ರಸ್ತೆ ದುರವಸ್ಥೆ – ದುರಸ್ಥಿಗೊಳಿಸಲು ಒತ್ತಾಯ

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಕಿನ್ನಿಗೋಳಿಯಿಂದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಡಂಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆಲವೇ ದಿನಗಳಲ್ಲಿ ಸಂಪರ್ಕ ಕಡಿದುಕೊಳ್ಳಲಿದೆ. ದೇವಸ್ಥಾನದ ಸಮೀಪ ದೇರಮಾರ್ ಎಂಬಲ್ಲಿ ರಸ್ತೆ ಮಳೆಗೆ ಕುಸಿದು ಸಂಪರ್ಕ ಕಡಿತವಾಗುವ ಸನ್ನಿವೇಶ ಎದುರಾಗಿದೆ. ಮದ್ದಡ್ಕ ಸಮೀಪದ ಕಿನ್ನಿಗೋಳಿಯಿಂದ ದೇರಮಾರ್‌ವರೆಗೆ ಕುವೆಟ್ಟು ಗ್ರಾಮ ಪಂಚಾಯತ್ ಹಾಗೂ ಅಲ್ಲಿಂದ ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಈ ರಸ್ತೆ ಹೊಂಡ ಗುಂಡಿಯಿಂದ ಕೂಡಿದ್ದು, ಕಲ್ಲು ಇನ್ನಿತರ ವಸ್ತುಗಳನ್ನು ಸಾಗಿಸುವ ಲಾರಿಗಳು ಈ ರಸ್ತೆಯಲ್ಲಿ ಸಾಗುತ್ತಿದ್ದು ರಸ್ತೆ […]
ಸ್ವಸಹಾಯ ಸಂಘಗಳ ಲಾಭಾಂಶ ವಿತರಣೆ

ಬೆಳ್ತಂಗಡಿ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಮತ್ತು ಸಿ ಟ್ರಸ್ಟ್(ರಿ) ಮಡಂತ್ಯಾರು ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಲಾಭಾಂಶ ವಿತರಣೆ ಕಾರ್ಯಕ್ರಮ ಮಡಂತ್ಯಾರು ವಲಯದ ಕಛೇರಿಯಲ್ಲಿ ಜುಲೈ 17ರಂದು ಜರಗಿತು. ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಬಿ. ಜಯಂತ ಶೆಟ್ಟಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಯಶವಂತ್, ಮಡಂತ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಶೆಟ್ಟಿ ಪದೆಂಜಿಲ, ಉಮೇಶ್ ಸುವರ್ಣ ಅಲೆಕ್ಕಿ, ವಲಯ ಮೇಲ್ವಿಚಾರಕ ಮಧು ಕಿರಣ್, […]
ಹೆದ್ದಾರಿಗೆ ಮರ ಉರುಳಿಬಿದ್ದ ಮರ-ಸಂಚಾರ ವ್ಯತ್ಯಯ

ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಬಳಿ ಜುಲೈ 14ರ ಸಂಜೆ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಗೆ ಬೃಹತ್ ಗಾತ್ರದ ಮರವೊಂದು ವಿದ್ಯುತ್ ಲೈನ್ ಹಾಗೂ ರಸ್ತೆಗೆ ಉರುಳಿ ವಾಹನ ಸಂಚಾರ ಹಾಗೂ ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಯಿತು.ಕಕ್ಕಿಂಜೆಯಿಂದ ಮುಂಡಾಜೆಗೆ ವಿದ್ಯುತ್ ಪೂರೈಸುವ 11ಕೆವಿ ಲೈನ್‌ನ ಎರಡು ಕಂಬಗಳು ಮುರಿದು ಬಿದ್ದಿವೆ. ಇದರಿಂದ ಮುಂಡಾಜೆ, ಸೋಮಂತಡ್ಕ, ಕಲ್ಮಂಜ, ಕಾಯರ್ತೋಡಿ, ಕೊಡಂಗೆ, ಕುಡೆಂಚಿ, ಮೂಲಾರು, ಕಡಂಬಳ್ಳಿ ಮೊದಲಾದ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ […]
ಸೇವಾಭಾರತಿಯ ಸೇವೆಗೆ ಕೃತಜ್ಞತೆ

