ಬೆಳ್ತಂಗಡಿ ರೋಟರಿ ಕ್ಲಬ್ಬಿನಿಂದ ಪ್ರೆಸ್ ಕ್ಲಬ್ಬಿಗೆ ಸ್ಯಾನಿಟೈಸರ್ ಸ್ಟ್ಯಾಂಡ್ ಕೊಡುಗೆ ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರಕ್ಕೆ ಆದ್ಯತೆ ನೀಡಿದ ಕಾರ್ಯಕ್ರಮ

ಇಂಟರ್ ನ್ಯಾಶನಲ್ ಫ್ರೀಡಂ ಆಫ್ ಪ್ರೆಸ್ ಡೇ (ಅಂತರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ ದಿನ)ಯಾದ ಮೇ 3ರಂದು ಬೆಳ್ತಂಗಡಿಯ ಪ್ರೆಸ್ ಕ್ಲಬ್ಬಿನ ವಠಾರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ಬಿನವರು ಬೆಳ್ತಂಗಡಿ ಪ್ರಸ್ ಕ್ಲಬ್ಬಿಗೆ ಕೊಡುಗೆಯಾಗಿ ಸ್ಯಾನಿಟೈಸರ್ ಸ್ಟ್ಯಾಂಡನ್ನು ಹಾಗೂ ಪತ್ರಕರ್ತರಿಗೆ ವೈಯಕ್ತಿಕ ಬಳಕೆಗೆ ಸ್ಯಾನಿಟೈಸರ್ ಬಾಟಲಿಗಳನ್ನು ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ತಂಗಡಿ ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಕೊರೋನಾ ಸೋಂಕಿನ ಹರಡುವಿಕೆಯ ಭೀತಿಯಿರುವ ಇಂದಿನ ದಿನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರು […]
ಸಹಾಯ ಮನೋಭಾವದಿಂದ ಸಮಾಜದ ಅಭಿವೃದ್ಧಿ ತಾಲೂಕು ಮರಾಠಿ ಸಂಘದಿಂದ ಮಾಸ್ಕ್ ಧರಿಸಿ-ವೈಯಕ್ತಿಕ ಅಂತರ ಕಾಪಾಡಿ ನಡೆದ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸಂತೋಷ್

ಬೆಳ್ತಂಗಡಿ: ಸಂಘ ಆರಂಭವಾದ ದಿನದಿಂದ ಸಮುದಾಯದ ಹಿಂದುಳಿದ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮೂಲಕ, ಸಶಕ್ತರನ್ನಾಗಿ ಮಾಡುವ ಕಾರ್ಯ ನಡೆದಿದೆ. ಕೊರೋನಾದಿಂದ ಮರಾಟಿ ನಾಯ್ಕ ಸಮುದಾಯದ ಜನತೆ ಸಂಕಷ್ಟದಲ್ಲಿದ್ದು, ಸರಕಾರ ಹಾಗೂ ಸಮುದಾಯದ ಶಕ್ತರು ಸಹಾಯ ಮಾಡಬೇಕಿದೆ ಎಂದು ತಾಲೂಕು ಯುವ ಮರಾಟಿ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲಾ ತಿಳಿಸಿದರು.ಇವರು ಲಾಯಿಲಾದ ಸ್ವ-ಗೃಹದಲ್ಲಿ ಹಮ್ಮಿಕೊಂಡಿದ್ದ ಆಯ್ದ ಮರಾಟಿ ಸಮುದಾಯದ ಜನತೆಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ಗ್ರಾಮಸಮಿತಿಗಳಿಗೆ ಹಸ್ತಾಂತರಿಸುವ ಸಂದರ್ಭ ಮಾತನಾಡಿದರು.ತಾಲೂಕಿನಲ್ಲಿ […]
ಆಶಾ ಕಾರ್ಯಕರ್ತೆಯರ ನೆರವಿಗೆ ನಾಗರಿಕರು ಅಳದಂಗಡಿಯಲ್ಲಿ ಮಾನವೀಯತೆಯ ಮೌನ ಕಾರ್ಯ

