ಅಳದಂಗಡಿಯಲ್ಲಿ ಸಾನಿಟೈಸರ್ ಸಿಂಪರಣೆ

ಬೆಳ್ತಂಗಡಿ : ಅರಕ್ಷಕ ಠಾಣೆ ವೇಣೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿ, ಗ್ರಾ.ಪಂ.ಅಳದಂಗಡಿ, ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ, ಶ್ರೀ ಗುರು ಚೈತನ್ಯ ಸೇವಾಶ್ರಮ ವೇಣೂರು ಇವರ ಜನಜಾಗೃತಿ ಅಭಿಯಾನದ ಅಂಗವಾಗಿ ಬುಧವಾರ ಅಳದಂಗಡಿ ಪರಿಸರದ ಇನ್ನೂರಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳ ಎದುರು ಎರಡು ತಂಡಗಳಲ್ಲಿ ಸ್ಯಾನಿಟೈಸರ್ ಸಿಂಪಡನೆ ನಡೆಯಿತು.ವೇಣೂರು ಎಸ್‌ಐ ಲೋಲಾಕ್ಷ, ಗ್ರಾ.ಪಂ. ಅಧ್ಯಕ್ಷ ಸತೀಶ್ ಮಿತ್ತಮಾರು, ಡಾ. ಶಶಿಧರ ಡೋಂಗ್ರೆ, ಶಿವಪ್ರಸಾದ ಅಜಿಲ, ಅಳದಂಗಡಿ- ಸುಲ್ಕೇರಿ ಪಿಡಿಓ ಮಾರ್ಗದರ್ಶನದಲ್ಲಿ ಸಿಂಪಡನೆ ನಡೆಯಿತು.

ಬೆಳ್ತಂಗಡಿ ಲಯನ್ಸ್ ಕ್ಲಬ್ ಸೇವಾಪಥದಡಿ ಕಾರ್ಯಕ್ರಮಗಳು

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಪ್ರಥಮ ಹಂತದ ಲಾಕ್‍ಡೌನ್ ಅವಧಿಯಲ್ಲಿ ಹಲವು ಸೇವಾ ಕಾರ್ಯಕ್ರಮಗಳು ಜರಗಿದವು. ತಾಲೂಕಿನ ವಿವಿದೆಡೆ 5 ಕೊರೋನಾ ಜಾಗೃತಿ ನಾಮಫಲಕ, ವಿವಿದೆಡೆ ಸುಮಾರು 2240 ಮಾಸ್ಕ್ ವಿತರಣೆ, ವಿವಿಧ ಸಂಘ ಸಂಸ್ಥೆಗಳ ಮುಖೇನ ಸುಮಾರು 8200 ಕರಪತ್ರಗಳ ಒದಗಣೆ, ತಾಲೂಕಿನ ಅರ್ಹ 43 ಆಯ್ದ ಫಲಾನುಭವಿ ಕುಟುಂಬಗಳಿಗೆ ತಲಾ ರೂ. 940 ವೆಚ್ಚದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಈಗಾಗಲೆ ನಡೆದಿದೆ. ಕ್ಲಬ್ಬಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಫಲಾನುಭವಿಗಳ ಮನೆಗೆ ತೆರಳಿ ಕಿಟ್ […]

