ಕೊರೋನಾದಿಂದ ಮೃತಪಟ್ಟವರ ಕುಟುಂಬಿಕರಿಗೆ ನೆರವು

ಬೆಳ್ತಂಗಡಿ: ರಾಜ್ಯ ಸರಕಾರ ಕೊರೋನಾದಿಂದ ಮೃತರಾದ ಬಿಪಿಎಲ್ ಪಡಿತರ ಚೀಟಿ ಹೊಂದಿದವರ ಕುಟುಂಬಿಕರಿಗೆ 1ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು,ಈ ಯೋಜನೆಯ ಬಗ್ಗೆ ಸಂಬಂಧಿತ ಮನೆಗಳಿಗೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ ದಾನಿಗಳ ಸಹಕಾರದಿಂದ ಸಂಗ್ರಹಿಸಿದ ಸಹಾಯಧನವನ್ನು ಸಂತ್ರಸ್ತ ಕುಟುಂಬಿಕರಿಗೆ ತಲಾ 10,000 ರೂಪಾಯಿಯಂತೆ ವಿತರಿಸಿ, ಅವರಿಗೆ ಸಾಂತ್ವನ ಹೇಳುವ ಕಾರ್ಯವನ್ನು ಕ್ಷೇತ್ರದ ಶಾಸಕನಾಗಿ ಮಾಡುತ್ತಿದ್ದೇನೆ. ಸರಕಾರದ ಪರಿಹಾರಧನ ಪಡೆಯಲು ಸಂಗ್ರಹಿಸಬೇಕಾದ ದಾಖಲೆಗಳ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರೊಡಗೂಡಿ ಸಂಬಂಧಿಸಿದ ಮನೆಗಳಿಗೆ ತೆರಳಲಾಗುವುದು ಎಂದು ಬೆಳ್ತಂಗಡಿಯ ಶಾಸಕ ಹರೀಶ್ […]
ಸ್ಕೌಟ್ಸ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳಿಗೆ ಸನ್ಮಾನ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ 11 ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಂಗಳೂರು ಕರ್ನಾಟಕ ರಾಜ್ಯ ಸಂಸ್ಥೆ ಆಯೋಜಿಸಿದ್ದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಜ್ಯ ಪುರಸ್ಕಾರ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಷ್ಟ್ರ ಸಂಸ್ಥೆ ಆಯೋಜಿಸಿದ ಗೋಲ್ಡನ್ ಆ್ಯರೊ ರಾಷ್ಟ್ರ ಪುರಸ್ಕಾರ ಪಡೆದ ನಾಲ್ಕು ವಿದ್ಯಾರ್ಥಿಗಳು; ಹಾಗೂ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ರಾಜ್ಯ ಪುರಸ್ಕಾರ ಪಡೆದು ಬೆಳ್ತಂಗಡಿ ತಾಲೂಕಿಗೆ ಹೆಮ್ಮ ಎನಿಸಿಕೊಂಡ ನಾಲ್ವರು ಸಾಧಕ ವಿದ್ಯಾರ್ಥಿಗಳನ್ನು […]
ಈಶಾವಾಸ್ಯ ಪುರಸ್ಕಾರ, ಪುಸ್ತಕ ಬಿಡುಗಡೆ

