ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಮಾಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಜಯರಾಜ್ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜುಲೈ 24ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಏಕತಾ ಸೌಧದಲ್ಲಿ ರಾಜ್ಯ ಘಟಕದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಅಧ್ಯಕ್ಷ ಗಾದಿಯ ಚುನಾವಣೆಯಲ್ಲಿ ಜಯರಾಜ್ ಜೈನ್‌ರ ಈ ಅವಿರೋಧ ಆಯ್ಕೆ […]

ಕಾಜೂರು ದರ್ಗಾದಲ್ಲಿ ಬಕ್ರೀದ್ ಆಚರಣೆ

ಬೆಳ್ತಂಗಡಿ: ತ್ಯಾಗ ಮತ್ತು ಬಲಿದಾನದ ಉದಾತ್ತ ಸಂದೇಶ ಸಾರುವ ಪವಿತ್ರ ಈದುಲ್ ಅಲ್ಹಾ ಬಕ್ರೀದ್ ಹಬ್ಬವನ್ನು ಇತಿಹಾಸ ಪ್ರಸಿದ್ಧ ಸರ್ವಧರ್ಮೀಯರ ಸೌಹಾರ್ದ ಸಮನ್ವಯ ಕ್ಷೇತ್ರ ಕಾಜೂರು ಮಸ್ಜಿದ್‌ನಲ್ಲಿ ಜುಲೈ 21ರಂದು ಆಚರಿಸಲಾಯಿತು.ಬಕ್ರೀದ್ ವಿಶೇಷ ಪ್ರಾರ್ಥನೆ, ಖುತುಬಾ ಪಾರಾಯಣ, ಪೆರ್ನಾಳ್‌ ನಮಾಝ್‌ಗೆ ಸಯ್ಯಿದ್ ಕಾಜೂರು ತಂಙಳ್ ನೇತೃತ್ವ ನೀಡಿದರು.ಜಗತ್ತಿಗೆ ಬಂದಿರುವ ಮಹಾಮಾರಿ ಕೊರೊನಾ ಹಾಗೂ ಸರ್ವ ವಿಪತ್ತುಗಳಿಂದ ನಾಡಿನ ವಿಮೋಚನೆಗಾಗಿ ಕಾಜೂರಿನಲ್ಲಿ ಅಂತ್ಯವಿಶ್ರಾಂತಿ ಹೊಂದಿದ ಪುಣ್ಯಪುರುಷರ ದರ್ಗಾಶರೀಫ್‌ನಲ್ಲಿ ಸರ್ವಧರ್ಮೀಯರಿಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ. […]

ಬಿಜೆಪಿಯ ತತ್ವ ಸಿದ್ಧಾಂತಗಳತ್ತ ಮಹಿಳೆಯರ ಒಲವು: ಪೂಂಜ

ಬೆಳ್ತಂಗಡಿ: ಶ್ರೇಷ್ಠ ವ್ಯಕ್ತಿಗಳ ಸಾಧನೆಗೆ ಮಹಿಳೆಯರೇ ಸ್ಪೂರ್ತಿದಾಯಕರು. ಸನಾತನ ಸಂಸ್ಕೃತಿ ಮತ್ತು ಬಿಜೆಪಿ ತತ್ವ ಸಿದ್ಧಾಂತಗಳಿಂದ  ಮಹಿಳೆಯರು ಬಿಜೆಪಿಯತ್ತ ಒಲವು ತೋರ್ಪಡಿಸಿದ್ದು ಪಕ್ಷಕ್ಕೆ ಶಕ್ತಿ ತುಂಬಿದೆ. ಕೊರೊನಾ ಸಂದರ್ಭದಲ್ಲಿ ಸಮಾಜ ಸೇವೆ ಮಾಡಿದ ಮಹಿಳಾ ಮೋರ್ಛಾದ ಕಾರ್ಯ ಅಭಿನಂದನೀಯ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.ಅವರು ಲಾಯಿಲ ಶ್ರೀ  ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಜುಲೈ 21ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಛಾದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ರಾಜ್ಯ ಮತ್ತು ರಾಷ್ಟ ರಾಜಕಾರಣದಲ್ಲಿ […]

