ಅಕ್ರಮ ಕಸ ಎಸೆತ-ದಂಡ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಲಾಯ್ಲ ಗ್ರಾಮದ ಲಾಯ್ಲ ಟಿ. ಬಿ. ಕ್ರಾಸ್ ಎಂಬಲ್ಲಿ ಅಕ್ರಮವಾಗಿ ಕಸ ಎಸೆದ ಬಗ್ಗೆ ಮಾಹಿತಿ ಪಡೆದು, ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ ಪಂಚಾಯತ್ ಲೆಕ್ಕ ಸಹಾಯಕರಾದ ಸುಪ್ರಿತಾ ಶೆಟ್ಟಿ ಗ್ರಾಮ ಪಂಚಾಯತ್ ಸಿಬ್ಬಂದಿಗಳೊಂದಿಗೆ ಹಾಗೂ ಸ್ವಚ್ಛತಾ ಸಿಬ್ಬಂದಿವರ್ಗದವರೊಂದಿಗೆ ದಿಢೀರ್ ಸ್ಥಳಕ್ಕೆ ಬೇಟಿ ನೀಡಿ; ಅಕ್ರಮವಾಗಿ ಕಸ ಎಸೆದವರ ಮಾಹಿತಿ ಪಡೆದುಕೊಂಡು; ಕಸ ರಸ್ತೆ ಬದಿ ಎಸಗಿದವರಿಗೆ ತಕ್ಷಣ ದೂರವಾಣಿ ಕರೆಯ ಮೂಲಕ ಸ್ಥಳಕ್ಕೆ ಬರಲು ಹೇಳಿ ಸೂಕ್ತ […]

ಅಕ್ರಮ ಕಸ ಎಸೆತ-ದಂಡ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಲಾಯ್ಲ ಗ್ರಾಮದ ಲಾಯ್ಲ ಟಿ. ಬಿ. ಕ್ರಾಸ್ ಎಂಬಲ್ಲಿ ಅಕ್ರಮವಾಗಿ ಕಸ ಎಸೆದ ಬಗ್ಗೆ ಮಾಹಿತಿ ಪಡೆದು, ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ ಪಂಚಾಯತ್ ಲೆಕ್ಕ ಸಹಾಯಕರಾದ ಸುಪ್ರಿತಾ ಶೆಟ್ಟಿ ಗ್ರಾಮ ಪಂಚಾಯತ್ ಸಿಬ್ಬಂದಿಗಳೊಂದಿಗೆ ಹಾಗೂ ಸ್ವಚ್ಛತಾ ಸಿಬ್ಬಂದಿವರ್ಗದವರೊಂದಿಗೆ ದಿಢೀರ್ ಸ್ಥಳಕ್ಕೆ ಬೇಟಿ ನೀಡಿ; ಅಕ್ರಮವಾಗಿ ಕಸ ಎಸೆದವರ ಮಾಹಿತಿ ಪಡೆದುಕೊಂಡು; ಕಸ ರಸ್ತೆ ಬದಿ ಎಸಗಿದವರಿಗೆ ತಕ್ಷಣ ದೂರವಾಣಿ ಕರೆಯ ಮೂಲಕ ಸ್ಥಳಕ್ಕೆ ಬರಲು ಹೇಳಿ ಸೂಕ್ತ […]

ನಾವೂರಿನಲ್ಲಿ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ನಾವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಎಪ್ರಿಲ್ 5ನೇ ತಾರೀಕಿನಂದು ನಾವೂರು ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ (ರಿ) ಇದರ ನೇತೃತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಸರ್ವೋದಯ ಟ್ರಸ್ಟ್ (ರಿ) ನಾವೂರು ಇವುಗಳ ಸಹಭಾಗಿತ್ವದಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಅವಕಾಶಗಳ ಕುರಿತು ಸಮಗ್ರ ಮಾಹಿತಿಯ ‘ಶೈಕ್ಷಣಿಕ ಮಾಹಿತಿ ಕಾರ್ಯಾಗಾರ’ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ. ಡಾ. ಪ್ರಕಾಶ್ ಪ್ರಭು ನೆರವೇರಿಸಿ ‘ಗ್ರಾಮೀಣ ಭಾಗದ […]

