ಚಾಲಕನ ನಿಯಂತ್ರಣ! ತಪ್ಪಿದ ಕಾರು ರಸ್ತೆಯ ಬಲಬದಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಹಿಂಬದಿಗೆ ಢಿಕ್ಕಿ ಹಸುಳೆ ಸಾವು-ಐದು ಮಂದಿಗೆ ಗಾಯ
ಮೇ 5ರ ರಾತ್ರಿ 11-00ಗಂಟೆಗೆ ಮಂಗಳೂರು-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕಿನ ಬಳಿ ಇಕೋ ಕಾರೊಂದು ರಸ್ತೆಯ ಬಲಬದಿಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಹೆತ್ತವರೊಂದಿಗೆ ಪಯಣಿಸುತ್ತಿದ್ದ ಹಸುಳೆ ಮಾಧವಿ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಇತರ 5ಮಂದಿ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಉಜಿರೆ ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.ಕಾರಿನಲ್ಲಿದ್ದ ದೀಕ್ಷಾ, ಚಾಲಕ ಪ್ರಮೋದ್, ಮಮತಾ, ಸ್ವಾತಿ, ಅಶ್ವಿನಿ ಅಪಘಾತದಲ್ಲಿ ಗಂಭೀರ ಗಾಯಗೊಂಡವರಾಗಿದ್ದು, ಇವರ ಪೈಕಿ ಪ್ರಮೋದ್, […]
ಮುಂಡೂರು ಬಿಲ್ಲವ ಸಂಘದಿಂದ ಆಹಾರ ಸಾಮಾಗ್ರಿ ಕಿಟ್ ವಿತರಣೆ ಮಾಸ್ಕ್ ದರಿಸಿ ವೈಯಕ್ತಿಕ ಅಂತರ ಕಾಪಾಡಿ ಮಾದರಿಯಾದರಿವರು
ಮುಂಡೂರು: ಕೋವಿಡ್-19 ಕೊರೋನಾ ಸೋಂಕನ್ನು ತಡೆಗಟ್ಟಲು ಸರಕಾರ ಲಾಕ್‍ಡೌನ್ ಮಾಡಿರುವ ಹಿನ್ನಲೆಯಲ್ಲಿ ಮುಂಡೂರು ಗ್ರಾಮದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ ಮುಂಡೂರು ಇವುಗಳ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳು ಸಾರಿದ ಒಂದೇ ಜಾತಿ-ಒಂದೇ ಮತ-ಒಂದೇ ದೇವರು ಎಂಬ ತತ್ವದಂತೆ ಗ್ರಾಮದಲ್ಲಿರುವ ಬಿಲ್ಲವ ಕುಟುಂಬ ಹಾಗೂ ಇತರ ವರ್ಗದ ಎಲ್ಲಾ ಧರ್ಮಗಳಲ್ಲಿರುವ ತೀರಾ ಹಿಂದುಳಿದ ಬಡತನದಲ್ಲಿರುವ ಕುಟುಂಬಗಳನ್ನು ಗುರುತಿಸಿ 52 ಕುಟುಂಗಳಿಗೆ ದಿನ ಬಳಕೆಯ ಆಹಾರ ಸಾಮಾಗ್ರಿ ಕಿಟ್‍ಗಳನ್ನು ಮುಂಡೂರು […]
ನದಿ ನೀರಿಗೆ ವಿಷ ಹಾಕಿದ ಪಾತಕಿಗಳ ಬಂಧನ