ಬೆಳ್ತಂಗಡಿ: ಸೇವಾಭಾರತಿ ಬೆಳ್ತಂಗಡಿ ಇದರ ಸೇವಾಧಾಮ ಪುನಶ್ಚೇತನ ಕೇಂದ್ರಕ್ಕೆ ಬೆನ್ನು ಮೂಳೆ ಮುರಿತಕ್ಕೊಳಗಾದ ದಾವಣಗೆರೆ ಜಿಲ್ಲೆಯ ಗೊಪ್ಪೇನಹಳ್ಳಿಯ ನಾಗರಾಜ್ ಇವರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದು, ಗಾಲಿಕುರ್ಚಿಯ ಸಹಾಯವಿಲ್ಲದೆ ನಡೆದಾಡಲು ಕಷ್ಟಪಡುತ್ತಿದ್ದರು. ಇವರು ಸತತ ಮೂರು ತಿಂಗಳ ಪುನಶ್ಚೇತನ ಶಿಬಿರದಲ್ಲಿ ತೊಡಗಿಸಿಕೊಂಡು ಇದೀಗ ವಾಕರ್ ಮೂಲಕ ನಡೆಯುವಂತಾಗಿದ್ದು; ಪುನಶ್ಚೇತನ ಮುಗಿಸಿ ಮನೆಗೆ ಹೋಗುವ ದಾರಿ ಮಧ್ಯೆ ಸೇವಾಭಾರತಿಯ ಕಾರ್ಯಾಲಯ ಕನ್ಯಾಡಿಯ ಸೇವಾನಿಕೇತನಕ್ಕೆ ಭೇಟಿನೀಡಿ ಕೃತಜ್ಞತೆ ತಿಳಿಸಿರುತ್ತಾರೆ.ಈ ಸಂದರ್ಭ ನಾಗರಾಜ್‌ರ ತಾಯಿ ಮತ್ತು ಸ್ನೇಹಿತರು ಉಪಸ್ಥಿತರಿದ್ದರು. ಸೇವಾಭಾರತಿಯ ಅಧ್ಯಕ್ಷ ವಿನಾಯಕ […]
ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಳದಂಗಡಿ ವಲಯದ ಸುಲ್ಕೇರಿಮೊಗ್ರು ಒಕ್ಕೂಟದಲ್ಲಿನ ಎ ಮತ್ತು ಬಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಲಾಭಾಂಶ ವಿತರಣೆ ಜುಲೈ 14ರಂದು ಸುಲ್ಕೇರಿ ಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು ಸದಸ್ಯರಿಗೆ ಲಾಭಾಂಶದ ಚೆಕ್‍ನ್ನು ವಿತರಸಿ ಶುಭ ಹಾರೈಸಿದರು. ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಯೋಜನೆಯ ಗುರುವಾಯನಕೆರೆ ತಾಲೂಕು ಯೋಜನಾಧಿಕಾರಿ ಯಶವಂತ ಎಸ್., ಒಕ್ಕೂಟದ ಅಧ್ಯಕ್ಷ ಆನಂದ, ಶಕುಂತಳಾ, ಕೋಶಾಧಿಕಾರಿ ಪ್ರೇಮಾ, […]
ಸಿಎಸ್‌ಆರ್ ಯೋಜನೆಯಡಿ ಒದಗಿಸಲಾದ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳ ಹಸ್ತಾಂತರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿರುವ ಕೋವಿಡ್ ಸಂತ್ರಸ್ತರ ಚಿಕಿತ್ಸೆಗೆ ನೆರವಾಗಲು ಸಿಎಸ್‌ಆರ್ ಯೋಜನೆಯಡಿ ಒದಗಿಸಲಾದ 15 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಶಾಸಕ ಹರೀಶ್ ಪೂಂಜರವರು ಜುಲೈ 14ರಂದು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿದರು.ಬೆಳ್ತಂಗಡಿ ತಾಲೂಕಿನಲ್ಲಿರುವ ಕೋವಿಡ್ ಸಂತ್ರಸ್ತರ ಚಿಕಿತ್ಸೆಗಾಗಿ ಸಿಎಸ್‌ಆರ್ ಯೋಜನೆಯಡಿ 20ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಒದಗಿಸಿಕೊಡುವಂತೆ ಶಾಸಕ ಹರೀಶ್ ಪೂಂಜರವರು ಕಳೆದ ಮೇ ತಿಂಗಳ 29ರಂದು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ರವರಿಗೆ ಮನವಿ ನೀಡಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ಸರಕಾರ ಸಿಎಸ್‌ಆರ್ ಯೋಜನೆಯಡಿ ತಾಲೂಕಿಗೆ 15ಆಕ್ಸಿಜನ್ […]
ಬೆಳ್ತಂಗಡಿ ಧರ್ಮಪ್ರಾಂತ್ಯದಿಂದ ಆಹಾರ ಮತ್ತು ಆರೋಗ್ಯ ಕಿಟ್ ವಿತರಣೆ