ಬೆಳ್ತಂಗಡಿ: ವೃತ್ತಿ, ಪ್ರವೃತ್ತಿ, ಸಂಸಾರ ಸಮತೋಲನದಲ್ಲಿ ಇರಬೇಕು. ಬರಹಗಳು ಕತ್ತಲಲ್ಲಿ ಬೆಳಕನ್ನು ಬಗೆಯುವ ಕೆಲಸವನ್ನು ಮಾಡುತ್ತವೆ. ಪುಸ್ತಕ ಓದಿದರೆ ಮನಸ್ಸು ಪ್ರಫುಲ್ಲವಾಗುತ್ತದೆ. ಸುಘಾತ ಪುಸ್ತಕ ಲಯವಾದ್ಯದ ಆಳ, ಹರಹು, ಅರ್ಥ ಹಾಗೂ ವಿಷಯ ವ್ಯಾಪ್ತಿಯನ್ನು ಹೆಚ್ಚಾಗಿ ಹೊಂದಿ; ಕಲಾಮೌಲ್ಯವನ್ನು ವೃದ್ಧಿಸಿದೆ. ಹೋಗೋಣ ಜಂಬೂ ಸವಾರಿ ಪುಸ್ತಕ ಸರಳ ನಿರೂಪಣೆಯಿಂದ ಓದಿಸಿಕೊಂಡು ಹೋಗುತ್ತದೆ. ಲಘುಬರಹದಲ್ಲೂ ಜೀವನಪ್ರೀತಿ, ಜೀವನಮೌಲ್ಯಗಳನ್ನು ಇಲ್ಲಿ ಕಾಣಬಹುದು ಎಂದು ಕರ್ಣಾಟಕ ಬ್ಯಾಂಕ್ ಸಿಇಒ ಹಾಗೂ ಎಂಡಿ ಮಹಾಬಲೇಶ್ವರ ಎಂ. ಎಸ್. ಹೇಳಿದರು.ಅವರು ಜುಲೈ 10ರ ಸಂಜೆ […]
ನಾಳ ದೇಗುಲಕ್ಕೆ ಕುಮಾರಸ್ವಾಮಿ ಭೇಟಿ

ಬೆಳ್ತಂಗಡಿ: ಗೇರುಕಟ್ಟೆ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಜುಲೈ 11ರಂದು ಮೂಡಿಗೆರೆ ಶಾಸಕ ಎಂ. ಪಿ. ಕುಮಾರಸ್ವಾಮಿ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದರು.ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಪತ್ರಕರ್ತ ಭುವನೇಶ್ ಗೇರುಕಟ್ಟೆ ಶಾಸಕರನ್ನು ಸ್ವಾಗತಿಸಿದರು. ಪ್ರಧಾನ ಅರ್ಚಕ ರಾಘವೇಂದ್ರ ಅಸ್ರಣ್ಣ ಪ್ರಸಾದ ನೀಡಿ ಆಶೀರ್ವದಿಸಿದರು. ಸದಸ್ಯರಾದ ಜನಾರ್ದನ ಪೂಜಾರಿ,ಅಂಬಾ ಆಳ್ವ,ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ರಾಜೇಶ್ ಪೆಂರ್ಬುಡ, ಸದಾಶಿವ ನಾಯ್ಕ್, ಲೋಕೇಶ್ ಜಿ., ಮೋಹನ ತಾರೆಮಾರು, ದೇವಳ ಕಚೇರಿ ಪ್ರಬಂಧಕ ಗಿರೀಶ್ ಶೆಟ್ಟಿ ಮತ್ತಿತರರು […]
ಚೇತನ ಸೋಮೇಶ್ವರ ಅವರ ಕೃತಿ ಮಹತ್ವದ ಕೊಡುಗೆ: ಪ್ರೊ. ಬಿ. ಎ. ವಿವೇಕ ರೈ