ಎಪ್ರಿಲ್ 30ರಂದು ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಕೋಡಿಯಲ್ಲಿ ಫಲ್ಗುಣಿ ಹೊಳೆಗೆ ವಿಷ ಬೆರೆಸಿ, ಮೀನುಗಳ ಮಾರಣ ಹೋಮ ನಡೆಸಿದ ಪ್ರಕರಣವನ್ನು ಭೇದಿಸಿದ ವೇಣೂರು ಪೊಲೀಸರು ಆರೋಪಿಗಳಾದ ಮೂಡುಕೋಡಿ ಗ್ರಾಮದ ಇರ್ಷಾದ್ ಹಾಗೂ ಮಹಮ್ಮದ್ ಹನೀಫನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೃತ್ತಿಯಲ್ಲಿ ಅಟೋ ಚಾಲಕರಾಗಿರುವ ಈ ಇಬ್ಬರು ದುಷ್ಕರ್ಮಿಗಳು ನದಿ ನೀರಿಗೆ ವಿಷ ಬೆರೆಸಿ, ಮೀನುಗಳ ಮಾರಣ ಹೋಮ ನಡೆಸುವ ದುಷ್ಕೃತ್ಯ ಯಾಕೆ ಎಸಗಿದರು ಎಂಬ ಸತ್ಯ ಹೊರಬರಬೇಕಾಗಿದೆ.ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲು ಬೆಳ್ತಂಗಡಿಯ ಪೊಲೀಸ್ ಇನ್ಸ್ ಪೆಕ್ಟರ್ […]
ಬಸದಿಗಳ ಪುರೋಹಿತ ಕುಟುಂಬಗಳಿಗೆ ಹೊಂಬುಜ ಜೈನ ಮಠದಿಂದ ಆಹಾರ ವಸ್ತುಗಳ ಕೊಡುಗೆ
ಬೆಳ್ತಂಗಡಿ; ಶ್ರೀ ಕ್ಷೇತ್ರ ಹೊಂಬುಜ ಶ್ರೀ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ಬೆಳ್ತಂಗಡಿ ತಾಲೂಕಿನ ಜೈನ ಬಸದಿಯ ಪುರೋಹಿತ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಇಂದು ನಡೆಯಿತು.ಭರತ್ ರಾಜ್ ಇಂದ್ರ ಕಾರ್ಕಳ ಇವರು ವಿತರಣೆಯ ನೇತೃತ್ವ ವಹಿಸಿದ್ದರು.ಕರ್ನಾಟಕ ರಾಜ್ಯಾಧ್ಯಂತ 400 ರಷ್ಟು ಪುರೋಹಿತ ಕುಟುಂಬಗಳಿಗೆ ಈಗಾಗಲೇ ಕಿಟ್ಟ್ ವಿತರಣೆ ಮಾಡಲಾಗಿದ್ದು, ಇನ್ನುಳಿದ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಭಟ್ಟಾರಕರು ತಿಳಿಸಿದರು.ತಾಲೂಕಿನಲ್ಲಿ ನಾರಾವಿ, ಅಳದಂಗಡಿ, ಗುರುವಾಯನಕೆರೆ, ಬಂಗಾಡಿ ಸೇರಿದಂತೆ 14 ಬಸದಿಗಳ 35 ಕುಟುಂಬಗಳಿಗೆ ತಲಾ […]
ತಾಲೂಕಿನ ಮಳೆಹಾನಿ ಪ್ರದೇಶಕ್ಕೆ ಎಂ.ಎಲ್.ಸಿ. ಹರೀಶ್ ಕುಮಾರ್ ಭೇಟಿ ಮಾಸ್ಕ್ ಧರಿಸದವರಿಂದ ಜನಪ್ರತಿನಿಧಿಗಳಾದರೂ ಅಂತರ ಕಾಪಾಡುವಂತಾಗಲಿ
ತಾಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕ ಗಾಳಿ ಮಳೆಯಿಂದಾಗಿ ತಾಲೂಕಿನ ಕಣಿಯೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ವ್ಯಾಪಕ ಹಾನಿಯುಂಟಾಗಿದ್ದು , ಈ ಪ್ರದೇಶಗಳಿಗೆ ಕರ್ನಾಟಕ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಇಂದು ಭೇಟಿ ನೀಡಿದರು. ಈ ಭೇಟಿಯ ಸಂದರ್ಭ ಹರೀಶ್ ಕುಮಾರರೊಂದಿಗಿದ್ದ ಸಾಕಷ್ಟು ಕಾರ್ಯಕರ್ತರು ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರ ಕಾಪಾಡದೇ, ಅಪಾಯವನ್ನು ಆಹ್ವಾನಿಸುವಂತೆ ಭಾಗವಹಿಸಿದ್ದರು. ನಾಡಿನ ಜನಪ್ರತಿನಿಧಿಗಳಾದವರು ತಾವು ಮಾಸ್ಕ್ ಧರಿಸುವುದರ ಜೊತೆಗೆ ಸರಿಯಾಗಿ ಮಾಸ್ಕ್ ಧರಿಸದವರಿಂದ ವೈಯಕ್ತಿಕ ಅಂತರ ಕಾಪಾಡದೇ […]
ಕೊರೋನಾದೊಂದಿಗೆ ಬದುಕಲು ಚಿಗುರಿದ ಕನಸು

ಜೀವನ ಪದ್ಧತಿ ಬದಲಿಸಿದರೆ ಪ್ರತಿಯೊಬ್ಬರು ಕೊರೋನಾ ಮಾರಿಯಿಂದ ಪಾರಾಗಬಹುದು ಬರಹ: ಅರವಿಂದ ಚೊಕ್ಕಾಡಿ ಲಾಕ್ಡೌನ್ ಪ್ರಾರಂಭದ ದಿನಗಳಲ್ಲಿ ಎಲ್ಲರೂ ಸೇರಿ ಜನರಿಗೆ ಬೈದದ್ದೇ ಬೈದದ್ದು.ನಾನು ಬೈಯ್ಯಲಿಲ್ಲ. ಯಾಕೆಂದರೆ ಒಂದು ಎಚ್ಚರ ಹುಟ್ಟಿಸಲು ಲಾಕ್ಡೌನ್ ಸಹಾಯಕವೆ ಹೊರತು ಅದೇ ವೈರಸ್ ಹೋಗುವ ತನಕ ಅಲ್ಲ ಎಂದು ಗೊತ್ತಿತ್ತು. ಆಗ ಬೈತಾ ಇದ್ದರೆ ಇವತ್ತು ಮಾತಾಡುವ ನೈತಿಕ ಅರ್ಹತೆ ಇರುವುದಿಲ್ಲ.ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ತತ್ವವನ್ನು ಕಲ್ಯಾಣ ರಾಷ್ಟ್ರಗಳು ಬದಲಿಸುವ ಅಭಿನಂದನಾರ್ಹ ಪ್ರಯತ್ನ ಮಾಡಿವೆ. ಆದರೂ ಪರಿಸ್ಥಿತಿ ಕಠಿಣವಾದಾಗ ಸರ್ವೈವಲ್ […]
ಆಹಾರ ಕಿಟ್ ನೀಡಿದವರಿಗೆ ಕಪಾಲಮೋಕ್ಷ ಫಲಾನುಭವಿಗಳೆಲ್ಲ ವೈನ್ ಸ್ಟೋರ್ ಮುಂದೆ
ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು 40ದಿನಗಳ ಕಾಲ ದೇಶದಲ್ಲಿ ಲಾಕ್ ಡೌನಿನಂತಹ ಕಠಿಣ ನಿಲುವು ತಳೆದಾಗ; ಸಮಾಜಮುಖೀ ಸಂಘಟನೆಗಳು, ಜನಪ್ರತಿನಿಧಿಗಳು, ರಾಜಕೀಯ ಧುರೀಣರು ಬಡವರ ಹೊಟ್ಟೆಪಾಡಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸಾಕಷ್ಟು ಕಡೆಗಳಲ್ಲಿ ಬಡ ಕುಟುಂಬಿಕರಿಗೆ ಉಚಿತವಾಗಿ ಆಹಾರಧಾನ್ಯದ ಕಿಟ್ ಗಳನ್ನೂ ವಿತರಿಸಿದ್ದರು. ಬಿಪಿಎಲ್ ಪಡಿತರ ಚೀಟಿ ಹೊಂದಿದ ಈ ಬಡವರಿಗೆ ರಾಜ್ಯ ಸರಕಾರವೂ ಅನ್ನಭಾಗ್ಯ ಯೋಜನೆಯ ಅಕ್ಕಿ ಸಹಿತ ಇತರ ದವಸಧಾನ್ಯಗಳನ್ನು ಉಚಿತವಾಗಿ ನೀಡಿತ್ತು.ಆದರೆ ಇಂದು ಮೇ 4ರಂದು […]
ವಾರ ಭವಿಷ್ಯ- 04-05-2020 ರಿಂದ 10-05-2020 ರವರೆಗೆ:

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.
