ಕೋವಿಡ್ ವಾರಿಯರ್ಸ್‌ಗಳಿಗೆ ಸಮ್ಮಾನ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ (ರಿ) ರಾಜ್ಯ ಸಮಿತಿಯ ವತಿಯಿಂದ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಇಂಡಿಯೋತ್ಸವ-75’ ಕಾರ್ಯಕ್ರಮದ ಭಾಗವಾಗಿ, ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್ ಸಮಿತಿ ವ್ಯಾಪ್ತಿಯಲ್ಲಿ ಕೊರೊನೋ ಸೋಂಕು ಬಿಗಡಾಯಿಸಿದ ಸಂದರ್ಭ ಕೋವಿಡ್ ವಾರಿಯರ್ಸ್ ಆಗಿ ಸಕ್ರಿಯವಾಗಿ ದುಡಿದ 14 ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವು ಕಲ್ಲೇರಿ ಎಸ್.ಎಂ.ಎ. ಕಛೇರಿಯಲ್ಲಿ ನಡೆಯಿತು.ಕಾರ್ಯಕ್ರಮಕ್ಕೆ ಹಿರಿಯ ವಿದ್ವಾಂಸರಾದ ಇಬ್ರಾಹಿಂ ಮದನಿ ತುರ್ಕಳಿಕೆ ಪ್ರಾರ್ಥನೆ ಮೂಲಕ ಚಾಲನೆ ನೀಡಿದರು. ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್ ಅಧ್ಯಕ್ಷರಾದ […]

ಬೆಲೆ ಏರಿಕೆ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ

ಬೆಳ್ತಂಗಡಿ: ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲೋತ್ಪನ್ನಗಳ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್ ಹಾಗೂ ಡಿಸೇಲ್ ಸೇರಿದಂತೆ ಅಡುಗೆ ಅನಿಲಗಳ ಬೆಲೆ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ದೇಶದ ಬಡಜನರ ಮೇಲೆ ಸವಾರಿ ಮಾಡುವ ನೀಚ ರಾಜಕೀಯ ಮಾಡುತ್ತಿದೆ ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಬಜಾಲ್ ಆರೋಪಿಸಿದರು.ಅವರು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬೆಲೆ ಏರಿಕೆ ವಿರುದ್ಧ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಸೆಪ್ಟೆಂಬರ್ 11ರಂದು ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು ‌.ಕೋವಿಡ್-19 ನಿಂದ […]

ವಿಪ್ರ ಪಾಕಶಾಸ್ತ್ರ ಸಂಘ ಉದ್ಘಾಟನೆ

ಬೆಳ್ತಂಗಡಿ: ಪಾಕಪ್ರವೀಣರಿಗೂ ಕಾರ್ಮಿಕ ಇಲಾಖೆಯಿಂದ  ಅಸಂಘಟಿತ ಕಾರ್ಮಿಕರಿಗೆ ಒದಗಿಸಲಾಗುವ ಕಾರ್ಡ್ ನೀಡುವ ಸೌಲಭ್ಯವಿದೆ. ಅವರು ಅಕಸ್ಮಿಕವಾಗಿ ಮೃತರಾದರೆ ಅವರ ಕುಟುಂಬಕ್ಕೆ ತಿಂಗಳಿಗೆ ರೂಪಾಯಿ 7500/- ದೊರೆಯುವುದು. ಅಲ್ಲದೆ ಬ್ಯಾಂಕಿಗೆ ವರ್ಷಕ್ಕೆ ರೂಪಾಯಿ 12/-ರಂತೆ ಪ್ರೀಮಿಯಂ ಕಟ್ಟಿದರೆ ರೂಪಾಯಿ 2  ಲಕ್ಷದವರೆಗೆ ಪರಿಹಾರ ದೊರೆಯುವುದು.  ಸದುದ್ದೇಶದಿಂದ ಪ್ರಾರಂಭಗೊಂಡ ಸಂಸ್ಥೆ  ಪೂರ್ಣ ಫಲ ಕೊಡುತ್ತದೆ. ಸರಕಾರದ ವತಿಯಿಂದ ಎಲ್ಲ ನೆರವು ದೊರಕಿಸಲು ಪ್ರಯತ್ನಿಸುವುದಾಗಿ ವಿಧಾನ  ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ನುಡಿದರು.              ಅವರು ಸೆಪ್ಟೆಂಬರ್ […]

