ಬೆಳ್ತಂಗಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಮಾದರಿ ಶಿಲಾನ್ಯಾಸ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೇಂದ್ರದದಲ್ಲಿ ಕೆಎಸ್‌ಆರ್‌ಟಿಸಿಯ ನೂತನ ಬಸ್ ನಿಲ್ದಾಣ ಕಾಮಗಾರಿಗೆ ಮೇ 17ರಂದು ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಸದ್ದುಗದ್ದಲವಿಲ್ಲದೇ ವಿದ್ಯುಕ್ತವಾಗಿ ನೆರವೇರಿತು.ಚುನಾವಣಾ ನೀತಿಸಂಹಿತೆ ಜ್ಯಾರಿಯಲ್ಲಿ ಇರುವುದರಿಂದ ಈ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಚಿವ ಶಾಸಕರಾದಿಯಾಗಿ ಜನಪ್ರತಿನಿಧಿಗಳು ಭಾಗವಹಿಸಲಿಲ್ಲ. ಆದ್ದರಿಂದ ಸದ್ರಿ ಕಾಮಗಾರಿಯ ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಟಾಕಿಯ ಭರಾಟೆ ಇರಲಿಲ್ಲ; ಸಚಿವರ ಹಾಗೂ ಶಾಸಕರುಗಳ ಅದ್ದೂರಿಯ ಮೆರವಣಿಗೆ ಇರಲಿಲ್ಲ; ಬ್ಯಾಂಡ್ ವಾಲಗಗಳ ಸದ್ದೇ ಇರಲಿಲ್ಲ. ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳುಗಷ್ಟೇ ಸೀಮಿತವಾಗಿತ್ತು. […]
ಬೀಡಿ ಕಾರ್ಮಿಕರ ಸಮಸ್ಯೆ ಸರಕಾರದ ಗಮನಕ್ಕೆ-ರಕ್ಷಿತ್ ಶಿವರಾಂ

ಬೆಳ್ತಂಗಡಿ: ಮೇ 16ರಿಂದ ಬೆಳ್ತಂಗಡಿ ಭಾರತ್ ಬೀಡಿ ಕಂಪೆನಿಯ ಕಛೇರಿಯ ಎದುರು ನಡೆಯುತ್ತಿರುವ ಬೀಡಿ ಕಾರ್ಮಿಕರ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪ್ರತಿಭಟನಾನಿರರನ್ನು ಉದ್ಧೇಶಿಸಿ ಮಾತನಾಡಿ; ಸರಕಾರದ ಒಪ್ಪಿಗೆ ಇಲ್ಲದೆ ಬೀಡಿ ಕಂಪೆನಿ ಕಛೇರಿ ಮುಚ್ಚಲು ಹೋರಟಿರುವ ಭಾರತ್ ಬೀಡಿ ಮಾಲಕರ ನಿರ್ಧಾರವನ್ನು ಖಂಡಿಸಿದರಲ್ಲದೇ, ಸಮಸ್ಯೆಯನ್ನು ಸರಕಾರದ ಗಮನಕ್ಕೆ ಮತ್ತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರ ಗಮನಕ್ಕೆ ತರಲಾಗುವುದು ಎಂದು […]
ಘಟಿಕೋತ್ಸವ ಭಾಷಣ ಮತ್ತು ಪದವಿ ಪ್ರಧಾನ