ಮದ್ಯಕ್ಕಾಗಿ ಕಣ್ಣಿಗೆ ಎಣ್ಣೆ ಬಿಟ್ಟು ಮಾಸ್ಕ್ ಧರಿಸು-ವೈಯಕ್ತಿಕ ಅಂತರ ಕಾಪಾಡಿ ಕಾಯುವ ಮಂದಿ ಗುರುವಾಯನಕೆರೆಯ ಸ್ವಸ್ತಿಕ್ ವೈನ್ಸ್ ನಲ್ಲಿ ರಾತ್ರಿಯೇ ಸರದಿಯಲ್ಲಿ ನಿಂತ ಮದ್ಯಪ್ರಿಯರು

ಇನ್ನೇನು ನಾಳೆ ಬೆಳಗ್ಗೆ ಗಂಟೆ 9-00ಕ್ಕೆ ಸುಮಾರು 40ದಿನಗಳ ಬಳಿಕ ರಾಜ್ಯದಲ್ಲಿ ಮದ್ಯದಂಗಡಿಗಳು ಬಾಗಿಲು ತೆರೆಯಲಿವೆ. ಜಹುತೇಕ ಎಲ್ಲ ವೈನ್ ಶಾಪುಗಳಲ್ಲಿ ಸರಕಾರ ಸೂಚಿಸಿದ ಮಾರ್ಗಸೂಚಿಯನ್ನು ಪಾಲಿಸಿ, ಮದ್ಯ ಮಾರಾಟಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.ರಾಜ್ಯದ ಕೆಲವೆಡೆ ವೈನ್ ಸ್ಟೋರ್ ಗಳ ಮುಂದೆ ಈಡುಗಾಯಿ ಒಡೆದು, ಬಾಗಿಲಿಗೆ ಆರತಿ ಎತ್ತಿ ಮದ್ಯಪ್ರಿಯರು ಸಂಭ್ರಮಿಸಿದ ಬಗ್ಗೆ ವರದಿಗಳಾಗಿವೆ. ಆದರೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಸ್ವಸ್ತಿಕ್ ವೈನ್ಸ್ ನಲ್ಲಿ ಮದ್ಯಪ್ರಿಯರು ವಿಭಿನ್ನ ರೀತಿಯಿಂದ ಸುದ್ದಿ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ […]
ಲಾಯಿಲ 350 ಕುಟುಂಬಗಳಿಗೆ ತರಕಾರಿ ವಿತರಣೆ ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರ ಕಾಪಾಡಿದ ಸಂಘಟಕರು ಹಾಗೂ ಫಲಾನುಭವಿಗಳು

ಬೆಳ್ತಂಗಡಿ:ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರದ ಕಿಟ್ ದೊರೆತರೂ, ದಿನನಿತ್ಯದ ಬಳಕೆಗೆ ತರಕಾರಿ ಸಮಸ್ಯೆ ಎದುರಿಸುತ್ತಿದ್ದು ಇದನ್ನು ಮನಗಂಡ ಲಾಯಿಲದ ದಿl ಶೀನ ಶೆಟ್ಟಿ ಇವರ ಮಕ್ಕಳು ತಮ್ಮ ತಂದೆಯ ಸ್ಮರಣಾರ್ಥ ಲಾಯಿಲ ಗ್ರಾಮದ 4ನೇ ವಾರ್ಡಿನ ಸುಮಾರು 350 ಕುಟುಂಬಗಳಿಗೆ ತರಕಾರಿ ಕಿಟ್ ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಉದ್ಯಮಿ ಪುಷ್ಪರಾಜ್ ಶೆಟ್ಟಿ, ಲೋಕೋಪಯೋಗಿ ಇಲಾಖಾ ಗುತ್ತಿಗೆದಾರವಿಶ್ವನಾಥ ಲಾಯಿಲ, ಅರವಿಂದ ಲಾಯಿಲ, ಉದಯ ಕುಮಾರ್ ಪುತ್ರಬೈಲು ಹಾಗೂ ದಿ.ಶೀನ ಶೆಟ್ಟಿಯವರ ಪುತ್ರರಾದ ಗಣೇಶ […]