ಬೆಳ್ತಂಗಡಿ: ದೇವರ ಪ್ರೀತಿ ಅರಿಯಲು ಮನುಷ್ಯನ ಮೂಲಕ ಸಾಧ್ಯ. ಕೋವಿಡ್ ನಂತಹಾ ಸಾಂಕ್ರಾಮಿಕ ರೋಗ ನಿಯಂತ್ರಣ ಕೇವಲ ಸರಕಾರದಿಂದ ಮಾತ್ರ ಸಾಧ್ಯವಿಲ್ಲ. ಜನರ ಕಷ್ಟ ದುಃಖ ಅರಿತು ಸಂಘಸಂಸ್ಥೆಗಳು ಕೈ ಜೋಡಿಸಿದರೆ ಪಿಡುಗು ನಿವಾರಿಸಬಹುದಾಗಿದೆ. ಆ ಕೆಲಸವನ್ನು ಪ್ರಚಾರ ಬಯಸದೆ ನಮ್ಮ ಧರ್ಮಪ್ರಾಂತ್ಯ ಮತ್ತು ಸಹಸಂಸ್ಥೆಗಳು ಮಾಡುತ್ತಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಲಾರೆನ್ಸ್ ಮುಕ್ಕುಯಿ ಹೇಳಿದರು.ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಶನ್, […]
ಆರ್ಥಿಕ ಸಶಕ್ತೀಕರಣಕ್ಕೆ ಸಹಕಾರಿ ಸಂಘಗಳ ಕೊಡುಗೆ ಅಪಾರ-ಪೂಂಜ

ಬೆಳ್ತಂಗಡಿ: ಗ್ರಾಮೀಣ ಭಾಗದ ಜನರ ಆರ್ಥಿಕ ಅಶಕ್ತೀಕರಣಕ್ಕೆ ಸಹಕಾರಿ ಸಂಘಗಳ ಕೊಡುಗೆ ಅಪಾರ. ಇಂದು ಇಲ್ಲಿ ತನ್ನ ಮೂರನೇ ಶಾಖೆಯನ್ನು ಆರಂಭಿಸಿರುವ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಅಶಕ್ತರಾಗಿರುವವರನ್ನು ಸಶಕ್ತರನ್ನಾಗಿಸಲು ಅನೇಕ ಯೋಜನೆಗಳನ್ನು ಅನುಷ್ಠಾನಿಸುತ್ತಿದೆ. ಈ ಸೊಸೈಟಿಯ ಅಧ್ಯಕ್ಷರಾದ ಎಲೋಶಿಯಸ್ ಲೋಬೋ ಹಾಗೂ ಆಡಳಿತ ಮಂಡಳಿಯವರು ನಾಡಿನ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಆದರ್ಶಗಳನ್ನು ತಮ್ಮ ಸಂಘದ ಬೆಳವಣಿಗೆಗೆ ಅಳವಡಿಸಿಕೊಳ್ಳುವ ಮೂಲಕ ಮಾದರಿ ಸಹಕಾರಿ ಸಂಘವನ್ನು ಬೆಳೆಸುತ್ತಿದ್ದಾರೆ. ಈ ಸೊಸೈಟಿಯು ಜಿಲ್ಲೆ […]
ಬಕ್ರೀದ್ ಹಬ್ಬದ ಪ್ರಯುಕ್ತ ಪೂರ್ವಭಾವಿ ಶಾಂತಿಸಭೆ

