ಕಾಂಗ್ರೆಸ್ ಪಕ್ಷದ ಗ್ಯಾರಂಟಿಗೆ ವಾರಂಟಿ ಇಲ್ಲ-ಅಣ್ಣಾಮಲೈ

ಕಾಂಗ್ರೆಸ್ ಪಕ್ಷದ ಗ್ಯಾರಂಟಿಗೆ ವಾರಂಟಿ ಇಲ್ಲ-ಅಣ್ಣಾಮಲೈ
Facebook
Twitter
LinkedIn
WhatsApp

ಬೆಳ್ತಂಗಡಿ: ಕಾಂಗ್ರೇಸ್‌ ಪಕ್ಷದ ಎಕ್ಸಪೈರೀ ದಿನಾಂಕ ದಾಟಿದೆ. ಅವರು ನೀಡುವ ಗ್ಯಾರಂಟಿಗೆ ವಾರಂಟಿ ಇಲ್ಲದೆ ಇರುವುದರಿಂದ ಅದಕ್ಕೆ ಯಾವುದೇ ಮರ್ಯಾದೆ ಇರುವುದಿಲ್ಲ. ಹೀಗಾಗಿ ಭವಿಷ್ಯದ ಸುಭದ್ರ ಚಿಂತನೆ ಇಲ್ಲದ ಕಾಂಗ್ರೇಸ್‌ಗೆ ಯಾವುದೇ ಬೂತ್‌ನಲ್ಲಿ ಲೀಡ್‌ ಸಿಗದಂತೆ ಮಾಡುವುದು ನಮ್ಮ ಗುರಿಯಾಗಿರಬೇಕು ಎಂದು ರಾಜ್ಯದ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಹೇಳಿದರು.ಅವರು ಮೇ 7ರ ಸಂಜೆ ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ಭಾರತೀಯ ಜನತಾ ಪಕ್ಷ ಆಯೋಜಿಸಿದ ಬೃಹತ್‌ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಪ್ರಚಾರ ಭಾಷಣ ಮಾಡುತ್ತಿದ್ದರು. ಈ ಬಾರಿ ಕರ್ನಾಟಕದಲ್ಲಿನ 224 ಕ್ಷೇತ್ರಗಳಲ್ಲೂ ಇತಿಹಾಸ ನಿರ್ಮಾಣವಾಗಲಿದೆ. 130 ಕ್ಕೂ ಹೆಚ್ಚು ಅಭ್ಯರ್ಥಿಗಳು ಶಾಸಕರಾಗಿ ವಿಧಾನಸಭೆ ಪ್ರವೇಶಿಸಲಿದ್ದಾರೆ. ಡ್ರಾಮಾ ಮಾಡುವ ಪಿಎಫ್‌ಐ ನಂತಹ ಉಗ್ರಗಾಮಿಗಳಿಗೆ ಪ್ರೋತ್ಸಾಹ ಕೊಡುವ ಕಾಂಗ್ರೇಸ್‌ ಪಕ್ಷವು ಕರ್ನಾಟಕದಲ್ಲಿ ಮುಕ್ತವಾಗುವತ್ತ ಸಾಗಲಿದೆ. ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಇಂದು ನಾವಿದ್ದೇವೆ. ಇನ್ನೆರಡು ದಿನಗಳಲ್ಲಿ ಕುದುರೆ ರೇಸ್‌ನಲ್ಲಿ ಕುದುರೆಗೆ ಕೊಡುವ ಕೊನೆಯ ಸೂಚನೆಯಂತೆ ನಾವು ಕೆಲಸ ಮಾಡಬೇಕಾಗಿದೆ. ಮತ್ತೊಮ್ಮೆ ಮತದಾರ ಮನೆಬಾಗಿಲಿಗೆ ಹೋಗಿ ಮತದಾನ ಮಾಡುವಂತೆ ಕೋರಬೇಕಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಕೂಡ ಕರ್ನಾಟಕದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕಳೆದ 20ದಿನಗಳಿಂದ ಅವಿರತ ಶ್ರಮವನ್ನು ಹಾಕಿ ರಾಜ್ಯವು ಬಹುಮತದತ್ತ ಸಾಗಲು ಹೋರಾಟದಂತೇ ಮಾಡುತ್ತಿದ್ದಾರೆ. ಹೀಗಾಗಿ ಪ್ರಧಾನಿಯವರ ಹಂಬಲವನ್ನು ನಾವು ಸಾಕಾರಗೊಳಿಸಬೇಕಾಗಿದೆ ಎಂದರು.ರಾಜ್ಯದಲ್ಲಿ ಇತಿಹಾಸ ನಿರ್ಮಾಣವಾಗುಂತೆಯೇ ಬೆಳ್ತಂಗಡಿಯಲ್ಲೂ ಆಗಬೇಕಾಗಿದೆ. ಪಕ್ಷದ ಅಭ್ಯರ್ಥಿ ಹರೀಶ ಪೂಂಜರನ್ನು 50,000 ಮತಗಳ ಅಂತರದಿಂದ ಗೆಲ್ಲಿಸುವ ಹೊಣೆ ನಮ್ಮದು. ಇದಕ್ಕೆ ಕಾರಣವೂ ಇದೆ. 3,500 ಕೋಟಿ ರೂಪಾಯಿಗಳ ಅನುದಾನವನ್ನು ತರುವ ಮೂಲಕ ಅಗಲವಾದ ಕಾಂಕ್ರೀಟ್‌ ರಸ್ತೆಗಳು, ಸುಸ್ಥಿರ ರಾಜ್ಯ ಹೆದ್ದಾರಿಗಳು, ಕಿಂಡಿ ಅಣೆಕಟ್ಟುಗಳ ಮೂಲಕ ನೀರನ್ನು ನಿಲ್ಲಿಸಿ ಅಂತರ್ಜಲ ಹೆಚ್ಚಿಸುವ ಯೋಜನೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ತರುವುದು ಓರ್ವ ದೂರದೃಷ್ಟಿಯುಳ್ಳ ಶಾಸಕನಿಗೆ ಮಾತ್ರ ಮಾಡಲು ಸಾಧ್ಯ. ಯಾವುದೇ ಜಾತಿ, ಮತ ಬೇಧವಿಲ್ಲದೆ ಎಲ್ಲರಲ್ಲೂ ಬೆರೆತು ಜನಪರ ಕೆಲಸಗಳನ್ನು ಕಳೆದ ಐದು ವರ್ಷಗಳಲ್ಲಿ ಮಾಡಿದ್ದಾರೆ. ಬೆಳ್ತಂಗಡಿಯಲ್ಲಿ ಇಂತಹ ಶಾಸಕ ಇನ್ನೊಮ್ಮೆ ಗೆದ್ದು ಬರುವಂತೆ ಮಾಡುವ ಹೊಣೆ ನಮ್ಮೆಲ್ಲರದು. ಹರೀಶ್‌ ಪೂಂಜ ಖಂಡಿತ ಈ ಬಾರಿ 50 ಸಾವಿರ ಮತದಿಂದ ಗೆಲ್ಲುವರು. ಉಪನಿಷತ್‌ನಲ್ಲಿ ಒಂದು ಮಾತಿದೆ. ಯಾವುದೇ ಒಂದು ಅಪೇಕ್ಷೆ, ಅಹಂ ಇಲ್ಲದೇ; ಮನಸ್ಸನ್ನು ಶಾಂತವಾಗಿದ್ದು ಕೊಂಡು ಕೆಲಸ ಮಾಡಿದರೆ ಅವ ದೇವರಾಗುತ್ತಾನೆ. ಅದು ನರೇಂದ್ರ ಮೋದಿಯವರ ರೋಡ್ ಶೋನಲ್ಲಿ ಜನ ಸೇರಿದಾಗ ಕಂಡುಬಂದಿದೆ. ಖಂಡಿತವಾಗಿ 130 ಕ್ಕಿಂತ ಅಧಿಕ ಸ್ಥಾನದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದರು. ದೊಡ್ಡ ಇತಿಹಾಸ ಸೃಷ್ಟಿಯಾಗಲು ಎಲ್ಲರೂ ಕಾತುರಾರಗಿದ್ದಾರೆ. ಕೊನೆಯ ಗಳಿಗೆಯಲ್ಲಿ ರೇಸ್‌ನಲ್ಲಿರುವ ಕುದುರೆಯಂತೆ ಸ್ಪೀಡ್ ತೆಗೆದುಕೊಳ್ಳಬೇಕು. ಉಳಿದಿರುವ 24 ಗಂಟೆಯಲ್ಲಿ ಸಾಮರ್ಥ್ಯ ಮೀರಿ ಮತದಾರರನ್ನು ಮನವೊಲಿಸಿ ಮತ ಯಾಚಿಸಿ ಎಂದು ಹೇಳಿದರು. ನಾವು ಎಲ್ಲೂ ತಪ್ಪು ಕೆಲಸ ಮಾಡಿ ಮತ ಕೇಳುತ್ತಿಲ್ಲ, ಬೆಳ್ತಂಗಡಿ ಕ್ಷೇತ್ರದಲ್ಲಿ ನೋಡಿದಾಗ 3,500 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಯಾವುದೇ ಹಳ್ಳಿಯಲ್ಲಿ 10 ಮೀಟರ್ ರಸ್ತೆ ತಮಿಳುನಾಡಿನಲ್ಲೂ ಇರಲ್ಲ. ಆದರೆ ಬೆಳ್ತಂಗಡಿಯಲ್ಲಿ 10 ಮೀಟರ್ ರಸ್ತೆಗಳೂ ಅಭಿವೃದ್ಧಿಯಾಗಿದೆ. ಹಿನ್ನೀರು ತಡೆಗೆ ಕಿಂಡಿ ಅಣೆಕಟ್ಟು, ಮೆರೈನ್ ಡಿಪ್ಲೋಮಾ ಕಾಲೇಜು ತರುವ ಸಾಧನೆ ಮಾಡಿದ್ದಾರೆ‌.ಪಕ್ಷಕ್ಕೆ ವಾರೆಂಟಿ ಇದ್ದರಷ್ಟೆ ಅವರ ಉತ್ಪನ್ನಕ್ಕೆ ವಾರೆಂಟಿ. ಇಡಿ ಭಾರತದಲ್ಲಿ ಕಾಂಗ್ರೆಸ್‌ನ್ನು ಜನ ಕಸದ ಬುಟ್ಟಿಗೆ ಎಸೆದಿದ್ದಾರೆ. ಕಾಂಗ್ರೆಸ್‌ನ ಎಲ್ಲ ಗ್ಯಾರೆಂಟಿಗಳು ಎಸಿಯಲ್ಲಿ ಕುಳಿತು ಮಾಡಿದ ಪೇಪರ್ ಅಷ್ಟೆ. ಕಾಂಗ್ರೆಸ್ ಪಕ್ಷ ಒಂದು ಡ್ರಾಮಾ ಕಂಪೆನಿಯಂತಾಗಿದೆ. ಕಾಂಗ್ರೆಸ್ ಪಕ್ಷ 80% ಕಮಿಷನ್ ಪಕ್ಷ. ಅಂದು ರಾಜೀವ್ ಗಾಂಧಿ ಅವರೇ ಹೇಳಿದ್ದರು. ಎಲ್ಲ ಕಡೆ ರಿಜೆಕ್ಟ್ ಆದ ಸರಕಾರ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ರಾಲಿಗಳನ್ನು ಮಾಡಿ ಒಂದು ಕಡೆ ರಾಮ, ಒಂದು ಕಡೆ ಅಕ್ಬರ್, ಒಂದು ಕಡೆ ಆ್ಯಂಟನಿಯಾಗಿ ವೇಷ ಧರಿಸುತ್ತಾ ಹೋಗಿದೆ.ಕೇಂದ್ರದ ಸರಕಾರ 2024 ಮುಗಿಯುವಾಗ ಪ್ರತಿ ಮನೆಗೆ ಕುಡಿಯುವ ನೀರು ತಲುಪಬೇಕೆಂಬ ಅಪೇಕ್ಷೆ ಪಟ್ಟಿದ್ದರು. ಅದಕ್ಕೆ ಡಬಲ್ ಎಂಜಿನ್ ಸರಕಾರ ಬೇಕು. 