ಬೆಳ್ತಂಗಡಿ: ಇಂದಿನ ಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದು. ಈಗಿನ ಬಿರುಬಿಸಿಲಲ್ಲಿ ಅದೂ ಗ್ರಾಮೀಣ ಪ್ರದೇಶದಲ್ಲಿ ಅವರು ಮನೆ ಮನೆಗೆ ತೆರಳಿ ಆರೋಗ್ಯ ಮಾಹಿತಿ ಸಂಗ್ರಹಿಸುವುದು ಸಾಹಸವೇ ಸರಿ.ಇವರ ಸಂಕಷ್ಟನ್ನು ಅರಿತ ಸಹೃದಯಿ ನಾಗರಿಕರು ಕಾರ್ಯಕರ್ತೆಯರಿಗೆ ಮನೆ ಮನೆಗೆ ತೆರಳಲು ರಿಕ್ಷಾಗಳ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಅಳದಂಗಡಿ ಸುತ್ತಲಿನ 11 ಗ್ರಾಮಗಳಿಗೆ ಸಂಬಂಧ ಪಟ್ಟಂತೆ ಜನಸ್ನೇಹಿ-ಪೋಲಿಸ್ ಎಂಬ ಗುಂಪನ್ನು ರಚಿಸಿಕೊಂಡು ಅಳದಂಗಡಿ ಸಮುದಾಯ ಕೇಂದ್ರಕ್ಕೆ ಸಂಬಂಧಪಟ್ಟ 15 ಆಶಾ ಕಾರ್ಯಕರ್ತೆಯರಿಗೆ ಮನೆಯಿಂದ ಹಳ್ಳಿಗಳಿಗೆ ತೆರಳಲು ಆಟೋ […]
ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತೆ ಸೇವಾಕಾರ್ಯದಲ್ಲೂ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಯ್ದ ಲಯನ್ಸ್ ಅಧ್ಯಕ್ಷ ಹಾಗೂ ಕಾರ್ಯದರ್ಶಿ

ಮೇ 2 ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟರಿಗೆ ವಿವಾಹ ದಿನದ ಸಂಭ್ರಮ. ಈ ಸಂಭ್ರಮವನ್ನು ಲಯನ್ಸ್ ಕ್ಲಬ್ಬಿನ ಸೇವಾಪಥದಲ್ಲಿಯೇ ಆಚರಿಸಿಕೊಂಡ ವಸಂತ ಶೆಟ್ಟಿ, ಬೆಳಿಗ್ಗೆ ಕ್ಲಬ್ಬಿನ ಕಾರ್ಯದರ್ಶಿ ಲಾಯ್ಲ ಸುರೇಶ್ ಶೆಟ್ಟರೊಂದಿಗೆ 12ಅರ್ಹ ಫಲಾನುಭವಿಗಳಿಗೆ ಆಹಾರದ ಕಿಟ್ ನೀಡುವ ಮೂಲಕ ಹಸಿದವರ ಹೊಟ್ಟೆಗೆ ಹಿಟ್ಟು ನೀಡಿ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಸೇವಾಪಥದ ಮುಂದುವರಿದ ಭಾಗವಾಗಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ಮತ್ತೆ ಕ್ಲಬ್ಬಿನ ಕಾರ್ಯದರ್ಶಿ ಲಾಯ್ಲ ಸುರೇಶ್ ಶೆಟ್ಟರೊಂದಿಗೆ ಭೇಟಿ ನೀಡಿದ ಅಧ್ಯಕ್ಷ ವಸಂತ ಶೆಟ್ಟಿ, […]
ಕೊಕ್ರಾಡಿ ಸ್ನೇಹಿತರಿಂದ ವಿನೂತನ ಕಾರ್ಯಕ್ರಮ ಕಾರ್ಯಕ್ರಮದುದ್ದಕ್ಕೂ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಸ್ನೇಹಿತರು

ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರಕಾರದ ಆದೇಶದ ಪ್ರಕಾರ ಲಾಕ್ ಡೌನ್ ಕಾನೂನು ಇರುವುದರಿಂದ ಜನಸಾಮಾನ್ಯರಿಗೆ ಕೂಲಿ ಕೆಲಸವಿಲ್ಲದೆ ತಮ್ಮ ಹಸಿವು ನೀಗಿಸುವಲ್ಲಿ ತೊಡಕುಂಟಾದ ಕಾರಣ ಅಂತಹ ಕುಟುಂಬಗಳಿಗೆ ನೆರವಾಗಲು; ಬೆಳ್ತಂಗಡಿ ತಾಲೂಕು ಕೊಕ್ರಾಡಿ ಗ್ರಾಮದ ಸೂರ್ಯನಾರಾಯಣ ಡಿ.ಕೆ., ಸಂತೋಷ್ ಹೆಗ್ಡೆ, ದೀಪಕ್ ಶೆಟ್ಟಿ, ಹರೀಶ್ ಕುಮಾರ್ ಹಾಗೂ ಶಿವಪ್ರಕಾಶ್ ರವರು ಸ್ನೇಹಿತರ ತಂಡ ರಚಿಸಿ, ಮೊದಲಿಗೆ ತಾವೊಂದಷ್ಟು ಹಣ ಹಾಕಿ, ನಂತರ ಕೊಕ್ರಾಡಿ ಗ್ರಾಮದ ಹಾಗೂ ಪರ ಊರಿನ ಸಹೃದಯಿ ದಾನಿಗಳಿಂದ ಧನ […]
ಬಿಗ್ ಬ್ರೇಕಿಂಗ್ ನ್ಯೂಸ್ ಗುರುವಾಯನಕೆರೆಯಲ್ಲಿ ಭೀಕರ ರಸ್ತೆ ಅಪಘಾತ

ಗುರುವಾಯನಕೆರೆಯ ಮುಖ್ಯರಸ್ತೆಯಲ್ಲಿರುವ ಅರಫಾ ಮಾರ್ಬಲ್ಸ್ ಬಳಿಮೇ 2ರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳೀಯ ಎಟಿಎಂ ಕಾವಲುಗಾರ ಲಿಂಗಪ್ಪ ಮೂಲ್ಯ (62) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ವಿವಿರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಪಲ್ಗುಣಿ ನದಿಗೆ ವಿಷ ಹಾಕಿದ ದುಷ್ಕರ್ಮಿಗಳು ಸಹಸ್ರಾರು ಮೀನುಗಳ ಮಾರಣ ಹೋಮ-ಪರಿಸರದಲ್ಲಿ ದುರ್ನಾತ

ಬೆಳ್ತಂಗಡಿ: ತಾಲೂಕಿನ ವೇಣೂರು ಸಮೀಪದ ಮೂಡುಕೋಡಿ ಗ್ರಾಮ ನಡ್ತಿಕಲ್ಲಿನ ದಾಡೇಲು ಎಂಬಲ್ಲಿ ಪಲ್ಗುಣಿ ನದಿಗೆ ದುಷ್ಕರ್ಮಿಗಳು ವಿಷ ಹಾಕಿದ ಪರಿಣಾಮ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ. ನದಿಯ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿದೆ.ದುರ್ನಾತದಿಂದ ಆ ಪರಿಸರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣ ವಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯ ಎದುರಾಗಿದ್ದು, ಸುತ್ತಮುತ್ತಲಿನ ಜನ ಭಯಬೀತರಾಗಿದ್ದಾರೆ. ಪ್ರಾಣಿ ಪಕ್ಷಿಗಳು ಈ ವಿಷಯುಕ್ತ ನೀರನ್ನೆ ಕುಡಿಯುತ್ತಿದ್ದು ಅವುಗಳ ಪ್ರಾಣಕ್ಕೂ ಸಂಚಕಾರ ಬಂದೊದಗಿದೆ. ಅದೇ ರೀತಿ ಕೆಲವು ಹಕ್ಕಿಗಳು […]
ರೋಟರಿ ಕ್ಲಬ್ಬಿನಿಂದ ಕಾರ್ಮಿಕ ದಿನಾಚರಣೆ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಕಾರ್ಯಕ್ರಮ

