ಡಾ. ಬಿ. ಯಶೋವರ್ಮ ಎಲ್ಲರಿಗೂ ಪ್ರೇರಣಾ ಶಕ್ತಿಯಾಗಿದ್ದರು ಡಾ. ಬಿ‌. ಯಶೋವರ್ಮರ ನುಡಿನಮನ ಕಾರ್ಯಕ್ರಮದ ಲ್ಲಿ ಎನ್. ಜಿ.ಪಟವರ್ಧನ್

ಬೆಳ್ತಂಗಡಿ: ಡಾ. ಬಿ. ಯಶೋವರ್ಮ ಅವರು ಸ್ನೇಹಮಯಿಯಾಗಿ ಮಾನವೀಯ ಮೌಲ್ಯ ಹಾಗೂ ಸಂಬಂಧಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದವರು. ಅವರು ತಾಲೂಕಿನ  ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಸಲ್ಲಿಸಿರುವ ಸೇವೆ ಅನನ್ಯವಾದುದು. ಸಾಹಿತ್ಯ ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ, ಸುಂದರವಾಗಿ ನಡೆಸಿ ನಮಗೆ ಪ್ರೇರಣೆಯ ಶಕ್ತಿಯಾಗಿದ್ದಾರೆ. ಹಿರಿಯರನ್ನು ಗೌರವಿಸುವ ಅವರು  ದಾರ್ಶನಿಕರಾಗಿ, ಶಿಕ್ಷಣತಜ್ಞರಾಗಿ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದು, ಅವರನ್ನು ಕಳೆದುಕೊಂಡ ನಷ್ಟವನ್ನು ಭರಿಸುವುದು ಕಷ್ಟದಾಯಕ ಎಂದು ಹಿರಿಯ ಸಾಹಿತಿ ಎನ್. ಜಿ. ಪಟವರ್ಧನ್ ಹೇಳಿದರುಅವರು ಜೂನ್ 18ರಂದು  ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮ್ಯಗ್ದರ್ಶನ ಸೆಮಿನಾರ್ ಹಾಲ್‌ನಲ್ಲಿ […]

ಸಾಮಾಜಿಕ ಜಾಲತಾಣದಿಂದ ಮೌಲ್ಯ ಕಳೆದುಕೊಂಡ ಗ್ರಂಥಾಲಯ-ಪೂಂಜ

ಬೆಳ್ತಂಗಡಿ: ಸರಕಾರ ಗ್ರಾಮಕ್ಕೊಂದು ಗ್ರಂಥಾಲಯ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಸಾಮಾಜಿಕ ಜಾಲತಾಣಗಳು ಬಂದ ನಂತರ ಇದರ ಮೌಲ್ಯ ಕಳೆದುಕೊಂಡಿದೆ. ಆದರೆ ಓದುಗರನ್ನು ಆಕರ್ಷಿಸಬೇಕು, ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಗ್ರಂಥಾಲಯದ  ಜ್ಞಾನ ಲಾಭ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಬೆಳ್ತಂಗಡಿ ಯಲ್ಲಿ  ರಾಜ್ಯಕ್ಕೆ ಮಾದರಿಯಾಗುವಂತಹ ಅತ್ಯುತ್ತಮ ರೀತಿಯ ಗ್ರಂಥಾಲಯ ನಿರ್ಮಾಣವಾಗಬೇಕು ಎಂಬ ಕಲ್ಪನೆಯೊಂದಿಗೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣವಾಗುತ್ತಿದ್ದು, ಈ ಗ್ರಂಥಾಲಯ  ಜ್ಞಾನದಾಹಿಗಳಿಗೆ ಜ್ಞಾನತುಂಬುವ ಪವಿತ್ರ ಕ್ಷೇತ್ರವಾಗಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.ಅವರು ಜೂನ್ 18ರಂದು  ಬೆಳ್ತಂಗಡಿ […]

ಎಕ್ಸೆಲ್ ಪದವಿಪೂರ್ವ ಕಾಲೇಜು, ಗುರುವಾಯನಕೆರೆ;ಪ್ರಥಮ ಬ್ಯಾಚಿನಲ್ಲೇ ಅತ್ಯುತ್ತಮ ಫಲಿತಾಂಶ;ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದ ಆಗ್ನೇಯ. ಡಿ.ಎ

ಬೆಳ್ತಂಗಡಿ. ಜೂ 18: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಗುರುವಾಯನಕೆರೆ ಎಕ್ಸೆಲ್ ಪ. ಪೂ ಕಾಲೇಜು ತನ್ನ ದ್ವಿತೀಯ ಪಿಯುಸಿ ಯ ಪ್ರಥಮ ಬ್ಯಾಚಿನಲ್ಲೇ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರಥಮ ಬ್ಯಾಚ್ ಫಲಿತಾಂಶದಲ್ಲೇ ರಾಜ್ಯಮಟ್ಟದಲ್ಲಿ 4 ನೆಯ ರಾಂಕ್ ದಾಖಲಿಸಿದೆ. ವಿಜ್ಞಾನ ವಿಭಾಗದ ಆಗ್ನೇಯ ಡಿ. ಎ ನಾಲ್ಕು ವಿಷಯಗಳಲ್ಲಿ ತಲಾ 100 ಅಂಕ ಗಳನ್ನು ಗಳಿಸುವುದರೊಂದಿಗೆ ಒಟ್ಟು 595 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.ಹಾಗೆಯೇ ದೀಕ್ಷಾ.ಬಿ.ಎಸ್ […]

