ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಹುಮುಖ ಪ್ರತಿಭೆ ಸುಕನ್ಯಾ ಕಾಮತ್

ಬೆಳ್ತಂಗಡಿ: ಅಖಿಲ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ 2024ಇದರ ವತಿಯಿಂದ ಮೇ ತಿಂಗಳಿನಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಬಹುಮುಖ ಪ್ರತಿಭೆ ಸುಕನ್ಯಾ ಕಾಮತ್ (ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಮತ್ತು ರಾಧಿಕಾ ಕಾಮತ್ ಇವರ ಪ್ರಥಮ ಪುತ್ರಿ) ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಇವರು ಚಾರ್ಟರ್ಡ್ ಎಕೌಂಟೆಂಟ್ ಕೆ. ದಾಮೋದರ ನಾಯಕ್ ಇವರ ದಾಮೋದರ ಆಂಡ್ ಕೊ ಇಲ್ಲಿ ಆಪ್ಟಿಕಲ್ ಶಿಪ್ ತರಬೇತಿ ಪಡೆದಿದ್ದು ಪ್ರಸ್ತುತ […]

ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಬೆಳ್ತಂಗಡಿ: ಮಣ್ಣಿನ ಹರಕೆಯ ಪುಣ್ಯಕ್ಷೇತ್ರ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ದಿ| ಸುಭಾಶ್ಚಂದ್ರ ಸುರ್ಯಗುತ್ತು ಇವರ ಸ್ಮರಣಾರ್ಥ ದಿನಾಂಕ ಜೂನ್ 15ರಂದು ಕ್ಷೇತ್ರದಲ್ಲಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕನ್ಯಾಡಿಯ 1 ರಿಂದ 8 ನೇ ತರಗತಿವರೆಗಿನ ಒಟ್ಟು 70 ಮಕ್ಕಳು ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸುರ್ಯದ 1 ರಿಂದ 5 ನೇ ತರಗತಿವರೆಗಿನ 32 ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಆನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಸತೀಶ್ಚಂದ್ರ ಸುರ್ಯಗುತ್ತು ವಿತರಿಸಿದರು. […]

ಪಟ್ಟಣ ಪಂಚಾಯತ್ ಆಡಳಿತದಿಂದ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ!

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಮಾರಿಗುಡಿ ಎದುರುಗಡೆ ಅನಧಿಕೃತವಾಗಿ ತಲೆ ಎತ್ತಿದ ವ್ಯಾಪಾರಿ ಡೇರೆಯನ್ನು ತೆರವುಗೊಳಿಸಿದ ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸಂತೆ ಮಾರ್ಕೆಟ್‌ನ ಪ್ರವೇಶದ್ವಾರದಲ್ಲಿ ತಲೆ ಎತ್ತಿರುವ ಅನಧಿಕೃತ ವ್ಯಾಪಾರಿ ಡೇರೆಯನ್ನು ತೆರವುಗೊಳಿಸದೇ; ‘ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ’ ಧೋರಣೆಯನ್ನು ಅನುಸರಿಸುತ್ತಿರುವುದು ನಾಗರಿಕ ವಲಯದಲ್ಲಿ ಚರ್ಚೆಗೆ ಆಹಾರವಾಗಿದೆ.ಪ್ರತೀದಿನ ವಾಹನ ದಟ್ಟಣೆಯಿಂದ ಎಲ್ಲರೂ ಪರದಾಡುತ್ತಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಸಾಗುವ […]

ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಸೇರ್ಪಡೆಗೊಂಡ ‘ಜೈಬಾಲಾಜಿ’ ಹಾಯಿದೋಣಿ

ಬೆಳ್ತಂಗಡಿ: ಕುಂದಾಪುರದಲ್ಲಿ ಪಂಚಗಂಗಾವಳಿ ನದಿಯಲ್ಲಿ ಕಳೆದ 14 ವರ್ಷಗಳಿಂದ ಚಿಪ್ಪುಗಳನ್ನು ಸಾಗಿಸುತ್ತಿದ್ದ ‘ಜೈಬಾಲಾಜಿ’ ಹಾಯಿದೋಣಿಯನ್ನು ಜೂನ್ 10ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುಷಾ ವಸ್ತು ಸಂಗ್ರಹಾಲಯಕ್ಕೆ ಸಲ್ಲಿಸಲಾಯಿತು.ಕುಂದಾಪುರದ ಖಾರ್ವಿಕೇರಿಯ ಜೈಬಾಲಾಜಿ ಎಂಟರ್‌ಪ್ರೈಸಸ್ ಮಾಲಕ ವೆಂಕಟೇಶ್ ಖಾರ್ವಿ ತಮ್ಮ ಹಾಯಿದೋಣಿಯನ್ನು ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ನೀಡಿದರು.ಸವಿವರ ಮಾಹಿತಿ: 51 ಅಡಿ ಉದ್ದ ಹಾಗೂ 10 1/2 ಅಡಿ ಅಗಲದ ಬೃಹತ್ ಹಾಯಿದೋಣಿ ಒಂದೇ ಮರದ ಹಲಗೆಯಿಂದ ನಿರ್ಮಿತವಾಗಿದೆ. ಇದರಲ್ಲಿ 22ಅಡಿ ಎತ್ತರದ ಕಾಟಿಮರ ಮತ್ತು ಹಾಯಿ ಇದೆ. 20 ವರ್ಷಗಳ […]