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿಶ್ರಾಂತ ಇತಿಹಾಸ ಉಪನ್ಯಾಸಕ ಹಾಗೂ ಇತಿಹಾಸ ತಜ್ಞ ಡಾ. ವೈ. ಉಮಾನಾಥ ಶೆಣೈಯವರು ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಘಟಕೋತ್ಸವದ ಗೌರವ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ; ಪದವಿ ಪ್ರಧಾನ ಸಮಾರಂಭದ ಘಟಕೋತ್ಸವ ಭಾಷಣವನ್ನು ನೆರವೇರಿಸಿದರು. ಅತ್ಯಪೂರ್ವ ಸಾಧನೆ ಮಾಡಿದ ಸುಮಾರು 60 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ವರ್ಣ ಹಾಗೂ ರಜತ ಪದಕಗಳನ್ನು ಪ್ರಧಾನ ಮಾಡಿದರು. ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಮಲ್ಲೇಪುರಂ ವೆಂಕಟೇಶ್ , ನ್ಯಾಯಮೂರ್ತಿ ಎ.ಸಿ. […]
ಆರಂಭಿಕ ಮಳೆ ಸೃಷ್ಟಿಸಿದ ಅವಾಂತರ

ಬೆಳ್ತಂಗಡಿ: ಮುಂಡಾಜೆ, ಚಾರ್ಮಾಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮೇ 15ರ ಮುಂಜಾನೆ ಉತ್ತಮ ಮಳೆ ಸುರಿಯಿತು. ಬೆಳಗಿನ ಜಾವ ಗಂಟೆ 4ರ ಸುಮಾರಿಗೆ ಆರಂಭವಾದ ಮಳೆ 6-30ರವರೆಗೆ ಮುಂದುವರಿಯಿತು.ಮುಂಡಾಜೆ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದ್ದು, ರಸ್ತೆ ಅಗೆದು ಹಾಕಲಾದ ಸ್ಥಳಗಳಲ್ಲಿ ಕೆಸರು ತುಂಬಿ ಜಾರುವ ಕಾರಣ ವಾಹನ ಸವಾರರು ಪರದಾಟ ಅನುಭವಿಸಿದರು. ಕೆಲವು ದ್ವಿಚಕ್ರ ವಾಹನ ಸವಾರರು ಉರುಳಿ ಬಿದ್ದ ಘಟನೆಯೂ ನಡೆದಿದೆ.ಹೆದ್ದಾರಿಯ ಉಜಿರೆ ಬಳಿ ಸುಮಾರು ಒಂದು ಕಿ.ಮೀ. ಪ್ರದೇಶದಲ್ಲಿ […]
ಹವಾಮಾನ ಬದಲಾವಣೆ ಕುರಿತು ಕಾರ್ಯಾಗಾರ

ಬೆಳ್ತಂಗಡಿ: ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ಬೆಂಗಳೂರು ಹಾಗೂ ಡಿಕೆಆರ್‌ಡಿಎಸ್ ಬೆಳ್ತಂಗಡಿ ಇದರ ನೇತೃತ್ವದಲ್ಲಿ; ಸಿಒಡಿಪಿ ಮಂಗಳೂರು, ಕಿಡ್ಸ್ ಪುತ್ತೂರು ಹಾಗೂ ಸಂಪದ ಉಡುಪಿ ಇವರ ಸಹಭಾಗಿತ್ವದಲ್ಲಿ ಕ್ಲಸ್ಟರ್ ಮಟ್ಟದ ಹವಾಮಾನ ಬದಲಾವಣೆ ಕುರಿತು ತರಬೇತಿ ಕಾರ್ಯಕ್ರಮ ಮೇ 15ರಂದು ಆಯೋಜಿಸಿಲಾಗಿತ್ತು. ಹವಾಮಾನ ಬದಲಾವಣೆಯು ಇತ್ತೀಚೆಗೆ ನಮ್ಮನ್ನು ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ. ಇದರ ಬಗ್ಗೆ ಅರಿವು ಪಡೆಯುವುದು ಅತ್ಯಗತ್ಯ ಎಂದು ಉದ್ಘಾಟನೆಯನ್ನು ನೆರವೇರಿಸಿದ ಕ್ರಾಸ್ ಸಂಸ್ಥೆ ಬೆಂಗಳೂರು ಇದರ ರಾಜ್ಯ ಸಂಯೋಜಕಿ ಲೈನಾ ಲಸ್ರಾದೊ ತಿಳಿಸಿದರು. […]
ವಾಟರ್ ಬೆಡ್ ವಿತರಣೆ ಹಸ್ತಾಂತರ