ಮೇ 1ರಂದು ಕಾರ್ಮಿಕ ದಿನದ ಅಂಗವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿಯ ವಿನಾಯಕ ರೈಸ್ ಮಿಲ್ ನಲ್ಲಿ ಕಾರ್ಮಿಕರಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಯಿತು. ವಿನಾಯಕ ರೈಸ್ ನಲ್ಲಿನ ಸುಮಾರು ಐವತ್ತೈದು ಕಾರ್ಮಿಕರಿಗೆ ರೋಟರಿ ಕ್ಲಬ್ ಬೆಳ್ತಂಗಡಿಯ ಸದಸ್ಯರಾದ ರೋ.ಡಾ. ಶ್ರೀಹರಿ ,ಹಾಗೂ ಆನ್ ಸ್ವಾಗತ ಭಿಡೆಯವರು covid-19ರ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ನೀಡಿದರು. ರೋಟರಿ ಕ್ಲಬ್ ಪರವಾಗಿ ಎಲ್ಲ ಕಾರ್ಮಿಕರಿಗೆ ಮಾಸ್ಕ್ ಗಳನ್ನು ಮತ್ತು ಹ್ಯಾಂಡ್ ವಾಶನ್ನು ವಿತರಿಸಲಾಯಿತು. ಅಲ್ಲದೇ, ಎಲ್ಲ ಕಾರ್ಮಿಕರಿಗೆ ಹೊಸ ಬಟ್ಟೆಗಳನ್ನು […]
ಅಂತರಾಷ್ಡ್ರೀಯ ನೃತ್ಯದಿನವನ್ನು ಅರ್ಥಪೂರ್ಣವಾಗಿಸಿದ ಬೆಳ್ತಂಗಡಿ ರೋಟರಿ ಕ್ಲಬ್

ಎಪ್ರಿಲ್ 29, ಅಂತರರಾಷ್ಟ್ರೀಯ ನೃತ್ಯದಿನ. ಈ ದಿನದಂದು ಬೆಳ್ತಂಗಡಿ ರೋಟರಿ ಕ್ಲಬ್ ಬೆಳ್ತಂಗಡಿಯ ಹತ್ತು ಧೀಮಂತ ಯಕ್ಷಗಾನ ಕಲಾವಿದರಿಗೆ ಗೌರವವನ್ನು ಸೂಚಿಸಿತು .ಈ ಹತ್ತು ಜನ ಕಲಾವಿದರುಗಳಿಗೆ ಗೌರವಗಳೊಂದಿಗೆ ಲಾಕ್ ಡೌನಿನ ಈ ಸಂಕಷ್ಟದ ದಿನಗಳಲ್ಲಿ ಅಗತ್ಯ ದಿನನಿತ್ಯ ಬಳಕೆಯ ರೂ ಹತ್ತು ಸಾವಿರ ಮೌಲ್ಯದ ವಸ್ತುಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಉಜಿರೆ ಅಶೋಕ್ ಭಟ್, ರೋಟರಿ ಸದಸ್ಯರಾದ ಕೆ. ಪಿ. ಪ್ರಸಾದ್, ಪ್ರಕಾಶ್ ಪ್ರಭು, ಶ್ರೀಧರ್ ಕೆ.ವಿ, ಶಶಿಕಾಂತ್ ಡೋಂಗ್ರೆ, ಬಿ. […]
ಮೂಡುಬಿದಿರೆ ಯುವ ಬಂಟರ ಸಂಘದಿಂದ ಆಹಾರ ಕಿಟ್ ವಿತರಣೆ ವೈಯಕ್ತಿಕ ಅಂತರಕ್ಕೆ ಕೊಟ್ಟ ಮಹತ್ವ ಮಾಸ್ಕ್ ತೊಡುವಲ್ಲಿ ಇಲ್ಲ

ಮೂಡುಬಿದಿರೆ : ಯುವ ಬಂಟರ ಸಂಘ ಮೂಡುಬಿದಿರೆ ಇದರ ವತಿಯಿಂದ ಲಾಕ್ ಡೌನಿನಿಂದ ಸಂಕಷ್ಟದಲ್ಲಿರುವ ಬಂಟ ಸಮಾಜದ ಕುಟುಂಬಗಳಿಗೆ ತಲಾ 10 ಕೆ.ಜಿ.ಅಕ್ಕಿ ಮತ್ತು ದಿನಸಿ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮವು ಇಲ್ಲಿನ ಸಮಾಜಮಂದಿರ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಅವರು ಸಮಾಜದ ಬಾಂಧವರು ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಯುವ ಬಂಟರ ಸಂಘ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಸ್ತುತ್ಯರ್ಹವಾಗಿದೆ ಎಂದರಲ್ಲದೆ ಸಂಬಂಧಗಳನ್ನು ಹೇಳಿಕೊಂಡು ಸಮಾಜ ಬಾಂಧವರು […]