ಡಾ. ಶಾಂತಾರಾಮ ಪ್ರಭುಗಳಿಗೆ ಕುರಿಯ ಪ್ರಶಸ್ತಿ

ಬೆಳ್ತಂಗಡಿ: ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಗಳವರ ಪ್ರಥಮ ಆರಾಧನಾಸ್ಮೃತಿ ಹಾಗೂ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ಪ್ರಥಮ ಚಾತುರ್ಮಾಸ್ಯ ಗೌರವಾರ್ಥ  ಉಜಿರೆಯ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪ  ಸಮಾರಂಭದಲ್ಲಿ ಹಿರಿಯ ಕಲಾವಿದ, ವಿದ್ವಾಂಸ ಡಾ. ನಿಟ್ಟೂರು ಶಾಂತಾರಾಮ ಪ್ರಭು ಅವರಿಗೆ  ಶ್ರೀ ಸಚ್ಚಿದಾನಂದ ಭಾರತೀಶ್ರೀಗಳವರು ಕುರಿಯ ಪ್ರಶಸ್ತಿ ಪ್ರಧಾನ ಗೈದರು.        ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಶಾಂತಾರಾಮ ಪ್ರಭು, ಕುರಿಯ ವಿಠಲ ಶಾಸ್ತ್ರಿಗಳು ಧರ್ಮಸ್ಥಳ ಮೇಳದ ಸಂಚಾಲಕರಾಗಿ, […]

ಮೇಲಂತ ಬೆಟ್ಟು ಸರಕಾರಿ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ಮಡಂತ್ಯಾರು, ರೋಟರಿ ಕ್ಲಬ್ ಮಂಗಳೂರು ಮಿಡ್‌ಟೌನ್, ರೋಟರಿ ಕ್ಲಬ್ ಮಂಗಳೂರು ಡೌನ್‌ಟೌನ್, ರೋಟರಿ ಕ್ಲಬ್ ಮಂಗಳೂರು ಸೀ ಸೈಡ್ ಹಾಗೂ ಪ್ರಖ್ಯಾತ ಕೋಗ್ನಿಸೆಂಟ್ ಕಂಪೆನಿ ಇವುಗಳ ಪ್ರಾಯೋಜಕತ್ವದಲ್ಲಿ ರೋಟರಿ ಜಿಲ್ಲೆ 3181ರ 2022-23 ನೇ ಸಾಲಿನ ನೀಯೋಜಿತ ಗವರ್ನರ್ ಎಚ್. ಆರ್. ಕೇಶವ್ ಅವರ ನೇತೃತ್ವದಲ್ಲಿ , ರೋಟರಿ ಸಹಕಾರಿತ ಯೋಜನೆಯಡಿಯಲ್ಲಿ ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೇಲಂತಬೆಟ್ಟುಗೆ ರೂಪಾಯಿ 4,50,000ಮೌಲ್ಯದ 15 ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ಕೊಡಲಾಯಿತು. […]

ಓಡೀಲು ದೇಗುಲದ ಪರಿಸರದಲ್ಲಿ ಸ್ವಚ್ಛತಾ ಕಾರ್ಯ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಮಡಂತ್ಯಾರು ವಲಯ ಹಾಗೂ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸಹಭಾಗಿತ್ವದಲ್ಲಿ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತ ಮುತ್ತ ಆಗಸ್ಟ್ 3ರಂದು ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು‌. ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಕುವೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷೆ ಸುಮಂಗಳ ಪ್ರಭು, ಮೇಲ್ವಿಚಾರಕ ಮಧು […]

ಭಜನಾ ತಂಡಗಳ ಅಧ್ಯಕ್ಷ-ಕಾರ್ಯದರ್ಶಿಗಳ ಸಭೆ

ಬೆಳ್ತಂಗಡಿ: ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಕಾರ್ಯ ಭಜನಾ ಮಂಡಳಿಗಳಿಂದಾಗಿದೆ. ಭಜನಾ ಮಂದಿರಗಳ ಅಸ್ತಿತ್ವ ಉಳಿಸುವ ನಿಟ್ಟಿನಲ್ಲಿ ಸರಕಾರಿ ದಾಖಲೆಗಳನ್ನು ಸರಿಪಡಿಸುವ ಜತೆಗೆ ಸಂಪೂರ್ಣ ಮೂಲ ಸೌಕರ್ಯ ಅಭಿವೃದ್ಧಿಗೆ ಕಂದಾಯ ಸಚಿವ ಆರ್. ಅಶೋಕ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಬೆಳ್ತಂಗಡಿ ತಾಲೂಕಿನ ಭಜನಾ ಮಂದಿರಗಳ ಮೂಲ ಸೌಕರ್ಯಗಳ ಕುರಿತು ಮಂದಿರ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಜತೆ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಸಭಾಭವನದಲ್ಲಿ ಆಗಸ್ಟ್ 1ರಂದು ನಡೆಸಲಾದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಮಂದಿರಗಳಿಗೆ […]