ಬದುಕು ಕಟ್ಟೋಣ ಬನ್ನಿ ತಂಡದ ಸಾಹಸ: 12 ಮನೆಗಳ ಹಸ್ತಾಂತರಕ್ಕೆ ಮುಹೂರ್ತ ಫಿಕ್ಸ್

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.‌ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು‌ ಹೇಮಾವತಿ‌ ವೀ. ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಮತ್ತು ಶಾಸಕ ಹರೀಶ್ ಪೂಂಜ ಅವರ ಮಾರ್ಗದರ್ಶನದಲ್ಲಿ ಚಾರ್ಮಾಡಿ ಗ್ರಾಮದ ಕೊಳಂಬೆ ನೆರೆಪೀಡಿತ ಪ್ರದೇಶದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಮೂಲಕ‌‌ ನಿರ್ಮಿಸಿದ 12 ಮನೆಗಳ ಗೃಹಪ್ರವೇಶೋತ್ಸವ ಅರ್ಥಬದ್ಧವಾಗಿ ಮೇ 8ರಂದು ಹಮ್ಮಿಕೊಳ್ಳಲಾಗಿದೆ ಎಂದು ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.ಉಜಿರೆಯ ದಿಶಾ ಹೊಟೇಲ್ ನಲ್ಲಿ ಎಪ್ರಿಲ್ 30ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ಸಂಪೂರ್ಣ ವಿವರ […]

ಬಡವರ ಮನೆಗಳ ನಳ್ಳಿನೀರಿನ ಸಂಪರ್ಕ ಕಟ್-ಬಡಪಾಯಿಗಳ ಪರದಾಟ

ಬೆಳ್ತಂಗಡಿ: ಕುಡಿಯುವ ನೀರಿನ ಸಮಸ್ಯೆ ಇರುವ ಅನಾರೋಗ್ಯ ಪೀಡಿತ ದಲಿತ ವೃದ್ಧ ದಂಪತಿಯ ಮನೆಯೂ ಸೇರಿದಂತೆ ಹಲವು ಬಡ ಕುಟುಂಬಗಳ ಕುಡಿಯುವ ನೀರಿನ ನಳ್ಳಿ ಸಂಪರ್ಕವನ್ನು ಗ್ರಾಮಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಯಾವುದೇ ನಿರ್ಣಯ ಮಾಡದೇ ಹಾಗೂ ಮುನ್ಸೂಚನೆ ಅಥವಾ ನಿಗದಿತ ಗಡುವು ನೀಡದೇ ಪಂಪು ಚಾಲಕ ದಿಡೀರ್ ಕಡಿತಗೊಳಿಸಿದ ಘಟನೆ ಕೊಯ್ಯೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮಲೆಬೆಟ್ಟು ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನಡೆದಿದೆ. ಕೊಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಬೆಟ್ಟು ನೀರಕಜೆ ಪರಿಸರದಲ್ಲಿ ಅಧ್ಯಕ್ಷರ ವಾರ್ಡಿನಲ್ಲಿ ಪರಿಶಿಷ್ಟ ಜಾತಿ […]

‘ಸಾಹಿತ್ಯದಿಂದ ಮಾನವೀಯ ಸಂಬಂಧ ವೃದ್ಧಿ’

ಬೆಳ್ತಂಗಡಿ: ಇಂದು ಶಿಕ್ಷಣವೇ ಒಂದು ಸವಾಲಾಗಿದೆ. ಪರಂಪರಾಗತ ಶಿಕ್ಷಣ ಇಂದಿನ ಅಗತ್ಯವಿದೆ. ಸಾಹಿತ್ಯ ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಒಯ್ಯುತ್ತದೆ. ಮಾನವೀಯ ಸಂಭಂದಕ್ಕೆ ಸಾಹಿತ್ಯ ಅಗತ್ಯ. ಜೀವಂತಿಕೆಯ ಒರತೆ ನಿತ್ಯ ಹರಿಯಲು ಸಾಹಿತ್ಯ ಬೇಕು ಎಂದು ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ನುಡಿದರು.ಅವರು ಶಿಶಿಲದ ಶಿವಕೀರ್ತಿ ನಿಲಯದ ಜಯರಾಮ ನೆಲ್ಲಿತ್ತಾಯರ ಮನೆಯಲ್ಲಿ ಜರಗಿದ ಅರಸಿನಮಕ್ಕಿ ವಲಯದ ತುಳು ಶಿವಳ್ಳಿ ಬಾಂಧವರ ವಲಯ ಸಭೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರ […]

