ರಕ್ಷಿತ್ ಶಿವರಾಮ್ ಇಳಂತಿಲಕ್ಕೆ ಭೇಟಿ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಮೇ 8ರಂದು ಇಳಂತಿಲ ಗ್ರಾಮದ ಪಾಡೆಂಕಿ ಕೋಟ್ಯಾನ್ ಕುಟುಂಬಸ್ಥರ ದೈವದ ಚಾವಡಿಗೆ ಭೇಟಿ ನೀಡಿದರು.ಈ ಸಂಧರ್ಭದಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಈಶ್ವರ ಭಟ್ ಮಯಿಲ್ತೋಡಿ, ಬಂದಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಉಮಾವತಿ ದೇಜಪ್ಪ ಗೌಡ, ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಮನೋಹರ ಕುಮಾರ್ ಹಾಗೂ ಯು.ಕೆ. ಇಸುಬು, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವರದರಾಜ್ ಎಂ., ಆಟಾಲು ಜಿನ್ನಪ್ಪ […]

ಕಾಂಗ್ರೆಸ್ ಪಕ್ಷದ ಗ್ಯಾರಂಟಿಗೆ ವಾರಂಟಿ ಇಲ್ಲ-ಅಣ್ಣಾಮಲೈ

ಬೆಳ್ತಂಗಡಿ: ಕಾಂಗ್ರೇಸ್‌ ಪಕ್ಷದ ಎಕ್ಸಪೈರೀ ದಿನಾಂಕ ದಾಟಿದೆ. ಅವರು ನೀಡುವ ಗ್ಯಾರಂಟಿಗೆ ವಾರಂಟಿ ಇಲ್ಲದೆ ಇರುವುದರಿಂದ ಅದಕ್ಕೆ ಯಾವುದೇ ಮರ್ಯಾದೆ ಇರುವುದಿಲ್ಲ. ಹೀಗಾಗಿ ಭವಿಷ್ಯದ ಸುಭದ್ರ ಚಿಂತನೆ ಇಲ್ಲದ ಕಾಂಗ್ರೇಸ್‌ಗೆ ಯಾವುದೇ ಬೂತ್‌ನಲ್ಲಿ ಲೀಡ್‌ ಸಿಗದಂತೆ ಮಾಡುವುದು ನಮ್ಮ ಗುರಿಯಾಗಿರಬೇಕು ಎಂದು ರಾಜ್ಯದ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಹೇಳಿದರು.ಅವರು ಮೇ 7ರ ಸಂಜೆ ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ಭಾರತೀಯ ಜನತಾ ಪಕ್ಷ ಆಯೋಜಿಸಿದ ಬೃಹತ್‌ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಪ್ರಚಾರ ಭಾಷಣ ಮಾಡುತ್ತಿದ್ದರು. ಈ ಬಾರಿ […]

ಕಣಿಯೂರು ಗ್ರಾ.ಪಂ. ಬಿಜೆಪಿ ಬೆಂಬಲಿತ ಸದಸ್ಯೆ ಕಾಂಗ್ರೆಸ್‌ಗೆ ಸೇರ್ಪಡೆ

ಬೆಳ್ತಂಗಡಿ; ಕಣಿಯೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯೆ ಪ್ರಿಯಾಂಕ ರಾಧಾಕೃಷ್ಣ ಗೌಡ ತನ್ನ ವಾರ್ಡ್‌ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅನುದಾನ ಕೊಡಿಸುವುದಾಗಿ ಭರವಸೆ ನೀಡಿ, ನಂತರ ಯಾವುದೇ ಅನುದಾನ ನೀಡದೆ ಕಡೆಗಣಿಸಿರುತ್ತಾರೆ. ಅಲ್ಲದೆ ನಾವು ಗ್ರಾಮದ ಯಾವುದೇ ಕೆಲಸ ಕಾರ್ಯಕ್ಕೂ ನೇರವಾಗಿ ಶಾಸಕರನ್ನು ಸಂಪರ್ಕಿಸಿದರೆ ನಮ್ಮ ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ನಮಗೆ ಗದರಿಸಿ ಏನೇ ಮಾತನಾಡುವುದಿದ್ದರೂ ನನ್ನ ಮೂಲಕವೇ ಮಾತನಾಡಬೇಕು ಎಂದು ಹೇಳುತ್ತಿದ್ದು, ಈ ಎಲ್ಲಾ ಕಾರಣದಿಂದಾಗಿ ನನ್ನ ವಾರ್ಡ್‌ನ ಬಿಜೆಪಿ ಪಕ್ಷದ ಕಾರ್ಯಕರ್ತರ […]