ಬೆಳ್ತಂಗಡಿ: ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಗ್ರಾಮದ ಶಿವಾನಂದರವರಿಗೆ ಅಗತ್ಯವಿರುವ ವಾಟರ್‌ಬೆಡ್‌ನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರು ಉಚಿತವಾಗಿ ನೀಡಿದ್ದು; ಈ ವಾಟರ್‌ಬೆಡ್‌ನ್ನು ಶಿವಾನಂದರವರ ಮನೆ ಭೇಟಿಯನ್ನು ಮಾಡಿ ಪ್ರಗತಿಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ ಗೌಡ ಹಸ್ತಾಂತರಿಸಿದರುಈ ಸಂದರ್ಭ ಕೊಲ್ಲಿ-ಕಿಲ್ಲೂರು ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ಘಟಕದ ಪ್ರತಿನಿಧಿಯಾದ ಉಮೇಶ್ ಮಾಲೂರು, ಯೋಜನೆಯ ಇಂದಬೆಟ್ಟು ವಲಯದ ಮೇಲ್ವಿಚಾರಕಿ ಉಷಾ, ಸೇವಾಪ್ರತಿನಿಧಿ ಲತಾರವರು ಉಪಸ್ಥಿತರಿದ್ದರು.
ಬ್ರಾಹ್ಮಣರಿಗೆ ಜ್ಞಾನವೇ ಸಂಪತ್ತು-ಪಡುವೆಟ್ಣಾಯ

ಬೆಳ್ತಂಗಡಿ: ಇಂದಿನ ದಿನಗಳಲ್ಲಿ ಅಂತರ್ಜಾಲ ಮೂಲಕ ಸಾಕಷ್ಟು ಮಾಹಿತಿ ಸಿಗುತ್ತದೆ. ಆದರೆ ಸಂವಹನ ಮಾಧ್ಯಮ ಮೂಲಕ ಸಿಗುವ ಮಾಹಿತಿ ಹೆಚ್ಚು ವಿಶ್ವಾಸಾರ್ಹ ಹಾಗೂ ಎಲ್ಲರನ್ನೂ ತಲುಪಲು ಹೆಚ್ಚು ಉಪಯುಕ್ತ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ಣಾಯ ಹೇಳಿದರು.ಅವರು ಮೇ 12ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣ ಸಂಘದ ವತಿಯಿಂದ ನಡೆದ ಶೈಕ್ಷಣಿಕ ಮಾಹಿತಿ ಕಾರ್ಯಾಗಾರಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡುತ್ತಿದ್ದರು.ಬ್ರಾಹ್ಮಣರಿಗೆ ಜ್ಞಾನವೇ […]
ಮತ್ತೆ ಒಂಟಿ ಸಲಗ ಪ್ರತ್ಯಕ್ಷ – ಆತಂಕದಲ್ಲಿ ನಾಗರಿಕರು

ಬೆಳ್ತಂಗಡಿ: ಮತ್ತೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಮೇ 14ರ ಬೆಳಗ್ಗೆ ಚಾರ್ಮಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿಯ ಎರಡನೇ ತಿರುವಿನಲ್ಲಿ ತನ್ನ ಸೊಂಡಿಲಿನಲ್ಲಿ ಮರದ ಕೊಂಬೆಯೊಂದನ್ನು ಹಿಡಿದು ಪ್ರತ್ಯಕ್ಷವಾದ ಒಂಟಿ ಸಲಗ ಕೆಲಕಾಲ ನೂರಾರು ವಾಹನಗಳ ಚಾಲಕ ಹಾಗೂ ಪ್ರಯಾಣಿಕರನ್ನು ಆತಂಕದಲ್ಲಿ ಸಮಯ ಕಳೆಯುವಂತೆ ಮಾಡಿದೆ. ಘಾಟಿ ಪ್ರದೇಶದಲ್ಲೂ ಅರಣ್ಯ ನಾಶ ಮಾಡಿ ತನ್ನ ಬದುಕನ್ನು ಕಿತ್ತುಕೊಳ್ಳ ಹೊರಟ ಮನುಕುಲಕ್ಕೆ ಎಚ್ಚರಿಕೆ ನೀಡಲು ರಾಷ್ಟ್ರೀಯ ಹೆದ್ದಾರಿ ಬದಿಗೆ ಬಂದ ಒಂಟಿ ಸಲಗವನ್ನು ಮರಳಿ ಕಾಡಿಗೆ […]
‘ಕುಕೃತ್ಯಗಳಲ್ಲಿ ಧರ್ಮ ಹುಡುಕುವುದು ಸರಿಯಲ್ಲ’ಕಾಜೂರು ಸರ್ವಧರ್ಮೀಯ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮೌಲಾನಾ ಶಾಫಿ.

