ಧರ್ಮಸ್ಥಳಕ್ಕೆ ಭೇಟಿ ನೀಡಿದ ರಶ್ಯಾದ ಪ್ರವಾಸಿಗರು

ಬೆಳ್ತಂಗಡಿ: ರಶ್ಯಾದಿಂದ ಏಳು ಜನ ಪ್ರವಾಸಿಗರ ತಂಡ ಧರ್ಮಸ್ಥಳಕ್ಕೆ ಮಾರ್ಚ್ 29ರಂದು ಆಗಮಿಸಿದ್ದು; ದೇವರ ದರುಶನ ಮಾಡಿ, ಮಂಜೂಷಾ ವಿಂಟೇಜ್ ಕಾರುಗಳ ಸಂಗ್ರಹಾಲಯ, ಮಂಜೂಷಾ ವಸ್ತು ಸಂಗ್ರಹಾಲಯ, ಅನ್ನಪೂರ್ಣದಲ್ಲಿ ಅನ್ನದಾಸೋಹದ ವ್ಯವಸ್ಥೆ, ಬಾಹುಬಲಿ ಬೆಟ್ಟ, ಉದ್ಯಾನ ಮೊದಲಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಮಂಜೂಷಾ ವಿಂಟೇಜ್ ಕಾರುಗಳ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾದ ಹಳೆ ಕಾರುಗಳು, ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿ ಸಂರಕ್ಷಿಸಿ ಪ್ರದರ್ಶನಕ್ಕಿಟ್ಟ ಅಪೂರ್ವ ಕೆಮರಾಗಳು, ಹಳೆಯ ವಾಹನಗಳು, ನಾಣ್ಯಗಳು, ಜಾನಪದೀಯ ವಸ್ತುಗಳ ಸಂಗ್ರಹವನ್ನು ಕುತೂಹಲದಿಂದ ವೀಕ್ಷಿಸಿ […]

ಶ್ರೀ ರಾಮಕ್ಷೇತ್ರದಲ್ಲಿ ರಾಮ ನಾಮ ತಾರಕ ಮಂತ್ರ ಸಪ್ತಾಹ ಹಾಗೂ ಜಾತ್ರೋತ್ಸವಕ್ಕೆ ಚಾಲನೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದನಗರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್‌ನ ಶ್ರೀರಾಮ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ ಮಾರ್ಚ್ 30ರಿಂದ ಎಪ್ರಿಲ್ 6ರವರೆಗೆ ನಡೆಯಲಿರುವ 65ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಹಾಗೂ ವಾರ್ಷಿಕ ಪ್ರತಿಷ್ಠಾ ಜಾತ್ರೋತ್ಸವಕ್ಕೆ ಮಾರ್ಚ್ 30ರಂದು ವೈದಿಕವಿಧಿ ವಿಧಾನ ಗಳೊಂದಿಗೆ ಜಗದ್ಗುರುಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆ ಯೊಂದಿಗೆ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀ ರಾಮ ನಾಮ ತಾರಕ ಭಜನಾ […]

32ನೇ ವರ್ಷದ ವೇಣೂರು ಪೆರ್ಮುಡ ಕಂಬಳ ಉದ್ಘಾಟನೆ

ಬೆಳ್ತಂಗಡಿ: ಮಾರ್ಚ್ 30ರ ಯುಗಾದಿ ಸಡಗರಕ್ಕೆ ವಿಶೇಷ ಮೆರುಗನ್ನು ನೀಡಿದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಕೂಟವನ್ನು ಗಣೇಶ್ ನಾರಾಯಣ ಪಂಡಿತ ರವರು ಉದ್ಘಾಟಿಸಿ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ರಕ್ಷಿತ್ ಶಿವರಾಮ್ ಅಧ್ಯಕ್ಷರಾದ ನಿತೀಶ್ ಕೋಟ್ಯಾನ್ ಕಾರ್ಯಧ್ಯಕ್ಷರಾದ ಶೇಖರ್ ಕುಕ್ಕೆಡಿ, ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸತೀಶ್ ಕೆ. ಬಂಗೇರ, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ದಕ್ಷಿಣ ಕನ್ನಡ ಜಿಲ್ಲಾ […]

ಆತ್ಮಾನಂದ ಸರಸ್ವತಿ ಗುರುಮಂದಿರದ ಸ್ವಾಮೀಜಿ ಭೇಟಿ

ಬೆಳ್ತಂಗಡಿ: ರಾಜಸ್ಥಾನದ ಜಾಲೋರಿನ ಆತ್ಮಾನಂದ ಸರಸ್ವತಿ ಗುರುಮಂದಿರದ ಪೂಜ್ಯ ಶ್ರೀ ದಂಡಿಸ್ವಾಮಿ ದೇವಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು.

