ಸಿ.ಎ. ಪರೀಕ್ಷೆ ಉತ್ತೀರ್ಣ

ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಓಡಲ ಯು. ಮಹಮ್ಮದ್ ಶರೀಫ್ ಹಾಗೂ ಹಸೀನಾ ಬಾನು ದಂಪತಿಗಳ ಪುತ್ರ ಶೇಕ್ ಮಹಮ್ಮದ್ ಆರಿಫ್ ರವರು ಜನವರಿ 2026ರಲ್ಲಿ ಜರಗಿದ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ.) ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಿ.ಕಾಂ. ಪದವಿಯನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. ತಮ್ಮ ಸಿ.ಎ. ಆರ್ಟಿಕಲ್ ಶಿಪ್ ತರಬೇತಿಯನ್ನು ಬೆಂಗಳೂರಿನ ಆರ್. ನಟರಾಜನ್ ಅಂಡ್ ಕೋ ಸಂಸ್ಥೆಯಲ್ಲಿ ಪೂರೈಸಿ ಸಿ.ಎ. ಪದವಿಯನ್ನು ಪ್ರಥಮ ಪರೀಕ್ಷೆಯಲ್ಲೇ ಪೂರೈಸಿರುತ್ತಾರೆ. […]
ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದರ ಉಪಾಧ್ಯಕ್ಷರಾಗಿ ಧರಣೇಂದ್ರ ಕೆ.

ಬೆಳ್ತಂಗಡಿ: ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದು 112 ವರ್ಷಗಳ ಇತಿಹಾಸವುಳ್ಳ ಪ್ರತಿಷ್ಠಿತ ಬ್ಯಾಂಕ್ ಆಗಿದ್ದು; ರಾಜ್ಯದ 18 ಜಿಲ್ಲೆಗಳಲ್ಲಿ ಪ್ರಸ್ತುತ 16 ಶಾಖೆಗಳನ್ನು, 25,000ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಪ್ರತಿಷ್ಠಿತ ಬ್ಯಾಂಕ್ ಆಗಿದ್ದು; ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಬ್ಯಾಂಕ್ ಆಗಿರುತ್ತದೆ. ಈ ಬ್ಯಾಂಕಿನ ಉಪಾಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪೂಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕರಾದ ಧರಣೇಂದ್ರ ಕೆ. ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ […]
ಬಾಲಕಿಯ ಮೇಲೆ ಕಾಮುಕರಿಂದ ಅತ್ಯಾಚಾರ

ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಇಬ್ಬರು ಯುವಕರು ಅತ್ಯಾಚಾರ ಮಾಡಿದ ಅತ್ಯಂತ ಹೇಯಕೃತ್ಯವನ್ನು ಭೇದಿಸಿದ ಧರ್ಮಸ್ಥಳ ಪೊಲೀಸರು ಇಬ್ಬರು ಅತ್ಯಾಚಾರಿಗಳನ್ನು ಬಂಧಿಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಇಬ್ಬರು ಯುವಕರು ಪುಸಲಾಯಿಸಿ ಆಮಿಷ ಒಡ್ಡಿ ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಎಪ್ರಿಲ್ 16ರಂದು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವ ವಿಚಾರವನ್ನು ಭಯದಿಂದಲೇ ಬಾಲಕಿ ಹೆತ್ತವರಿಗೆ ತಿಳಿಸಿದ್ದು; ವಿಚಾರ ತಿಳಿದ ಪೋಷಕರು ತಡಮಾಡದೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಎಪ್ರಿಲ್ 17ರಂದು ದೂರು […]
ಶ್ರೀ ಧ.ಮಂ. ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನಲ್ಲಿಅಂಬೇಡ್ಕರ್ ಜಯಂತಿ ಆಚರಣೆ

ಬೆಳ್ತಂಗಡಿ: ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಬಿ.ಎಡ್. ಹಾಗೂ ಡಿ.ಎಡ್. ಸಂಸ್ಥೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಬಿ.ವೋಕ್ ಇನ್ ರೀಟೇಲ್ ಮತ್ತು ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಆಶ್ವಿತ್ ಎಚ್.ಆರ್. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ‘ಭಾರತದ ಸಂವಿಧಾನದ ಶಿಲ್ಪಿ ಕಾನೂನುತಜ್ಞ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಗತ್ತು ಕಂಡ ಅದ್ಭುತ ವ್ಯಕ್ತಿ. ತಮ್ಮ ಹೋರಾಟದ ಜೊತೆಗೆ ಕಷ್ಟದ ಸಂದರ್ಭದಲ್ಲೂ ಬದುಕು ಕಟ್ಟಿಕೊಂಡವರು. ಭಾರತದಲ್ಲಿ ಜನಿಸಿದ ಪ್ರತಿಯೊಂದು […]
ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಮತ್ತು ವಿವೇಚನಾ ಅನುದಾನದಡಿ ತಾಲೂಕಿನ ದೇವಸ್ಥಾನಗಳಿಗೆ ಅನುದಾನ ಮಂಜೂರು