‘ಉದ್ಯಮಿಗಳ‌ ರಕ್ಷಣೆಗಾಗಿ ವಾಣಿಜ್ಯೋದ್ಯಮಿಗಳ ಸಂಘ’

ಬೆಳ್ತಂಗಡಿ : ಪ್ರಸ್ತುತ ಪರಿಸ್ಥಿತಿಯಲ್ಲಿ ವ್ಯಾಪಾರ ಮತ್ತು ಉದ್ದಿಮೆಗಳು ಸಂಕಷ್ಟದಲ್ಲಿದ್ದು ಇದಕ್ಕಾಗಿ ಉದ್ಯಮಿಗಳ ಮತ್ತು ಉದ್ಯೋಗಿಗಳ ರಕ್ಷಣೆಗೆ ಮತ್ತು ನ್ಯಾಯಯುತ ಹಕ್ಕುಗಳನ್ನು ಪಡೆಯಲು ಬೆಳ್ತಂಗಡಿ ತಾಲೂಕು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘವನ್ನು ಪ್ರಾರಂಭಿಸಲಾಗಿದೆ ಎಂದು ಉದ್ಯಮಿ ಜಯರಾಮ್ ಹೇಳಿದ್ದಾರೆ.ಅವರು ಸೆಪ್ಟೆಂಬರ್ 1ರಂದು ಬೆಳ್ತಂಗಡಿಯ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಾರಂಭದಲ್ಲಿ ಬೆಳ್ತಂಗಡಿ, ಲಾಯ್ಲ, ಮದ್ದಡ್ಕ ಮತ್ತು ಗುರುವಾಯನಕೆರೆಯ ಉದ್ಯಮಿಗಳು ಮತ್ತು ವರ್ತಕರು ಒಟ್ಟುಸೇರಿ ಸಂಘವನ್ನು ಪ್ರಾರಂಭಿಸಲಾಗುತ್ತಿದ್ದು, ಬಳಿಕ ತಾಲೂಕಿನಾದ್ಯಂತ ಸಂಘಟನೆ ಬಲಪಡಿಸಲಾಗುತ್ತದೆ. ಇದರಲ್ಲಿ ಸಮಾಜ ಸೇವೆಯ ಒಂದು […]

ಎಂ.ಎಸ್. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಡಾl ಅಂಕಿತಾ ಭಟ್

ಬೆಳ್ತಂಗಡಿ: ಉಜಿರೆಯ ಬೆನಕ ಹೆಲ್ತ್ ಸೆಂಟರಿನ ಡಾl ಗೋಪಾಲಕೃಷ್ಣ ಮತ್ತು ಡಾl ಭಾರತೀ ಜಿ. ಕೆ.ಯವರ ಪುತ್ರಿ ಡಾl ಅಂಕಿತಾ ಜಿ. ಭಟ್ ಅವರು ಬೆಂಗಳೂರಿನ ಪ್ರತಿಷ್ಠಿತ ಗವರ್ನಮೆಂಟ್ ಮೆಡಿಕಲ್ ಕಾಲೇಜು ಬಿ.ಎಂ.ಸಿ.ಆರ್.ಐ. ಯಲ್ಲಿ ಎಂ.ಎಸ್. ಓ.ಬಿ.ಜಿ.(ಪ್ರಸೂತಿ ಮತ್ತು ಸ್ತ್ರೀರೋಗ) ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪದವಿ ಗಳಿಸಿರುತ್ತಾರೆ.            ಅಂಕಿತಾ ಜಿ. ಭಟ್ ಅವರು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ .ಪ್ರಾಥಮಿಕ ಶಿಕ್ಷಣ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ […]

ತಾಲೂಕು ಆಡಳಿತದಿಂದಲೇ ಕೋವಿಡ್ ನಿಯಮ ಉಲ್ಲಂಘನೆ;ಅವಮಾನ ಸಹಿಸಿಯೂ ಮೂಕರಾದ ಇಲಾಖಾಧಿಕಾರಿಗಳು.