ಕಾಂಚೋಡು ಗೋಪಾಲಕೃಷ್ಣ ಅವರ ಸೈನಿಕ ಅನುಭವ ಕಥನ

ಪ್ರಸ್ತುತ ಉಜಿರೆಯಲ್ಲಿ ಕೃಷಿಕರಾಗಿ ನೆಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾಂಚೋಡಿನವರಾದ ಗೋಪಾಲಕೃಷ್ಣ ಅವರು ಹದಿನೆಂಟು ವರ್ಷಗಳ ಕಾಲ ಭಾರತೀಯ ಭೂಸೇನೆಯ ಫಿರಂಗಿ ದಳದಲ್ಲಿ ಕೆಲಸ ಮಾಡಿದವರು.ಅವರ ಸೈನಿಕ ಅನುಭವಗಳ ಬಗ್ಗೆ ಅರವಿಂದ ಚೊಕ್ಕಾಡಿಯವರು ಬರೆಯುತ್ತಿರುವ ಪುಸ್ತಕ ‘ ಕ್ಷಮತೆ’ಯನ್ನು ವಿಜಯಪುರದ ಚಾಣಕ್ಯ ಪ್ರಕಾಶನದವರು ಪ್ರಕಟಿಸುತ್ತಿದ್ದು,ಈ ಕೃತಿಯು ಪೂರ್ಣಗೊಂಡಿದ್ದರೂ;ಕೋವಿಡ್-19ರ ಕಾರಣದಿಂದ ಇದೇ ಜೂನ್ ತಿಂಗಳಲ್ಲಿ ಓದುಗರ ಕೈ ಸೇರುವ ನಿರೀಕ್ಷೆ ಇದೆ. ಶ್ರೀಲಂಕಾದ ಶಾಂತಿಪಾಲನಾ ಪಡೆಯ ಕಾರ್ಯಾಚರಣೆ,ಕಾಶ್ಮೀರದ ಕಾರ್ಯಾಚರಣೆ,ಜೋಝಿಲಾ ಪಾರ್ ಕಾರ್ಯಾಚರಣೆ,ಚೀನಾದ ಗಡಿ […]

ಸಿರಿಯಿಂದ ಬಡವರಿಗೆ ಕಿಟ್

ಕೋರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್ ಡೌನ್ ನ ಪರಿಸ್ಥಿತಿ ಯಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ-ಬೆಳ್ತಂಗಡಿಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ಜನಾರ್ದನ ರವರ ನಿರ್ದೇಶನದಂತೆಬೆಳ್ತಂಗಡಿ ತಾಲೂಕಿನ ತೀರಾ ಬಡತನವಿರುವ 200 ಕುಟುಂಬಗಳಿಗೆ ಬದುಕು ಕಟ್ಟೋಣ ಬನ್ನಿ -ಉಜಿರೆ ತಂಡದವರ ಸಹಕಾರ ದಲ್ಲಿ ಆಹಾರೋತ್ಪನ್ನಗಳ ಕಿಟ್ ಗಳನ್ನು ಇತ್ತೀಚೆಗೆ ವಿತರಿಸಲಾಯಿತು.ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ರವರು ಕಿಟ್ ಗಳನ್ನು ವಿತರಿಸಿ,ಸಿರಿ ಸಂಸ್ಥೆ ಯ ಸಾಮಾಜಿಕ ಕಳಕಳಿಯ […]

ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಬಡ ಅಸಹಾಯಕರಿಗೆ ಕಿಟ್ ವಿತರಣೆ.

ಇಂದು ಬೆಳಿಗ್ಗೆ ಬೆಳ್ತಂಗಡಿ ರೋಟರಿ ಕ್ಲಬ್ ಲಾಯಿಲ ಗ್ರಾಮದ 20 ಬಡ ಕುಟುಂಬಗಳಿಗೆ ತಿಂಗಳ ಅವಧಿಗೆ ಬೇಕಾದ ಆಹಾರ ಪದಾರ್ಥಗಳ ಕಿಟ್ಗಳನ್ನು ಹಸ್ತಾಂತರ ಮಾಡಿದರು. ಲಾಯಿಲ ಗ್ರಾಮದ ಅರ್ಹ ಫಲಾನುಭವಿಗಳನ್ನು ಪಂಚಾಯತ್ ಸದಸ್ಯರು ಗುರುತಿಸಿ ಸಹಕರಿಸಿದರು. ರೋಟರಿ ಅಧ್ಯಕ್ಷ ರೋ ಜಯರಾಮ್, ನಿಯೋಜಿತ ಅಧ್ಯಕ್ಷ ರೋ ದನಂಜಯ ರಾವ್, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ರಾವ್, ಉಪಾಧ್ಯಕ್ಷ ಶ್ರಿ ಗಿರೀಶ್ ಡೋಂಗ್ರೆ, ತಾಲೂಕು ಪಂಚಾಯತ್ ಪಂಚಾಯತ್ ಸದಸ್ಯ ಶ್ರೀ ಸುಧಾಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ವೆಂಕಟರಮಣ […]