ಉಚಿತ ಪುಸ್ತಕ ವಿತರಣೆ

ಬೆಳ್ತಂಗಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಾಲಾಡಿಯಲ್ಲಿ ಮೇ 6ರಂದು 1-8ನೇ ತರಗತಿಯ ಎಲ್ಲಾ ಮಕ್ಕಳಿಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಂತ್ಯಾರು ಘಟಕದ ಅಧ್ಯಕ್ಷ ಹಾಜಿ ಲತೀಫ್ ಸಾಹೇಬ್ ಇವರ ಕೊಡುಗೆಯಾದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹಕೀಂ ವಹಿಸಿದ್ದರು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಪುಷ್ಪಾಲತಾ, ಸದಸ್ಯರುಗಳಾದ ಸವಿತಾ, ಅಬುಸಾ, ಶೋಭಾ, ಮುಖ್ಯ ಶಿಕ್ಷಕಿ ಲತಾ ಕೆ. ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ವೃಂದದವರು ಸಹಕರಿಸಿದರು.ಶಾಲಾ ವಿದ್ಯಾರ್ಥಿಗಳು […]

ಪಿಲಿಗೂಡು ಶಾಲೆಗೆ ಮಿಕ್ಸಿ, ಗ್ಯಾಸ್ ಸಿಲಿಂಡರ್ ಹಸ್ತಾಂತರ

ಬೆಳ್ತಂಗಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಗೂಡಿನಿಂದ ಜೂನ್ 5ರ ರಾತ್ರಿ ಮಿಕ್ಸಿ, ಗ್ಯಾಸ್ ಸಿಲಿಂಡರ್ ಸೇರಿದಂತೆ ಇನ್ನಿತರ ವಸ್ತುಗಳು ಕಳವಾಗಿದ್ದು; ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಸಾಧ್ಯವಾಗದೆ ಸಮಸ್ಯೆಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ತಂಡದ ಸಂಚಾಲಕರಾದ ಮೋಹನ್ ಕುಮಾರ್ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ತಕ್ಷಣ ಶಾಲೆಗೆ ಮಿಕ್ಸಿ ಹಾಗೂ ಗ್ಯಾಸ್ ಸಿಲಿಂಡರ್ ನೀಡಲು ಮುಂದಾಗಿದ್ದರು‌.ಅದರಂತೆ ಜೂ 7 ರಂದು‌ ಬೆಳಗ್ಗೆ 11 […]

ಪರಿಸರ ದಿನಾಚರಣೆ

ಬೆಳ್ತಂಗಡಿ: ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿ ವರ್ಷದಂತೆ ಟ್ರಸ್ಟ್ ಕಚೇರಿಯಲ್ಲಿ ಜೂನ್ 6ರಂದು ಆಚರಿಸಲಾಯಿತು. ದಕ್ಷಿಣ ಕನ್ನಡ ಪರಿಸರಾಸ್ತಕರ ಒಕ್ಕೂಟದ ಮಾಜಿ ಅಧ್ಯಕ್ಷ ನಾಟಿ ವೈದ್ಯ ಐ. ಕುಶಾಲಪ್ಪ ಗೌಡ ಗಿಡಮೂಲಿಕೆಗಳ ಔಷಧೀಯ ಗುಣಗಳ ಕುರಿತು ಮಾಹಿತಿ ನೀಡಿ, ಮನೆಗೆ ಬೇಕಾದ ತರಕಾರಿಯನ್ನು ಮನೆಯ ಸುತ್ತ ಕಡಿಮೆ ಸ್ಥಳದಲ್ಲಿ ಬೆಳೆಸುವ ಸರಳ ವಿಧಾನ ವಿವರಿಸಿದರು. ಟ್ರಸ್ಟ್ ಉಪಾಧ್ಯಕ್ಷೆ, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷೆ ವಿದ್ಯಾ ನಾಯಕ್ ವಿಶ್ವ ಪರಿಸರ ದಿನಾಚರಣೆಯ […]