70 ವರ್ಷದಲ್ಲಿ ಕಾಂಗ್ರೆಸ್ 74 ವಿಮಾನ ನಿಲ್ದಾಣಗಳನ್ನು ಮಾಡಿದ್ದರೆ ಬಿಜೆಪಿ 7 ವರ್ಷದಲ್ಲಿ 70 ವಿಮಾನ ನಿಲ್ದಾಣ ಮಾಡಿದೆ. ಈಗ ರಾಜ್ಯದಲ್ಲಿ 140 ನಿಲ್ದಾಣಗಳಿವೆ ಎಂದು ಹೇಳಿದರು.ನೀವು ಬಜರಂಗದಳವನ್ನು ಪಿಎಫ್‌ಐನ್ನು ಒಂದೇ ರೀತಿ ತಕ್ಕಡಿಯಲ್ಲಿ ತೂಗಿ ಬ್ಯಾನ್ ಮಾಡಲು ಹೊರಟಿದ್ದೀರಿ. ಅವರು ಉಗ್ರವಾದಿಗಳು, ಇಡಿ ಕರಾವಳಿಯಲ್ಲಿ ಒಂದು ಬೂತ್ ನಲ್ಲಿ ಕಾಂಗ್ರೆಸ್‌ಗೆ ಲೀಡು ಕೊಡಬಾರದು ಎಂಬ ಸಂಕಲ್ಪ ಮಾಡಿ. ಬಿಜೆಪಿ ಪ್ರಣಾಳಿಕೆಯಲ್ಲಿರುವ ಒಂದೊಂದೂ ಅಂಶವನ್ನೂ ನೂರಕ್ಕೆ ನೂರು ಜಾರಿಗೆ ಮಾಡುತ್ತೇವೆ. ಆದರೆ ನಿಮ್ಮ ಪ್ರಣಾಳಿಕೆ ಈಡೇರಿಸಲು 50 ಸಾವಿರ ಕೋಟಿ ಬೇಕು. ಎಲ್ಲಿಂದ ನಿಮ್ಮ ಡಿಕೆಶಿ ಮನೆಯಲ್ಲಿ, ಸಿದ್ದರಾಮಯ್ಯ ತೋಟದಲ್ಲಿ ನೋಟು ಪ್ರಿಂಟಿಂಗ್ ಯಂತ್ರ ಇಡುತ್ತೀರಾ ಎಂದು ಪ್ರಶ್ನಿಸಿದ ಅವರು ಚುನಾವಣೆ ಹತ್ತಿರ ಬಂದಾಗ ಆಕಾಶದಿಂದ ತಂದು ಕೊಡುತ್ತೇವೆ ಎಂದು ರಾಹುಲ್ ಹೇಳುತ್ತಾರೆ. ಮೇ 10, ಮೇ 13 ಇತಿಹಾಸ ನಿರ್ಮಾಣವಾಗಲಿದೆ. 130 ಶಾಸಕರನ್ನು ತಂದು ಯಾವ ರೀತಿ ಸರಕಾರ ಮಾಡುತ್ತೇವೆ ಎಂದು ತೋರಿಸುತ್ತೇವೆ ಎಂದು ಹೇಳಿದರು.ನಾನು ಅಂದು ನೋಡಿದ ಹರೀಶ್ ಪೂಂಜ ಇಂದೂ ಹಾಗೇ ಇದ್ದಾರೆ. ಹಿಂದುತ್ವವನ್ನು ಒಂದಿಂಚು ಬಿಟ್ಟು ಕೊಟ್ಟಿಲ್ಲ. ಅವರು ಈ ಬಾರಿ ಶಾಸಕರು ಮಾತ್ರವಲ್ಲ, ಉನ್ನತ ಮಟ್ಟಕ್ಕೆ ಹೋಗುತ್ತಾರೆ ಎಂದರು. ಶಾಸಕ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮಾತನಾಡಿ, ನಾನು ಮಾತಾಡುವುದಕ್ಕಿಂತ ಹೆಚ್ಚು ನೀವು ಮತ ನೀಡಿದ್ದಕ್ಕೆ ನಿಮ್ಮ ಮಗನಾಗಿ ಸೇವೆ ಸಲ್ಲಿಸಿದ್ದೇನೆ. ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮೊದಲು ಎಂಬಂತೆ ಕಲ್ಪನೆ ನೀಡಿದ್ದೇನೆ. ನನ್ನ ಬಳಿ ಬಂದಾಗ ಜಾತಿ, ಧರ್ಮ ನೋಡದೆ ಸೇವೆ ಮಾಡಿದ್ದೇನೆ. ನೆರೆ ಬಂದಾಗ ಚಾರ್ಮಾಡಿ ಘಾಟಿಯಲ್ಲಿ ಅಣ್ಣಾಮಲೈಯವರು ಚಿಕ್ಕಮಗಳೂರು ಎಸ್.ಪಿ.ಆಗಿದ್ದಾಗ ನಾನು ಅವರು ಭೇಟಿಯಾಗಿದ್ದೆವು. ಆದರೆ ಇಂದು ಅವರು ನನ್ನ ಸಹೋದರನಂತೆ ನನ್ನ ಬೆಂಬಲಕ್ಕೆ ಬಂದಿದ್ದಾರೆ. ಇನ್ನೈದು ವರ್ಷಕ್ಕೆ ಅವಕಾಶ ನೀಡಿ ಶ್ರಮಿಕನಂತೆ ನಿಮ್ಮ ಮಗನಂತೆ ಸೇವೆ ಮಾಡಲು ಅವಕಾಶ ನೀಡಿ‌. ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಬೆಳ್ತಂಗಡಿಯಾಗಿ ಮಾಡೋಣ ಎಂದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಹರೀಶ್ ಪೂಂಜರಂತಹ ಶ್ರಮಿಕ ಶಾಸಕನನ್ನು ನನ್ನ ಸಾರ್ವಜನಿಕ ಬದುಕಿನಲ್ಲಿ ನಾನು ಕಂಡಿಲ್ಲ. ನಾನು ರಾಜ್ಯದೆಲ್ಲೆಡೆ ತಿರುಗಾಡಿದ್ದೇನೆ‌. ಆದರೆ 50 ಸಾವಿರ ಮತಗಳ ಅಂತರದಲ್ಲಿ ಹರೀಶ್ ಪೂಂಜ ಗೆಲ್ಲುತ್ತಾನೆ ಎಂಬುದನ್ನು ಜನ ಹೇಳುತ್ತಾರೆ. ದೇಶದಲ್ಲಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಸಮೃದ್ಧವಾಗಿದೆ ಎಂದು ಹೇಳಿದರು. ಒಂದು ದಿನ ಜಗತ್ತಿನ ಬಲಾಢ್ಯ ದೇಶ ಎಂದರೆ ಅಮೇರಿಕಾ; ಮುಂದಿನ ವಿಶ್ವದ ನಾಯಕತ್ವ ಭಾರತದ ನರೇಂದ್ರ ಮೋದಿಗೆ ಎಂತ ಹೇಳುತ್ತಿದೆ. ಭಾರತ ಜೋಡೋ ಎಂದು ಹೊರಟ ಕಾಂಗ್ರೆಸ್ ಭಾರತ ಒಡೆದದ್ದು ಯಾರು ಎಂದು ಪ್ರಶ್ನಿಸಿದರು. ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಾರಾಯಣ ಗುರು ನಿಗಮ ಸ್ಥಾಪನೆ ಮಾಡಿದ್ದು ಇದ್ದರೆ ಅದು ಬಿಜೆಪಿ ಸರಕಾರ ಎಂದರು.ಒಳ ಮೀಸಲಾತಿಯೆಂದರೆ ಪಂಗಡವಾರು ಜನಸಂಖ್ಯೆ ನೋಡಿ ವಿಂಗಡಣೆ ಮಾಡಿದ್ದರಿಂದ ಕೆಳವರ್ಗದ ಮಕ್ಕಳು ಮುಂದಿನ ದಿನ ಐಎಎಸ್, ಐಪಿಎಸ್ ಮಕ್ಕಳಾಗಲಿದ್ದಾರೆ.