ಅಂಬೇಡ್ಕರ್ ಜಯಂತಿಯಲ್ಲಿ ಸಾಮಾಜಿಕ ಅಂತರ

ಬೆಳ್ತಂಗಡಿ: ಕೊರೋನಾ ಸೋಂಕು ಹರಡುವಿಕೆಯ ಭೀತಿಯ ಹಿನ್ನೆಲೆಯಲ್ಲಿ ಸರಕಾರಿ ಪ್ರಾಯೋಜಿತ ಅಂಬೇಡ್ಕರ್ ಜಯಂತಿಯನ್ನು ಎಪ್ರಿಲ್ 14ರಂದು ಬೆಳ್ತಂಗಡಿಯ ಮಿನಿವಿಧಾನಸೌಧದ ಸಭಾಂಗಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಂಕೇತಿಕವಾಗಿ ಆಚರಿಸಲಾಯಿತು.ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಆಚರಿಸಲಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾಲೂಕು ಪಂಚಾಯತಿನ ಕಾರ್ಯನಿರ್ವಹಣಾಧಿಕಾರಿ ಜಯರಾಮ್, ಸಮಾಜ ಕಲ್ಯಾಣ ಇಲಾಖೆಯ ಹೇಮಾವತಿ, ತಾಲೂಕು ಪಂಚಾಯತಿನ ಜಯಾನಂದ ಮತ್ತಿತರರು ಹಾಜರಿದ್ದರು.ಎಲ್ಲ ಸರಕಾರಿ ಅಧಿಕಾರಿಗಳು […]
ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಬೆಳ್ತಂಗಡಿ: ಕೊರೋನಾ ಸೋಂಕಿನ ವಿರುದ್ಧದ ಹೋರಾಟದ ಅಂಗವಾಗಿ ಲಾಕ್ ಡೌನ್ ಘೋಷಿಸಿದ ಸರಕಾರ; ಅಗತ್ಯ ಕೆಲಸಗಳಿಗೆ ಮಾತ್ರ ಮಧ್ಯಾಹ್ನ 12 ಗಂಟೆವರೆಗೆ ಸಮೀಪದ ಅಂಗಡಿಗೆ ಹೋಗಿ ಬರಲು ಅವಕಾಶ ಕಲ್ಪಿಸಿದೆ. ಕೃಷಿಕರಿಗೆ ಇದೇ ಸಂದರ್ಭದಲ್ಲಿ ತಾವು ಬೆಳೆದ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಸರಕಾರ ಲಾಕ್ ಡೌನ್ ನ ಸಂದರ್ಭ ಅಗತ್ಯಗಳಿಗೆ ನೀಡಿದ ವಿನಾಯಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಕೆಲವರು ಮನಬಂದಂತೆ ತಮ್ಮ ವಾಹನವೇರಿ ಸುತ್ತಾಡುತ್ತಿದ್ದಾರೆ. ಇಂತಹ ವಿವೇಚನಾರಹಿತರಿಗೆ ಬಿಸಿ ಮುಟ್ಟಿಸುವ ಕೆಲಸ ಎಪ್ರಿಲ್ 14ರ ಬೆಳಿಗ್ಗೆ ಬೆಳ್ತಂಗಡಿ ಪೊಲೀಸ್ […]
ಪಟ್ರಮೆ-8 ಕುಟುಂಬಗಳಿಗೆ ಇನ್ನೂ ಪಡಿತರ ಚೀಟಿಯೇ ಇಲ್ಲ

ಕೆಲವೊಂದು ಕಾನೂನಿನ ತೊಡಕಿನಲ್ಲಿ ಮನೆ ನಂಬರ್ , ರೇಷನ್ ಕಾರ್ಡು ವಂಚಿತ ಕುಟುಂಬಗಳುಲಾಕ್ ಡೌನ್ ನ ಪರಿಸ್ಥಿತಿಯಲ್ಲಿ ಸರಕಾರದ ಪಡಿತರ ಪಡೆಯಲೂ ವಿಫಲವಾದ ಕುಟುಂಬಗಳುವಿಶೇಷ ವರದಿ: ಗುರುಮೂರ್ತಿ.ಎಸ್.ಕೊಕ್ಕಡ. ಕೊಕ್ಕಡ: ಪಟ್ರಮೆ ಗ್ರಾಮದ ಅನಾರು ಭಾಗದ ಸುಮಾರು ಏಳೆಂಟು ಕುಟುಂಬಗಳು ಜೀವನಾಧಾರವಾದ ಮೂಲಭೂತ ಅವಶ್ಯಕತೆಯ ಪಡಿತರ ಚೀಟಿಯಿಲ್ಲದ ಸ್ಥಿತಿಯಲ್ಲಿದ್ದು ಇದೀಗ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭ ಈ ಕುಟುಂಬಗಳ ಸದಸ್ಯರಿಗೆ ಸರಕಾರದಿಂದ ನೀಡಲ್ಪಡುವ ಪಡಿತರ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ.ಒಂದೊಂದು ಕುಟುಂಬಗಳ ಕಥೆಯೂ ತೀರಾ ವಿಭಿನ್ನ. ಸುಮಾರು ಹತ್ತಾರು ವರ್ಷಗಳಿಂದ […]
ಸಹಾಯಹಸ್ತ

ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ಪಿಲಿಕುಡೇಲು ನಿವಾಸಿ ಗಜಾನನ ಡೋಂಗ್ರೆ ಇವರ ಪತ್ನಿಯ ಔಷಧೋಪಚಾರಗಳಿಗಾಗಿ ಸೂಳಬೆಟ್ಟು ವಾಳ್ಯದ ಶ್ರೀರೌದ್ರಭೈರವೀ ಸಹಪರಿವಾರ ಹೋರಾಡಿ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ವತಿಯಂದ ನಗದು ಸಹಾಯಧನವನ್ನು ಎಪ್ರಿಲ್ 13ರಂದು ಅವರ ನಿವಾಸಕ್ಕೆ ತೆರಳಿ ನೀಡಲಾಯಿತು.ಸಮಿತಿ ಅಧ್ಯಕ್ಷ ನಿರಂಜನ ಜೋಶಿ, ಕಾರ್ಯದರ್ಶಿ ರಾಜೇಂದ್ರ ಗೋಖಲೆ, ಜತೆ ಕಾರ್ಯದರ್ಶಿ ದೀಪಕ ಆಠವಳೆ, ದಂತ ವೈದ್ಯ ಡಾ.ಶಶಿಧರ ಡೋಂಗ್ರೆ, ಸ್ಥಳೀಯ ನಿವಾಸಿ ರಮಾನಾಥ ನಾತು ಇದ್ದರು.
ಸೌತಡ್ಕ – ತಹಶೀಲ್ದಾರ್ ರವರಿಗೆ ಅಧಿಕಾರ ಹಸ್ತಾಂತರಿಸಿದ ಆಡಳಿತ ಮಂಡಳಿ

ಕೊಕ್ಕಡ ಎ.13: ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕೊಕ್ಕಡದ ಶ್ರೀ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಳೆದ 3 ವರ್ಷಗಳಿಂದ ಆಡಳಿತದಲ್ಲಿದ್ದ ವ್ಯವಸ್ಥಾಪನಾ ಸಮಿತಿಯ ಅವಧಿಯು ಮಾರ್ಚಿ 30 ರಂದು ಮುಕ್ತಾಯವಾಗಿದ್ದು ಎಪ್ರಿಲ್ 8 ರಂದು ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ವಿಶ್ವನಾಥ ಕೊಲ್ಲಾಜೆ, ಪಿ.ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ ಅರಂತಬೈಲು, ಅಣ್ಣಪ್ಪ ಗೌಡ ಕಾಶಿ, ಗಣೇಶ ಪಿ.ಕೆ., ಸಿನಿ […]
ಮಧ್ಯಮವರ್ಗದವರ ಸಂಕಷ್ಟಕ್ಕೆ ಎಂ.ಎಲ್.ಸಿ. ಹರೀಶ್ ಕುಮಾರ್ ಸಹಾನುಭೂತಿ

ಬೆಳ್ತಂಗಡಿ: ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಸರಕಾರ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಜನಸಾಮಾನ್ಯರು ದಿನಬಳಕೆಯ ವಸ್ತುಗಳಿಗೆ ಪರದಾಡಬೇಕಾದ ಸಂದಿಗ್ಧ ಸ್ಥಿತಿ ಬಂದೊದಗಿದೆ. ಇದರಲ್ಲೂ ಸಿರಿವಂತರು ಹೇಗಾದರೂ ನಿಭಾಯಿಸುತ್ತಾರೆ. ಬಡವರಿಗೆ ಬಿಪಿಎಲ್ ಪಡಿತರ ಯೋಜನೆಯ ಮೂಲಕ ಸರಕಾರದ ಅನ್ನಭಾಗ್ಯ ಯೋಜನೆಯ ಸೌಲಭ್ಯಗಳಿವೆ. ಇಂದು ನಿಜವಾಗಿ ಹೆಚ್ಚು ಸಂಕಷ್ಟಕ್ಕೊಳಗಾಗಿರುವವರು ನಾಡಿನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳ ಕುಟುಂಬಿಕರು ಎಂದು ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅಭಿಪ್ರಾಯಿಸಿದರು.ಅವರು ಎಪ್ರಿಲ್ 13ರಂದು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ತಾಲೂಕಿನ […]
ವಾರ ಭವಿಷ್ಯ: 13-04-2020 ರಿಂದ 19-04-2020 ರವರೆಗೆ

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.
ಬೆಳ್ತಂಗಡಿಯಲ್ಲಿ ಸರಕಾರಕ್ಕೇ ಸವಾಲಾದ ವ್ಯಾಪಾರಿಗಳು