ಉಜಿರೆಯಲ್ಲಿ ಬೋರ್ಗರೆದ ಬಿಜೆಪಿ ಪಡೆ

ಬೆಳ್ತಂಗಡಿ: ಕರ್ನಾಟಕದಲ್ಲಿ ಪೂರ್ಣ ಬಹುಮತ ಬರಬೇಕು. ಇದರಿಂದ ಸುಸ್ಥಿರ ಆಡಳಿತ ಮೂಲಕ ಕೋಮುವಾದವನ್ನು ಮಟ್ಟ ಹಾಕಿ ವಿಕಾಸ ಕಾರ್ಯ ಮುಂದುವರಿಸಲು ಸಾಧ್ಯ ಎಂದು ಅಸ್ಸಾಂ ಮುಖ್ಯಮಂತ್ರಿ ಹೀಮಾಂತ್ ಬಿಸ್ವಾಸ್ ಶರ್ಮಾ ಹೇಳಿದರು.ಅವರು ಮೇ 6ರಂದು ಉಜಿರೆಯಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್‌ಶೋನಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಅಸ್ಸಾಂ ಮತ್ತು ಕರ್ನಾಟಕ ಮಧ್ಯೆ ಸರಿಸುಮಾರು 3000 ಕಿ.ಮೀ. ಅಂತರವಿದೆ. ನೀವು ಅಸ್ಸಾಂಗೆ ಬಂದರೂ ಉತ್ತರ ಪ್ರದೇಶಕ್ಕೆ ಹೋದರೂ ಮೋದಿ ಇದ್ದಾರೆ. ಹಾಗೆ ಕರ್ನಾಟಕದಲ್ಲೂ ಇದ್ದಾರೆ. ಇಂದು ಉಜಿರೆ ಬಂದು ನಿಮ್ಮ ಉತ್ಸಾಹ […]

ಕಥೋಲಿಕ್ ಸೊಸೈಟಿ ಬೆಳ್ಳಿ ಹಬ್ಬದ ಸಮಾರೋಪ

ಬೆಳ್ತಂಗಡಿ: ಕಳೆದ 25ವರ್ಷಗಳಿಂದ ಬೆಳ್ತಂಗಡಿ ಪೇಟೆಯ ಹೃದಯಭಾಗದಲ್ಲಿ ಅತ್ಯಂತ ಯಶಸ್ವಿಯಾಗಿ ಆರ್ಥಿಕ ವ್ಯವಹಾರ ನಡೆಸುತ್ತಾ; ಗ್ರಾಹಕರ ಪ್ರೀತಿ ವಿಶ್ವಾಸಗಳಿಗೆ ಪಾತ್ರವಾಗಿ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿದ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭವು ಎಪ್ರಿಲ್ 15ರ ಶನಿವಾರ ಬೆಳ್ತಂಗಡಿಯ ಸಿ.ವಿ.ಸಿ. ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಹೆನ್ರಿ ಲೋಬೊರ ಅಧ್ಯಕ್ಷತೆಯಲ್ಲಿ ನಡೆಯಿತು.ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂದನೀಯ ಜೋಸೆಫ್ ಕಾರ್ಡೋಜಾ ಕಾರ್ಯಕ್ರಮ ಉದ್ಘಾಟಿಸಿ, ಸಂಘದ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು. ಬ್ರಹ್ಮಾವರ […]

ಸ್ವರ್ಗೀಯ ಶ್ರವಣಬೆಳಗೊಳಶ್ರೀಗಳಿಗೆ ವಿನಯಾಂಜಲಿ

ಬೆಳ್ತಂಗಡಿ: ಕ್ಷೇತ್ರ ಚಂದ್ರಪುರ ಶಿಶಿಲ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಜಿನ ಮಂದಿರದಲ್ಲಿ ಮಾರ್ಚ್ 29ರಂದು ಸ್ವರ್ಗೀಯ ಶ್ರವಣಬೆಳಗೊಳ ಶ್ರೀಗಳಿಗೆ ವಿನಯಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಸ್ಥಳದ ಸುರೇಂದ್ರ ಕುಮಾರ್ ಕೋಟ್ಯಾನ ಬಂಟ್ರು, ವಿಜಯಕುಮಾರ್ ಹಣೆರಾಜ ಜೈನ್, ಯಶೋಧರ ಶೆಟ್ಟಿ ರವಿರಾಜ್ ಶೆಟ್ಟಿ, ಡಾ. ಜಯ ಕೀರ್ತಿ ಜೈನ್, ಜಿನರಾಜ ಪೂವಣಿ, ಅತಿಶಯ ಜೈನ್, ಅರಹಂತ ಇಂದ್ರ, ಪದ್ಮಲತಾ, ನಾಗಕನ್ನಿಕ, ಜಯಶ್ರೀ, ಸುರಭಿ ಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಭರತನಾಟ್ಯದಲ್ಲಿ ಉನ್ನತಶ್ರೇಣಿ

