ಲೋಕನಾಡು ಶ್ರೀ ಲೋಕನಾಥೇಶ್ವರ ದೇಗುಲದಲ್ಲಿ ವಾರ್ಷಿಕ ಜಾತ್ರೆ

ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ತುಳುನಾಡಿನ ಸತ್ಯನಾಪುರದ ಸತ್ಯೋದ ಸಿರಿಯ ಮೂಲ ಆಲಡೆ ಕ್ಷೇತ್ರ ಕಾರಣಿಕದ ಮಣ್ಣು‌ ನಿಡಿಗಲ್‌ನ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಮಾರ್ಚ್ 31ರಿಂದ ಏಪ್ರಿಲ್ 04ರವರೆಗೆ ವಾರ್ಷಿಕ ಸಿರಿ ಜಾತ್ರೆ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ  ಕೆ.ಎಂ. ನಾಗೇಶ್ ಕುಮಾರ್ ಗೌಡ ಮಾಹಿತಿ ನೀಡಿದರು.ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಾರ್ಚ್ 31ನೇ ಮಂಗಳವಾರ ಬೆಳಿಗ್ಗೆ 06 ಗಂಟೆಯಿಂದ ದೇವತಾ ಕಾರ್ಯಗಳು, ರಾತ್ರಿ ದೈವಗಳ ನೇಮೋತ್ಸವ, ಏಪ್ರಿಲ್ 01ನೇ ಬುಧವಾರ […]

ಅಮೇರಿಕಾ-ಇರಾನ್ ಯುದ್ಧ ಖಂಡಿಸಿ ಪ್ರತಿಭಟನೆ

ಬೆಳ್ತಂಗಡಿ: ನಮ್ಮ ದೇಶದ ವಿದೇಶಾಂಗ ನೀತಿಯ ನಿಯಮವಾದ ಆಲಿಪ್ತ ನೀತಿಯ ವಿರುದ್ದ ನಡೆಯುವುದು ಕೇಂದ್ರ ಸರಕಾರ ಸಂವಿಧಾನಕ್ಕೆ ಬಗೆಯುವ ಅಪಚಾರ ಆಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಯಾಧವ ಶೆಟ್ಟಿ ಅವರು ಹೇಳಿದರು.ಅವರು ಮಾರ್ಚ್ 23ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಐಟಿಯು , ಎಐಕೆಎಸ್, ಡಿವೈಎಪ್‌‌ಐ, ಜೆಎಂಎಸ್, ಡಿಎಚ್‌ಎಸ್ ಆದಿವಾಸಿ ಮೊದಲಾದ ಸಂಘಟನೆಗಳು ಅಮೇರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುವ ಯುದ್ದ ಖಂಡಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿ ಮಾತಾಡುತ್ತಿದ್ದರು. ಇಡೀ […]

ಯೋಧರು ನಿವೃತ್ತರಾದರೂ ದೇಶದ ಆಸ್ತಿ- ಡಾ| ಗೋಪಾಲಕೃಷ್ಣ ಕೆ.

ಬೆಳ್ತಂಗಡಿ: ಇತ್ತೀಚಿಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಉಜಿರೆಯ ನಿವೃತ್ತ ಯೋಧರಾದ ಡಾ. ಗೋಪಾಲಕೃಷ್ಣ ಕಾಂಚೋಡು ಅವರಿಗೆ ‘ನಿವೃತ್ತ ಸಾಧಕ ಯೋಧ’ ಪ್ರಶಸ್ತಿಯನ್ನು ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿಯವರು ಪ್ರದಾನ ಮಾಡಿದರು. ಈ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಮೊದಲಿಗರು ಡಾ. ಗೋಪಾಲಕೃಷ್ಣ ಕಾಂಚೋಡು. ಆ ಪ್ರಯುಕ್ತ ಅವರನ್ನು ಉಜಿರೆಯ ಬೆನಕ ಹೆಲ್ತ್ ಸೆಂಟರ್ ವತಿಯಿಂದ ದಿನಾಂಕ ಮಾರ್ಚ್ 23ರಂದು ಆಸ್ಪತ್ರೆಯ ಆವರಣದಲ್ಲಿ ವೈದ್ರಕೀಯ ನಿರ್ದೇಶಕರಾದ ಡಾ| ಗೋಪಾಲಕೃಷ್ಣ ದಂಪತಿಗಳು ಶಾಲು ಹೊದಿಸಿ, ಫಲಪುಷ್ಪ ಮತ್ತು ನೆನಪಿನ […]