ಬೆಳ್ತಂಗಡಿ: ದಯವಿಟ್ಟು ಯಾವುದೇ ಪೂರ್ವಾಗ್ರಹವಿಲ್ಲದೇ ಸ್ಥಿತಪ್ರಜ್ಞರಾಗಿ ಇಲ್ಲಿ ಪ್ರಕಟಿಸಲಾದ ಫೊಟೊವನ್ನೊಮ್ಮೆ ಗಮನವಿಟ್ಟು ನೋಡಿ. ಬೆಳ್ಳಿಯ ಸಿಂಹಾಸನದಲ್ಲಿ ಎತ್ತರದ ವೇದಿಕೆಯಲ್ಲಿ ಕಲ್ಮಂಜ ದೇವರಗುಡ್ಡೆಯ ಗುರುದೇವ ಮಠದ ಬ್ರಹ್ಮಾನಂದ ಶ್ರೀಗಳು ವಿರಾಜಮಾನರಾಗಿದ್ದಾರೆ. ಅವರ ಪದತಲದಲ್ಲಿ ವೇದಿಕೆಯ ಕೆಳಗೆ ಕುಳಿತವರು ಮಠದ ಭಕ್ತರು ಎಂದು ಊಹಿಸಿಕೊಂಡರೆ ಅದು ನಿಮ್ಮ ತಪ್ಪು. ಇವರೆಲ್ಲಾ ನಮ್ಮ ತಾಲೂಕಿನ ವಿವಿಧ ಇಲಾಖೆಯ ಕ್ಲಾಸ್ l ಅಧಿಕಾರಿಗಳು. ಪ್ರಾಯಶಃ ನಮ್ಮ ತಾಲೂಕಿನ ಇತಿಹಾಸದಲ್ಲಿ ಸರಕಾರಿ ಇಲಾಖಾಧಿಕಾರಿಗಳು ಈ ರೀತಿ ಗುಲಾಮರಂತೆ ಮೂಕ ವೇದನೆ ಅನುಭವಿಸಿ, ಹತಾಶರಾಗಿ ಸರಕಾರಿ […]

ಅತ್ತ ಧರ್ಮಸ್ಥಳಕ್ಕೆ ದಿಗ್ಬಂಧನ ಇತ್ತ ದೇವರಗುಡ್ಡೆಯಲ್ಲಿ ಒಡ್ಡೋಲಗ

ಕೊರೋನಾ ನಿಯಮ ಪಾಲನೆಯಲ್ಲಿ ದ್ವಿಮುಖನೀತಿ ಬೆಳ್ತಂಗಡಿ: ಅತ್ತ ಧರ್ಮಸ್ಥಳದಲ್ಲಿ ವೀಕ್‌ಎಂಡ್ ಕರ್ಫ್ಯೂ ಹೆಸರಲ್ಲಿ ಶನಿವಾರ ಮತ್ತು ಭಾನುವಾರ ಕ್ಷೇತ್ರದ ಮುಖ್ಯದ್ವಾರದ ಬಳಿಯೇ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿ ಪರವೂರಿನ ಭಕ್ತಾದಿಗಳನ್ನು ಮಾತ್ರವಲ್ಲ (ಭಕ್ತಾದಿಗಳು ವಿರಳಾತಿವಿರಳ), ಸ್ಥಳೀಯ ನಿವಾಸಿಗರ ಪ್ರವೇಶಕ್ಕೂ ತಡೆವೊಡ್ಡಿ ಹತ್ತಾರು ಪ್ರಶ್ನೆಗಳನ್ನು‌ ಕೇಳ್ತಾರೆ. ವೀಕ್‌ಎಂಡ್ ಕರ್ಫೂ ಸಮಯದಲ್ಲಂತೂ ಭಕ್ತರಿಗೆ ದೇವರ ದರುಶನವೂ ಮರೀಚಿಕೆಯೇ ಸರಿ. ವಾರದ ಉಳಿದ ದಿನಗಳಲ್ಲೂ ದೇವರ ದರುಶನಕ್ಕೆ ಮಾತ್ರ ಅವಕಾಶ.‌ ತೀರ್ಥ-ಪ್ರಸಾದವಿಲ್ಲ; ದೇವರ ಸೇವೆಗೆ ಅವಕಾಶವಿಲ್ಲ; ಪ್ರಸಾದ ಭೋಜನವಂತೂ ಇಲ್ಲವೇ ಇಲ್ಲ… ಇದು […]