ಬೆಳ್ತಂಗಡಿ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅನುಜ್ಞಾ ಸಾಲಿಯಾನ್ ಇವರು 92% ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಇವರು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ ಉರುವಾಲು ಇಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿದುಷಿ ಶಾಲಿನಿ ಆತ್ಮಭೂಷಣ್ ಇವರ ಶಿಷ್ಯೆ. ಇಳಂತಿಲ ಅಟಾಲ್ ನಿವಾಸಿ ನ್ಯಾಯವಾದಿ ಮನೋಹರ್ ಕುಮಾರ್ ಮತ್ತು ನಯನಾ ದಂಪತಿಗಳ ಪುತ್ರಿ.

ಜಿನ‌ಮಂದಿರದ ವಾರ್ಷಿಕೋತ್ಸವ

ಬೆಳ್ತಂಗಡಿ: ಶ್ರೀ ಕ್ಷೇತ್ರ ಚಂದ್ರಾಪುರ ಶಿಶಿಲದ ಭಗವಾನ್ ಶ್ರೀ ೧೦೦೮ ಜಿನಮಂದಿರದ ವಾರ್ಷಿಕೋತ್ಸವವು ಕಾರ್ಕಳ ಜೈನ ಮಠದ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದೊಂದಿಗೆ. ವಿಮಾನ ಶುದ್ದಿ, ೨೪ ಕಳಶಾಭಿಷೇಕ, ಲಕ್ಷ ಹೂವಿನ ಪೂಜೆ, ಶ್ರೀ ಉತ್ಸವ ಮುಂತಾದ ಪೂಜಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಸಮಾಜದ ಗಣ್ಯರು ಹಾಗೂ ಸಾಧಕರಾದ ಪತ್ರಕರ್ತ ನಾಭಿರಾಜ ಪೂವಣಿ ಉಜಿರೆ, ಡಾ| ಜಯಕುಮಾರ್ […]

ಬೆಳ್ತಂಗಡಿಯಲ್ಲಿ ಮಾ. 4 ಹಾಗೂ 5ರಂದು ವಿಶ್ವ ಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ

ಬೆಳ್ತಂಗಡಿ : ಸ್ಥಾನಿಕ ಬ್ರಾಹ್ಮಣ ಮಹಾಮಂಡಲ (ರಿ.) ಮಂಗಳೂರು ಆಯೋಜನೆಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಇದರ ಆಶ್ರಯದಲ್ಲಿವಿಶ್ವ ಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶವು ಮಾರ್ಚ್ 4 ಹಾಗೂ 5ರಂದು ಬೆಳ್ತಂಗಡಿಯ ಲ್ಯಾಲ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ನಡೆಯಲಿದೆ ಎಂದು ಸ್ಥಾನಿಕ ಬ್ರಾಹ್ಮಣ ಮಹಾ ಮಂಡಲದ ಅಧ್ಯಕ್ಷ ಎಂ. ದೇವಾನಂದ ಭಟ್ ತಿಳಿಸಿದ್ದಾರೆ. ಅವರು ಫೆಬ್ರವರಿ 28ರಂದು ಲ್ಯಾಲ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ನಡೆದ ಪತ್ತಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.ಮಾರ್ಚ್ 4ರಂದು ಬೆಳಿಗ್ಗೆ ಸಮಾವೇಶವನ್ನು ಶ್ರೀ ಕ್ಷೇತ್ರ […]

ಭಾರತದ ಉಸಿರೇ ಧರ್ಮ-ಕಲ್ಲಡ್ಕ ಡಾ| ಭಟ್

ಬೆಳ್ತಂಗಡಿ: ಭಾರತದ ಆತ್ಮ, ಜೀವ ಮತ್ತು ಉಸಿರು ಅದು ಧರ್ಮ. ಧರ್ಮ ಬಿಟ್ಟು ದೇಶ ಇಲ್ಲ. ಧರ್ಮವನ್ನು ಜನ ಮಾನಸದಲ್ಲಿ ಮೂಡಿಸುವ ಒಂದು ಪ್ರಯತ್ನ ಸಂಸ್ಕೃತಿಯಿಂದ ನಡೆಯುತ್ತಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.ಅವರು ಫೆಬ್ರವರಿ 20ರ ರಾತ್ರಿ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸುವರ್ಣ ಆರ್ಕೇಡ್ ಆವರಣದಲ್ಲಿ ನಡೆದ 13ನೇ ವರ್ಷದ ಸುವರ್ಣ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಹಿರಿಯ ಕಲಾಸಾಧಕರಿಗೆ ಸುವರ್ಣ […]