ಚಾರ್ಮಾಡಿ ಘಾಟ್ ನಲ್ಲಿ ಟಿಟಿ ವಾಹನ ಪಲ್ಟಿ

ಬೆಳ್ತಂಗಡಿ: ಬ್ರೇಕ್ ಫೈಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ ಪಲ್ಟಿಯಾಗಿ ಒಂಬತ್ತು ಮಂದಿ ಗಂಭೀರ ಗಾಯಗೊಂಡು, ಓರ್ವ ವೃದ್ಧ ಸಾವನ್ನಪ್ಪಿದ್ದ ಘಟನೆ ವರದಿಯಾಗಿದೆ.ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ನ ಒಂಬತ್ತನೇ ತಿರುವಿನಲ್ಲಿ ಮಾರ್ಚ್ 21ರಂದು ಬ್ರೇಕ್ ಫೈಲ್ ಆಗಿ ಟಿಟಿ ವಾಹನ ಪಲ್ಟಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮೇಲನಹಳ್ಳಿಯಿಂದ 10 ಮಂದಿ ಸೇರಿದಂತೆ ಮೂವರು ಮಕ್ಕಳು ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು.ಟಿಟಿ ವಾಹನಲ್ಲಿ ಒಂದೇ ಕುಟುಂಬದ 13 ಮಂದಿಯಲ್ಲಿ 9 ಮಂದಿಗೆ ಗಂಭೀರ ಗಾಯವಾಗಿದ್ದು. ಮಲೇನಹಳ್ಳಿ […]

ಮಹಿಳಾ ವೃಂದದಲ್ಲಿ ಮಹಿಳಾ ದಿನಾಚರಣೆ

ಬೆಳ್ತಂಗಡಿ: ಜೀವನದ ಬಂಡಿ ಸಾಗುವಾಗ ಮಹಿಳೆ ಬಂಡಿಯ ಭಾರವನ್ನು ಹೊರುವ ಚಕ್ರವಾಗಿ ಕಾರ್ಯ ನಿರ್ವಹಿಸುತ್ತಾಳೆ. ಆದ್ದರಿಂದ ತನ್ನ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅಳದಂಗಡಿಯ ವೈದ್ಯೆ ಡಾ| ಸುಷ್ಮಾ ಡೋಂಗ್ರೆ ಅವರು ಹೇಳಿದರು.ಅವರು ಮಾರ್ಚ್ 15ರಂದು ಬೆಳ್ತಂಗಡಿಯ ಮಹಿಳಾ ವೃಂದದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಏನಾದರೂ ಆರೋಗ್ಯದಲ್ಲಿ ಸಮಸ್ಯೆ ಆದರೆ ಗೂಗಲ್ ನೋಡಿ ನಮಗೇನೋ ಆಗಿದೆ ಎಂದು ಗಾಬರಿ ಆಗಬೇಡಿ. ವೈದ್ಯರನ್ನು ಭೇಟಿಯಾಗಿ. 10-12 ವರ್ಷದ […]

ತಾತ್ಕಾಲಿಕ ಭೋಜನಾ ಶಾಲೆ ನಿರ್ಮಾಣಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಾತ್ಕಾಲಿಕ ಭೋಜನಾ ಶಾಲೆ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಮಾರ್ಚ್‌ 19ರ ಚಾಂದ್ರಮಾನ ಯುಗಾದಿಯಂದು ನೆರವೇರಿಸಲಾಯಿತು.ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನೆರವೇರಿತು. ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಜೀರ್ಣೋದ್ಧಾರ ಸಮಿತಿಯ ಆನಂದ ಶೆಟ್ಟಿ ಅಡ್ಯಾರ್, ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬ್ರೈಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶರತ್ ಗೋರೆ, ನಿವೃತ್ತ ಉಪನ್ಯಾಸಕ ಕೆ. ಶಿವರಾಮ ಹೆಗ್ಡೆ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ […]

ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಅರಸಮಜಲು ಎಂಬಲ್ಲಿ ಬಟ್ಟೆ ಒಗೆಯಲು ತೆರಳಿದ ಮನೆಯವರೊಂದಿಗೆ ನೇತ್ರಾವಾತಿ ನದಿ ತಟಕ್ಕೆ ಹೋದ ಬಾಲಕ ಮನೆಯವರ ಕಣ್ತಪ್ಪಿಸಿ, ಅನತಿ ದೂರದಲ್ಲಿ ನೀರಲ್ಲಿ ಇಳಿದು ಹುಡುಗಾಟ ಮಾಡಲು ಹೋಗಿ, ಆಯ ತಪ್ಪಿ ನದಿಗೆ ಬಿದ್ದು, ಪ್ರಾಣಕ್ಕೇ ಸಂಚಕಾರ ತಂದುಕೊಂಡ ಘಟನೆ ಮಾರ್ಚ್ 17ರ ಮಧ್ಯಾಹ್ನ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದ ದೇವಿಗುಡಿ ಶಾರದ ನಗರ ನಿವಾಸಿ ನಿಶಾಂತ್ (16) ಎಂದು ಗುರುತಿಸಲಾಗಿದೆ. ಸ್ಥಳೀಯ ಮುಂಡಾಜೆ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪರೀಕ್ಷೆ […]