Pಬೆಳ್ತಂಗಡಿಯ ಶಾಸಕರಾದಹರೀಶ್ ಪೂಂಜ ಅವರುತಾಲೂಕಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರದಿಂದ ಮಹತ್ವದ ಅನುದಾನವನ್ನು ಒದಗಿಸಿದ್ದಾರೆ.ಗರ್ಡಾಡಿ ಗ್ರಾಮದ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನ ಅಭಿವೃದ್ಧಿಗೆ ರೂಪಾಯಿ 1ಕೋಟಿ,ಕರಾಯ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ರೂಪಾಯಿ 20ಲಕ್ಷ, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಉಜಿರೆಉ ಅಭಿವೃದ್ಧಿ ಕಾರ್ಯಕ್ಕೆ ರೂಪಾಯಿ 10 ಲಕ್ಷ,ಹತ್ಯಡ್ಕ ಗ್ರಾಮದ ನೆಕ್ಕರಡ್ಕ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದ ಅಭಿವೃದ್ಧಿಗೆ ರೂಪಾಯಿ 5 ಲಕ್ಷ, ಶ್ರೀ ಅನಂತೇಶ್ವರ ದೇವಸ್ಥಾನ, ಬಳ್ಳಮಂಜದ ಅಭಿವೃದ್ಧಿಗೆ ರೂಪಾಯಿ 10 ಲಕ್ಷ, […]
ಎಪ್ರಿಲ್ 15, 16 ಮಡಂತ್ಯಾರಿನಲ್ಲಿ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ

ಬೆಳ್ತಂಗಡಿ: ಎಪ್ರಿಲ್ ತಿಂಗಳ 15 ಮತ್ತು 16ನೇ ತಾರೀಕಿನಂದು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರಾ ತಿಳಿಸಿದರು.ಅವರು ಎಪ್ರಿಲ್ 13ರಂದು ಬೆಳ್ತಂಗಡಿಯ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಪಂದ್ಯಾಟದ ಬಗ್ಗೆ ವಿವರಣೆ ನೀಡುತ್ತಿದ್ದರು. ಪಂದ್ಯಾಟಕ್ಕೆ ಈಗಾಗಲೇ ವಿದ್ಯಾರ್ಥಿಗಳ ವಿಭಾಗದಲ್ಲಿ ಹತ್ತು ತಂಡಗಳು ಮತ್ತು ವಿದ್ಯಾರ್ಥಿನಿಯರ ವಿಭಾಗದಲ್ಲಿ ಹತ್ತು ತಂಡಗಳು ನೋಂದಾವಣೆ ಮಾಡಿಕೊಂಡಿದೆ. ಪಂದ್ಯಾಟದಲ್ಲಿ ಗೆದ್ದ ವಿದ್ಯಾರ್ಥಿಗಳ ತಂಡಕ್ಕೆ […]

ಅಕ್ರಮ ಕಸ ಎಸೆತ-ದಂಡ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಲಾಯ್ಲ ಗ್ರಾಮದ ಲಾಯ್ಲ ಟಿ. ಬಿ. ಕ್ರಾಸ್ ಎಂಬಲ್ಲಿ ಅಕ್ರಮವಾಗಿ ಕಸ ಎಸೆದ ಬಗ್ಗೆ ಮಾಹಿತಿ ಪಡೆದು, ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ ಪಂಚಾಯತ್ ಲೆಕ್ಕ ಸಹಾಯಕರಾದ ಸುಪ್ರಿತಾ ಶೆಟ್ಟಿ ಗ್ರಾಮ ಪಂಚಾಯತ್ ಸಿಬ್ಬಂದಿಗಳೊಂದಿಗೆ ಹಾಗೂ ಸ್ವಚ್ಛತಾ ಸಿಬ್ಬಂದಿವರ್ಗದವರೊಂದಿಗೆ ದಿಢೀರ್ ಸ್ಥಳಕ್ಕೆ ಬೇಟಿ ನೀಡಿ; ಅಕ್ರಮವಾಗಿ ಕಸ ಎಸೆದವರ ಮಾಹಿತಿ ಪಡೆದುಕೊಂಡು; ಕಸ ರಸ್ತೆ ಬದಿ ಎಸಗಿದವರಿಗೆ ತಕ್ಷಣ ದೂರವಾಣಿ ಕರೆಯ ಮೂಲಕ ಸ್ಥಳಕ್ಕೆ ಬರಲು ಹೇಳಿ ಸೂಕ್ತ […]

ನಾವೂರಿನಲ್ಲಿ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ನಾವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಎಪ್ರಿಲ್ 5ನೇ ತಾರೀಕಿನಂದು ನಾವೂರು ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ (ರಿ) ಇದರ ನೇತೃತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಸರ್ವೋದಯ ಟ್ರಸ್ಟ್ (ರಿ) ನಾವೂರು ಇವುಗಳ ಸಹಭಾಗಿತ್ವದಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಅವಕಾಶಗಳ ಕುರಿತು ಸಮಗ್ರ ಮಾಹಿತಿಯ ‘ಶೈಕ್ಷಣಿಕ ಮಾಹಿತಿ ಕಾರ್ಯಾಗಾರ’ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ. ಡಾ. ಪ್ರಕಾಶ್ ಪ್ರಭು ನೆರವೇರಿಸಿ ‘ಗ್ರಾಮೀಣ ಭಾಗದ […]