ಬೆಳಾಲಿನಲ್ಲಿ ಕೋವಿಡ್ ಸಹಾಯಹಸ್ತ ಕಾರ್ಯಕ್ರಮ ಮಾಹಿತಿ

ಬೆಳ್ತಂಗಡಿ: ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಬೆಳಾಲು ಗ್ರಾಮ ಸಮಿತಿಯ ಸಭೆ ಹಾಗೂ ಕೋವಿಡ್ ಸಹಾಯ ಹಸ್ತ ಕಾರ್ಯಕ್ರಮದ ಮಾಹಿತಿ ಕಾರ್ಯಕ್ರಮವು ಆಗಸ್ಟ್ 2ರಂದು ಬೆಳಾಲು ಮೈತ್ರಿ ಯುವಕ ಮಂಡಲದಲ್ಲಿ ನಡೆಯಿತು.ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್‌ರವರ ನಿರ್ದೇಶನದಂತೆ ಪ್ರತೀ ಗ್ರಾಮ ಮಟ್ಟದಲ್ಲೂ ಕೋವಿಡ್ ಸಹಾಯ ಹಸ್ತ ಎಂಬ ಕಾರ್ಯಕ್ರಮದ ಅನುಷ್ಠಾನ ಮಾಡಿದ್ದು, ಅದರ ಮಾಹಿತಿಯನ್ನ ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ರಂಜನ್ ಜಿ. ಗೌಡರವರು ಸಭೆಗೆ ನೀಡಿದರು. ಈ ಸಭೆಯಲ್ಲಿ ಕೊರೊನದಿಂದ […]

ಕೊಕ್ರಾಡಿಯಲ್ಲಿ ‘ಆಷಾಡ ಮಾಸದಲ್ಲಿ ಒಂದು ದಿನ’

ಬೆಳ್ತಂಗಡಿ: ಶ್ರೀ  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿಯ ನಾರಾವಿ ವಲಯದ ಕೊಕ್ರಾಡಿ ಹಾಗೂ ಸಾವ್ಯ ಕಾರ್ಯಕ್ಷೇತ್ರದ ಬನಶಂಕರಿ ಹಾಗೂ ನಿಸರ್ಗ ಜ್ಞಾನವಿಕಾಸ ಕೇಂದ್ರದ ‘ಆಷಾಢ ಮಾಸದಲ್ಲಿ ಒಂದು ದಿನ’ ಕಾರ್ಯಕ್ರಮವನ್ನು ಕೊಕ್ರಾಡಿ ಶಾರದಾಂಭಾ ಯುವಕ ಮಂಡಲದಲ್ಲಿ ಮರದ ಕಳ ಸೆಗೆ ಭತ್ತ ತುಂಬಿಸುವ ಮೂಲಕ ವೇದಿಕೆಯಲ್ಲಿರುವ ಗಣ್ಯರು ಉದ್ಘಾಟಿಸಿದರು.ತಾಲೂಕಿನ ಯೋಜನಾಧಿಕಾರಿ ಯಶವಂತ ಯಸ್.  ಪ್ರಸ್ತಾವಿಸಿ, ಹಿಂದಿನ ಕಾಲದಲ್ಲಿ ಹಿರಿಯರು ಆಷಾಢ ಮಾಸದಲ್ಲಿ ಅರೋಗ್ಯವರ್ಧಕ ಆಹಾರ ಪದ್ಧತಿಗಳನ್ನು ಅನುಸ ರಿಸುತಿದ್ದು ಇದನ್ನು ಮುಂದಿನ ಯುವಪೀಳಿಗೆಗೆ ಇಂದಿನ ಮಹಿಳೆಯರು ವರ್ಗಾಯಿಸ […]