ಪೆರ್ಮುಡ ಕಂಬಳ – 130ಜೋಡಿ ಕೋಣಗಳು ಕನ್ಫರ್ಮ್

ಬೆಳ್ತಂಗಡಿ: ಬಿರು ಬಿಸಿಲಿನ ಬೇಗೆಯಲ್ಲಿ ತಂಪಾದ ಪರಿಸರದಲ್ಲಿ ಮಾರ್ಚ್ 21ರ ಶನಿವಾರ ನಡೆಯಲಿರುವ 33ನೇ ವರ್ಷದ ಐತಿಹಾಸಿಕ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಭಾಗವಹಿಸಲು ಈಗಾಗಲೇ 130 ಜೊತೆ ಕೋಣಗಳು ನೋಂದಾವಣೆಯಾಗಿದ್ದು; ಕೋಣಗಳ ವಿಶ್ರಾಂತಿಗೆ ಮಾಲೀಕರು ಜಾಗ ಕಾಯ್ದಿರಿಸಿಕೊಂಡಿದ್ದಾರೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷರು ಹಾಗೂ ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಹೇಳಿದರು.ಅವರು ಮಾರ್ಚ್ 18ರಂದು ಬೆಳ್ತಂಗಡಿಯ ಬ್ಲಾಕ್ ಕಾಂಗ್ರೆಸ್ ಸಮಿತಿ ಕಛೇರಿಯ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವೇಣೂರು ಪೆರ್ಮುಡ ಕಂಬಳದ ಬಗ್ಗೆ […]

ಬೆಳ್ತಂಗಡಿ ಶ್ರೀರಾಮ ಸೊಸೈಟಿಗೆ ಸಿಐಡಿ ದಾಳಿ

ಬೆಳ್ತಂಗಡಿ: ನಿರಂತರ ಅವ್ಯವಹಾರ ನಡೆಸಿ, ನೂರಾರು ಮಂದಿಗೆ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದ ಬೆಳ್ತಂಗಡಿಯ ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಸಿಐಡಿ ದಾಳಿ ನಡೆಸಿದ್ದು; ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್‌ರನ್ನು ವಶಕ್ಕೆ ಪಡೆದು, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.ಸಿಐಡಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಪರಿಸರದಲ್ಲಿರುವ ಸೊಸೈಟಿಯ ನಿರ್ದೇಶಕರುಗಳು ಎದ್ದೆನೋ…ಬಿದ್ದೆನೋ ಎಂದು ಕಾಲಿಗೆ ಬುದ್ದಿ ಹೇಳಿ ಅವರಿಂದಾಗುವಷ್ಟು ವೇಗವಾಗಿ ಓಡಿ ಹೋಗಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಆದೇಶ

ಬೆಳ್ತಂಗಡಿ: ರೌಡಿಶೀಟರ್ ಅಗಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಮೂರನೇ ಬಾರಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ. ರಾಜ್ಯ ಹೈಕೋರ್ಟ್ ಈ ಹಿಂದೆ ಎರಡೆರಡು ಬಾರಿ ತಾಂತ್ರಿಕ ಕಾರಣಗಳನ್ನು ನೀಡಿ ಪುತ್ತೂರು ಸಹಾಯಕ ಕಮಿಷನರ್ ಹೊರಡಿಸಿದ ಗಡೀಪಾರು ಆಜ್ಞೆಗೆ ತಡೆಯಾಜ್ಞೆ ನೀಡಿತ್ತು. ಬೆಳ್ತಂಗಡಿ ತಾಲೂಕಿನ ಉಜಿರೆಯ ರೌಡಿಶೀಟರ್ ಅಗಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ಹೈಕೋರ್ಟ್ ಆದೇಶದಂತೆ ಮಾರ್ಚ್ 16ರಂದು ಮತ್ತೆ ಮೂರನೇ ಬಾರಿಗೆ (16-03-2026 ರಿಂದ 16-09-2026 ರವರೆಗೆ) ಪುತ್ತೂರು ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗಿಸ್ ಅವರು ಆರು […]