ಕಳಿಯ ಸೊಸೈಟಿಯಿಂದ ಉಚಿತ ಮೈಲುತುತ್ತು ವಿತರಣೆ
ಮಾಸ್ಕ್ ಧರಿಸಿ-ವೈಯಕ್ತಿಕ ಅಂತರ ಕಾಪಾಡಿದ ಮಾದರಿ ಕಾರ್ಯಕ್ರಮ ಗೇರುಕಟ್ಟೆ: ಇಲ್ಲಿನ ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಸಂಘದ ಸದಸ್ಯರಿಗೆ ಗೇರುಕಟ್ಟೆ ಕಳಿಯ ಸಹಕಾರಿ ಸಭಾ ಭವನದಲ್ಲಿ ಉಚಿತ ಮೈಲುತುತ್ತು ವಿತರಣಾ ಕಾರ್ಯಕ್ರಮ ಮೇ 9ರಂದು ನಡೆಯಿತು.ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಮಾತನಾಡಿ, ಕೃಷಿಕರು ಪ್ರತಿ ಹಂತದಲ್ಲೂ ಬೆಳೆಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟ ಅನುಭವಿಸುತ್ತಾರೆ. ಈ ಸಮಯದಲ್ಲಿ ಕೋವಿಡ್ -19 ನಿಂದ ಮತ್ತಷ್ಟು […]
ಕುಡಿತದ ನಶೆಯಲ್ಲಿ ಹಲ್ಲೆ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು
ಕಳೆದ ಮೇ 6ರ ರಾತ್ರಿ ಕುಡಿತದ ನಶೆಯಲ್ಲಿ ಸ್ನೇಹಿತನಿಗೆ ಹಲ್ಲೆ ನಡೆಸಿ, ತಲೆಮರೆಸಿಕೊಂಡಿದ್ದ ಆರೋಪಿ ಲೋಕೇಶನನ್ನು ಮೇ 8ರಂದು ಬಂಧಿಸಿ ಕಾನೂನಿನ ಬೇಡಿ ತೊಡಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.ಕುಡಿತದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ಸ್ನೇಹಿತ ಸುರೇಶನ ಮೇಲೆ ಹಲ್ಲೆ ನಡೆದಿದ ಲೋಕೇಶ್, ರಕ್ತ ನೋಡುತ್ತಿದ್ದಂತೆ ನಶೆ ಇಳಿದು ಕಾನೂನಿನ ಭಯದಿಂದ ತಲೆಮರೆಸಿಕೊಂಡಿದ್ದ. ಈತನ ಪತ್ತೆ ಕಾರ್ಯಕ್ಕೆ ಮುಂದಾದ ಧರ್ಮಸ್ಥಳ ಪೊಲೀಸರು ಮೇ 8ರಂದು ಈತನಿರುವ ಜಾಗವನ್ನು ಪತ್ತೆಹಚ್ಚಿ, ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದು […]
ಆಹಾರದ ಕಿಟ್ ವಿತರಣೆ ಜನಪ್ರತಿನಿಧಿಗಳು ಮಾಸ್ಕ್ ಹಾಗೂ ವೈಯಕ್ತಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಲಿ .
ಲಾಯಿಲ : ಕೋರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವೇಕಾನಂದ ನಗರದಲ್ಲಿರುವ ತೀರಾ ಬಡತನ ದಲ್ಲಿರುವ ಕುಟುಂಬಗಳಿಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್ ರವರು ನೀಡಿರುವ ಆಹಾರದ ಕಿಟ್ ಗಳನ್ನು ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕುಮಾರ್ ರವರು ಹಾಗೂ ತಾಲೂಕು ಯೂತ್ ಕಾಂಗ್ರೆಸಿನ ಅಧ್ಯಕ್ಷರಾದ ಅಭಿನಂದನ್ ಹರೀಶ್ ಕುಮಾರ್ ವಿತರಿಸಿದರು.ಜನಪ್ರತಿನಿಧಿಗಳು ತಮ್ಮವರು ಮಾಸ್ಕ್ ಧರಿಸುವಂತೆ ಮುನ್ನಚ್ಚರಿಕೆ ವಹಿಸುವುದರೊಂದಿಗೆ, ಕಿಟ್ ವಿತರಣೆಯ […]
ಲಾಕ್ ಡೌನ್ ಸಡಿಲಿಕೆ ಅನಗತ್ಯ ಬೀದಿಗೆ ಬರುವ ಜನ – ಇಲ್ಲದ ಕಾನೂನಿನ ಭಯ ನಿರ್ಬಂಧಿತ ವ್ಯಾಪಾರವೂ ಸಲೀಸು

ಕೊರೋನಾ ಸೋಂಕು ಹರಡದಂತೆ ಎಲ್ಲ ಸೂಕ್ತ ಮುಂಜಾಗ್ರತೆ ವಹಿಸಿ, ಜನತೆ ಲಾಕ್ ಡೌನಿನಿಂದ ಹೊರ ಬಂದು ಮುಕ್ತವಾಗಿ ಜೀವನ ನಡೆಸಲಿ ಎಂಬ ಉದ್ಧೇಶದಿಂದ ಸರಕಾರ ಲಾಕ್ ಡೌನಿನ ನಿಯಮಗಳನ್ನು ಸಾಕಷ್ಟು ಸಡಿಲಿಕೆ ಮಾಡಿದೆ. ಆದರೆ ಸರಕಾರ ಮಾಡಿದ ಲಾಕ್ ಡೌನ್ ನಿಯಮಗಳ ಸಡಿಲಿಕೆಯನ್ನು ಉಪಯೋಗಕ್ಕಿಂತ ದುರುಪಯೋಗಪಡಿಸಿಕೊಳ್ಳುತ್ತಿರುವ ಬಹುತೇಕ ಮಂದಿ ದಿನಬೆಳಗಾದರೆ ಬೀದಿಗಿಳಿಯುತ್ತಿದ್ದಾರೆ, ಅನಗತ್ಯ ತಿರುಗುತ್ತಿದ್ದಾರೆ. ಮಾಸ್ಕ್ ಧರಿಸದ-ಧರಿಸಿದರೂ ಸರಿಯಾಗಿ ಧರಿಸದ ವೈಯಕ್ತಿಕ ಅಂತರ ಸಂಪೂರ್ಣವಾಗಿ ಮರೆತ ಬಹುತೇಕ ಮಂದಿಗೆ ಕೊರೋನಾ ಸೋಂಕು ಹರಡಬಹುದೆಂಬ ಭಯವೇ ಇದ್ದಂತಿಲ್ಲ. ಇಂತಹ […]
ರೋಟರಿ ಕ್ಲಬ್ಬಿನಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆ
ಮೇ 8, ವಿಶ್ವ ರೆಡ್ ಕ್ರಾಸ್ ದಿನಾಚರಣೆ; ಬೆಳ್ತಂಗಡಿ ರೋಟರಿ ಕ್ಲಬ್ ಸದಸ್ಯರು ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. 88 ಬಾರಿ ರಕ್ತದಾನ ಮಾಡಿ ಸಾಕಷ್ಟು ಜೀವ ಉಳಿಸಿದ ಅತ್ತಾಜೆ ಕೇಶವ ಭಟ್ಟರನ್ನು ಸಮ್ಮಾನಿಸುವ ಮೂಲಕ ರಕ್ತದಾನದ ಮಹತ್ವದ ಸಂದೇಶ ಸಾರಿದರು. ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಜಯರಾಮ್, ಮಾಜಿ ಅಧ್ಯಕ್ಷ ಯಶವಂತ ಪಟವರ್ಧನ್, ನಿಯೋಜಿತ ಅಧ್ಯಕ್ಷ ಧನಂಜಯ ರಾವ್ ಬಿ.ಕೆ., ಚುನಾಯಿತ ರೋಟರಿ ಜಿಲ್ಲಾ ಉಪರಾಜ್ಯಪಾಲ ಪ್ರತಾಪ ಸಿಂಹ ನಾಯಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ಬಿನಿಂದ ಸ್ಯಾನಿಟೈಸರ್ ಸ್ಟ್ಯಾಂಡ್ ಕೊಡುಗೆ