ನಾಳೆ ವಿದ್ಯುತ್ ನಿಲುಗಡೆ

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಪ್ರಯುಕ್ತ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿಯನ್ನು ನಡೆಸಲಿರುವುದರಿಂದ ದಿನಾಂಕ 20-03-2024ರಂದು ಬೆಳಿಗ್ಗೆ ಗಂಟೆ 10-00ರಿಂದ ಸಾಯಂಕಾಲ ಗಂಟೆ 5-00ರತನಕ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಳೆಕೋಟೆ, ಚರ್ಚ್‌ರೋಡ್, ಹುಣ್ಸೆಕಟ್ಟೆ, ರೆಂಕೆದಗುತ್ತು, ಜೈನಬಸದಿ, ಕಲ್ಲಗುಡ್ಡೆ ಹಾಗೂ ಮೇಲಂತಬೆಟ್ಟು ಪರಿಸರದಲ್ಲಿ ವಿದ್ಯುತ್ ಸರಬರಾಜು ನಿಲುಗಡೆ ಆಗಲಿದೆ ಎಂದು ಮೆಸ್ಕಾಂ ಬೆಳ್ತಂಗಡಿ ಉಪವಿಭಾಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮ

ಬೆಳ್ತಂಗಡಿ: ಪ್ರತಿ ಧರ್ಮದಲ್ಲಿ ಭಕ್ತಿಯ ಜೊತೆಗೆ ಮೂಢನಂಬಿಕೆಗಳು ಇವೆ. ಹಳೆ ವಸ್ತ್ರಗಳನ್ನು ನದಿಗಳ ನೀರಿಗೆ ಹಾಕಿದರೆ ಪಾಪ ಪರಿಹಾರವಾಗುವುದಿಲ್ಲ. ಇದು ನೀರು, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಬೆಳ್ತಂಗಡಿ ಠಾಣೆಯ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹೇಳಿದರು. ಅವರು ಮಾರ್ಚ್ 16ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿಯಲ್ಲಿ ‘ವಂದೇ ಮಾತರಂ ನನ್ನ ಸೇವೆ ದೇಶಕ್ಕಾಗಿ’ ಎಂಬ ಧ್ಯೇಯ ವಾಕ್ಯದಡಿ ನಡೆದ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉಜಿರೆ […]

ರಾಜರ್ಷಿಯಾಗಿ ಬದುಕಿದ ಪದ್ಮನಾಭ ಮಾಣಿಂಜ- ವಿಖ್ಯಾತಾನಂದ ಶ್ರೀಗಳು

ಬೆಳ್ತಂಗಡಿ: ವಿಶಾಲ ಮನೋ ಹೃದಯದ ಪರಿಪೂರ್ಣತೆ ಹೊಂದಿದ ವ್ಯಕ್ತಿ ಪದ್ಮನಾಭ ಮಾಣಿಂಜ. ತನ್ನ ಜೀವಿತದ ಅಮೂಲ್ಯ ಸಮಯವನ್ನು ಸಮಾಜಕ್ಕೆ ನೀಡಿದವರು. ಅವರು ಜೀವಿತದಲ್ಲಿ ರಾಜರ್ಷಿಯಾಗಿದ್ದು, ಅವರ ಜೀವಿತ ಶೈಲಿ ಸಮಾಜಕ್ಕೆ ಸದಾ ಆದರ್ಶವಾದುದು ಎಂದು ಬೆಂಗಳೂರು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಹೇಳಿದರು.ಅವರು ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ 14 ವರ್ಷ ಅಧ್ಯಕ್ಷರಾಗಿ, ಸಂಘದ 25 ಶಾಖೆಗಳ ರೂವಾರಿ ಈಚೆಗೆ ನಿಧನರಾದ ಎನ್. ಪದ್ಮನಾಭ ಮಾಣಿಂಜರಿಗೆ ಬೆಳ್ತಂಗಡಿ […]

