ಕಾಂಗ್ರೇಸ್ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಬೆಳ್ತಂಗಡಿ: ಭಾರತ ರಾಷ್ಟ್ರೀಯ ಕಾಂಗ್ರೇಸ್ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಸಮಿತಿ ಮತ್ತು ನಗರ ಬ್ಲಾಕ್ ಕಾಂಗ್ರೇಸ್ ಸಮಿತಿಯ ಜಂಟಿ ಆಶ್ರಯದಲ್ಲಿ; ಸರಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಇಂಡಿಯನ್ ರೆಡ್‌ಕ್ರಾಸ್ ಸಮಿತಿ ಮತ್ತು ಲೇಡಿಗೊಷನ್ ಆಸ್ಪತ್ರೆ ಮಂಗಳೂರು ಇವರ ಸಹಕಾರದಲ್ಲಿ; ಬೆಳ್ತಂಗಡಿ ಗ್ರಾಮೀಣ ಮತ್ತು ನಗರ ಬ್ಲಾಕ್ ಕಾಂಗ್ರೇಸ್‌ನ ವಿವಿಧ ಘಟಕಗಳ ಸಹಭಾಗಿತ್ವದಲ್ಲಿ ಜೂನ್ 11ರಂದು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಭಾಭವನದಲ್ಲಿ‌ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಉದ್ಘಾಟಿಸಿದರು.ದಕ್ಷಿಣ ಕನ್ನಡ […]

ಸ್ಪಂದನ ಸೇವಾ ಸಂಘದಿಂದ ನೆರವು

ಬೆಳ್ತಂಗಡಿ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಪ್ರತಿ ವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಮಡಂತ್ಯಾರಿನ ಕುಕ್ಕಳ ಗ್ರಾಮದ ರಕ್ತೇಶ್ವರಿಪದವು ನಿವಾಸಿ ಜಯಾನಂದ ಗೌಡ ಅವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ ವತಿಯಿಂದ ರೂಪಾಯಿ 15,000/-ದ ಚೆಕ್ಕನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷರು ಹಾಗೂ ವಾಣಿ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷರೂ ಆದ ಪದ್ಮ ಗೌಡ ಬೆಳಾಲು ಇವರ ಮೂಲಕ ಫಲಾನುಭವಿಗೆ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ ವಾಣಿ ಸೌಹಾರ್ದ ಕೋ-ಆಪರೇಟೀವ್ […]

ಗೃಹರಕ್ಷಕ ದಳದ ಕರ್ತವ್ಯ ಭತ್ತೆ ಹೆಚ್ಚಿಸಲು ಮನವಿ

ಬೆಳ್ತಂಗಡಿ: ರಾಜ್ಯದಲ್ಲಿ ಗೃಹರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಇದೀಗ ರೂಪಾಯಿ 350/- ದಿನಭತ್ತೆ ನೀಡುತ್ತಿದ್ದು; ವಿವಿಧ ರಕ್ಷಣಾ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ಗೃಹರಕ್ಷಕ ದಳದ ಸಿಬ್ಬಂದಿಗಳ ದಿನಭತ್ತೆಯನ್ನು ರೂಪಾಯಿ 750/-ಕ್ಕೆ ಹೆಚ್ಚಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಜುಲೈ 9ರಂದು ಭೇಟಿಯಾದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಮನವಿ ಸಲ್ಲಿಸಿ ಒತ್ತಾಯಿಸಿದರು.ರಾಜ್ಯದಲ್ಲಿ ಒಟ್ಟು 25,000ಕ್ಕೂ ಅಧಿಕ ಗೃಹರಕ್ಷಕ ದಳದ ಸಿಬ್ಬಂದಿಗಳಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,000ಕ್ಕೂ ಅಧಿಕ ಗೃಹರಕ್ಷಕ ದಳದ ಸಿಬ್ಬಂದಿಗಳು ಸೇವೆ […]

