ಕಾಮೋಡ್ ವ್ಹೀಲ್ ಚೇರ್ ವಿತರಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನೆರಿಯ ವಲಯದ ಬಯಲು ನಿವಾಸಿಗಳಾದ ಜಯಂತ್ ಶೆಣೈ ಹಾಗೂ ವಿದ್ಯಾ ದಂಪತಿಗಳ ಮಗಳು 22ರ ವಯೋಮಾನದ ಶ್ವೇತಾರವರಿಗೆ ನಡೆದಾಡಲು ಶಕ್ತಿ ಇಲ್ಲದೇ ಇದ್ದು; ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉಚಿತವಾಗಿ ನೀಡಿರುವ ಕಾಮೋಡ್ ವ್ಹೀಲ್ ಚಯರ್‌ನ್ನು ಜನಜಾಗೃತಿ ವೇದಿಕೆಯ ವಲಯ ಕೋಶಾಧಿಕಾರಿ ಶರೀಫ್ ಕೆ., ವಲಯ ಅಧ್ಯಕ್ಷ ಸತೀಶ್ ಕುಕ್ಕೆಜಾಲು, ಒಕ್ಕೂಟದ […]

ಉಜಿರೆ ಗ್ರಾಮ ಪಂಚಾಯತ್‌ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಧಾನ

ಬೆಳ್ತಂಗಡಿ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆಯೋಜಿಸಿದ್ದ ಮಹಾತ್ಮಾ  ಗಾಂಧಿ ಗ್ರಾಮ ಪುರಸ್ಕಾರ  ಮತ್ತು ಮಹಾತ್ಮಾ ಗಾಂಧಿ ನರೇಗಾ ಪ್ರಶಸ್ತಿ ಪ್ರದಾನ  ಸಮಾರಂಭ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಮಾರ್ಚ್ 24ರಂದು ರಾಜ್ಯದ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗಾಂಧಿ ಗ್ರಾಮ ಪುರಸ್ಕಾರ ವಿಜೇತ ಉಜಿರೆ ಗ್ರಾಮ ಪಂಚಾಯಿತ್‌ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.5 ಲಕ್ಷ ರೂಪಾಯಿ ನಗದು ಬಹುಮಾನದ ಚೆಕ್, ಪ್ರಶಸ್ತಿ ಫಲಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, […]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟಕ್ಕೆ ಮುಹೂರ್ತ ಫಿಕ್ಸ್

ಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 24ನೇ ವರ್ಷದ ಭಜನಾ ತರಬೇತಿ ಶಿಬಿರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು; ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 23ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ ಎಂದು ಭಜನಾ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.ಈ ಬಾರಿಯ ಭಜನಾ ತರಬೇತಿ ಶಿಬಿರದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಉತ್ತರ ಕನ್ನಡ, ಚಿಕ್ಕಮಗಳೂರು, , ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹಾಸನ, ಬೆಳಗಾವಿ, ಮಂಡ್ಯ ಜಿಲ್ಲೆಗಳ ಆಯ್ದ ಭಜನಾ […]

ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಸಂವಾದ

ಬೆಳ್ತಂಗಡಿ: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಜುಲೈ 12ರಂದು ಮಡಂತ್ಯಾರು ಗ್ರಾಮ ಪಂಚಾಯತಿ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್‌. ಎಂ. ವಹಿಸಿದ್ದರು. ಗ್ರಾಮ ಪಂಚಾಯತ್ ಮಡಂತ್ಯಾರಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್ ಮಾತನಾಡಿ, ಗ್ರಾಮ ಪಂಚಾಯಿತ್ ಎಂದರೇನು ಮತ್ತು ಸದಸ್ಯರ ಕಾರ್ಯ ಚಟುವಟಿಕೆಗಳು, ಗ್ರಾಮ ಪಂಚಾಯಿತ್ ಎದುರಿಸುತ್ತಿರುವ ಸವಾಲುಗಳು ಯಾವುದೆಲ್ಲ ಇವುಗಳ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ವಿದ್ಯಾರ್ಥಿಗಳು ಕೇಳಿದಂತಹ ಪ್ರಶ್ನೆಗಳಿಗೆ […]

ಎನ್‌ಸಿಸಿ ಶಿಬಿರದ ಸಮಾರೋಪ ಸಮಾರಂಭ

ಬೆಳ್ತಂಗಡಿ: 18 KAR BN ಎನ್‌ಸಿಸಿ ವಿಭಾಗದ 2022-23ನೇ ಶೈಕ್ಷಣಿಕ ವರ್ಷದ ಮೊದಲ ವಾರ್ಷಿಕ ತರಬೇತಿ ಶಿಬಿರವು ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಮುಕ್ತಾಯಗೊಂಡಿತು2022ರ ಜೂನ್ 23ರಿಂದ ಹತ್ತು ದಿನಗಳ ಕಾಲ ಈ ಶಿಬಿರವು ನಡೆಯಿತು. ಆಡಳಿತ ಅಧಿಕಾರಿ 18 KAR BN ಎನ್‌ಸಿಸಿ ಕರ್ನಲ್ ಅಮಿತಾಬ್ ಸಿಂಗ್, 18 KAR BN ಎನ್‌ಸಿಸಿ ರಾಜು ಗುರುಂಗ್ ಎಸ್‌. ಎಂ. ಉಪಸ್ಥಿತರಿದ್ದರುಈ ವಾರ್ಷಿಕ ತರಬೇತಿ ಶಿಬಿರವನ್ನು ನಡೆಸಲು ಅನುಮತಿಸಿದ ಸೇಕ್ರೆಡ್ ಹಾರ್ಟ್ ಸಂಸ್ಥೆಯ ಸಂಚಾಲಕರಾದ ವಂದನೀಯ ಬಾಸಿಲ್ […]

ಬೆಳ್ತಂಗಡಿಯಲ್ಲಿ ಭೂಕಂಪ?-ವದಂತಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೆಲವೆಡೆ ಭೂಕಂಪನವಾದ ಬಗ್ಗೆ ವದಂತಿಗಳು ಹರಿದಾಡುತ್ತಿದ್ದು; ಈ ಬಗ್ಗೆ ತಾಲೂಕು ಆಡಳಿತ ಯಾವುದೇ ದೃಢೀಕರಣ ನೀಡಿಲ್ಲ. ಈ ಭೂಕಂಪನ ಎಲ್ಲಿ ಎಷ್ಟು ಹೊತ್ತಿಗೆ ಆಯಿತು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ.

ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ-ಬ್ರಹ್ಮಾನಂದಶ್ರೀಗಳು

ಬೆಳ್ತಂಗಡಿ : ಇನ್ನೊಬ್ಬರ ಮನಸ್ಸಿನ ನೋವನ್ನು ಅರಿಯುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಇರಬೇಕು. ಇದಕ್ಕಾಗಿ ಸಂಸ್ಕಾರಯುತ ಶಿಕ್ಷಣ ಅಗತ್ಯವಿದೆ. ಬದುಕು ಮತ್ತು ಭೋದನೆ ಒಂದೇ ಇರಬೇಕು. ನಾವು ಯಾರನ್ನೂ ದ್ವೇಷಿಸಬಾರದು. ನಮ್ಮಲ್ಲಿರುವ ಕಾಮ, ಕ್ರೋದ, ಮದ, ಮತ್ಸರಗಳನ್ನು ದ್ವೇಷಿಸಬೇಕು. ಇದಕ್ಕಾಗಿ ಮನಸ್ಸಿನ ನಿಯಂತ್ರಣ ಅಗತ್ಯವಾಗಿದ್ದು, ಅದಕ್ಕಾಗಿ ನಿತ್ಯ ಭಗವಂತನ ಸೇವೆ ಮಾಡಬೇಕು ಎಂದು ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.ಅವರು ಜುಲೈ 24ರಂದು ಶ್ರೀ ಗುರುದೇವ ಮಠದಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮ ಅಂಗವಾಗಿ […]

ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಪ್ರಧಾನ ಕಛೇರಿಯ ಉದ್ಘಾಟನೆ.

ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಪ್ರಧಾನ ಕಛೇರಿಯ ಉದ್ಘಾಟನೆಬೆಳ್ತಂಗಡಿ: ಆರ್ಥಿಕ ವ್ಯವಹಾರದೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಗ್ರಾಹಕರ ಮತ್ತು ನಾಗರಿಕರ ಮೆಚ್ಚುಗೆ-ಪ್ರಶಂಸೆಗೆ ಪಾತ್ರವಾದ ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಛೇರಿಯ ನವೀಕೃತಗೊಂಡ ಕಛೇರಿಯ ಉದ್ಘಾಟನಾ ಸಮಾರಂಭವು ಅಕ್ಟೋಬರ್ 1ರಂದು ಬೆಳ್ತಂಗಡಿಯ ಸಿಎಸ್ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು.ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ನವೀಕೃತ ಕಛೇರಿಯನ್ನು ಉದ್ಘಾಟಿಸಿ, ಸಂಸ್ಥೆಗೆ […]

ರಕ್ತದಾನಂ ಮಹಾದಾನಂ – ಜೀವದಾನಂಚ ನಿಶ್ಚಯಂ’

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಘ (ನಿ) ಮಂಗಳೂರು , ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಬೆಳ್ತಂಗಡಿ ವಿಘ್ನೇಶ್ ಬಿಲ್ಡಿಂಗ್‌ನಲ್ಲಿ ಆಗಸ್ಟ್ 21 ರಂದು ಜರುಗಿತು.ಕೊರೋನಾ ವೈರಸ್ ನಿಂದಾಗಿ ಜಿಲ್ಲೆಯ ಬ್ಲಡ್ ಬ್ಯಾಂಕುಗಳಲ್ಲಿ ರಕ್ತದ ಕೊರತೆ ಇರುವುದನ್ನು ಮನಗಂಡು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಗಾತಿ ಎಕೆಜಿ […]

ವಿವಿಧತೆಯಲ್ಲಿ ಏಕತೆಯೇ ಭಾರತದ ಪರಂಪರೆ

ಸ್ವಾತಂತ್ರ್ಯಕ್ಕಾಗಿ ನಡೆಸಿದ ಸಮರವು 1947 ಆಗಸ್ಟ್ 15 ರಂದು ಫಲ ನೀಡಿತು. ದೇಶದ ಆಡಳಿತವು ಭಾರತೀಯರ ವಶವಾದಾಗ ದೀರ್ಘವಾದ 200 ವರ್ಷಗಳ ಪರಕೀಯರ ವಂಚನಾತ್ಮಕ ಆಡಳಿತವು ಕೊನೆಗೊಂಡಿತು. ಅದರೊಂದಿಗೆ ನಾವು ಸ್ವತಂತ್ರರಾದೆವು. ಶತಮಾನಗಳ ಕಾಲ ವಿದೇಶಿಯರ ಸಾಮ್ರಾಜ್ಯಕ್ಕೆ ಅಂತ್ಯ ಹಾಡಿ, 1947 ಆಗಸ್ಟ್ 14 ರ ಮಧ್ಯರಾತ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ನಮ್ಮ ರಾಷ್ಟ್ರ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಆಗ್ರಹದಂತೆ, ನಮ್ಮ ದೇಶವು ಸರ್ವ ಧರ್ಮೀಯರ ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾಯಿತು.ಭಾರತವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ, […]