ಕೊರೋನಾ ಸೋಂಕು ಹರಡುವಿಕೆ ತಡೆಗೆ ಸದ್ಯಕ್ಕೆ ಮುಂಜಾಗ್ರತೆಯೊಂದೇ ಪರಿಹಾರ. ಈ ಸತ್ಯವನ್ನರಿತ ಬೆಳ್ತಂಗಡಿ ರೋಟರಿ ಕ್ಲಬ್, ಮುಂಜಾಗ್ರತೆಗೆ ತನ್ನಿಂದಾದ ಸಹಕಾರ ನೀಡುತ್ತಿದೆ. ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರ ಕಾಪಾಡುವುದು ಪ್ರತಿಯೊಬ್ಬರ ವೈಯಕ್ತಿಕ ಜವಾಬ್ದಾರಿ. ಈ ವಿಚಾರದಲ್ಲಿ ಅರಿವನ್ನು ಮೂಡಿಸುವುದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲೂ ವೈಯಕ್ತಿಕ ಸ್ವಚ್ಛತೆ ಕಾಪಾಡುವ ಉದ್ಧೇಶದಿಂದ ಸ್ಯಾನಿಟೈಜರ್ ಸ್ಟ್ಯಾಂಡನ್ನು ನೀಡುವ ಯೋಜನೆ ಹಮ್ಮಿಕೊಂಡಿದೆ.ಬೆಳ್ತಂಗಡಿ ರೋಟರಿ ಕ್ಲಬ್ಬಿನ ವತಿಯಿಂದ ಈಗಾಗಲೇ ಬೆಳ್ತಂಗಡಿ ಪತ್ರಕರ್ತರ ಸಂಘ ಹಾಗೂ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸ್ಟ್ಯಾಂಡನ್ನು ಕೊಡುಗೆಯಾಗಿ ನೀಡಿದ್ದು,; […]
ಬೆಳ್ತಂಗಡಿ ತಾಲೂಕಿನ ಎಂಡೋ ಪೀಡಿತರಿಗೆ ಶಾಸಕ ಹರೀಶ್ ಪೂಂಜಾರವರಿಂದ ನೆರವು:
ಕೊಕ್ಕಡ, ಬೆಳ್ತಂಗಡಿ ತಾಲೂಕಿನ ಎಂಡೋಪೀಡಿತರ ಸಂಕಷ್ಟಕ್ಕೆ ಶಾಸಕ ಹರೀಶ್ ಪೂಂಜಾ ನೆರವಿನ ಹಸ್ತ ಚಾಚಿದ್ದು ಈ ಸಂಬಂದ ಕೊಕ್ಕಡದ ಎಂಡೋಪೀಡಿತ ಸಂತೋಷ್ ಮಿನೆಜಸ್ ಮನೆಗೆ ಭೇಟಿ ನೀಡಿ ಕಿಟ್ ನೀಡಿದರು. ಶಾಸಕರಾಗುವ ಮೊದಲೇ ಎಂಡೋಪೀಡಿತ ಪ್ರತಿಭಟನಾಕಾರರೊಂದಿಗೆ 3 ದಿನಗಳ ಕಾಲ ಕೊಕ್ಕಡದಲ್ಲಿ ನಡೆದಿದ್ದ ಧರಣಿಯಲ್ಲೂ ಪಾಲ್ಗೊಂಡು ಎಂಡೋಪೀಡಿತರ ಬಗ್ಗೆ ವಿಷೇಷ ಕಾಳಜಿ ತೋರಿಸಿದ್ದರು.ಈ ಸಂದರ್ಬದಲ್ಲಿ ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು, ಯೋಗೀಶ್ ಗೌಡ ಆಲಂಬಿಲ, ರಾಘವ ಭಂಡಾರಿ, ಶ್ರೀಕೃಷ್ಣ ಭಟ್ ಹಿತ್ತಿಲು ಮೊದಲಾದವರು ಉಪಸ್ಥಿತರಿದ್ದರು. ಪಟ್ರಮೆ […]
ಕುಡಿತದ ಮತ್ತು ಸ್ನೇಹಕ್ಕೆ ಕುತ್ತು ಅಮಲಿನಲ್ಲಿ ನಡೆದ ಹೊಡೆದಾಟದಲ್ಲಿ ಓರ್ವ ಆಸ್ಪತ್ರೆಗೆ-ಇನ್ನೋರ್ವ ಪರಾರಿ
ಅಲ್ಲಿ ತಲವಾರೂ ಇರಲಿಲ್ಲ; ಚಾಕು-ಚೂರಿಯೂ ಇರಲಿಲ್ಲ; ಇದ್ದದ್ದು ಒಂದು ಸ್ಪೇನರ್ ಮಾತ್ರ. ಇಬ್ಬರೂ ಒಂದಷ್ಟು ಮದ್ಯ ಸೇವಿಸಿ ಅಮಲಿನಲ್ಲಿದ್ದರು. ಯಾವುದೋ ಹಳೆಯ ವಿಚಾರ ಕೆದಕಿ ಇಬ್ಬರೊಳಗೆ ನಡೆದ ಮಾತಿನ ಜಗಳ ಕ್ರಮೇಣ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಓರ್ವ ಕೈಗೆ ಸಿಕ್ಕ ಸ್ಪೇನರೊಂದರಿಂದ ಮತ್ತೊಬ್ಬನ ತಲೆಗೆ ಹೊಡೆದಿದ್ದಾನೆ. ರಕ್ತ ಸೋರಿದೆ. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೊಡೆದಾತ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಇದು ಮೇ 6ರ ರಾತ್ರಿ ಧರ್ಮಸ್ಥಳದ ನಾರ್ಯದಲ್ಲಿ ನಡೆದ ಘಟನೆಯ ನೈಜ […]
ಬಿಗ್ ಬ್ರೇಕಿಂಗ್ ನ್ಯೂಸ್ ಕೊರೋನಾ ವಾರಿಯರ್ಸ್ ಮೇಲೆ ಶಾಸಕರ ದರ್ಪ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಏರಿ ಹೋದ ಮೂಡುಬಿದಿರೆಯ ಶಾಸಕರು
ಮೂಡುಬಿದಿರೆ : ದೇಶದಾದ್ಯಂತ ನಿಸ್ವಾರ್ಥ ಸೇವೆಗೈಯುತ್ತಿರು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊರೋನಾ ವಾರಿಯರ್ಸ್ ಎಂದು ಘೋಷಿಸಿದ್ದು, ಇವರ ಸೇವೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರ ಆದೇಶದಂತೆ ಚಪ್ಪಾಳೆ ತಟ್ಟಿ, ಗಂಟೆ ಮೊಳಗಿಸಿ, ದೀಪ ಮೊಂಬತ್ತಿ ಬೆಳಗಿಸಿ, ಸೈನಿಕರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಿ ಅಭಿನಂದಿಸುವ ಕಾರ್ಯ ದೇಶದಾದ್ಯಂತ ನಡೆದಿದೆ.ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ನಡೆದಿರುವ ಈ ಮಾನವೀಯ ಪ್ರಕ್ರಿಯೆಯನ್ನು ನಮ್ಮ ಜನಪ್ರತಿನಿಧಿಗಳೇ ಅರ್ಥೈಸಿಕೊಳ್ಳದಿದ್ದರೆ ಪ್ರಮಾದಗಳು ಮತ್ತೆ ಮತ್ತೆ ನಡೆಯುವ ಸಾಧ್ಯತೆಗಳೆ ಹೆಚ್ಚು. ಕಿವಿ […]
ವೈಯಕ್ತಿಕ ಅಂತರ ಇದ್ದರೆ ಸಾಲದಣ್ಣಾ….ಮಾಸ್ಕ್ ಧಾರಣೆ ಕಡ್ಡಾಯವಣ್ಣಾ….
ದೇಣಿಗೆ ನೀಡುವಾಗಲೂ ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತೆ ಅಗತ್ಯ ಪುದುವೆಟ್ಟುವಿನ ಬಾರಾಳಿಯ ಶ್ರೀ ಗುರುನಾರಾಯಣ ಬಿಲ್ಲವ ಸಂಘದಿಂದ ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್-19ಗೆ 25,000ರೂಪಾಯಿಗಳ ಚಕ್ ನೀಡಿದರು. ಇದು ಸತ್ಕಾರ್ಯ; ಸರ್ವಶಕ್ತ ಮೆಚ್ಚುವ ಕೆಲಸ. ಆದರೆ ಸರಕಾರವೇ ಕೊರೋನಾ ಸೋಂಕು ಹರಡದಂತೆ ಸೂಚಿಸಿದ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಪರಿಹಾರ ಧನ ನೀಡಿದ ಮಾತ್ರಕ್ಕೆ ಕೊರೋನಾ ಸೋಂಕಿನಿಂದ ಪಾರಾಗಲು ಅಸಾಧ್ಯ. ಶಾಸಕರು ಹಾಗೂ ಸಂಘಟನೆಯ ಪದಾಧಿಕಾರಿಗಳು ಈ ವಿಚಾರದತ್ತ ಗಮನ ಹರಿಸಬೇಕಿತ್ತು. ವೈಯಕ್ತಿಕ ಅಂತರ ಕಾಪಾಡಿಕೊಂಡ ಇವರುಗಳು ಮಾಸ್ಕ್ […]