ಬೆಳ್ತಂಗಡಿ: ವೈಚಾರಿಕತನ ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಎ. ಎನ್. ಮೂರ್ತಿರಾಯರ ಕುರಿತ ಅಧ್ಯಯನ ಗ್ರಂಥ ಹೊರಬರುತ್ತಿರುವುದು ಮಹತ್ವದ ಸಂಗತಿಯಾಗಿದೆ ಎಂದು ಖ್ಯಾತ ವಿದ್ವಾಂಸ ಪ್ರೊ. ಬಿ. ಎ. ವಿವೇಕ ರೈ ಅಭಿಪ್ರಾಯಪಟ್ಟರು.‘ಬಹುರೂಪಿ’ ಪ್ರಕಾಶನ ಜುಲೈ 11ರಂದು ಅಂತರ್ಜಾಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚೇತನ ಸೋಮೇಶ್ವರ ಅವರ ಕೃತಿ ‘ಲೋಕ ರೂಢಿಯ ಮೀರಿ’ ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.ಎ. ಎನ್. ಮೂರ್ತಿರಾಯರ ಎಲ್ಲಾ ಕೃತಿಗಳಲ್ಲೂ ವೈಚಾರಿಕ ಚಿಂತನೆಯಿದೆ. ‘ದೇವರು’ ಕೃತಿ ಮಾತ್ರವಲ್ಲದೆ ಅವರ ಆತ್ಮ ಕಥನ, ಪ್ರವಾಸ ಕಥನ […]
ಹಡೀಲು ಬಿದ್ದ ಗದ್ದೆ ಹಸಿರಾಗಿಸಲು ವಿಶೇಷ ಉತ್ತೇಜನ-ಶಾಸಕ ಪೂಂಜ

ಬೆಳ್ತಂಗಡಿ: ರಾಜ್ಯದಾದ್ಯಂತ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತ ಬೆಳೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಬೆಳ್ತಂಗಡಿ ತಸಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತ ಬೆಳೆಯುವ ಮೂಲಕ ಹಸಿರಾಗಿಸಲು ವಿಶೇಷ ಉತ್ತೇಜನ ನೀಡಲಾಗುವುದು. ಇಲ್ಲಿನ ವೈದ್ಯನಾಥೇಶ್ವರ ದೇವರ ಸನ್ನಿಧಿಯಲ್ಲಿ ಪಾರಂಪರಿಕವಾಗಿ ನಡೆಯುವ ಕೋರಿ ಜಾತ್ರೆ ನಾಡಿನಲ್ಲೇ ಅತ್ಯಂತ ವೈಶಿಷ್ಟ್ಯಪೂರ್ಣ ಜಾತ್ರೆ. ಇಲ್ಲಿನ ದೇವರ ಗದ್ದೆಯಲ್ಲಿ ಊರವರೆಲ್ಲರೂ ಸೇರಿ ಉಳುಮೆ ಮಾಡುವ ಮೂಲಕ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಮಾದರಿ ಕಾರ್ಯ ಎಂದು ಬೆಳ್ತಂಗಡಿಯ ಶಾಸಕ ಹರೀಶ್ […]
ದಯಾ ಶಾಲೆಯಲ್ಲಿ ಪಾಲಕರ ಸಭೆ

ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ ಹಾಗೂ ವಿಮುಕ್ತಿ ಲಾಯ್ಲದ ಸಹಸಂಸ್ಥೆಯಾದ ದಯಾ ವಿಶೇಷ ಮಕ್ಕಳ ಶಾಲೆಯಲ್ಲಿ ಪೋಷಕರ ಸಭೆಯು ವಿಮುಕ್ತಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ವಿನೋದ್ ಮಸ್ಕರೇನ್ಹಸ್‌ರ ಅಧ್ಯಕ್ಷತೆಯಲ್ಲಿ ನಡೆಯಿತು. ಪೋಷಕರ ಪ್ರತಿನಿಧಿಯಾಗಿ ಎವ್ಚಿನ್ ವೇಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ದಿವ್ಯಾ ಮಾತನಾಡಿ, ಶಾಲೆಯಲ್ಲಿ ಪ್ರಸ್ತುತ ಫಿಸಿಯೋಥೆರಫಿ ಮತ್ತು ವಾಕ್ ಹಾಗೂ ಶ್ರವಣ ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ಸ್ಪಂದಿಸುವ ಬಗ್ಗೆ ಚರ್ಚಿಸಿದರು. ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಶಾಲೆಗೆ ಕರೆತರುವ ಬಗ್ಗೆ ಸೂಚಿಸಲಾಯಿತು. 18 ವರ್ಷ […]
ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ಲಯನ್ಸ್ ಕ್ಲಬ್‌ನ 2021-22ನೇ ಸಾಲಿನ ಅಧ್ಯಕ್ಷರಾಗಿ ರಾಜೀವ ಗೌಡ, ಕಾರ್ಯದರ್ಶಿಯಾಗಿ ಅನಂತಕೃಷ್ಣ ಹಾಗೂ ಕೋಶಾಧಿಕಾರಿಯಾಗಿ ನಿವೃತ್ತ ಶಿಕ್ಷಕ ದತ್ತಾತ್ರೇಯ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಸಹಾಯ್ ತಂಡದಿಂದ ಸ್ವಚ್ಚತಾ ಕಾರ್ಯಕ್ರಮ