ಮೋಹನ ಬೈಪಾಡಿತ್ತಾಯರಿಗೆ ‘ಗೋಪಣ್ಣ ಗೌರವ’ ಸಮ್ಮಾನ

ಬೆಳ್ತಂಗಡಿ: ಯಕ್ಷಗಾನ, ಭರತನಾಟ್ಯ ಸಹಿತ ಸಾಂಸ್ಕೃತಿಕ ರಂಗಕಲೆಗಳಲ್ಲಿ  ಗುರು-ಶಿಷ್ಯ ಪರಂಪರೆ  ಇಂದಿಗೂ ಜಾಗೃತವಾಗಿದೆ. ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿ ಎಂದು ಹಿರಿಯ ಯಕ್ಷಗಾನ ಗುರು ಮೋಹನ ಬೈಪಾಡಿತ್ತಾಯ ಹೇಳಿದರು.                            ಪುತ್ತೂರು ಬಪ್ಪಳಿಗೆ ಅಗ್ರಹಾರ ನಿವಾಸದಲ್ಲಿ ಜುಲೈ 8ರಂದು  ತಮ್ಮ ಶಿಷ್ಯ ಹಾಗು ಯಕ್ಷಗಾನ ಕಲಾವಿದ ಪಿ. ಜಿ. ಜಗನ್ನಿವಾಸ ರಾವ್ ಮನೆಯವರು ನೀಡಿದ ಪುತ್ತೂರು ಗೋಪಣ್ಣ ಗೌರವ  ಸಮ್ಮಾನ ಸ್ವೀಕರಿಸಿ  […]

ರೋಟರಿ ಕ್ಲಬ್ ವತಿಯಿಂದ ವಿಶ್ವ ವೈದ್ಯರ ದಿನಾಚರಣೆ

ಬೆಳ್ತಂಗಡಿ: ವಿಶ್ವ ವೈದ್ಯರ ದಿನದ ಅಂಗವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ  ಉಜಿರೆಯಲ್ಲಿ ಕಳೆದ 50 ವರ್ಷಗಳಿಂದ ವೈದ್ಯಕೀಯ  ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರಾದ ಡಾl ಪ್ರಕಾಶ್ಚಂದ್ರ ಅವರನ್ನು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ಣಾಯ, ಕಾರ್ಯದರ್ಶಿ ಅಬೂಬಕ್ಕರ್, ಸದಸ್ಯರಾದ ಅರವಿಂದ ಕಾರಂತ, ವಿದ್ಯಾಕುಮಾರ ಕಾಂಚೋಡು, ಡಾl ಚಾರುಲತಾ ಮತ್ತಿತರರು ಉಪಸ್ಥಿತರಿದ್ದರು.

ಸ್ವಸಹಾಯ ಸಂಘಗಳಿಗೆ ಲಾಭಾಂಶ ಹಂಚಿಕೆ

ಬೆಳ್ತಂಗಡಿ: ಕಳೆಂಜದ ಕಾಯಾರ್ತಡ್ಕ ವಿಭಾಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಲಾಭಾಂಶ ವಿತರಣಾ ಕಾರ್ಯಕ್ರಮ ಜುಲೈ 9ರಂದು ಕಾಯರ್ತಡ್ಕದ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.  ಶಾಲೆಯ ಮುಖ್ಯೋಪಾಧ್ಯಾಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜನಜಾಗೃತಿ ವೇದಿಕೆ ಸದಸ್ಯ ವಿಜಯಕುಮಾರ್ ಲಾಭಾಂಶದ ಚೆಕ್ ಹಸ್ತಾಂತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಜಯಕರ ಶೆಟ್ಟಿ, ಮೇಲ್ವಿಚಾರಕ ಪ್ರಶಾಂತ್, ಸೇವಾಪ್ರತಿನಿಧಿ ಜನಾರ್ದನ ಹಾಗೂ ಅರ್ಪಿತಾ, ಒಕ್ಕೂಟದ ಅಧ್ಯಕ್ಷ ಚಿನ್ನಮ್ಮ ಮತ್ತು ಕೊರಗಪ್ಪ […]

ಪತ್ನಿಯನ್ನು ಮನೆಯಲ್ಲಿ ಬಿಟ್ಟು ನಾದಿನಿಯನ್ನು ಕರೆದುಕೊಂಡು ಹೋದ ಹೊಸ ಅಳಿಯ!

ಬೆಳ್ತಂಗಡಿ: ದೊಡ್ಡ ಮಗಳನ್ನು 9 ತಿಂಗಳ ಹಿಂದೆ ವಿವಾಹವಾಗಿದ್ದ ನವ ವಿವಾಹಿತ ನಾದಿನಿಯ ಜೊತೆ ಸಲುಗೆಯಿಂದಿದ್ದು, ಇದೀಗ ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು ನಾದಿನಿಯನ್ನು ಕರೆದುಕೊಂಡುಹೋದ ಘಟನೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಕೈಕಂಬ ಎಂಬಲ್ಲಿಂದ ವರದಿಯಾಗಿದೆ. ನಾಪತ್ತೆಯಾಗಿರುವ ಯುವತಿಯ ತಂದೆ ಮುಹಮ್ಮದ್ ಅವರು ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.ಮುಹಮ್ಮದ್ ಅವರ ಪುತ್ರಿ ಸೌಧಾ ಎಂಬಾಕೆಯನ್ನು 9 ತಿಂಗಳ ಹಿಂದೆ ಮುಸ್ತಫಾ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದು, ಮಗಳು ಹಾಗೂ ಅಳಿಯ ಆಗಾಗ ಮಾವನ ಮನೆಗೆ ಬಂದು […]

