ರಕ್ತದಾನಂ ಮಹಾದಾನಂ – ಜೀವದಾನಂಚ ನಿಶ್ಚಯಂ’

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಘ (ನಿ) ಮಂಗಳೂರು , ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಬೆಳ್ತಂಗಡಿ ವಿಘ್ನೇಶ್ ಬಿಲ್ಡಿಂಗ್‌ನಲ್ಲಿ ಆಗಸ್ಟ್ 21 ರಂದು ಜರುಗಿತು.ಕೊರೋನಾ ವೈರಸ್ ನಿಂದಾಗಿ ಜಿಲ್ಲೆಯ ಬ್ಲಡ್ ಬ್ಯಾಂಕುಗಳಲ್ಲಿ ರಕ್ತದ ಕೊರತೆ ಇರುವುದನ್ನು ಮನಗಂಡು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಗಾತಿ ಎಕೆಜಿ […]

ಮಡಂತ್ಯಾರು ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ‘ಸದ್ಭಾವನಾ ದಿನ’

ಮಡಂತ್ಯಾರು: ರಾಷ್ಟ್ರದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಇವರ ಜನ್ಮದಿನವಾದ ಆಗಸ್ಟ್ 20ನ್ನು ದೇಶದಾದ್ಯಂತ ಸದ್ಭಾವನಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತೆಯಾಗಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಾದ ಹಿನ್ನೆಲೆಯಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಎನ್‌ಎಸ್‌ಎಸ್ ಸ್ವಯಂಸೇವಕರಿಗೆ ರಾಜೀವ್ ಗಾಂಧಿ ಜನ್ಮದಿನದ ಸಂದೇಶವನ್ನು ಹಂಚಿಕೊಳ್ಳಲು ಆನ್‌ಲೈನ್ ಕಾರ್ಯಕ್ರಮವನ್ನು ಆಯೋಜಿಸಿತು.ಕಾಲೇಜಿನ ಪ್ರಾಂಶುಪಾಲರಾದ , ಡಾ.ಜೋಸೆಫ್ ಎನ್. ಎಂ. ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿ, ಸದ್ಭಾವನಾ ದಿನಾಚರಣೆಯ ಹಿನ್ನೆಲೆಯನ್ನು ತಿಳಿಸಿದರಲ್ಲದೇ; ವಿದ್ಯಾರ್ಥಿಗಳು ಶಾಂತಿ, […]

ಪ್ರತಿಭಾವಂತ ವಿದ್ಯಾರ್ಥಿಗೆ ಮೊಬೈಲ್ ನೀಡಿ ಪ್ರೋತ್ಸಾಹಿಸಿದ ಉದ್ಯಮಿ ಪುಷ್ಪರಾಜ್ ಶೆಟ್ಟಿ

ಬೆಳ್ತಂಗಡಿ : ಕಳೆದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ಮೊಬೈಲ್ ಫೋನ್ ಇಲ್ಲದ ಬಡ ವಿದ್ಯಾರ್ಥಿಯೊಬ್ಬನಿಗೆ ಬೆಳ್ತಂಗಡಿಯ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕರಾದ ಪುಷ್ಪರಾಜ್ ಶೆಟ್ಟಿಯವರು ಅಂಡ್ರಾಯ್ಡ್ ಮೊಬೈಲ್ ನೀಡಿ ಅವನ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.ಕಳೆದ 5 ತಿಂಗಳ ಹಿಂದೆ ಇವನ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದು, ತಂದೆ 6 ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಗೇರುಕಟ್ಟೆಯಲ್ಲಿರುವ ತನ್ನ ಅಜ್ಜನ ಮನೆಯಲ್ಲಿ ವಾಸ್ತವ್ಯವಿದ್ದು, ಕೊರೊನಾ ಮಹಾಮಾರಿಯಿಂದ ಈ ಭಾರಿ ಹತ್ತನೆ ತರಗತಿಯ ಪರೀಕ್ಷೆಗೆ ತಯಾರಿಗಳು ಮೊಬೈಲ್ ಮೂಲಕವೇ ಅಧ್ಯಾಪಕರು […]

