ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ-ಬ್ರಹ್ಮಾನಂದಶ್ರೀಗಳು

ಬೆಳ್ತಂಗಡಿ : ಇನ್ನೊಬ್ಬರ ಮನಸ್ಸಿನ ನೋವನ್ನು ಅರಿಯುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಇರಬೇಕು. ಇದಕ್ಕಾಗಿ ಸಂಸ್ಕಾರಯುತ ಶಿಕ್ಷಣ ಅಗತ್ಯವಿದೆ. ಬದುಕು ಮತ್ತು ಭೋದನೆ ಒಂದೇ ಇರಬೇಕು. ನಾವು ಯಾರನ್ನೂ ದ್ವೇಷಿಸಬಾರದು. ನಮ್ಮಲ್ಲಿರುವ ಕಾಮ, ಕ್ರೋದ, ಮದ, ಮತ್ಸರಗಳನ್ನು ದ್ವೇಷಿಸಬೇಕು. ಇದಕ್ಕಾಗಿ ಮನಸ್ಸಿನ ನಿಯಂತ್ರಣ ಅಗತ್ಯವಾಗಿದ್ದು, ಅದಕ್ಕಾಗಿ ನಿತ್ಯ ಭಗವಂತನ ಸೇವೆ ಮಾಡಬೇಕು ಎಂದು ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.ಅವರು ಜುಲೈ 24ರಂದು ಶ್ರೀ ಗುರುದೇವ ಮಠದಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮ ಅಂಗವಾಗಿ […]

ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಪ್ರಧಾನ ಕಛೇರಿಯ ಉದ್ಘಾಟನೆ.

ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಪ್ರಧಾನ ಕಛೇರಿಯ ಉದ್ಘಾಟನೆಬೆಳ್ತಂಗಡಿ: ಆರ್ಥಿಕ ವ್ಯವಹಾರದೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಗ್ರಾಹಕರ ಮತ್ತು ನಾಗರಿಕರ ಮೆಚ್ಚುಗೆ-ಪ್ರಶಂಸೆಗೆ ಪಾತ್ರವಾದ ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಛೇರಿಯ ನವೀಕೃತಗೊಂಡ ಕಛೇರಿಯ ಉದ್ಘಾಟನಾ ಸಮಾರಂಭವು ಅಕ್ಟೋಬರ್ 1ರಂದು ಬೆಳ್ತಂಗಡಿಯ ಸಿಎಸ್ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು.ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ನವೀಕೃತ ಕಛೇರಿಯನ್ನು ಉದ್ಘಾಟಿಸಿ, ಸಂಸ್ಥೆಗೆ […]

ರಕ್ತದಾನಂ ಮಹಾದಾನಂ – ಜೀವದಾನಂಚ ನಿಶ್ಚಯಂ’

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಘ (ನಿ) ಮಂಗಳೂರು , ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಬೆಳ್ತಂಗಡಿ ವಿಘ್ನೇಶ್ ಬಿಲ್ಡಿಂಗ್‌ನಲ್ಲಿ ಆಗಸ್ಟ್ 21 ರಂದು ಜರುಗಿತು.ಕೊರೋನಾ ವೈರಸ್ ನಿಂದಾಗಿ ಜಿಲ್ಲೆಯ ಬ್ಲಡ್ ಬ್ಯಾಂಕುಗಳಲ್ಲಿ ರಕ್ತದ ಕೊರತೆ ಇರುವುದನ್ನು ಮನಗಂಡು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಗಾತಿ ಎಕೆಜಿ […]

ವಿವಿಧತೆಯಲ್ಲಿ ಏಕತೆಯೇ ಭಾರತದ ಪರಂಪರೆ

ಸ್ವಾತಂತ್ರ್ಯಕ್ಕಾಗಿ ನಡೆಸಿದ ಸಮರವು 1947 ಆಗಸ್ಟ್ 15 ರಂದು ಫಲ ನೀಡಿತು. ದೇಶದ ಆಡಳಿತವು ಭಾರತೀಯರ ವಶವಾದಾಗ ದೀರ್ಘವಾದ 200 ವರ್ಷಗಳ ಪರಕೀಯರ ವಂಚನಾತ್ಮಕ ಆಡಳಿತವು ಕೊನೆಗೊಂಡಿತು. ಅದರೊಂದಿಗೆ ನಾವು ಸ್ವತಂತ್ರರಾದೆವು. ಶತಮಾನಗಳ ಕಾಲ ವಿದೇಶಿಯರ ಸಾಮ್ರಾಜ್ಯಕ್ಕೆ ಅಂತ್ಯ ಹಾಡಿ, 1947 ಆಗಸ್ಟ್ 14 ರ ಮಧ್ಯರಾತ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ನಮ್ಮ ರಾಷ್ಟ್ರ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಆಗ್ರಹದಂತೆ, ನಮ್ಮ ದೇಶವು ಸರ್ವ ಧರ್ಮೀಯರ ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾಯಿತು.ಭಾರತವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ, […]