ಸೌತಡ್ಕ ದೇಗುಲದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ‌ ವಿಧಿವಶ

ಸೌತಡ್ಕ ದೇಗುಲದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ‌ ವಿಧಿವಶಕೊಕ್ಕಡದ ಬಯಲು ಆಲಯ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ (52) ದಿಢೀರ್ ತೀವ್ರ ಅನಾರೊಗ್ಯಕ್ಕೆ ತುತ್ತಾಗಿ, ಎಪ್ರಿಲ್ 14ರಂದು ಮಂಗಳೂರಿನ ಎ‌.ಜೆ. ಆಸ್ಪತ್ರೆಯಲ್ಲಿ‌ ವಿಧಿವಶರಾದರು.ಕೆಲ ದಿನಗಳ ಹಿಂದೆಯಷ್ಟೇ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಸೌತಡ್ಕ ದೇಗುಲದ ಗಂಟೆ ಏಲಂ ಪ್ರಕ್ರಿಯೆಯಲ್ಲಿ 1ಕೋಟಿ ರೂಪಾಯಿಗೂ ಅವ್ಯವಹಾರವಾಗಿದೆ ಎಂದು ಆರೋಪಿಸಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರರನ್ನು ಹಗರಣದ ಪ್ರಮುಖ ಆರೋಪಿಯನ್ನಾಗಿಸಿದ್ದರು. ಈ ಬಗ್ಗೆ ತನಿಖೆಗೂ ಆಗ್ರಹಿಸಿದ್ದರು. ತನ್ನ‌ […]

ಬಂಟ್ವಾಳ ತಾಲೂಕು ಇಡ್ಕಿದು ಗ್ರಾ.ಪಂ. ಪಿ.ಡಿ.ಒ ಉದ್ದಟತನದ ಬಗ್ಗೆ ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಆಕ್ರೋಶ:

ಕೊಕ್ಕಡ, ಎ.14: ಕೊಕ್ಕಡದ ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ರವರು ಮಾಹಿತಿ ಹಕ್ಕಿನಡಿಯಲ್ಲಿ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾ.ಪಂ.ನಿಂದ ಕೇಳಿರುವ ಮಾಹಿತಿಗೆ ಅಸ್ಪಸ್ಟ ಹಾಗೂ ಉದ್ದಟತನದ ಉತ್ತರ ನೀಡಿದ ಇಡ್ಕಿದು ಗ್ರಾ.ಪಂ. ಪಿಡಿಒ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಅಪಾಯಕಾರಿ ಕೀಟನಾಶಕಗಳನ್ನು ಗ್ರಾ.ಪಂ ನೇತೃತ್ವದಲ್ಲಿ ಸಿಂಪಡನೆ ಮಾಡಿ ಕಳೆನಾಶ ಮಾಡಲಾಗಿದ್ದು ಈ ಬಗ್ಗೆ ತಮಗೆ ಬಂದ ಮಾಹಿತಿಯ ಸ್ಪಷ್ಟತೆಗಾಗಿ ಎಂಡೊವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ರವರು ಮಾಹಿತಿ ಹಕ್ಕಿನಡಿ ವಿವರಣೆ ಬಯಸಿ […]

ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಸಾಮಾಗ್ರಿ ವಿತರಣೆ

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಮಧ್ವ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ವತಿಯಿಂದ ಮಂದಿರ ವ್ಯಾಪ್ತಿಯ 326 ಕುಟುಂಬಿಕರಿಗೆ ಅಕ್ಕಿ ಹಾಗೂ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮ ಎಪ್ರಿಲ್ 14ರಂದು ನಡೆಯಿತು.ಮಧ್ವ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ರಾಜಪ್ರಸಾದ್ ಆರಿಗ, ಗೌರವಾಧ್ಯಕ್ಷ ಸುರೇಂದ್ರ ಪೂಜಾರಿ ಮಧ್ವ, ಪ್ರಧಾನ ಕಾರ್ಯದರ್ಶಿ ನಾಗೇಶ್ ಮಧ್ವ, ಪದಾಧಿಕಾರಿಗಳಾದ ಶಿವಪ್ಪ ಗೌಡ ನಿನ್ನಿಕಲ್ಲು, ಶ್ರೀಧರ ಟೈಲರ್ ಮಧ್ವ, ಪ್ರಕಾಶ್ ಮಧ್ವ, ನಿತಿನ್ ಗುರುವಾಯನಕರೆ, ಯಾದೇಶ್ ರೈ, ಸುರೇಶ್ ಮಧ್ವ, ರಮೇಶ್ ಆಚಾರ್ಯ, ತಿಲಕ್ […]

ಮಾನವಧರ್ಮ ಮೆರೆದ ಧರ್ಮಪ್ರಾಂತ್ಯ

ಬೆಳ್ತಂಗಡಿ: ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ತಾಲೂಕಿನ 250ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರಿಗೆ ಎಪ್ರಿಲ್ 14ರಂದು ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸುವ ಮೂಲಕ ಬೆಳ್ತಂಗಡಿ ಉದಯನಗರ ಕ್ರೈಸ್ತ ಧರ್ಮಪ್ರಾಂತ್ಯ ಹಾಗೂ ಡಿ ಕೆ.ಡಿ.ಆರ್.ಎಸ್. ಸಂಸ್ಥೆಯವರು ತಾಲೂಕಿನ 1000 ಅರ್ಹ ಕುಟುಂಬಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಈ ಮಾನವಧರ್ಮ‌ ಕಾರ್ಯದ ಚಾಲನಾ ಪ್ರಕ್ರಿಯೆಯಲ್ಲಿ ಬೆಳ್ತಂಗಡಿ ತಾಲೂಕು […]

ಅಂಬೇಡ್ಕರ್ ಜಯಂತಿಯಲ್ಲಿ ಸಾಮಾಜಿಕ ಅಂತರ

ಬೆಳ್ತಂಗಡಿ: ಕೊರೋನಾ ಸೋಂಕು ಹರಡುವಿಕೆಯ ಭೀತಿಯ ಹಿನ್ನೆಲೆಯಲ್ಲಿ ಸರಕಾರಿ ಪ್ರಾಯೋಜಿತ ಅಂಬೇಡ್ಕರ್ ಜಯಂತಿಯನ್ನು ಎಪ್ರಿಲ್ 14ರಂದು ಬೆಳ್ತಂಗಡಿಯ ಮಿನಿವಿಧಾನಸೌಧದ ಸಭಾಂಗಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಂಕೇತಿಕವಾಗಿ ಆಚರಿಸಲಾಯಿತು.ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಆಚರಿಸಲಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾಲೂಕು ಪಂಚಾಯತಿನ ಕಾರ್ಯನಿರ್ವಹಣಾಧಿಕಾರಿ ಜಯರಾಮ್, ಸಮಾಜ ಕಲ್ಯಾಣ ಇಲಾಖೆಯ ಹೇಮಾವತಿ, ತಾಲೂಕು ಪಂಚಾಯತಿನ ಜಯಾನಂದ ಮತ್ತಿತರರು ಹಾಜರಿದ್ದರು.ಎಲ್ಲ ಸರಕಾರಿ ಅಧಿಕಾರಿಗಳು […]