ವಿವಿಧತೆಯಲ್ಲಿ ಏಕತೆಯೇ ಭಾರತದ ಪರಂಪರೆ

ಸ್ವಾತಂತ್ರ್ಯಕ್ಕಾಗಿ ನಡೆಸಿದ ಸಮರವು 1947 ಆಗಸ್ಟ್ 15 ರಂದು ಫಲ ನೀಡಿತು. ದೇಶದ ಆಡಳಿತವು ಭಾರತೀಯರ ವಶವಾದಾಗ ದೀರ್ಘವಾದ 200 ವರ್ಷಗಳ ಪರಕೀಯರ ವಂಚನಾತ್ಮಕ ಆಡಳಿತವು ಕೊನೆಗೊಂಡಿತು. ಅದರೊಂದಿಗೆ ನಾವು ಸ್ವತಂತ್ರರಾದೆವು. ಶತಮಾನಗಳ ಕಾಲ ವಿದೇಶಿಯರ ಸಾಮ್ರಾಜ್ಯಕ್ಕೆ ಅಂತ್ಯ ಹಾಡಿ, 1947 ಆಗಸ್ಟ್ 14 ರ ಮಧ್ಯರಾತ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ನಮ್ಮ ರಾಷ್ಟ್ರ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಆಗ್ರಹದಂತೆ, ನಮ್ಮ ದೇಶವು ಸರ್ವ ಧರ್ಮೀಯರ ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾಯಿತು.ಭಾರತವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ, […]

ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ; 74ನೇ ಸ್ವಾತಂತ್ರ್ಯೋತ್ಸವದಲ್ಲಿ ತಹಶೀಲ್ದಾರ್ ಮಹೇಶ್

ಬೆಳ್ತಂಗಡಿ: ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ನಮ್ಮ ಇತಿಮಿತಿಗಳನ್ನು ಅರಿತು ಸಹನೆ ಹಾಗೂ ಸಂಯಮದಿಂದ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕು ರೂಪಿಸಿಕೊಳ್ಳುವುದೇ ನಿಜವಾದ ಸ್ವಾತಂತ್ರ್ಯ ಎಂದು ಬೆಳ್ತಂಗಡಿಯ ತಹಶೀಲ್ದಾರ್ ಮಹೇಶ್ ಜೆ. ಹೇಳಿದರು.ಅವರು ಆಗಸ್ಟ್ 15ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ರಾಷ್ಟ್ರದ 74ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾತಂತ್ರ್ಯ ದಿನದ ಸಂದೇಶ ನೀಡುತ್ತಿದ್ದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತಾಲೂಕು ಪಂಚಾಯತ್‌ಗೆ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ; […]

ಶಿಶಿಲ: ಕಪಿಲಾ ನದಿಯಲ್ಲಿ ನೀರು ಹೆಚ್ಚಳ ಭೀತಿ: ಬೆಳ್ತಂಗಡಿ ಇ.ಓ ಸ್ಥಳಕ್ಕೆ ಭೇಟಿ.

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಮತ್ಸö್ಯಕ್ಷೇತ್ರ ಖ್ಯಾತಿಯ ಶಿಶಿಲ ದಲ್ಲಿ ಕಪಿಲಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಈ ಬಗ್ಗೆ ಸ್ಥಳೀಯರ ಮನವಿಯ ಮೇರೆಗೆ ಬೆಳ್ತಂಗಡಿ ತಾಲೂಕು ಇ.ಒ ಕುಸುಮಾಧರ್ ಶಿಶಿಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಪಿಲಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು ಯಾವುದೇ ಅನಾಹುತಗಳು ಸಂಭವಿಸದAತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳೀಯ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ನಡುವೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಇ.ಒ […]

ಅಳಂಬದಲ್ಲಿ ಆದಿವಾಸಿ ದಿನಾಚರಣೆ ; ಎಲ್ಲ ಓಕೆ, ಮಾಸ್ಕ್ ಧರಿಸಿಲ್ಲ ಯಾಕೆ?