ರಬ್ಬರ್ ಸೊಸೈಟಿ ಪದ್ಮನಾಭ ಎನ್. ಮಾಣಿಂಜರಿಗೆ ನುಡಿನಮನ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಉಜಿರೆ ಇದರ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಪದ್ಮನಾಭ ಎನ್. ಮಾಣಿಂಜ ಇತ್ತೀಚೆಗೆ ನಿಧನರಾಗಿದ್ದು; ಇವರು ಸಂಘಕ್ಕೆ ನೀಡಿದ ಮಾರ್ಗದರ್ಶಕ ಸೇವೆಯನ್ನು ಸ್ಮರಿಸಿ ನುಡಿನಮನ ಕಾರ್ಯಕ್ರಮ ಸಂಘದ ದಿ. ಜಿ.ಎನ್. ಭಿಡೆ ಸಭಾಭವನದಲ್ಲಿ ನಡೆಸಲಾಯಿತು.ಸಂಘದ ಅಧ್ಯಕ್ಷರಾದ ಶ್ರೀಧರ ಜಿ. ಭಿಡೆ ಯವರು ಮಾತನಾಡಿ; ಮಿತಭಾಷಿಯಾಗಿ, ಸರಕಾರಿ ಉನ್ನತ ಸೇವೆಯ ಅನುಭವವನ್ನು ಸಂಘಕ್ಕೆ ಅನೇಕ ಅವಧಿಗೆ ಉಪಾಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ನೀಡಿದ್ದರು. ಸಮಾಜದಲ್ಲಿ […]

ಇತಿಹಾಸ ಪ್ರಸಿದ್ಧ ಕಾಜೂರು ಉರೂಸ್ ಸಾರ್ವಜನಿಕ ಸಮಾವೇಶ

ಬೆಳ್ತಂಗಡಿ: ಕಾಜೂರು ಇಂದು ಪಾವಿತ್ರ್ಯತೆಯ ಜೊತೆಗೆ ಸೌಹಾರ್ದತೆ ಮತ್ತು ಮಾಹಿತಿಯ ಕ್ಷೇತ್ರವಾಗಿದೆ. ಉರೂಸ್ ಸಮಾರಂಭಕ್ಕೆ ಪ್ರತಿ ಚುನಾವಣೆಗೆ ಸ್ಪರ್ಧಿಸುವ ಮುನ್ನ ಬಂದು ಪ್ರಾರ್ಥಿಸಿ ತೆರಳುವ ಪರಂಪರೆಯನ್ನು ಅನುಸರಿಸಿಕೊಂಡು ಬರುತ್ತಿದ್ದೇನೆ. ಇಂತಹಾ ಕ್ಷೇತ್ರಕ್ಕೆ ಮುಂದಿನ 30 ವರ್ಷಕ್ಕೆ ಬೇಕಾದಂತೆ ಭವಿಷ್ಯದ ಜನಾಂಗಕ್ಕೆ ಮೂಲಸೌಕರ್ಯದ ವಾತಾವರಣ ನಿರ್ಮಿಸಿ ಮಾಸ್ಟರ್ ಪ್ಲಾನ್ ರಚಿಸುವ ಮೂಲಕ ಅನುದಾನ ಒದಗಿಸುವಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳೋಣ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಹೇಳಿದರು.ಇತಿಹಾಸ ಪ್ರಸಿದ್ಧ ಸರ್ವಧರ್ಮೀಯ ಸಮನ್ವಯ ಕೇಂದ್ರ ಕಾಜೂರಿನಲ್ಲಿ ಫೆಬ್ರವರಿ 2ರಂದು […]

ಬೆನಕ ಆಸ್ಪತ್ರೆಯ ಸೇವೆ ಅನುಕರಣೀಯ ಯು.ಟಿ.ಖಾದರ್

ಬೆಳ್ತಂಗಡಿ: ಇಬ್ಬರು ವೈದ್ಯರಿಂದ ಆರಂಭವಾದ ಆಸ್ಪತ್ರೆ ಇಂದು ವಿವಿಧ ಆರೋಗ್ಯ ಕ್ಷೇತ್ರಗಳಲ್ಲಿ ಪರಿಣತಿ ಪಡೆದ 40 ಕ್ಕಿಂತಲೂ ಅಧಿಕ ತಜ್ಞ ವೈದ್ಯರ ಸೇವೆಯನ್ನು ಬೆನಕ ಉಜಿರೆಯಂತಹ ಗ್ರಾಮೀಣ ಪರಿಸರದಲ್ಲಿ ಒದಗಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆಯೊಂದಿಗೆ ಆರಂಭವಾದ ಉಜಿರೆಯ ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸಮಾಜದ ಅಗತ್ಯತೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವುದು ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ. ಬೆನಕ ಆಸ್ಪತ್ರೆ ಈ ಪ್ರದೇಶದ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ […]