ಮುಖ್ಯಮಂತ್ರಿ ಸಿದ್ಧರಾಮಯ್ಯ ಧರ್ಮಸ್ಥಳ ಭೇಟಿ.

ಬೆಳ್ತಂಗಡಿ: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಾಜಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮತ್ತು ಪಶುಸಂಗೋಪನಾ ಸಚಿವ ವೆಂಕಟೇಶ್ ಮೇ 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದಾಗ; ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಪ್ರವೇಶದ್ವಾರದಿಂದ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.ಡಿ. ಹರ್ಷೇಂದ್ರ ಕುಮಾರ್ ಸಚಿವರುಗಳನ್ನು ಸ್ವಾಗತಿಸಿದರು.ಬಳಿಕ ಮುಖ್ಯಮಂತ್ರಿ ಸಹಿತ ಗಣ್ಯರು ದೇವರದರ್ಶನ ಮಾಡಿ, ವಿಶೇಷಪೂಜೆ ಸಲ್ಲಿಸಿ, ಬೀಡಿನಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ […]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪತ್ತನಾಜೆ ಉತ್ಸವ

ಬೆಳ್ತಂಗಡಿ: ವೃಷಭ ಮಾಸದ ಹತ್ತನೇ ದಿನ ಪತ್ತನಾಜೆ (ಹತ್ತನಾವಧಿ) ಮೇ 24 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವರ್ಷದ ಉತ್ಸವ, ವಿಶೇಷ ಸೇವೆಗಳು ಸಮಾಪ್ತಿಗೊಳ್ಳುವ ಸಂಭ್ರಮದ ಪರ್ವ. ಮೇ 24 ರಂದು ಪತ್ತನಾಜೆ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಂಗ ಪೂಜೆ, ಬಲಿ ಉತ್ಸವ, ವಸಂತ ಮಂಟಪದಲ್ಲಿ ಕಟ್ಟೆಪೂಜೆ, ಅಷ್ಟಾವಧಾನ ಸೇವೆ ಹಾಗೂ ಧ್ವಜ ಮರ ಇಳಿಸುವ ಕಾರ್ಯಕ್ರಮದೊಂದಿಗೆ ವಿಶೇಷ ಉತ್ಸವ, ಸೇವೆಗಳು […]

ಉದ್ಯಮಶೀಲತೆ ಕಾರ್ಯಾಗಾರ

ಬೆಳ್ತಂಗಡಿ: ಸ್ಪಷ್ಟಗುರಿ ಮತ್ತು ಕೌಶಲ್ಯಯುತ ಹೆಜ್ಜೆಗಳ ಮೂಲಕ ಯಶಸ್ವಿ ಉದ್ಯಮಿಯಾಗಬಹುದು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್. ಜನಾರ್ಧನ ಹೇಳಿದರು.ಅವರು ಮೇ 22ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಎಂಟರ್‌ಪ್ರೈನರ್‌ಶಿಪ್ ಡೆವಲಪ್ಮೆಂಟ್ ಸೆಲ್ ಸಹಯೋಗದಲ್ಲಿ ಆಯೋಜಿದ್ದ ಉದ್ಯಮಶೀಲತೆಯ ಅಭಿವೃದ್ಧಿ ಕುರಿತಾದ ಎರಡು ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಕೇವಲ ಶಿಕ್ಷಣ ಮಾತ್ರದಿಂದ ಬೆಳವಣಿಗೆಯ ಮಾನದಂಡವನ್ನು ನಿರ್ಧರಿಸಲಾಗುವುದಿಲ್ಲ. ನಿರಂತರವಾದ ಪ್ರಯತ್ನ […]

ಸಂಸ್ಕೃತಿ ಉಳಿಯಲು ಕನ್ನಡ ಭಾಷೆ ಬೆಳೆಯಬೇಕು- ಶ್ರದ್ಧಾ ಅಮಿತ್

ಬೆಳ್ತಂಗಡಿ: ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿಯ ಬದುಕಿನ ಪಂಚಾಂಗ. ವಿದ್ಯಾರ್ಥಿಗಳು ಸಜ್ಜನರಾಗಿ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ರೂಪಿಸುವ ಶಿಲ್ಪಿಗಳಂತೆ ಸುಂದರ ಕೈತೋಟದ ಗಿಡಗಳನ್ನು ಬೆಳೆಸುವವರು; ಪೋಷಕಾಂಶ ನೀಡಿ ಅವರ ಸಾಮರ್ಥ್ಯ ಗುರುತಿಸುವವರು. ಶಿಕ್ಷಕರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟುವಹಾಗಿಲ್ಲ. ಪ್ರತಿ ಮಕ್ಕಳು ಒಂದಲ್ಲ ಒಂದು ಕಲೆಯಲ್ಲಿ ಬೆಳೆಯುತ್ತಾರೆ. ನಮ್ಮ ಸಂಸ್ಕೃತಿ ಉಳಿಯಲು ಕನ್ನಡ ಭಾಷೆ ಹಾಗೂ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಮಕ್ಕಳಿಗೆ ಭಾಷೆ, ಸಂಸ್ಕೃತಿ, ನೆಲ ಜಲ, ಪರಿಸರದ ಬಗ್ಗೆ ತಿಳಿಸುವ ಕನ್ನಡ […]