ಶ್ರೀ ರಾಮಕ್ಷೇತ್ರದಲ್ಲಿ ಭಜನಾ ಸಪ್ತಾಹ ಮತ್ತು ಜಾತ್ರೋತ್ಸವಕ್ಕೆ ಚಾಲನೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದನಗರ ಶ್ರೀ ರಾಮಕ್ಷೇತ್ರದಲ್ಲಿ 62ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಹಾಗೂ ಶ್ರೀ ರಾಮಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವಕ್ಕೆ ಎಪ್ರಿಲ್ 3ರಂದು ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕರ್ನಾಟಕ ಸರಕಾರದ ಪಂಚಾಯತ್‌ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ನಂದಾ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ದಕ್ಷಿಣ […]

ಹೆಡ್ ಕಾನ್‌ಸ್ಟೇಬಲ್ ವಿಜಯ ಕುಮಾರ್‌ರಿಗೆ ಮುಖ್ಯಮಂತ್ರಿ ಪದಕ

ಮೂಲತಾ ಬೆಳ್ತಂಗಡಿಯವರಾದ, ಪ್ರಸ್ತುತ ಉಡುಪಿಯಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿತುರ ಬಿ. ವಿಜಯ ಕುಮಾರ್‌ರವರು ಇಲಾಖೆಯಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿದ ರಾಜ್ಯ ಗೃಹ ಇಲಾಖೆ ಅವರನ್ನು ಪ್ರಸಕ್ತ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಎಪ್ರಿಲ್ 2ರ ಪೊಲೀಸ್ ಧ್ವಜ ದಿನಾಚರಣೆಯಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಬಿ. ವಿಜಯ ಕುಮಾರ್‌ರವರಿಗೆ ಪ್ರಧಾನ ಮಾಡಿ ಗೌರವಿಸಿದರು. ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ […]

ನಾಟ್ಯಗುರು ಕಮಲಾಕ್ಷ ಆಚಾರ್‌ಗೆ ಅಭಿನಂದನೆ

ಬೆಳ್ತಂಗಡಿ: ದೇಶದಲ್ಲಿ ದಕ್ಷಿಣ ಭಾರತವನ್ನು ಪರಿಗಣಿಸಿದರೆ ಭರತನಾಟ್ಯಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ರಾಜಮಹಾರಾಜರ ಕಾಲದಿಂದಲೂ ನೃತ್ಯವನ್ನು ಸಮರ್ಥವಾಗಿ ಅಧ್ಯಯನಶೀಲತೆಗೆ ಒಳಪಡಿಸಿಕೊಂಡು ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯಲ್ಲಿರುವ ನೂರಕ್ಕೂ ಅಧಿಕ ಭರತನಾಟ್ಯ ಗುರುಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಗುರುವಾಗಿ ಭರತನಾಟ್ಯವನ್ನು ಸಮರ್ಥವಾಗಿ ಆರಾಧಿಸುತ್ತಿರುವ ಕಮಲಾಕ್ಷ ಆಚಾರ್ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಾಗಿದ್ದು, ಶೀಘ್ರವೇ ಈ ಪ್ರಶಸ್ತಿಯೂ ಅವರ ಮುಡಿಗೇರಿಲಿ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಆಶಿಸಿದರು.ತಾಲೂಕಿನ ಮೊದಲ ಶಾಸ್ತ್ರೀಯ ನೃತ್ಯ […]

‘ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ 718 ಕೋಟಿ ರೂ. ಅನುದಾನ’

ಬೆಳ್ತಂಗಡಿ: ಸರ್ಕಾರದ ಚಿಂತನೆಯಂತೆ ಸಂಜೀವಿನಿ ಒಕ್ಕೂಟಕ್ಕೆ ಶಕ್ತಿಯನ್ನು ಕೊಟ್ಟಂತಹ ಸಂದರ್ಭದಲ್ಲಿ ಮಹಿಳೆಯರು ಸೇರಿಕೊಂಡು ಏನಾದರೊಂದು ಪರಿವರ್ತನೆ ಮಾಡಬಹುದು ಎಂಬುವುದನ್ನು ಲಾಯಿಲ ಸಮಗ್ರ ಸಂಜೀವಿನಿ ಒಕ್ಕೂಟದವರು ತೋರಿಸಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತಿದ್ದೇನೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಮಾರ್ಚ್ 26ರಂದು ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಪಂಗಡದ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ, ಸ್ವಚ್ಛತಾ ವಾಹನದ ಲೋಕಾರ್ಪಣೆ, ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ, ಎನ್‌ಆರ್‌ಎಲ್‌ಎಮ್ ಕಟ್ಟಡ ಉದ್ಘಾಟನೆ, ಸಮಗ್ರ ಸಂಜೀವಿನಿ ಮಹಿಳಾ ಒಕ್ಕೂಟದ […]