‘ಬೆಳ್ತಂಗಡಿ; ರಾಜಕೀಯ ಉದ್ದೇಶಕ್ಕಾಗಿ ಯುವಜನರನ್ನು ಪ್ರಚೋದಿಸುವ ಕಾರ್ಯ ಕೆಲ ಸ್ವಾರ್ಥ ರಾಜಕಾರಣಿಗಳಿಂದ ಆಗುತ್ತಿದೆ. ಅಂತವರಿಂದ ಹಿಂದೂ ಮುಸಲ್ಮಾನ ಯುವಜನರನ್ನು ರಕ್ಷಿಸುವ ಕೆಲಸ ಆಗಬೇಕು. ಧರ್ಮದ ಅನುಷ್ಠಾನ ಮತ್ತು ಪರಧರ್ಮದ ಮೇಲಿನ ಗೌರವ ಪಾಲಿಸೋಣ. ಆ ನಿಟ್ಟಿನಲ್ಲಿ ಎಲ್ಲಾ ಧರ್ಮಗಳ ಶ್ರದ್ಧಾ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಗಳಾಗಬೇಕು ಎಂದು ಕರ್ನಾಟಕ ವಕ್ಫ್ ಮಂಡಳಿ ನಿಕಟಪೂರ್ವ ರಾಜ್ಯಾಧ್ಯಕ್ಷ ಮೌಲಾನಾ ಶಾಫಿ ಸಅದಿ ಹೇಳಿದರು.ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ ಸುಮಾರು 800 ವರ್ಷಗಳಿಗೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ […]
‘ದಾದಿಯರು ಆಸ್ಪತ್ರೆಯ ಹೃದಯವಿದ್ದಂತೆ’

‘ಬೆಳ್ತಂಗಡಿ: ಜಗತ್ತು ಕಂಡ ಅಪ್ರತಿಮ ದಾದಿ ಫ್ಲೊರೆನ್ಸ್ ನೈಟಾಂಗಲ್ ಅವರ ಜನ್ಮದಿನ ಮೇ 12ನೇ ದಿನಾಂಕವನ್ನು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಉಜಿರೆಯ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಪ್ರತಿ ವರ್ಷ ಇದನ್ನು ಆಚರಿಸಿಕೊಂಡು ಬರುತ್ತಿದ್ದು , ಈ ವರ್ಷ ಕೂಡ ಕೆಲವು ವಿಶೇಷತೆಗಳನ್ನು ಒಳಗೊಂಡಂತೆ ದಾದಿಯರ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆನಕ ಹೆಲ್ತ್ ಸೆಂಟರ್ ನ ವೈದ್ಯಕೀಯ ನಿರ್ದೇಶಕರಾದ ಡಾ| ಗೋಪಾಲಕೃಷ್ಣ ಕೆ. ಮಾತನಾಡಿ; ಒಂದು ಆಸ್ಪತ್ರೆ ಸರಿಯಾದ ರೀತಿಯಲ್ಲಿ ರೋಗಿಗಳಿಗೆ […]