ಮನೆ ನಿರ್ಮಾಣಕ್ಕೆ ನೆರವು

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುಂಡಾಜೆ ಗ್ರಾಮದ ಕಡಂಬಳ್ಳಿಯ ಗಣಪತಿ ಭಟ್ ಅವರ ಮನೆ ನಿರ್ಮಾಣಕ್ಕೆ ರೂಪಾಯಿ 25 ಸಾವಿರ ಮೊತ್ತದ ಚೆಕ್ಕನ್ನು ನೀಡಲಾಯಿತು.ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿ ಜಯಕರ ಶೆಟ್ಟಿ, ವಲಯ ಮೇಲ್ವಿಚಾರಕ ನವೀನ್, ಪ್ರತಿನಿಧಿ ದಿಶಾ, ರಬ್ಬರ್ ಸೊಸೈಟಿ ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್, ರೋಟರಿ ಜಿಲ್ಲಾ ಪ್ರತಿನಿಧಿ ಗೋಪಾಲಕೃಷ್ಣ ಜೋಷಿ, ರೋಟರಿ ಸಮುದಾಯದಳ ಮುಂಡಾಜೆಯ ಅಧ್ಯಕ್ಷೆ ಅಶ್ವಿನಿ ಹೆಬ್ಬಾರ್, ಸಚಿನ್ ಭಿಡೆ, ಮಹಾದೇವ ಬೆಂಡೆ ಮತ್ತಿತರರು […]

ಮೃತರಿಗೆ ನುಡಿನಮನ ಹಾಗೂ ಶ್ರದ್ಧಾಂಜಲಿ ಸಭೆ

ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಬೆಳ್ತಂಗಡಿಯ ಸುವರ್ಣ ಪ್ರಿಂಟರ್ಸ್ ಮಾಲಕ ಗಣೇಶ್ ಸುವರ್ಣ ಹಾಗೂ ಸ್ಕೂಲ್ ಬುಕ್ ಕಂಪೆನಿ ಆಡಳಿತ ನಿರ್ದೇಶಕ ಮೋಹನ್ ದಾಸ್ ಭಂಡಾರಿ ಯವರ ಶೃದ್ಧಾಂಜಲಿ ಸಭೆಯು ಬೆಳ್ತಂಗಡಿ ಪ್ರಿಂಟರ್ಸ್ ಅಶೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಜೇಸಿಐ ಭವನದಲ್ಲಿ ಜುಲೈ ,7ರಂದು ಜರಗಿತು. ಪ್ರಿಂಟರ್ಸ್ ಅಶೋಸಿಯೇಷನ್ ಅಧ್ಯಕ್ಷ ವಸಂತ್ ಶೆಟ್ಟಿ ಶ್ರದ್ಧಾ, ಉಪಾಧ್ಯಕ್ಷ ಶೇಖರ್ ಟಿ. ನುಡಿನಮನ ಸಲ್ಲಿಸಿದರು. ಸಂಘದ ಕೋಶಾಧಿಕಾರಿ ಬಾಲಕೃಷ್ಣ, ಜತೆ ಕಾರ್ಯದರ್ಶಿ ನಾರಾಯಣ್ ಶೆಟ್ಟಿ, ನಿರ್ದೇಶಕರಾದ ಅನಿಲ್, ರಾಮಕೃಷ್ಣ, ಜೋಬಿನ್, ಸಾದಿಕ್, ಕಮಲಾಕ್ಷ, […]

ಬೆಲೆಬಾಳುವ ಗಿಡ ವಿತರಣೆ

ಬೆಳ್ತಂಗಡಿ: ಡಾl ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ, ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸುಮಾರು 700 ಉತ್ತಮ ಜಾತಿಯ ಹಣ್ಣು ಹಾಗೂ ಇತರ ಗಿಡಗಳನ್ನು ನೀಡಲಾಯಿತು. ಚಾರ್ಮಾಡಿ ಗ್ರಾಮ ಪಂಚಾಯಿತ್ ಅಧ್ಯಕ್ಷ ಕೆ. ವಿ. ಪ್ರಸಾದ್‌ರಿಗೆ ಈ ಗಿಡಗಳನ್ನು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶ ನಾರಾಯಣ ರಾವ್ ಸಾಂಕೇತಿಕವಾಗಿ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿಈ ಗಿಡಗಳನ್ನು ಗ್ರಾಮ ಪಂಚಾಯಿತಿಯ 10ಬೂತ್‌ಗಳಿಗೆ ಹಂಚಿಕೆ ಮಾಡಲಾಯಿತು.ಚಾರ್ಮಾಡಿ ಗ್ರಾಮ ಪಂಚಾಯತ್ […]