ಬೀಡಿ ಕಾರ್ಮಿಕರ ಹೋರಾಟಕ್ಕೆ ಜಯ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ ಭಾರತ ಬೀಡಿ ಕಂಪೆನಿ ಉಳಿಸಲು ನಡೆಸಿದ ಹೋರಾಟ ಯಶಸ್ವಿಯಾಗಿ ಇತ್ಯರ್ಥವಾಯಿತು ಎಂದು ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಅದ್ಯಕ್ಷ ಬಿ.ಎಂ. ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತ ಬೀಡಿ ಕಂಪೆನಿಯನ್ನು ಕಾನೂನು ಬಾಹಿರವಾಗಿ ಸರಕಾರದ ಅನುಮತಿ ಪಡೆಯದೇ ಮುಚ್ಚಲು ನಿರ್ಧರಸಿದ ಬೀಡಿ ಮಾಲಕರ ನಡೆಯನ್ನು ಖಂಡಿಸಿ ‘ಭಾರತ ಬೀಡಿ ಉಳಿಸಿ, ಕಾರ್ಮಿಕರ ಬದುಕು ರಕ್ಷಿಸಿ’ ಎಂಬ ಘೋಷವಾಕ್ಯದೊಂದಿಗೆ ಮೇ 16ರಿಂದ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘ (ಸಿಐಟಿಯು), ಬೆಳ್ತಂಗಡಿ ತಾಲೂಕು […]

‘ಸೃಜನಶೀಲ ಸಂಶೋಧನೆಗಳಿಂದ ಸಮಾಜಕ್ಕೆ ವಿಶೇಷ ಕೊಡುಗೆ’

ಬೆಳ್ತಂಗಡಿ: ಕಠಿಣ ಪರಿಶ್ರಮ ಹಾಗೂ ಪ್ರಯತ್ನದಿಂದ ವಿಶೇಷ ಸಾಧನೆಗಳನ್ನು ಮಾಡಿ ತಾಂತ್ರಿಕ ಆವಿಷ್ಕಾರಗಳನ್ನು ಪ್ರದರ್ಶನಕ್ಕೆ ಅಣಿಗೊಳಿಸಿದ್ದೀರಿ. ಸೃಜನಶೀಲ ಸಂಶೋಧನೆಗಳಿಂದ ಸಮಾಜ ಹಾಗೂ ಮುಂದಿನ ಪೀಳಿಗೆಗೆ ವಿಶೇಷ ಕೊಡುಗೆ ನೀಡಿದ್ದೀರಿ. ಅಧ್ಯಯನಕ್ಕೆ ವಿಪುಲ ಅವಕಾಶಗಳಿದ್ದು ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ಮುಖ್ಯ. ಸಮೂಹದ ಸಾಧನೆಯಲ್ಲಿ ಗುರಿ ತಲುಪಿ ಗ್ರಾಹಕರಿಗೆ ಉಪಯುಕ್ತ ವಸ್ತುಗಳನ್ನು ಒದಗಿಸಿದಲ್ಲಿ ನಿಮ್ಮ ಸಾಧನೆ ಹಾಗು ಪರಿಶ್ರಮ ಸಾರ್ಥಕ್ಯ ಪಡೆಯುತ್ತದೆ ಎಂದು ಸಿಂಗಾಪುರದಲ್ಲಿ 16 ವರ್ಷಗಳ ಕಾಲ ತಾಂತ್ರಿಕ ವಿಭಾಗದಲ್ಲಿ ವಿಶೇಷ ಪರಿಣತಿ ಪಡೆದ ತೀರ್ಪುಗಾರ ಆದರ್ಶ ಕಾರಂತ್ […]

ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಯ

ಬೆಳ್ತಂಗಡಿ: ಸುಂದರ, ಪ್ರಶಾಂತ ಪ್ರಕೃತಿಯನ್ನು ನಾವೆಲ್ಲರೂ ಪ್ರೀತಿಸಿ, ಸ್ವಚ್ಛತೆಯನ್ನು ಕಾಪಾಡಿದರೆ ಪ್ರಕೃತಿ ಸದಾ ನಮ್ಮನ್ನು ಉತ್ತಮ ಆರೋಗ್ಯಭಾಗ್ಯದೊಂದಿಗೆ ರಕ್ಷಣೆ ಮಾಡುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಮೇ 22ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಮತ್ತು ಧರ್ಮಸ್ಥಳದ ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಸೇವಾಕರ್ತರ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿ ಮಾತನಾಡುತ್ತಿದ್ದರು.ಶುದ್ಧವಾದ ಗಾಳಿ, ನೀರು ಮತ್ತು ಪ್ರಶಾಂತ ಪ್ರಾಕೃತಿಕ ಪರಿಸರದಿಂದ ನಾವು ಉತ್ತಮ […]

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ‘ಅಕ್ಷರೋತ್ಸವ-2024’ ಕೇಳುವ ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಕಟ್ಟಿಟ್ಟ ಬುತ್ತಿ: ಡಾ. ನರಹಳ್ಳಿ.

ಬೆಳ್ತಂಗಡಿ: ಕರಾವಳಿ ಭಾಗ ಎಂದರೆ ಧಾರ್ಮಿಕ ಮತ್ತು ಸಂಸ್ಕಾರಯುತ ಶಿಕ್ಷಣದ ನೆಲೆ. ಇಲ್ಲಿಯ ಸೌಂದರ್ಯ ನೋಡಿದರೆ ಬದುಕಿನ ಸ್ವರ್ಗ ಇದ್ದಂತೆ. ನಾವು ಆಗಿನ ಕಾಲದ ಶಿಕ್ಷಣ ಪಡೆದ ರೀತಿ, ನಮ್ಮ ಬದುಕಿನ ರೀತಿ ನೋಡಿದರೆ ಇಂದಿನ ವಿದ್ಯಾರ್ಥಿಗಳು ಹಿರಿಯರು ಮಾಡಿದ ಪುಣ್ಯದ ಫಲವನ್ನು ಅನುಭವಿಸುತ್ತಿದ್ದಾರೆ ಎನ್ನಬಹುದು. ಕರಾವಳಿ ಭಾಗದ ಶಿಕ್ಷಣ ಕ್ರಾಂತಿಯಾಗಿ ಮೂಡಿಬರುತ್ತಿರುವ ಎಕ್ಸೆಲ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುವ ಭಾಗ್ಯ ವಿದ್ಯಾರ್ಥಿಗಳಿಗೆ ಸಿಕ್ಕಿರುವುದು ದೊಡ್ಡ ಅವಕಾಶ. ಸಂಸ್ಕಾರಯುತ ಕಲಿಕೆಯನ್ನು ತಾಳ್ಮೆಯಿಂದ ಸ್ವೀಕರಿಸುವ ಮನೋಬಾವ ಬೆಳೆಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ […]

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಮೇ 20ರಂದು ತೋರಣಮುಹೂರ್ತ, ವಿಮಾನಶುದ್ಧಿ, ಆರಾಧನಾಪೂರ್ವಕ ಕ್ಷೇತ್ರಪಾಲ ಪ್ರತಿಷ್ಠೆ, ನವಕಲಶ ಅಭಿಷೇಕ ಮತ್ತು ನಾಂದಿಮಂಗಲ ಪೂಜಾವಿಧಾನ ಮತ್ತಿತರ ಧಾರ್ಮಿಕ ವಿಧಿ-ವಿಧಾನಗಳು ನಡೆದವು.ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು ಮತ್ತು ಊರಿನ ಶ್ರಾವಕರು- ಶ್ರಾವಕಿಯರು ಉಪಸ್ಥಿತರಿದ್ದರು.

ರುಡ್‌ಸೆಟ್‌ ಸಂಸ್ಥೆಯ ವಾರ್ಷಿಕ ವರದಿ ಬಿಡುಗಡೆ

ಬೆಳ್ತಂಗಡಿ: ಉಜಿರೆ ರುಡ್‌ಸೆಟ್‌ ಸಂಸ್ಥೆಯ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ರುಡ್‌ಸೆಟ್‌ ಸಂಸ್ಥೆಗಳ ಅಧ್ಯಕ್ಷರೂ ಆದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ರುಡ್‌ಸೆಟ್‌ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ್‌ ಕಲ್ಲಾಪುರ, ಉಜಿರೆ ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕ ಎಂ. ಸುರೇಶ್‌ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 2023-24ರ ಸಂಸ್ಥೆಯ ಎಲ್ಲಾ ಚಟುವಟಿಕೆಗಳನ್ನು ಗಮನಿಸಿ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರ್ಷದ ಗುರಿಯನ್ನು ತಲುಪಲು ಕೆಲವು ಮಾರ್ಗದರ್ಶನವನ್ನು ನೀಡಿದರು. ಸಂಸ್ಥೆಯು […]