ಮುಂಡಾಜೆ ಹೆಲ್ಪ್‌ಲೈನ್ ನಿಂದ ಮುಂಡಾಜೆ ಉಭಯ ಮಸೀದಿಗಳಿಗೆ “ಮಯ್ಯತ್‌ಟೆಂಟ್” ಕೊಡುಗೆ

ಬೆಳ್ತಂಗಡಿ: ಕಳೆದ ಒಂದೂವರೆ ವರ್ಷದ ಹಿಂದೆ ಮುಂಡಾಜೆಯಲ್ಲಿ ಆರಂಭವಾಗಿರುವ ಹೆಲ್ಪ್‌ಲೈನ್ ಮುಂಡಾಜೆ ವಾಟ್ಸ್‌ಆಪ್ ಗ್ರೂಪ್ ಮೂಲಕ ಮುಂಡಾಜೆ ಗ್ರಾಮದ ಉಭಯ ಮಸೀದಿಗಳಿಗೆ 60 ಸಾವಿರ ರೂಪಾಯಿ ಮೌಲ್ಯದ ಮಯ್ಯತ್ ಟೆಂಟ್ ಕೊಡುಗೆಯಾಗಿ ಹಸ್ತಾಂತರಿಸಲಾಯಿತು.ಜುಲೈ 21ರಂದು ಬಕ್ರೀದ್ ಹಬ್ಬದ ಸಂಭ್ರಮದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಅವರು ಹೆಲ್ಪ್‌ಲೈನ್ ಪರವಾಗಿ ಈ ಕೊಡುಗೆಯನ್ನು ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಅಬ್ಬಾಸ್ ಕೆ. ಎಮ್‌. ಮತ್ತು ಕೋಶಾಧಿಕಾರಿ ಹಂಝ ಬಿ.ಎಮ್‌.ಎ. ಹಾಗೂ ಸಮಿತಿ ಪದಾಧಿಕಾರಿಗಳಿಗೆ […]

ಸ್ವಸಹಾಯ ಸಂಘಗಳಿಂದ ಬಡವರ ಬದುಕು ಹಸನು’

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳಿಂದ ಗ್ರಾಮೀಣ ಬಡ ಜನತೆಯ ಬದುಕು ಇಂದು ಹಸನಾಗಿದೆ. ವೇಣೂರು ವಲಯದಲ್ಲಿ 326  ಸ್ವಸಹಾಯ ಸಂಘಗಳಿದ್ದು, ರೂಪಾಯಿ 1.45 ಕೋಟಿ ಲಾಭಾಂಶ ವಿತರಣೆ ಮಾಡುತ್ತಿದ್ದೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೇಣೂರು ವಲಯದ ಸ್ವಸಹಾಯ ಸಂಘಗಳ ಸದಸ್ಯರಿಗೆ ವೇಣೂರು ಶ್ರೀ ಭರತೇಶ ಸಭಾಭವನದಲ್ಲಿ ಜರಗಿದ ಲಾಭಾಂಶ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ವೇಣೂರು ಜೈನದಿಗಂಬರ […]

ಕೊಯ್ಯೂರು ವಿಶ್ವನಾಥ ಗೌಡರಿಗೆ ಚಿಕಿತ್ಸೆಗೆ ನೆರವು

ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘದ 40ನೇ ಸೇವಾ ಯೋಜನೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದು ಆಕಸ್ಮಿಕವಾಗಿ ಬಿದ್ದು ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕೊಯ್ಯೂರು ಗ್ರಾಮದ ಕಿನ್ಯಾಜೆ ನಿವಾಸಿ ವಿಶ್ವನಾಥ ಗೌಡ ಇವರಿಗೆ ಚಿಕಿತ್ಸಾ ಸಹಾಯಾರ್ಥವಾಗಿರೂ 20,000/- ದ ಚೆಕ್ಕನ್ನು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರಾದ ರವೀಂದ್ರನಾಥ್ ಗೌಡ ಪೆರ್ಮುದೆ ಇವರ ಮೂಲಕ ಫಲಾನುಭವಿಗೆ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ ತಾಲೂಕು ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಗೌಡ ಕೊಯ್ಯೂರು, ಮಾಜಿ ನಿರ್ದೇಶಕರಾದ ವಿಜಯ್ ಕುಮಾರ್ […]

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್‌ನ ಅಧ್ಯಕ್ಷರಾಗಿ ಲ್ಯಾನ್ಸಿ ಎ. ಪಿರೇರಾ

ಬೆಳ್ತಂಗಡಿ: ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್‌ನ 2021-22ನೇ ಸಾಲಿನ ಅಧ್ಯಕ್ಷರಾಗಿ ಬೆಳ್ತಂಗಡಿಯ ಉದ್ಯಮಿ, ಹಿಮಾಲಯ ಫೈನಾನ್ಸ್‌ನ ಮಾಲಕ ಹಾಗೂ ಬೆಳ್ತಂಗಡಿಯ ಪ್ರೇರಣಾ ಸೌಹಾರ್ದ ಸಹಕಾರಿಯ ಅಧ್ಯಕ್ಷರೂ ಆಗಿರುವ ಲ್ಯಾನ್ಸಿ ಎ. ಪಿರೇರಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಜುಲೈ 18ರಂದು ಬೆಳ್ತಂಗಡಿಯಲ್ಲಿ ಮಂಜುಶ್ರೀ ಸೀನಿಯರ್ ಛೇಂಬರ್‌ನ ಅಧ್ಯಕ್ಷ ವಿಶ್ವನಾಥ್ ಶೆಟ್ಟರ ಅಧ್ಯಕ್ಷತೆಯಲ್ಲಿ ಸ್ಥಾಪಕಾಧ್ಯಕ್ಷ ಪ್ರಮೋದ್ ಆರ್. ನಾಯಕ್‌ರ ಉಪಸ್ಥಿತಿಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಛೇಂಬರ್‌ನ ಕಾರ್ಯದರ್ಶಿಯಾಗಿ ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹರೀಶ್ ಶೆಟ್ಟಿ […]