ನರೇಂದ್ರ ಮೋದಿ ಸರಕಾರ 54 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ವರದಾನ ಮಾಡಿದೆ. ಇದಕ್ಕೆ ನಾವು ಗ್ಯಾರೆಂಟಿ ಕಾರ್ಡ್ ಕೊಟ್ಟಿಲ್ಲ. ಆದರೆ ಕಾಂಗ್ರೆಸ್ ಮುಂದೆ ಕೊಡುತ್ತೇವೆಂದು ಹೇಳಿ ಗ್ಯಾರೆಂಟಿ ಕಾರ್ಡ್ ನೀಡುತ್ತಿದೆ. ಈ ಗ್ಯಾರೆಂಟಿ ಶಾಲೆಯಲ್ಲಿರುವ ಮಕ್ಕಳಿಗೆ ನವಿಲು ಗರಿ ಕೊಟ್ಟಂತೆ. ಪುಸ್ತಕದಲ್ಲಿರುವ ನವಿಲು ಗರಿ ಮರಿ ಹಾಕೂದು, ಕಾಂಗ್ರೆಸ್‌ನ ಗ್ಯಾರೆಂಟಿ ಎರಡು ಒಂದೇ. ಕಾಂಗ್ರೆಸ್ ಬಜರಂಗದಳ ನಿಷೇಧ ಘೋಷಣೆ ಮಾತೆತ್ತಿದೆ. ಹಾಗಾಗಿ ಇಂದಿನ ಚುನಾವಣೆ ಹನುಮ ಭಕ್ತರಿಗೂ ಟಿಪ್ಪು ಭಕ್ತರಿಗೂ ಚುನಾವಣೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಹರೀಶ್ ಪೂಂಜರನ್ನು ಸರಿಗಟ್ಟುವ ಶಾಸಕನಿಲ್ಲ. ಇನ್ನೆರಡು ದಿನಗಳಿವೆ, ಶಾಸಕ ಹರೀಶ್ ಪೂಂಜಗೆ ಮತ ನೀಡಿ ಎಂದು ಹೇಳಿದರು.ಹಲವಾರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ನಾರಾವಿ ಹಿರಿಯ ಬಿಜೆಪಿ ಕಾರ್ಯಕರ್ತ ಡಾಕಯ್ಯ ಪೂಜಾರಿ, ಕೊರಗಪ್ಪ ನಾಯ್ಕ, ವಕೀಲ ಸುಬ್ರಮಣ್ಯ ಕುಮಾರ್ ಅಗರ್ತ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಸೋಮನಾಥ್ ಬಂಗೇರ ವರ್ಪಾಳೆ ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡಕಾಮಿಡಿ ಕಿಲಾಡಿ ಕ್ಯಾತಿಯ ಹಿತೇಶ್, ಅನೀಶ್ ಕಾಪಿನಡ್ಕ, ಚುನಾವಣಾ ಪ್ರಭಾರಿ ಯತೀಶ್, ಶ್ರೀನಿವಾಸ್ ಕಿಣಿ ಉಪಸ್ಥಿತರಿದ್ದರು. ಜಯಂತ್ ಕೋಟ್ಯಾನ್ ಪ್ರಾಸ್ತಾವಿಸಿ, ಸ್ವಾಗತಿಸಿದರು.ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.

Latest 5

Related Posts