ಬೆಳ್ತಂಗಡಿ: ದಿನಾಂಕ 09-08-2020 ವಿಶ್ವ ಆದಿವಾಸಿಗಳ ದಿನ. ಆದಿವಾಸಿ ಹಕ್ಕುಗಳ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಕಾರ್ಮಿಕ ಮುಂದಾಳು ಬಿ.ಎಂ.ಭಟ್‌ರ ನಾಯಕತ್ವದಲ್ಲಿ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ರಕ್ಷಿತಾರಣ್ಯ ಅಡವಿಯ ಅಳಂಬಾದಲ್ಲಿ ಸ್ಥಳೀಯ ಆದಿವಾಸಿಗಳು ಸೇರಿ ಆದಿವಾಸಿ ದಿನಾಚರಣೆಯನ್ನು ಆಚರಿಸಿದರು. ಭೂಮಿಯ ಹಕ್ಕು ಹಾಗೂ ಸಮುದಾಯ ಹಕ್ಕು ಆದಿವಾಸಿಗಳ ಜನ್ಮ ಸಿದ್ದ ಹಕ್ಕು ಎನ್ನುತ್ತಾ, ಆದಿವಾಸಿ ಹಕ್ಕುಗಳ ರಕ್ಷಣೆಗಾಗಿ ಸಮರ ದೀರ ಹೋರಾಟ ನಡೆಸಲು ಈ ಸಂದರ್ಭದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.ಬಿ.ಎಂ.ಭಟ್ ಹಾಗೂ ಎಲ್. ಮಂಜುನಾಥ್ ಮಾತಾಡಿದರು. […]

ದಿಡುಪೆಯ ಕಲ್ಬೆಟ್ಟು ಸೇತುವೆ ಅಪಾಯದಲ್ಲಿ

ಸಂಪರ್ಕ ಕಡಿದುಕೊಳ್ಳುವ ಭೀತಿಯಲ್ಲಿ ದಿಡುಪೆಯ ಮಂದಿ ಬೆಳ್ತಂಗಡಿ: ಆಗಸ್ಟ್ ತಿಂಗಳ 3 ಮತ್ತು 4ನೇ ತಾರೀಕಿನಂದು ಸುರಿದ ಭಾರೀ ಮಳೆಗೆ ಮಲವಂತಿಗೆ ಗ್ರಾಮದದಿಡುಪೆಯ ಕಲ್ಬೆಟ್ಟು ಎಂಬಲ್ಲಿನ ನೇತ್ರಾವತಿ ಕಿನಾರೆಯ ಸೇತುವೆಯ ಸಂಪರ್ಕ ಕಡಿದುಹೋಗಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ನದಿಯ ಪ್ರವಾಹಕ್ಕೆ ಸೇತುವೆಯೂ ಹಾನಿಗೊಳಗಾಗಿದ್ದು ಜನರ ಹಾಗೂ ವಾಹನಗಳ ಓಡಾಟಕ್ಕೆ ಅನಾನುಕೂಲವಾಗಿದೆ. ಪರಿಸರದ ನಿವಾಸಿಗರು ಅದರಲ್ಲೂ ನಿತ್ಯ ಸೊಸೈಟಿಗೆ ಹಾಲು ಕೊಂಡೊಯ್ಯುವ ಹೈನುಗಾರರು ಹಾಗೂ ಕೃಷಿಕರು ಈ ರಸ್ತೆಯನ್ನೇ ಅವಲಂಬಿಸಿದ್ದು, ಇದೀಗ ಸೇತುವೆ ಸಂಪರ್ಕ ಕಳೆದುಕೊಂಡದ್ದು ಮಾತ್ರವಲ್ಲದೇ, ಸೇತುವೆಯೇ […]