ಮುಂಡಾಜೆ ರೋಟರಿ ಸಮುದಾಯದಳ ಪದಗ್ರಹಣ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿಯ ಅಂಗಸಂಸ್ಥೆಯಾದ ಮುಂಡಾಜೆ ರೋಟರಿ ಸಮುದಾಯ ದಳದ 2021-22ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಮುಂಡಾಜೆ  ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಜರುಗಿತು. ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸೇವೆಯಲ್ಲಿ ತೊಡಗಿದವರಿಗೆ ಸವಾಲುಗಳಿವೆ. ಸವಾಲುಗಳನ್ನು ಎದುರಿಸಿ ಕೆಲಸ ಮಾಡಿದರೆ ತಕ್ಕ ಪ್ರತಿಫಲ ಸಿಗುತ್ತದೆ. ಸಮಾಜದ ಅಭಿವೃದ್ಧಿಗಾಗಿ ದುಡಿಯುವ ಸಂಘ-ಸಂಸ್ಥೆಗಳು ಗೌರವಕ್ಕೆ ಅರ್ಹವಾಗಿರುತ್ತವೆ ಎಂದು ಹೇಳಿದರು.ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಅಬೂಬಕರ್, ನಿಕಟಪೂರ್ವ ಅಧ್ಯಕ್ಷ ಬಿ. ಕೆ. […]

ಕುವೆಟ್ಟು ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪ‌ಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕುವೆಟ್ಟು ಇಲ್ಲಿ ಜುಲೈ 31ರಂದು ಗ್ರಾಮ ಪಂಚಾಯತ್ ಕುವೆಟ್ಟು ವತಿಯಿಂದ ನೀಡಿದಂತಹ ಕೆಲವು ಸಸಿಗಳನ್ನು ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಸಿಲ್ವೆಸ್ಟರ್ ಮೋನಿಸ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿರಾಜ್ ಚಿಲಿಂಬಿ, ಉಪಾಧ್ಯಕ್ಷೆ ಜಾನಕಿ ದಿನಕರ್, ಗ್ರಾಮ ಪಂಚಾಯತ್ ಸದಸ್ಯೆ ಆಮಿನಾ, ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಕರ್ ಬಿ. ಶೆಟ್ಟಿ ಪೆರಂಗೋಡಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, […]

‘ವೃಕ್ಷಯಜ್ಞ’ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

ಬೆಳ್ತಂಗಡಿ: ನರಸಿಂಹಗಡದ ತಪ್ಪಲಿನ ಕೂಡೆಲು ಪ್ರದೇಶದಲ್ಲಿ ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಲಾಯಿಲ‌ ಇವರ ಸಹಯೋಗದಲ್ಲಿ ಆಗಸ್ಟ್ 1ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ‘ವೃಕ್ಷಯಜ್ಞ’ ಹಣ್ಣಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ 400ಕ್ಕೂ ಅಧಿಕ ಜನರಿಂದ ಕೂಡೆಲು ಪ್ರದೇಶದ ವಿವಿಧ ಭಾಗಗಳಲ್ಲಿ 1000 ಕ್ಕೂ ಮಿಕ್ಕಿ […]

ಪಡಂಗಡಿ ಪ್ರಾ. ಕೃ. ಪ. ಸಹಕಾರಿ ಸಂಘದ ಮಹಾಸಭೆ

ಬೆಳ್ತಂಗಡಿ: ಸಂಘದ ಸದಸ್ಯರ ಅನುಕೂಲತೆಯ ದೃಷ್ಠಿಯಿಂದ ಶಾಸಕರ ನಿರ್ದೇಶನದಂತೆ ಗೃಹನಿರ್ಮಾಣ ಸಾಲವನ್ನು 11% ಬಡ್ಡಿದರದಲ್ಲಿ ಸಂಘದ ವತಿಯಿಂದ ನೀಡುವ ಮಹತ್ವದ ಚಿಂತನೆಯನ್ನು ನಡೆಸಿದ್ದೇವೆ ಎಂದು ಪಡಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಯೋಗೀಶ್ ಕುಮಾರ್ ಕೆ. ಎಸ್. ತಿಳಿಸಿದರು.ಅವರು ಜುಲೈ 31ರಂದು ಸಂಘದ ವಠಾರದಲ್ಲಿ ಜರಗಿದ 2020-21ನೇ ಸಾಲಿನ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರ್ವ ಸದಸ್ಯರ ಸಹಕಾರದಿಂದ ಸಂಘ ನಿರಂತರ ಅಭಿವೃದ್ಧಿ ಕಂಡಿದೆ. ಪ್ರಸಕ್ತ ಸಾಲಿನಲ್ಲಿ […]