ಬಿಜೆಪಿಯ ಸ್ಥಾಪನಾ ದಿನ

ಬೆಳ್ತಂಗಡಿ: ಬಿಜೆಪಿ ಸ್ಥಾಪನಾ ದಿನವನ್ನು ಏಪ್ರಿಲ್ 06ರಂದು ಬೆಳ್ತಂಗಡಿಯ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ದಿನದ ಮಹತ್ವ ವನ್ನು ಮನ್ ಕೀ ಬಾತ್ ಜಿಲ್ಲಾ ಸಂಚಾಲಕರಾದ ಸೀತಾರಾಮ್ ಬಿ.ಎಸ್. ತಿಳಿಸಿದರು. ಮಂಡಲ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಧರ್ಮಸ್ಥಳ ಶುಭಹಾರೈಕೆ ಮಾಡಿದರು. ವಿಧಾನ ಪರಿಷತ್ ಶಾಸಕರಾಗಿರುವ ಪ್ರತಾಪ್‌ಸಿಂಹ ನಾಯಕ್ ಉಪಸ್ಥಿತರಿದ್ದರು, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಧನ್ಯವಾದವಿತ್ತರು. ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. r

ಎಪ್ರಿಲ್ 3 – 6: ವಿದ್ವತ್ ಕಾಲೇಜಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಪ್ರತಿಭಾನ್ವೇಷಣೆ ಪರೀಕ್ಷೆ–2026’

ಬೆಳ್ತಂಗಡಿ: ಎಸ್‌ಎಸ್‌ಎಲ್‌‌ಸಿ ಬಳಿಕ ಮುಂದೇನು ಎಂದು ವಿದ್ಯಾರ್ಥಿಗಳಲ್ಲಿ ಕಾಡುವ ಪ್ರಶ್ನೆಗೆ ಉತ್ತರ ಒದಗಿಸುವ ಸಲುವಾಗಿ; ಪ್ರಸ್ತುತ 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಗುರುವಾಯನಕೆರೆ ವಿದ್ವತ್ ಪದವಿಪೂರ್ವ ಕಾಲೇಜಿನಲ್ಲಿ ‘ಪ್ರತಿಭಾನ್ವೇಷಣೆ ಪರೀಕ್ಷೆ (Talent Test) ಹಾಗೂ ವೃತ್ತಿ ಮಾರ್ಗದರ್ಶನ ಶಿಬಿರ’ವನ್ನು ಏಪ್ರಿಲ್ 3 ರಿಂದ 6 ವರೆಗೆ ಹಮ್ಮಿಕೊಳ್ಳಲಾಗಿದೆ.ವಿದ್ಯಾರ್ಥಿಗಳು ತಮ್ಮ ಅನುಕೂಲಕರ ದಿನಗಳಲ್ಲಿ ಬಂದು ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಸಲುವಾಗಿ ನಾಲ್ಕು ದಿನಗಳ ಕಾಲ ಪರೀಕ್ಷೆಯನ್ನು ಆಯೋಜಿಸಲಾಗಿದೆ.ಪರೀಕ್ಷೆಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಪ್ರತಿದಿನ ಬೆಳಗ್ಗೆ 10.30 […]

ರೈತರ ಕೃಷಿ ಭೂಮಿಯ ಹಕ್ಕು ರೈತರದ್ದೇ-ಬಿ.ಎಂ. ಭಟ್

ಬೆಳ್ತಂಗಡಿ: ರೈತರು ವಾಸ್ತವ್ಯವಿದ್ದು, ಕೃಷಿ ಮಾಡಿದ ಭೂಮಿ ಕಂದಾಯ ಭೂಮಿಯಾಗಲಿ, ಅರಣ್ಯ ಭೂಮಿಯಾಗಲಿ ಅದು ರೈತನ ಭೂಮಿ ಎಂದು ಪರಿಗಣಿಸಿ ಹಕ್ಕುಪತ್ರ ನೀಡಬೇಕೇ ವಿನಃ ಅದನ್ನು ಆ ಎರಡು ಇಲಾಖೆಗಳು ಅಳತೆ ಮಾಡಿ ತಮ್ಮದೆಂದು ಸಾಬೀತು ಮಾಡುವುದು ಮೂರ್ಖತನದ ತೀರ್ಮಾನ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ. ಭಟ್ ಟೀಕಿಸಿದರುಅವರು ಮಾರ್ಚ್ 30ರಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಆವರಣದ ಒಳಗೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡುತ್ತಿದ್ದರು. ಅರಣ್ಯವಾಸಿ ರೈತರಿಗೆ ಹಕ್ಕುಪತ್ರ […]