ಬೆಳ್ತಂಗಡಿ: ‘ನಿರ್ಮಲ ಮನಸ್ಸು ನೈರ್ಮಲ್ಯ ಪರಿಸರ’ ಎಂಬ ಘೋಷಣೆಯೊಂದಿಗೆ ಕರ್ನಾಟಕ ಮುಸ್ಲಿಂ ಜಮಾಅತ್- KMJ, SYS, SSF, KCF ಇದರ ಸಹಾಯ್ ಉಪ್ಪಿನಂಗಡಿ ಸರ್ಕಲ್ ವ್ಯಾಪ್ತಿಯ ಬುಲೇರಿ ಸರಕಾರಿ ಪ್ರೌಢ ಶಾಲೆ, ಪ್ರಾಥಮಿಕ ಶಾಲೆ ಮತ್ತು ಇಳಂತಿಲ ಮುರ ಮಸೀದಿ, ಮದ್ರಸ ವಠಾರವನ್ನು ಸಹಾಯ್ ಕುಪ್ಪೆಟ್ಟಿ ವಿಂಗ್‌ನ ನೇತೃತ್ವದಲ್ಲಿ ಸ್ವಚ್ಚತೆ ಮಾಡಲಾಯಿತು ಪ್ರಾರ್ಥನೆ ಮೂಲಕ ಚಾಲನೆ ನೀಡಿ ಮಾತನಾಡಿದ ಅಬ್ದುಲ್ ಖಾದರ್ ಮದನಿ ಕನ್ಯಾರಕೋಡಿ, ಇಂತಹಾ ಸಂದಿಗ್ಧ ಸಂದರ್ಭದಲ್ಲಿ ಮಾದರಿ ಕಾರ್ಯಾಚರಣೆ ಮಾಡುವ ಮೂಲಕ ಇತರ ಸಂಘಟನೆಗಳಿಗೆ […]
ಮೆಸ್ಕಾಂ ಜನಸಂಪರ್ಕ ಸಭೆ

ಬೆಳ್ತಂಗಡಿ: ಜುಲೈ 14ರ ಬುಧವಾರದಂದು ಬೆಳಿಗ್ಗೆ ಗಂಟೆ 11-00ಕ್ಕೆ ಮೆಸ್ಕಾಂನ ಬೆಳ್ತಂಗಡಿ ಮತ್ತು ಉಜಿರೆ ಉಪವಿಭಾಗದ ಗ್ರಾಹಕರಿಗಾಗಿ ಜನಸಂಪರ್ಕ ಸಭೆಯನ್ನು ದೂರವಾಣಿ ಮತ್ತು ಆನ್‌ಲೈನ್ ಗೂಗಲ್ ಮೀಟ್ ಮೂಲಕ ನಡೆಸಲಾಗುವುದು. ಮಂಗಳೂರು ವೃತ್ತದ ಮೆಸ್ಕಾಂ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ನಡೆಯುವ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಭಾಗವಹಿಸಿ, ವಿದ್ಯುತ್ ಸಮಸ್ಯೆ ಸಹಿತ ವಿದ್ಯುತ್‌ಗೆ ಸಂಬಂಧಿಸಿದ ಇತರ ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳಬಹುದು ಎಂದು ಮೆಸ್ಕಾಂನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಗ್ರಾಹಕರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: (08256)-232095 Geogle meet link: meet.geogle.meet/rxa-xbju-hmu.