‘ಪುಸ್ತಕ ಮಾತ್ರ ಪ್ರಪಂಚವಲ್ಲ; ಪರಿಸರವನ್ನು ಓದಬೇಕು’

ಬೆಳ್ತಂಗಡಿ: ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಭೂಮಿಯಲ್ಲಿ ಜೀವಿಸಲು ಕಷ್ಟವಾಗಬಹುದು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್) ಉಜಿರೆ ಇಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ರತ್ನಮಾನಸ ವಿದ್ಯಾರ್ಥಿ ನಿಲಯದ ನಿಲಯಪಾಲಕರಾದ ಯತೀಶ್ ಕೆ ಬಳಂಜ ಎಚ್ಚರಿಸಿದರು.ಈಗಿನ ಕಾಲದಲ್ಲಿ ಗಿಡ ನೆಡುವುದು ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗಿದೆ. ಪರಿಸರ ನಾಶದಿಂದಾಗಿ ತಾಪಮಾನದ ಏರಿಕೆ ಮಾತ್ರವಲ್ಲ; ಕಾಡಿನಲ್ಲಿನ ಪ್ರಾಣಿಗಳನ್ನು ನಾಡಿನಲ್ಲಿ ಕಾಣುತ್ತಿದ್ದೇವೆ ಹಾಗೂ ವಿವಿಧ ರೀತಿಯ ಆಶ್ರಯ ನೀಡುವ ಆರೋಗ್ಯಕರ ಹಣ್ಣಿನ […]

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರು ಮೌಲ್ಯಮಾಪನ- ಪ್ರತೀಕ್ ವಿ.ಎಸ್. ರಾಜ್ಯಕ್ಕೆ 7ನೇ ರಾಂಕ್

ಬೆಳ್ತಂಗಡಿ: 2023-2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬಂದಾಗ 612ಅಂಕ ಗಳಿಸಿದ್ದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರತೀಕ್ ವಿ.ಎಸ್. ಇದೀಗ ಮರುಮೌಲ್ಯಮಾಪನದಲ್ಲಿ 619 ಅಂಕಗಳಿಸಿ ರಾಜ್ಯಕ್ಕೆ 7ನೇ ರಾಂಕ್ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ಬೆಳ್ತಂಗಡಿಯ ಉದ್ಯಮಿ ಲಯನ್ಸ್ ಮಾಜಿ ಪ್ರಾಂತೀಯ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಮತ್ತು ಶಾಲಿನಿ ವಿ. ಶೆಟ್ಟಿ ದಂಪತಿಯ ಪುತ್ರ.

ಹೆದ್ದಾರಿಯಲ್ಲೊಂದು ಅನಧಿಕೃತ ಡೇರೆ

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆಯಿಂದಾಗಿ ಪಾದಾಚಾರಿಗಳದ್ದು ನಿತ್ಯದ ಗೋಳಾಗಿದೆ. ಪಾದಾಚಾರಿಗಳು ರಸ್ತೆ ಬದಿಯಲ್ಲಿ ನಡೆಯಲು ಸಾಕಷ್ಟು ವಾಹನ ಪಾರ್ಕಿಂಗ್‌ಗಳ ಕಿರಿಕಿರಿಯೊಂದಿಗೆ ಕೆಲ ಅನಧಿಕೃತ ಡೇರೆಗಳೂ ಸಮಸ್ಯೆ ಒಡ್ಡುತ್ತಿದೆ.ಇಂತಹ ಅನಧಿಕೃತ ಡೇರೆಯೊಂದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಮಾರಿಗುಡಿ ದೇವಸ್ಥಾನದ ಎದುರು ತಲೆ ಎತ್ತಿದೆ. ಪ್ರತೀ ಸೋಮವಾರ ವಾರದ ಸಂತೆಯ ದಿನ ಹೆದ್ದಾರಿಯ ಇಕ್ಕೆಲಗಳಲ್ಲೂ ವ್ಯಾಪಾರೀ ಡೇರೆಗಳು ಸಾಮಾನ್ಯ. ಇದೀಗ ಹೆದ್ದಾರಿ ಬದಿಯಲ್ಲಿ ಖಾಯಂ ಆಗಿ ಅನಧಿಕೃತ ಡೇರೆಗಳು ತಲೆ ಎತ್ತಿದರೆ ವಾಹನ […]