ಬೆಳ್ತಂಗಡಿ: ಇದೇ ಜುಲೈ 2ರ ಬುಧವಾರ ಮುಸ್ಲಿಂ ಬಾಂಧವರು ಆಚರಿಸುವ ಬಕ್ರೀದ್ ಹಬ್ಬಕ್ಕೆ ಪೂರ್ವಭಾವಿಯಾಗಿ ಜುಲೈ 14ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆ ನಡೆಯಿತು.ಈ ಸಭೆಯಲ್ಲಿ ಮಾತನಾಡಿದ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಂ. ಎಂ. ನಂದಕುಮಾರ್, ಅಕ್ರಮ ದನ ಸಾಗಟ ಮಾಡುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು; ಹಾಗೂ ರಾತ್ರಿ ವೇಳೆಯಲ್ಲಿ ಅನಾವಶ್ಯಕವಾಗಿ ತಿರುಗಾಡುವುದು ಕಂಡು ಬಂದಲ್ಲಿ ಸೂಕ್ತ ಕಾನುನು ಕ್ರಮ ಜರುಗಿಸಲಾಗುವುದು. ಹಿಂದು ಮುಸ್ಲಿಂಮರು ಸಹೋದರತ್ವದಿಂದ ಸಹಬಾಳ್ವೆಯಿಂದ ಹಬ್ಬಗಳನ್ನು ಆಚರಿಸಬೇಕು ಎಂದು […]
ರೋಟರಿ ನೇತೃತ್ವದಲ್ಲಿ ನಿರ್ಮಾಣವಾದ ಮನೆ ಹಸ್ತಾಂತರ.

ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೋಟರಿ ಸೇವಾ ಟ್ರಸ್ಟ್, ವಿವಿಧ ಬ್ರಾಹ್ಮಣ ಸಂಘಟನೆಗಳು ಹಾಗೂ ದಾನಿಗಳ ನೆರವಿನಿಂದ ಅಂದಾಜು 4.60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮನೆಯನ್ನು ಮುಂಡಾಜೆಯ ಕಡಂಬಳ್ಳಿ ಸಮೀಪದ ಗಣಪತಿ ಭಟ್ ದಂಪತಿಗಳಿಗೆ ಹಸ್ತಾಂತರಿಸಲಾಯಿತು.ಮನೆಯ ಕೀಲಿಕೈ ಹಸ್ತಾಂತರಿಸಿ ಮಾತನಾಡಿದ ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಸಂಘ-ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ನಿರ್ವಹಿಸಲು ಅವುಗಳ ಸದಸ್ಯರ ಸಹಕಾರ ಪ್ರಾಮುಖ್ಯವಾಗಿದೆ. ಬೆಳ್ತಂಗಡಿ ರೋಟರಿ ಕ್ಲಬ್‌ನ ಸದಸ್ಯರೆಲ್ಲರೂ ಸಮಾನವಾಗಿ ಜವಾಬ್ದಾರಿ ಹಂಚಿಕೊಂಡು ಮುಂದುವರೆಯುತ್ತಿದ್ದಾರೆ. […]