನಡೆಸಿ […]
ಹೊಸಂಗಡಿಯಲ್ಲಿ ಗಾಳಿ-ಮಳೆಗೆ ಮನೆಗೆ ಹಾನಿ
ಎಂ.ಎಲ್.ಸಿ. ಹರೀಶ್ ಕುಮಾರ್ ಭೇಟಿ-ಪರಿಶೀಲನೆ-ಸಹಾಯಹಸ್ತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಹೊಸಂಗಡಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆ ಗಾಳಿಗೆ ಕೆಂಜಲ್ ಗುರಿ ಬಾಬು ಎಂಬವರ ಮನೆಗೆ ತೀವ್ರವಾದ ಹಾನಿಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಕೆ. ಹರೀಶ್ ಕುಮಾರ್ ಮೇ 15ರಂದು ಬಾಬುರವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರಲ್ಲದೇ ವೈಯಕ್ತಿಕವಾಗಿ ಆರ್ಥಿಕ ಸಹಾಯವನ್ನು ನೀಡಿದರು. ಮಾತ್ರವಲ್ಲದೇ, ಸರಕಾರದಿಂದ ಸಿಗಬಹುದಾದ ಪರಿಹಾರವನ್ನು ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಹೇಳಿದರು.ಈ ಸಂದರ್ಭ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ […]
ಬಿಗ್ ಬಿಗ್ ಬ್ರೇಕಿಂಗ್ ನ್ಯೂಸ್
ಬಂದಾರು ವ್ಯಾಪ್ತಿಯಲ್ಲಿ ಮಂಗಗಳ ಅಸಹಜ ಸಾವು ; ಮಂಗನ ಕಾಯಿಲೆ ಭೀತಿಯಲ್ಲಿ ಸ್ಥಳೀಯರು ಬೆಳ್ತಂಗಡಿ: ಕೋವಿಡ್ ಆತಂಕದ ನಡುವೆಯೇ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋತಿಗಳ ಅಸಹಜ ಸಾವು ನಡೆದಿರುವ ವಿಚಾರ ಮೇ 15ರಂದು ಬೆಳಕಿಗೆ ಬಂದಿದೆ. ಬಂದಾರು ಗ್ರಾಮದ ಕುಂಟಾಲಪಲ್ಕೆ- ಪದ್ಮುಂಜ ರಸ್ತೆಯಾಗಿ ಸಾಗುವ ಮಾರ್ಗ ಸಮೀಪ ಸುಮಾರು 50 ಕ್ಕೂ ಅಧಿಕ ಮಂಗಗಳ ಮೃತದೇಹ ಪತ್ತೆಯಾಗಿದೆ.ಮೇ 14ರ ರಾತ್ರಿ 8.30 ಕ್ಕೆ ಮಂಗಗಳು ಸತ್ತು ಬಿದ್ದಿರುವುದನ್ನು ಸ್ಥಳೀಯರು ಕಂಡಿದ್ದು ಸಂಬಂಧ ಪಟ್ಟ ಇಲಾಖೆಗೆ […]