ನನ್ನ ಹುಟ್ಟೂರು

ಮಲೆನಾಡಿನ ತಪ್ಪಲಲಿಗಿರಿ ಕಾನನದ ನೆಳಲಿನಲಿ lಬೆಚ್ಚನೆಯ ಮಡಿಲಿರಲುತೊಟ್ಟಿಲು ತೂಗಿದಾ ತವರೂರು ll೧ll ….ಎಂದೂ ಮರೆಯದ ನನ್ನ ಹುಟ್ಟೂರು…ನದಿ ತೊರೆಗಳ ಸಿಂಚನಕೆತೊಯ್ದ ತೆನೆಯ ಹಸೆಯಿರಲು ತಾಯ್ನೆಲದ ಮಣ್ಣ ಘಮಘಮವುಕೈಬೀಸಿ ಕರೆಯುದೆನ್ನ ತವರೂರುll೨ll…ಎಂದೂ ಮರೆಯದ ನನ್ನ ಹುಟ್ಟೂರು…ಸೊಗಡಿನ ಜಾತ್ರೆಯೊಳುತವರಿನ ಕರೆಯಿರಲುlಸಂಭ್ರಮದಿ ಕಂಡ ಶ್ರೀ ಕುತ್ಯಾರುಸರಳತೆಯಲಿ ಸಾಗುವ ಬೊಳ್ತೇರುll೩ll…ಎಂದೂ ಮರೆಯದ ನನ್ನ ಹುಟ್ಟೂರು…ವಿಧವಿಧದ ಧರ್ಮವಿರಲುಮತ ಭೇದಎಂದೂ ಇರದುlನಮ್ಮೂರ ಚಾವಡಿಯ ಮಹಿಮೆಯದುಬೆಲ್ಲದಾ ಸವಿಯಿತ್ತ ತವರೂರುll೪ll…ಎಂದೂ ಮರೆಯದ ನನ್ನ ಹುಟ್ಟೂರು…-ಡಾ.ಸುಧೀರ್ ಪ್ರಭು-

ಸಂಪಾದಕೀಯ

ರಾಜ್ಯದ 6000ಕ್ಕೂ ಅಧಿಕ ಗ್ರಾಮ ಪಂಚಾಯತುಗಳ ಪ್ರಸಕ್ತ ಚುನಾಯಿತ ಆಡಳಿತ ಮಂಡಳಿಯ ಅಧಿಕಾರಾವಧಿ ಜೂನ್ ಅಂತ್ಯದ ವೇಳೆಗೆ ಮುಗಿಯಲಿದೆ. ಪಂಚಾಯತ್ ರಾಜ್ ಕಾಯಿದೆಯಂತೆ ಪಂಚಾಯತುಗಳ ಅಧಿಕಾರಾವಧಿಯ 6ತಿಂಗಳ ಮೊದಲು ಚುನಾವಣೆ ಘೋಷಣೆಯಾಗಿ, ನಿಗದಿತ ಅವಧಿಗೆ ಚುನಾವಣೆ ನಡೆಸಿ, ಹೊಸ ಆಡಳಿತ ಮಂಡಳಿ ರಚನೆಗೆ ಅವಕಾಶ ಕಲ್ಪಿಸಬೇಕು. ಆದರೆ ಇದೀಗ ಕೊರೋನಾ ಮಹಾಮಾರಿ ನಮ್ಮ ದೇಶಕ್ಕೆ ವಕ್ಕರಿಸಿರುವುದರಿಂದ, ಈ ಹೆಮ್ಮಾರಿಯಿಂದ ಬಚಾವಾಗಲು ಬದುಕು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲು ಕೇಂದ್ರ ಸರಕಾರ ಸುಮಾರು 60ದಿನಗಳಷ್ಟು ಕಾಲ 4ಹಂತಗಳಲ್ಲಿ ಲಾಕ್ ಡೌನ್ […]

The Legend of Zelda: Breath of the Wild gameplay on the Nintendo Switch

Dropcap the popularization of the “ideal measure” has led to advice such as “Increase font size for large screens and reduce font size for small screens.” While a good measure does improve the reading experience, it’s only one rule for good typography. Another rule is to maintain a comfortable font size. Strech lining hemline above […]

ಮಡಂತ್ಯಾರು ಕಾಲೇಜಿನ ಒಳ ಕ್ರೀಡಾಂಗಣ ಈಗ ಕ್ವಾರಂಟೈನ್ ಸೆಂಟರ್

ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಳ ಮತ್ತು ಪಾರೆಂಕಿ ಗ್ರಾಮಗಳಿಗೆ ಹೊರ ರಾಜ್ಯಗಳಿಂದ ಬರುವ ಊರ ಬಂಧುಗಳನ್ನು 14ದಿನಗಳ‌ ಕಾಲ‌ ಕ್ವಾರಂಟೈನಿಗೆ ಒಳಪಡಿಸಲು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಒಳ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ. ಈ ಒಳ ಕ್ರೀಡಾಂಗಣದಲ್ಲಿ ಎರಡು ಹಾಲ್, ಸುಸಜ್ಜಿತ ಆರು ಕೊಠಡಿ, 22 ಶೌಚಾಲಯವಿರುವ ಸ್ನಾನಗೃಹದ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರಿಗೆ ಫಿಲ್ಟರ್ ವ್ಯವಸ್ಥೆ ಇದ್ದು, ಇಡೀ ಒಳ ಕ್ರೀಡಾಂಗಣವನ್ನು ಸಿ.ಸಿ. ಕ್ಯಾಮರಾದ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಆಡಳಿತ ಮಂಡಳಿಯ […]