ಮಾತಾಜಿಯವರ ಚಾತುರ್ಮಾಸ ವ್ರತಾಚರಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಪೂಜ್ಯ ಆರ್ಯಿಕಾ ಚಿಂತನಮತಿ ಮಾತಾಜಿ ಮತ್ತು ಪೂಜ್ಯ ಕ್ಷುಲ್ಲಿಕಾ ಸುಶ್ರೇಯಾ ಮಾತಾಜಿ ಅವರ ಚಾತುರ್ಮಾಸ ವ್ರತಾಚರಣೆ ನಡೆಯಲಿದೆ.ಈಗಾಗಲೆ ಉಭಯ ಮಾತಾಜಿಯವರು ನಾರಾವಿ ಪುರಪ್ರವೇಶ ಮಾಡಿದ್ದಾರೆ.ಚಾತುರ್ಮಾಸ ಪ್ರಯುಕ್ತ ಜುಲೈ 23ರಂದು ಬಸದಿಯಲ್ಲಿ ಮಂಗಳ ಕಲಶ ಸ್ಥಾಪನಾ ಸಮಾರಂಭ ನಡೆಯಲಿದ್ದು, ಇದರ ಪೂರ್ವಭಾವಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ಕೊಲ್ಲಿ ದೇಗುಲದಲ್ಲಿ ತೀರ್ಥಮಂಟಪಕ್ಕೆ ಶಿಲಾಪೂಜೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿದ್ದು, ತೀರ್ಥ ಮಂಟಪ ಹಾಗೂ ಸುತ್ತು ಪೌಳಿಯ ಶಿಲಾಪೂಜೆ ಕಾರ್ಯಕ್ರಮ ಜುಲೈ 17ರಂದು ಜರಗಿತು.ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಊರಿನ ದೇವಸ್ಥಾನದ ಅಭಿವೃದ್ಧಿ ಪ್ರತಿಯೊಬ್ಬನ ಜವಾಬ್ದಾರಿಯಾಗಿದ್ದು, ಪರಸ್ಪರ ಸಹಕಾರದ ಜೊತೆ ಮುಂದುವರಿದರೆ ಕೆಲಸಗಳು ನಿರ್ವಿಘ್ನವಾಗಿ ಸಾಗಿ ನಿಯೋಜಿತ ಅವಧಿಯೊಳಗೆ ಪೂರ್ಣಗೊಳ್ಳುತ್ತವೆ ಎಂದು ಹೇಳಿದರು.ಧರ್ಮಸ್ಥಳ ಜಮಾ ಉಗ್ರಾಣದ ಮುತ್ಸದ್ದಿ ಬಿ. ಭುಜಬಲಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ […]

ಮಳೆ-ನೆರೆಯ ಆತಂಕ: ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ

ಬೆಳ್ತಂಗಡಿ : ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮುಂದಿನ ಕೆಲವು ದಿನ ನಿರಂತರವಾಗಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಇದೆ. ಭಾರೀ ಪ್ರವಾಹೋಪಾದಿಯ ಮಳೆಯಿಂದ ತಾಲೂಕಿನ ಕೆಲವು ಕಡೆಗಳಲ್ಲಿ ಭೂಕುಸಿತ ಉಂಟಾಗುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುತ್ತಮುತ್ತ ಗುಡ್ಡ ಕುಸಿತದ ಅಪಾಯ ಇರುವ ಹಿನ್ನೆಲೆಯಲ್ಲಿ, ಅದರಲ್ಲೂ ಅತ್ಯಂತ ಹೆಚ್ಚು ಅಪಾಯ ಇರುವ ಗಣೇಶ್ ನಗರದ 32 ಕುಟುಂಬಗಳಿಗೆ ತಾತ್ಕಾಲಿಕ ಕಾಳಜಿ ಕೇಂದ್ರ ತೆರೆಯಲು ಪುತ್ತೂರು ಸಹಾಯಕ ಆಯುಕ್ತ […]