ಅಂತರಂಗದ ಕರೆಯಾಗಿ ಹೊಮ್ಮಿದ ದೇಶಭಕ್ತಿ

ಅಂತರಂಗದ ಕರೆಯಾಗಿ ಹೊಮ್ಮಿದ ದೇಶಭಕ್ತಿ————————————ಹೇಳಿ ಕೊಡುವುದರಿಂದಾಗಲಿ, ಆದೇಶಗಳಿಂದಾಗಲಿ, ಪ್ರತಿಪಾದನೆಗಳಿಂದಾಗಲಿ ಬರುವ ದೇಶಭಕ್ತಿಗೂ, ಅಂತರಂಗದಿಂದಲೆ ಹೊರ ಹೊಮ್ಮಿ ಬರುವ ದೇಶಭಕ್ತಿಗೂ ವ್ಯತ್ಯಾಸವಿದೆ ಎನ್ನುವುದಕ್ಕೆ ಸಾಕ್ಷಿ ಈ ಘಟನೆ.ಸ್ವಾತಂತ್ರ್ಯ ದಿನಾಚರಣೆಯಂದು ‘ಗಾಂಧಿ ವಿಚಾರ ವೇದಿಕೆ’ ಯ ಸುಳ್ಯ ಘಟಕದವರು ಮೊಗ್ರದ ಏರಣಗುಡ್ಡೆಯಲ್ಲಿ ಧ್ವಜಾರೋಹಣ ಮಾಡಿದ್ದರು. ಧ್ವಜಾರೋಹಣದ ಕಾರ್ಯಕ್ರಮವೆಲ್ಲ ಮುಗಿದು ಎಲ್ಲರೂ ಮಾತನಾಡುತ್ತಾ ಮನೆಯ ಕಡೆಗೆ ಹೊರಡುತ್ತಿರಬೇಕಾದರೆ ಆ ದಾರಿಯಾಗಿ ತನ್ನ ದೈನಂದಿನ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರು ಹಾರಾಡುತ್ತಿದ್ದ ಧ್ವಜವನ್ನು ಕಾಣುತ್ತಲೇ ತನ್ನ ದಾರಿಯನ್ನು ಬದಲಿಸಿದರು. ನೇರವಾಗಿ ಧ್ವಜದ ಬಳಿಗೆ […]

ಬೆಸ್ಟ್ ಪೌಂಡೇಶನ್ ವತಿಯಿಂದ ಮುಂಡೂರಿನಲ್ಲಿ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಬೆಸ್ಟ್ ಪೌಂಡೇಶನ್ ಬೆಳ್ತಂಗಡಿ ವತಿಯಿಂದ ಮುಂಡೂರು ಗ್ರಾಮದ ಸುಮಾರು 90ಕುಟುಂಬಗಳಿಗೆ ಶಾರದಾಂಬ ಯುವಕ ಮಂಡಲದ ವಠಾರದಲ್ಲಿ ಹೈಕೋರ್ಟ್ ವಕೀಲರು ಬೆಸ್ಟ್ ಫೌಂಡೇಶನ್‌ನ ರಕ್ಷಿತ್ ಶಿವರಾಂ ರವರ ನೇತೃತ್ವದಲ್ಲಿ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ಅರವಿಂದ ಭಟ್, ಮೇಲಂತಬೆಟ್ಟು ಗ್ರಾಮ ಪಂಚಾಯಿತ್‌ನ ಉಪಾಧ್ಯಕ್ಷೆ ಸವಿತಾ, ಗ್ರಾಮ ಪಂಚಾಯಿತಿನ ಮಾಜಿ ಸದಸ್ಯೆ ನೀತಾ ಮಹೇಶ್ ಕುಮಾರ್, ಬೆಳ್ತಂಗಡಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ, […]

ಬೆಸ್ಟ್ ಫೌಂಡೇಷನ್ ವತಿಯಿಂದ ದಿನಸಿ ಕಿಟ್ ವಿತರಣೆ

ಬೆಳ್ತಂಗಡಿ: ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ವತಿಯಿಂದ ಸೋಣಂದೂರು ಗ್ರಾಮದ ಪೊಮ್ಮಜೆ ಭಾಗದ 150 ಕುಟುಂಬಗಳಿಗೆ ಹೈಕೋರ್ಟ್ ವಕೀಲರು ಹಾಗೂ ಬೆಸ್ಟ್ ಫೌಂಡೇಷನ್‌ನ ರಕ್ಷಿತ ಶಿವರಾಂ ಇವರ ನೇತೃತ್ವದಲ್ಲಿ ಇಂದು ದಿನಸಿ ಕಿಟ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಬೇಬಿ ಸುವರ್ಣ ಎಸ್., ಮಾಜಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಬೆಳ್ತಂಗಡಿ ಯುವ ಕಾಂಗ್ರೆಸ್‌ನ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅನಿಲ್ ಪೈ, ತಾಲೂಕು ಮಲೆಕುಡಿಯ ಸಂಘದ ಕಾರ್ಯದರ್ಶಿ ಜಯನಂದ ಪಿಲಿಕಲ, ಯುವ […]