ಶ್ರೀ ರಾಮ ಕ್ಷೇತ್ರದಲ್ಲಿ ಮಹಾಬ್ರಹ್ಮ ರಥೋತ್ಸವ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್‌ನಲ್ಲಿ ಜಗದ್ಗುರು ಶ್ರೀ ಅತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ 66 ನೇ ವರ್ಷದ ಶ್ರೀ ರಾಮನಾಮ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವದ ಅಂಗವಾಗಿ ರಾಮ ನವಮಿಯ ಮಾರ್ಚ್ 27ರಂದು ಬೆಳಿಗ್ಗೆ ಶ್ರೀ ರಾಮತಾರಕ ಮಂತ್ರ ಯಜ್ಞ ಮಂಗಳಂ, ವಾಗ್ದೇವಿ ಯಜ್ಞ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ ನಡೆದು; […]

ಶ್ರೀ ರಾಮ ಕ್ಷೇತ್ರದ ಜಾತ್ರಾ ಮಹೋತ್ಸವ ಹನುಮಾನ್ ರಥೋತ್ಸವ, ಕಟ್ಟೆ ಪೂಜೆ, ಕೆರೆ ದೀಪೋತ್ಸವ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್‌ನಲ್ಲಿ ಜಗದ್ಗುರು ಶ್ರೀ ಅತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ 66 ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವದ ಮಾರ್ಚ್ 26 ರಂದು ಬೆಳಿಗ್ಗೆ ದತ್ತ ಯಾಗ, ಮಧ್ಯಾಹ್ನ ಆಂಜನೇಯ ದೇವರಿಗೆ ಮತ್ತು ದತ್ತಾತ್ರೇಯ ಗುರುಗಳಿಗೆ ವಿಶೇಷ ಮಹಾ ಪೂಜೆ ನಡೆಯಿತು. ರಾತ್ರಿ […]

ತಾಲೂಕಿಗೆ ಎರಡು ಮುಖ್ಯಮಂತ್ರಿಗಳ ಚಿನ್ನದ ಪದಕ

ಬೆಳ್ತಂಗಡಿ: 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಕಚೇರಿಯ ಹೆಡ್ ಕಾನ್ಟೇಬಲ್ ವಿಜಯ ರೈ ಆಯ್ಕೆಯಾಗಿದ್ದಾರೆ.ವಿಜಯ ರೈ ಹಲವಾರು ಅಪರಾಧ ಪ್ರಕರಣಗಳನ್ನೂ ಭೇದಿಸುವಲ್ಲಿ ಹಿರಿಯ ಅಧಿಕಾರಿಗಳಿಗೆ ಸಹಾಯಕಾರಿಯಾಗಿ ಕರ್ತವ್ಯ ಮಾಡಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಾಲ್ಸೂರು ಸಮೀಪದ ಬೆಳ್ಳಿಪ್ಪಾಡಿ ಸೀತಾರಾಮ ರೈ ಅವರ ಪುತ್ರ, ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಉಪನ್ಯಾಸಕಿಯಾಗಿರುವ ಪತ್ನಿ ಅನುಷಾ ಹಾಗೂ ಪುತ್ರ ಅಯ್ಯುಕ್ತ ಜೊತೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ […]

ಪ.ಜಾತಿಗೆ ಕಾಲೋನಿ ರಸ್ತೆ ಅಭಿವೃದ್ಧಿಗೆ 2 ಕೋಟಿ ಅನುದಾನ ಮಂಜೂರು

ಬೆಳ್ತಂಗಡಿ: 2025-26 ನೇ ಸಾಲಿನ ಕಾಲೋನಿ ಅಭಿವೃದ್ಧಿ/ಪ್ರಗತಿ ಕಾಲೋನಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿಗೆ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿಪಡಿಸಲು ಈ ಕೆಳಗಿನ ಕಾಮಗಾರಿಗಳಿಗೆ ರೂಪಾಯಿ 200 ಲಕ್ಷಗಳ ಅನುದಾನವನ್ನು ಮಂಜೂರು ಗೊಳಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮುಖಾಂತರ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಶೇಖರ್ ಕುಕ್ಕೆಡಿ ಮತ್ತು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್‌ರವರು ಸರಕಾರಕ್ಕೆ ಮನವಿಯನ್ನು […]