ಗ್ರಾಹಕರಲ್ಲಿ ಸಾಮಾಜಿಕ ಅಂತರವೂ ಇಲ್ಲ, ವ್ಯಾಪಾರಿಗಳಿಗೆ ಸರಕಾರದ ಸೂಚನೆ ಪಾಲಿಸಬೇಕೆಂಬ ಜ್ಞಾನವೂ ಇಲ್ಲ. ದಿನಬಳಕೆಯ ವಸ್ತುಗಳ ಅಂಗಡಿಯೊಂದಿಗೆ ಪ್ಯಾನ್ಸಿ, ಚಪ್ಪಲಿ, ಹಾರ್ಡ್ ವೇರ್, ಜೆರಾಕ್ಸ್, ಹೊಟೇಲ್, ಕೋಲ್ಡ್ ಹೌಸ್ ಗಳು, ಪೈಪುಗಳು-ಫಿಟ್ಟಿಂಗ್ ಗಳು, ವಿದ್ಯುತ್ ಉಪಕರಣಗಳ ಮಳಿಗೆ ಹೀಗೆ ಎಲ್ಲ ಅಂಗಡಿಗಳನ್ನು ತೆರೆದು ರಾಜಾರೋಷವಾಗಿ ಸರಕಾರಕ್ಕೇ ಸವಾಲು ಹಾಕಿ ವ್ಯವಹಾರ ನಡೆಸುವ ದೃಶ್ಯ ಸಾಮಾನ್ಯವಾಗಿತ್ತು. ಇದು ಎಪ್ರಿಲ್ 13ರ ಸೋಮವಾರ ವಾರದ ಸಂತೆಯ ದಿನ ಬೆಳ್ತಂಗಡಿ ಪೇಟೆಯಲ್ಲಿ ಕಂಡುಬಂದ ದೃಶ್ಯ. ಕೊರೋನಾ ಸೋಂಕು ಹರಡುವಿಕೆ ತಡೆಯಲು ತಾಲೂಕು […]
ಮೇಷ ಜಾತ್ರೆ ರದ್ದು

ಮೇಷ ಜಾತ್ರೆ ರದ್ದುಮಚ್ಚಿನ: ರಾಜ್ಯ ಸರಕಾರ ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಇಡೀ ರಾಜ್ಯಕ್ಕೆ ಲಾಕ್ ಡೌನ್ ಘೋಷಿಸಿ; ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಅದರಂತೆ ನಾಡಿನ ಪ್ರಖ್ಯಾತ ದೇಗುಲಗಳಲ್ಲಿ ಒಂದಾದ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಅರ್ಚಕರು, ತಂತ್ರಿಗಳು ಹಾಗೂ ದೈವಜ್ಞರಲ್ಲಿ ಚರ್ಚಿಸಿ ದೇಗುಲದ ವರ್ಷಾವಧಿ ಜಾತ್ರೆಯನ್ನು ರದ್ದುಪಡಿಸಲಾಗಿದೆ ಎಂದು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾl ಹರ್ಷ ಸಂಪಿಗೆತ್ತಾಯ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ. ನಿಗದಿಯಂತೆ ಎಪ್ರಿಲ್ ತಿಂಗಳ 23ರಿಂದ ಮೇ ತಿಂಗಳ […]
ಸಿ.ಎಂ. ಕಾಳಜಿ ಒ.ಕೆ.-ಮಾಸ್ಕ್ ಸರಿಯಾಗಿ ಧರಿಸಿಲ್ಲ ಯಾಕೆ…

ಸಿ.ಎಂ. ಕಾಳಜಿ ಒ.ಕೆ.-ಮಾಸ್ಕ್ ಸರಿಯಾಗಿ ಧರಿಸಿಲ್ಲ ಯಾಕೆ… ಕೊರೋನಾ ವಿರುದ್ಧದ ಹೋರಾಟದ ಅಂಗವಾಗಿ ಲಾಕ್ ಡೌನ್ನಿಗೆ ಕರೆ ನೀಡಿರುವ ತನ್ನ ಸರಕಾರದ ಕಾರ್ಯಾಚರಣೆಯ ರಿಯಾಲಿಟಿ ಚೆಕ್ ಗೆ ಇಳಿದ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರು ಎಪ್ರಿಲ್ 12ರ ಮಧ್ಯಾಹ್ನ ಯಾರಿಗೂ ಪೂರ್ವಸೂಚನೆ ನೀಡದೇ; ಬೆಂಗಳೂರು ನಗರದ ಯಶವಂತಪುರ, ಗೋರಗುಂಟೆಪಾಳ್ಯ ಸಹಿತ ಸಾಕಷ್ಟು ಕಡೆಗಳಲ್ಲಿ ಪರಿಶೀಲನೆ ನಡೆಸಿದರು. ಇಳಿ ವಯಸ್ಸಿನಲ್ಲೂ ರಾಜ್ಯದ ಜನತೆಯ ಬದುಕಿನ ಬಗ್ಗೆ ಕಾಳಜಿ ಹೊತ್ತು, ಕೊರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಸ್ವತಹ ಆಖಾಡಕ್ಕೆ […]