ದೇವರಗುಡ್ಡೆ ಮಠದಲ್ಲಿ ಪ್ರಭು ಶ್ರೀರಾಮಚಂದ್ರನ ಮೂರ್ತಿ ಸ್ಥಾಪನೆ

ಬೆಳ್ತಂಗಡಿ : ಮನಸ್ಸಿನ ಪವಿತ್ರತೆಯನ್ನು ಹೆಚ್ಚಿಸಲು ದೇವರ ನಾಮಸ್ಮರಣೆ ಅಗತ್ಯ. ನಿಷ್ಠೆಯಿಂದ ಧರ್ಮಪಾಲನೆ ಮಾಡುವ ಮೂಲಕ ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗಿಸಿಕೊಳ್ಳಬೇಕು. ರಾಮ ಎಂಬ ಶಬ್ದ ನಮ್ಮ ಜೀವನಾಡಿ. ಸನಾತನ ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬರ ಮನೆಗಳಲ್ಲಿ ಶ್ರೀರಾಮ ನಾಮ ಜಪಿಸುವಂತಾಗಲಿ ಎಂದು ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮಕ್ಷೇತ್ರದ ಸದ್ಗುರು ಬ್ರಹ್ಮಾನಂದಶ್ರೀಗಳು ನುಡಿದರು.ಅವರು ಆಗಸ್ಟ್ 5ರಂದು ಧರ್ಮಸ್ಥಳ ಕನ್ಯಾಡಿ ದೇವರಗುಡ್ಡೆ ಮಠದಲ್ಲಿ ಶ್ರೀರಾಮಚಂದ್ರ ಸಪರಿವಾರ ಮೂರ್ತಿಗಳ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠೆ ನೆರವೇರಿಸಿದ ಬಳಿಕ ಆಶಿರ್ವಚನ […]

ಮಳೆಗೆ ತಾಲೂಕಿನಲ್ಲಿ ಮೊದಲ ಮನೆ ಹಾನಿ ಪ್ರಕರಣ ದಾಖಲು

ಅದೃಷ್ಟವಶಾತ್ ಐವರೂ ಅಪಾಯದಿಂದ ಪಾರು ಬೆಳ್ತಂಗಡಿ: ಆಗಸ್ಟ್ 4 ರಂದು ಸುರಿದ ಭಾರೀ ಮಳೆಯೊಂದಿಗೆ ಬೀಸಿದ ಗಾಳಿಗೆ ಮೈಯೊಡ್ಡಿ ನಿಂತು, ತನ್ನನ್ನು ನಿರ್ಮಿಸಿದವರನ್ನು ರಕ್ಷಿಸುತ್ತಿದ್ದ ಬಡಪಾಯಿ ವ್ಯಕ್ತಿಯೋರ್ವರ ಮನೆಯೊಂದರ ಮೇಲ್ಛಾವಣಿಯು ಮಳೆಯಬ್ಬರಕ್ಕೆ ತಡೆದು ನಿಲ್ಲಲಾಗದೇ ಕುಸಿದು ಬಿದ್ಧ ದುರ್ಘಟನೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೂರು ಗ್ರಾಮದ ಪರಂಬುಡೆಯಲ್ಲಿ ಸಂಭವಿಸಿದೆ. ಈ ಸಂದರ್ಭ ಮನೆಯೊಳಗಿದ್ದ ಐವರೂ ಸುದೈವವಶಾತ್ ಅಪಾಯದಿಂದ ಪಾರಾಗಿದ್ದಾರೆ. ಈ ವರ್ಷ ಮಳೆಗೆ ಹಾನಿಗೀಡಾದ ಮೊದಲ ಮನೆ ಇದಾಗಿದ್ದು, ಇದೇ ಕೊನೆಯಾಗಲಿ ಎಂಬ ಹಾರೈಕೆ ಸ್ಥಳೀಯರದ್ದು.ದುರ್ಘಟನೆಯಲ್ಲಿ […]